Breaking News :

ವಯನಾಡು; ನಾಪತ್ತೆಯಾಗಿರುವವರು ಬದುಕುಳಿದಿರುವ ಸಾಧ್ಯತೆ ತೀವ್ರ ಕಡಿಮೆ; ಸಿಎಂ ಪಿಣರಾಯ್ ವಿಜಯನ್

ವಯನಾಡಿನ ಭೀಕರ ಭೂಕುಸಿತದಲ್ಲಿ  ಮೃತರ ಸಂಖ್ಯೆ 330ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 300 ಜನ ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮಾತನಾಡಿದ ಕೇರಳ ಸಿಎಂ ಪಿಣರಾಯ್ ವಿಜಯನ್ ಭೂಮಿ ಕುಸಿದು ಮೂರು ದಿನಗಳು ಕಳೆಯುತ್ತಿದ್ದು ಈಗಾಗಲೇ ಸಾವಿನಸಂಖ್ಯೆ 300ರ ಗಡಿ ದಾಟಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರು ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಮುಂಡಕ್ಕೈ, ಚೂರಲ್​​ ಮಾಲಾ ಮತ್ತು ಅಟ್ಟಮಾಲ ಪ್ರದೇಶಗಳಲ್ಲಿ ಕಾಪಾಡಬೇಕು ಎಂದರೆ ಬದುಕಿದವರು ಯಾರು ಇಲ್ಲ. ಮುಂಡಕ್ಕೈನ ಸರ್ಕಾರಿ […]

ವಯನಾಡಿನಲ್ಲಿ ಕಾಂಗ್ರೆಸ್ ವತಿಯಿಂದ 100 ಮನೆಗಳ ನಿರ್ಮಾಣ; ರಾಹುಲ್ ಗಾಂಧಿ ಘೋಷಣೆ

ಭೀಕರ ದುರಂತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಈ ವರ್ಷ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ವಯನಾಡ್ ನ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿದ್ದಾರೆ.  ಆ ಬಳಿಕ ಪರಿಹಾರ ಶಿಬಿರಗಳಿಗೆ ಕೂಡ ಭೇಟಿ ನೀಡಿದ್ದು, ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ವಯನಾಡಲ್ಲಿ ಭೂಕುಸಿತದಿಂದ 320ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ. […]

ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪತಿ

ಪತ್ನಿಯನ್ನು  ಚೂರಿಯಿಂದ ಇರಿದು ಪತಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫಾತಿಮಾ‌ (34) ಕೊಲೆಯಾದ ಮಹಿಳೆ. ಈಕೆಯ ಪತಿ ತಬ್ರೇಜ್ ಪಾಷಾ ಕೊಲೆ ಮಾಡಿ ಪರಾರಿಯಾಗಿದ್ದಾನೆ‌. ಕೌಟುಂಬಿಕ ವಿಚಾರವಾಗಿ ಹಲವು ದಿನಗಳಿಂದ ಪತಿ- ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು. ಕುಟುಂಬದ ಹಿರಿಯರು ಬುದ್ಧಿ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿ ಹೇಳುತ್ತಿದ್ದರು. ಆದರೆ, ಇಂದು ಬೆಳಗ್ಗೆ ಕೂಡ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಬೆಳಗ್ಗೆ 8.30ರ ಸುಮಾರಿಗೆ ತಬ್ರೇಜ್ ಪಾಷಾ ಹೆಂಡಿತಿಗೆ ಚಾಕುವಿನಿಂದ […]

ಮಳೆ ಹವಾಂತರದಿಂದ ಕಂಗೆಟ್ಟ ಜನರಿಗೆ ಮತ್ತೊಂದು ಶಾಕ್; ಲಾ ಲಿನಾ ಮಾರುತ, ಹವಮಾನ ಇಲಾಖೆಯಿಂದ ಎಚ್ಚರಿಕೆ

ಭಾರೀ ಮಳೆಗೆ ಕರಾವಳಿ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ. ಈ ಬಾರಿ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಲಾ ಲಿನಾ ಮಾರುತ ರೂಪುಗೊಳ್ಳಲಿದೆ. ಇದು ಭಾರಿ ಮಳೆಯನ್ನೇ ತರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಗಸ್ಟ್ ಮೊದಲ ವಾರಾಂತ್ಯಕ್ಕೆ ಮಳೆ ಕಡಿಮೆಯಾಗಲಿದೆ. ಆದರೆ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್ ನಲ್ಲಿ ಲಾ ನಿನಾ ಮಾರುತ ರೂಪುಗೊಂಡು ಅವಾಂತರ ಸೃಷ್ಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. […]

ವಯನಾಡು ಭೂಕುಸಿತದ ಸ್ಥಳದಲ್ಲಿ 16 ಗಂಟೆಯಲ್ಲಿ ಸೇತುವೆ ನಿರ್ಮಿಸಿದ ಸೇನೆ!

ವಯನಾಡಿನಲ್ಲಿ  ಭೂಕುಸಿತ ಸಂಭವಿಸಿದ್ದ ಚೂರಲ್ಮಲ ಮತ್ತು ಮುಂಡಕ್ಕೈಗೆ ಸಂರ್ಪಕ್ಕೆ ಕಲ್ಪಿಸುವ ಚಾರಲ್‌ಮಲೈ ನದಿಗೆ ಅಡ್ಡಲಾಗಿ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ದಾಖಲೆಯ ಕೇವಲ 16 ಗಂಟೆಯಲ್ಲಿ  ನಿರ್ಮಿಸಿದೆ. ಸೇನೆಯು  ಜುಲೈ 31ರ ರಾತ್ರಿ 9 ಗಂಟೆಗೆ  ಸೇತುವೆ ನಿರ್ಮಾಣ ಪ್ರಾರಂಭಿಸಿದ್ದು,  ಸೇನೆಯ ಎಂಜಿನಿಯರ್‌ಗಳು ಆಗಸ್ಟ್ 01 ರ ಸಂಜೆ 5:30ಕ್ಕೆ ಕೆಲಸ ಪೂರ್ಣಗೊಳಿಸಿದ್ದಾರೆ. ಈ ಸೇತುವೆ 24 ಟನ್‌ ತೂಕದ ಸಾಮರ್ಥ್ಯವನ್ನು ಹೊಂದಿದೆ.  ಮದ್ರಾಸ್ ಎಂಜಿನಿಯರ್ಸ್ ಗ್ರೂಪ್‌ನ ಮೇಜ್ ಸೀತಾ ಶೆಲ್ಕೆ ಮತ್ತು ಅವರ […]

ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ಬಾಲಕಿಯೋರ್ವಳು ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ನಡೆದಿದೆ. ಕೀಮಕುರ್ತಿ ಮಂಡಲದ ನಿವಾಸಿಯಾಗಿರುವ 16 ವರ್ಷದ ಬಾಲಕಿ ಕೋತಪಟ್ಟಣಂನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಬಾಲಕಿ ಶಾಲೆಯ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ. ಗರ್ಭಿಣಿಯಾಗಿದ್ದ ಬಾಲಕಿ ಈ ಬಗ್ಗೆ ಶಾಲೆಯ ಸಹಪಾಠಿಗಳಿಗೆ, ಶಿಕ್ಷಕರಿಗೆ ವಿಷಯ ತಿಳಿಸಿರಲಿಲ್ಲ. ಹೊಟ್ಟೆ ನೋವಿನ ಹಿನ್ನೆಲೆ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಳೆ‌. ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹೆರಿಗೆ ನೋವು […]

ಉಡುಪಿ; ಮುಸುಕುಧಾರಿಗಳಿಂದ ಪ್ಲ್ಯಾಟ್ ಗೆ ನುಗ್ಗಲು ಯತ್ನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಾಲ್ವರು ಮುಸುಕುಧಾರಿಗಳು ಫ್ಲ್ಯಾಟ್ ವೊಂದಕ್ಕೆ ನುಗ್ಗಲು ಯತ್ನಿಸಿ, ವಿಫಲರಾಗಿ ವಾಪಾಸ್ಸಾಗಿರುವ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಮುಸುಕುಧಾರಿಗಳು ಬಂದಿರುವುದು ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ನಾಲ್ವರು ಮುಸುಕುಧಾರಿಗಳು ರಾಡ್ ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್ ಗೆ ನುಗ್ಗಲು ಯತ್ನಿಸಿದ್ದಾರೆ. ಅಪರಿಚಿತರು ಪ್ಲ್ಯಾಟ್ ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಮುಸುಕುಧಾರಿಗಳು ಒಳನುಗ್ಗಲು ಯತ್ನಿಸಿದ್ದ ಫ್ಲ್ಯಾಟ್ ನಲ್ಲಿ ವಯಸ್ಸಾದ ದಂಪತಿ ವಾಸಿಸುತ್ತಿದ್ದರು. ಈ ದಂಪತಿ ಒಂದು ವಾರದ […]

ಮಟನ್ ಊಟ ಸೇವಿಸಿ ಅಸ್ವಸ್ಥ; ರಾಯಚೂರಿನಲ್ಲಿ ಒಂದೇ ಮನೆಯ ನಾಲ್ವರು ಸಾವು

ಮಟನ್ ಊಟ ಸೇವಿಸಿದ್ದ ಒಂದೇ ಕುಟುಂಬದ ನಾಲ್ವರು ಅಸ್ವಸ್ಥರಾಗಿ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಭೀಮಣ್ಣ(60), ಈರಮ್ಮ (54), ಮಲ್ಲೇಶ್ (19) ಹಾಗೂ ಪಾರ್ವತಿ(17)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಲ್ಲಮ್ಮ ಎಂಬುವವರ ಸ್ಥಿತಿ ಗಂಭೀರವಾಗಿದೆ. ಬುಧವಾರ ರಾತ್ರಿ ಇಡೀ ಕುಟುಂಬ ಮಟನ್ ಕೊಂಡು ತಂದು ಅಡುಗೆ ಮಾಡಿ ಜೊತೆಯಾಗಿ ಊಟ ಮಾಡಿತ್ತು. ಆ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಮಟನ್ ಅಡುಗೆಯಲ್ಲಿ ಹಲ್ಲಿ […]

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ; ಸಂಚಾರ ಬಂದ್

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ ಸಂಭವಿಸಿದ್ದು, ಸಂಚಾರ ಬಂದ್ ಆಗಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಮಾಣಿ- ಮೈಸೂರು ಹೆದ್ದಾರಿಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇದರ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದ ವೇಳೆ ವಾಹನ ಸಂಚಾರ ಇಲ್ಲದಿರುವುದರಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ […]

ವಯನಾಡಿನಲ್ಲಿ ಭೂಕುಸಿತಕ್ಕೆ ಕಾರಣವಾದ ಅಂಶಗಳೇನು? ತಜ್ಞರು ಏನು ಹೇಳುತ್ತಾರೆ ಗೊತ್ತಾ?

ಕೇರಳದ ವಯನಾಡಿನ ಮೇಪ್ಪಾಡಿಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 300ಕ್ಕೆ ತಲುಪಿದೆ,  ಸ್ಥಳದಲ್ಲಿ 240 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಭೂಕುಸಿತಗಳು  ಜೀವ ಮತ್ತು ಜೀವನೋಪಾಯಕ್ಕೆ ಅಪಾರ ನಷ್ಟವನ್ನುಂಟು ಮಾಡುತ್ತದೆ. ಭೂಕುಸಿತದ ಬಗ್ಗೆ ಮಾತನಾಡಿದ ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರೇಡಾರ್ ರಿಸರ್ಚ್ (ACARR) ನಿರ್ದೇಶಕ ಎಸ್ ಅಭಿಲಾಷ್, ತೋಟಗಳನ್ನು ಮಾಡಲು ಮರಗಳನ್ನು ಕಡಿಯುವುದು ಕೇರಳದಲ್ಲಿ ಭೂಕುಸಿತಕ್ಕೆ ಕೊಡುಗೆ ನೀಡುತ್ತಿದೆ. ಕೇರಳದಲ್ಲಿ ನಡೆಯುತ್ತಿರುವ ಹೆಚ್ಚಿನ ಭೂಕುಸಿತಗಳು ತೋಟದ ಪ್ರದೇಶಗಳಲ್ಲಿ ನಡೆಯುತ್ತವೆ. […]