Breaking News :

ವಯನಾಡು; ಸೇನಾ ಸಮವಸ್ತ್ರದಲ್ಲಿ ಕಾರ್ಯಾಚರಣೆಗಿಳಿದ ಸಿನಿಮಾ ನಟ ಮೋಹನ್ ಲಾಲ್

ವಯನಾಡಿನ ಭೂ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಕೈಜೋಡಿಸಿದ್ದಾರೆ. ಭಾರತೀಯ ಸೇನೆಯ ಗಡಿ ಭದ್ರತಾ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ಹೊಂದಿರುವ ಮೋಹನ್ ಲಾಲ್  ಸೇನಾ ಸಮವಸ್ತ್ರದಲ್ಲೇ ಗುಡ್ಡ ಕುಸಿತವಾದ ಸ್ಥಳಕ್ಕೆ ಬಂದು  ಯೋಧರಿಂದ ಪರಿಹಾರ ಕಾರ್ಯದ ಮಾಹಿತಿ ಪಡೆದಿದ್ದಾರೆ. ಬಳಿಕ ಸೇನೆಯ ರಕ್ಷಣಾ ಕಾರ್ಯದಲ್ಲಿ ತಾವು ಕೂಡ ತೊಡಗಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ವಯನಾಡು ದುರಂತಕ್ಕೆ ಸಂಬಂಧಿಸಿ […]

ಉಪ್ಪಿನಂಗಡಿ: ದಾರುಸ್ಸಲಾಂ ದರ್ಸ್ ವಿದ್ಯಾರ್ಥಿ ನಿಧನ

ಉಪ್ಪಿನಂಗಡಿ; ದಾರುಸ್ಸಲಾಂ ದರ್ಸ್ ಕರಾಯ ವಿದ್ಯಾರ್ಥಿಯೋರ್ವ ದಿಡೀರ್ ಮೃತಪಟ್ಟ ಘಟನೆ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಿರಾಜುದ್ದೀನ್ ಗಂಡಿಬಾಗಿಲು ಮೃತ ವಿದ್ಯಾರ್ಥಿ. ಆತೂರು ನಿವಾಸಿಯಾಗಿರುವ ಸಿರಾಜುದ್ದೀನ್ ಕಳೆದ ಎರಡು ವರ್ಷಗಳಿಂದ ದಾರುಸ್ಸಲಾಂ ಬೆಳ್ತಂಗಡಿ ಸಂಸ್ಥೆಯಲ್ಲಿ ಕಲಿಯುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿ ಅನಾರೋಗ್ಯದಿಂದ ಮರಣ ಹೊಂದಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…  

ವಯನಾಡು ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿರಾಕರಿಸಿದ ಕೇಂದ್ರ!

ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಎರಡು ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದೆ. ಆದರೆ ಕೇಂದ್ರ ಸರಕಾರ ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿರಾಕರಿಸಿದೆ. ಭೂ ಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಕೇರಳ ಸರಕಾರ ಕೇಂದ್ರಕ್ಕೆ ಆಗ್ರಹಿಸಿತ್ತು. ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇರಳ ಸರಕಾರವು ಈ ದುರಂತವನ್ನು ‘ರಾಜ್ಯ ವಿಪತ್ತು’ ಎಂದು ಘೋಷಿಸಲು ಮುಂದಾಗಿದೆ. ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ‘ವಿಪತ್ತು ಪೀಡಿತ’ ಪ್ರದೇಶ ಎಂದು ಘೋಷಿಸಿ ಈಗಾಗಲೇ ರಾಜ್ಯ ಸರಕಾರ ಆದೇಶ […]

ಮಂಗಳೂರು; ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ವಿದ್ಯಾರ್ಥಿಗಳ ಗುಂಪೊಂದು ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಪ್ರತಿಷ್ಠಿತ ಅಲೋಶಿಯಸ್ ಕಾಲೇಜು ಬಳಿ ನಡೆದಿದೆ. ಮಂಗಳೂರು ಅಲೋಶಿಯಸ್ ಕಾಲೇಜು ಗೇಟ್ ಮುಂಭಾಗದ ರಸ್ತೆಯಲ್ಲಿ ಎರಡು ಪ್ರತ್ಯೇಕ ಬಣ್ಣದ ಯುನಿಫಾರಂ ಧರಿಸಿರುವ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ಕಾಲೇಜು ಬಿಟ್ಟ ಬಳಿಕ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವರ್ಗಾವಣೆಯಾದ ಮರುದಿನವೇ ಪಿಎಸ್ ಐ ಸಾವು; ಸಂಶಯ ಹುಟ್ಟು ಹಾಕಿದ ಪ್ರಕರಣ, ಕುಟುಂಬಸ್ಥರಿಂದ ಶಾಸಕರ ವಿರುದ್ಧ ಗಂಭೀರ ಆರೋಪ

ಯಾದಗಿರಿ ನಗರದ ಪಿಎಸ್‌ಐ ಪರಶುರಾಮ್ ಹೃದಯಾಘಾತದಿಂದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸೈಬರ್ ಕ್ರೈಂ ಠಾಣೆಯ ಪಿಎಸ್‌ಐ ಪರಶುರಾಮ(34) ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್‌, ಅವರ ಪುತ್ರ ಪಂಪನಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಯಾದಗಿರಿ ನಗರ ಠಾಣೆಯಿಂದ […]

ಕೇರಳ, ಕರ್ನಾಟಕ ಸೇರಿ ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಘೋಷಣೆ

ಕೇರಳ, ಕರ್ನಾಟಕ ಸೇರಿ ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಸರಕಾರ ಕರಡು ಅಧಿಸೂಚನೆಯನ್ನೂ ಹೊರಡಿಸಿದೆ. ಕೇರಳದ 9,993 ಚದರ ಕಿ.ಮೀ ಪಶ್ಚಿಮಘಟ್ಟ ಪ್ರದೇಶ, ಕರ್ನಾಟಕ, ಗೋವಾ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳ ಪಶ್ಚಿಮಘಟ್ಟಗಳನ್ನು  ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಒಟ್ಟು 56 ಸಾವಿರದ 825 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ,  ಈ ಬಗ್ಗೆ ಮುಂದಿನ 60 […]

ಕಾರು ಮರಕ್ಕೆ ಢಿಕ್ಕಿಯಾಗಿ ಭೀಕರ ಅಪಘಾತ; ಮೂವರು ಯುವಕರು ಮೃತ್ಯು

ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಬಂಗಾರಪೇಟೆ ಮುಖ್ಯ ರಸ್ತೆಯ ಸಹಕಾರ ನಗರದ ಬಳಿ ನಡೆದಿದೆ. ಬೆಳಗ್ಗೆ 3 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದ್ದು, ರೇವಾ ಯೂನಿವರ್ಸಿಟಿಯ ವಿದ್ಯಾರ್ಥಿಗಳಾದ ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್ ಹಾಗೂ ಬಂಗಾರಪೇಟೆಯ ನಿಚ್ಚಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ  ಬಂಗಾರಪೇಟೆ ಮೂಲದ ಸಾಯಿ ಗಗನ್ ಪಾರಾಗಿದ್ದಾನೆ. ಮನೆಯಿಂದ ಕೋಲಾರಕ್ಕೆ ಮರಳುವಾಗ ಅಪಘಾತ ಸಂಭವಿಸಿದ್ದು, ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ […]

ವಯನಾಡು ದುರಂತ; ಮನೆ ಕೊಚ್ಚಿಕೊಂಡು ಹೋದರು, ಬದುಕುಳಿದ 40 ದಿನದ ಮಗು!

ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಅವಶೇಷಗಳಡಿ ಈಗಾಗಲೇ 330ಕ್ಕೂ ಅಧಿಕ ಮೃತದೇಹವನ್ನು ಪತ್ತೆಹಚ್ಚಲಾಗಿದೆ. 300ರಷ್ಟು ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮನೆ ಕೊಚ್ಚಿಕೊಂಡು ಹೋದರೂ 40 ದಿನದ ಪುಟ್ಟ ಹೆಣ್ಣು ಮಗು ಮತ್ತು ಆಕೆಯ ಆರು ವರ್ಷದ ಸಹೋದರ ವಿಕೋಪದಲ್ಲಿ ಬದುಕಿ ಉಳಿದಿರುವ ಪವಾಡ ಸದೃಶ ಘಟನೆ ವರದಿಯಾಗಿದೆ. ಕುಟುಂಬದ ಆರು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೂ, ಅನಾರ ಮತ್ತು ಮುಹಮ್ಮದ್ ಹಯಾನ್ ಬದುಕಿ […]

ವಿದ್ಯುತ್ ಬೋರ್ಡ್ ನಲ್ಲಿ ನೇತು ಹಾಕಿದ್ದ ಮೊಬೈಲ್ ಚಾರ್ಜರ್ ಕಚ್ಚಿದ ಮಗು ವಿದ್ಯುತ್ ಶಾಕ್ ಹೊಡೆದು ಮೃತ್ಯು

ಒಂದೂವರೆ ವರ್ಷದ ‌ಮಗು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ಆಘಾತಕಾರಿ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ನಡೆದಿದೆ. ದುರ್ಗಂ ಆರಾಧ್ಯ ಮೃತ ಒಂದೂವರೆ ವರ್ಷದ ಬಾಲಕಿ. ಬಾಲಕಿ ವಿದ್ಯುತ್ ಬೋರ್ಡ್ ನಲ್ಲಿ ನೇತು ಹಾಕಿದ್ದ ಚಾರ್ಜರ್ ಕೇಬಲ್ ಹಿಡಿದು ಆಟವಾಡುತ್ತಿತ್ತು. ಈ ವೇಳೆ ಚಾರ್ಜರ್ ನ್ನು ಕಚ್ಚಿದ್ದು, ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಬಾಲಕಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೆ ಬಾಲಕಿ ದುರ್ಗಂ ಆರಾಧ್ಯ […]

ವಯನಾಡು; ನಾಪತ್ತೆಯಾಗಿರುವವರು ಬದುಕುಳಿದಿರುವ ಸಾಧ್ಯತೆ ತೀವ್ರ ಕಡಿಮೆ; ಸಿಎಂ ಪಿಣರಾಯ್ ವಿಜಯನ್

ವಯನಾಡಿನ ಭೀಕರ ಭೂಕುಸಿತದಲ್ಲಿ  ಮೃತರ ಸಂಖ್ಯೆ 330ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 300 ಜನ ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮಾತನಾಡಿದ ಕೇರಳ ಸಿಎಂ ಪಿಣರಾಯ್ ವಿಜಯನ್ ಭೂಮಿ ಕುಸಿದು ಮೂರು ದಿನಗಳು ಕಳೆಯುತ್ತಿದ್ದು ಈಗಾಗಲೇ ಸಾವಿನಸಂಖ್ಯೆ 300ರ ಗಡಿ ದಾಟಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರು ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಮುಂಡಕ್ಕೈ, ಚೂರಲ್​​ ಮಾಲಾ ಮತ್ತು ಅಟ್ಟಮಾಲ ಪ್ರದೇಶಗಳಲ್ಲಿ ಕಾಪಾಡಬೇಕು ಎಂದರೆ ಬದುಕಿದವರು ಯಾರು ಇಲ್ಲ. ಮುಂಡಕ್ಕೈನ ಸರ್ಕಾರಿ […]