ಇರಾನ್ ನಲ್ಲಿ ಹಮಾಸ್ ಮುಖ್ಯಸ್ಥರ ಹತ್ಯೆ; ವರದಿ

ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥರಾಗಿದ್ದ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್‌ನ ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮೂಲದ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಪ್ರೆಸ್ ಟಿವಿ ವರದಿ ಪ್ರಕಾರ, ಹಮಾಸ್ ನ್ನು ನಾಶಮಾಡುವುದಾಗಿ ಈ ಮೊದಲು ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಆದ್ದರಿಂದ ಹತ್ಯೆಯ ಹಿಂದೆ ಇಸ್ರೇಲ್‌ನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಘಟನೆಯಲ್ಲಿ ಇಸ್ಮಾಯಿಲ್ ಹನಿಯೆಹ್ ಅವರ ಅಂಗ ರಕ್ಷಕ ಕೂಡ ಹತರಾಗಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.
ಕರ್ನಾಟಕದ ಐದು ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ; ರೆಡ್ ಅಲರ್ಟ್ ಘೋಷಣೆ

ಕರ್ನಾಟಕದಾದ್ಯಂತ ಇಂದಿನಿಂದ ಮತ್ತೆ ಭಾರಿ ಮಳೆ ಸುರಿವ ಸಾಧ್ಯತೆ ಇದೆ. ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿರಲಿದೆ ಎಂದು ತಿಳಿದು ಬಂದಿದೆ. ಮಳೆ ಹಿನ್ನೆಲೆ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್, ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳಸ, ನಾಪೊಕ್ಲು, ಧರ್ಮಸ್ಥಳ, ಕೊಪ್ಪ, […]
ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.31)ರಂದು ರಜೆ ಘೋಷಣೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜು.31) ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ.
ವಯನಾಡು ಭೂಕುಸಿತ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿ ರಕ್ಷಣೆಗಾಗಿ ಅಂಗಲಾಚಿದ ವ್ಯಕ್ತಿ; ಹೃದಯವಿದ್ರಾಹಕ ಘಟನೆಯ ವಿಡಿಯೋ ವೈರಲ್

ಕೇರಳದ ವಯನಾಡು ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ, ಭಯಾನಕ ದೃಶ್ಯವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದು, ಬೃಹತ್ ಬಂಡೆ ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಭೂಕುಸಿತದಲ್ಲಿ ಸಿಲುಕಿರುವ ವ್ಯಕ್ತಿ ಸಹಾಯ ಕೋರಿದ್ದಾರೆ. ಈ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಪ್ರವಾಹದ ನೀರಿನಲ್ಲಿ ಬಂಡೆಗಳ ನಡುವೆ ಸಿಲುಕಿಕೊಂಡಿರುವ ವ್ಯಕ್ತಿ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾನೆ. ವಯನಾಡು ಭೂಕುಸಿತದಿಂದ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈವರೆಗೆ ಘಟನಾ ಸ್ಥಳದಲ್ಲಿ 83 ಮೃತದೇಹಗಳು ಪತ್ತೆಯಾಗಿದೆ. […]
ವಯನಾಡು ದುರಂತ: ಸಾವಿನ ಸಂಖ್ಯೆ 83ಕ್ಕೆ ಏರಿಕೆ; ಮಸೀದಿ, ಚರ್ಚ್ ಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತನೆ

ಭೂಕುಸಿತ ಸಂಭವಿಸಿದ ಕೇರಳದ ವಯನಾಡಿನಲ್ಲಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಅಧಿಕೃತ ವರದಿಗಳ ಪ್ರಕಾರ ಸಾವಿನ ಸಂಖ್ಯೆ 83ಕ್ಕೆ ತಲುಪಿದೆ. 100 ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಕಂದಾಯ ಸಚಿವ ಕೆ ರಾಜನ್ ಅವರ ಕಚೇರಿ ತಿಳಿಸಿದೆ. ಸರ್ಕಾರದ ಪ್ರಯತ್ನಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವಾಗ, ಕೇರಳದ ಜನರು ಸಹ ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ಸ್ವಯಂಸೇವಕರಾಗಿ ಕಾರ್ಯ, ಸಹಾಯವಾಣಿಗಳ ಸ್ಥಾಪನೆ, ರಕ್ತದಾನ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಜುಲೈ 30 […]
ವಿಟ್ಲ; ನೆಲ್ಲಿಗುಡ್ಡೆಯಲ್ಲಿ ಭಾರೀ ಮಳೆಗೆ ಕಂಪೌಂಡ್ ಕುಸಿತ; ಮನೆಗೆ ಹಾನಿ

ವಿಟ್ಲ: ಭಾರೀ ಮಳೆಗೆ ಕಂಪೌಂಡು ಕುಸಿದು ಮನೆಗೆ ಹಾನಿಯಾದ ಘಟನೆ ವಿಟ್ಲದ ನೆಲ್ಲಿಗುಡ್ಡೆ ಎಂಬಲ್ಲಿ ನಡೆದಿದೆ. ಹಮೀದ್ ಎಂಬವರ ಮನೆಯ ಕಂಪೌಂಡು ಕುಸಿದು ಮನೆಗೆ ಹಾನಿಯಾಗಿದ್ದು, ಮಳೆ ನೀರು ಮನೆ ಒಳಗೆ ನುಗ್ಗಿ ಅಪಾರ ಹಾನಿಯಾಗಿದೆ. ಸ್ಥಳಕ್ಕೆ ಪ.ಪಂ ಮುಖ್ಯಧಿಕಾರಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ.ಪಂ ಸದಸ್ಯ ಕರುಣಾಕರ ನಾಯ್ತೊಟ್ಟು, ಹಸೈನಾರ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು: ಟ್ಯಾಂಕರ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು: ಟ್ಯಾಂಕರ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಗರದ ನಂತೂರು ಪದವು ಎಂಬಲ್ಲಿ ನಡೆದಿದೆ. ಶಿವಾನಂದ ಮೃತಪಟ್ಟ ಸ್ಕೂಟರ್ ಸವಾರ. ಶಿವಾನಂದ ಅವರು ಸ್ಕೂಟರ್ ನಲ್ಲಿ ಕೆಪಿಟಿಯಿಂದ ನಂತೂರು ಜಂಕ್ಷನ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ನಂತೂರಿನಿಂದ ಕೆಪಿಟಿ ಕಡೆಗೆ ನಿರ್ಲಕ್ಷ್ಯತನದಿಂದ ಟ್ಯಾಂಕರನ್ನು ಚಲಾಯಿಸಿಕೊಂಡು ಬಂದ ಚಾಲಕ ಸ್ಕೂಟರ್ ನ ಬಲಭಾಗಕ್ಕೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಾಷ್ಟ್ರೀಯ ಹೆದ್ದಾರಿಗೆ ಎಸೆಯಲ್ಪಟ್ಟಿದ್ದಾನೆ. ಇದಲ್ಲದೆ ಟ್ಯಾಂಕರ್ […]
ಪುತ್ತೂರು; ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ; ಯುವಕನಿಂದ ಆರೋಪ

ಪುತ್ತೂರು; ಮನೆಗೆ ನುಗ್ಗಿ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೋರ್ವ ಆರೋಪಿಸಿದ್ದಾರೆ. ಈಶ್ವರಮಂಗಲ ಪಂಚೋಡಿ ನಿವಾಸಿ, ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನೀಷಿಯನ್ ಆಗಿರುವ ಭ್ರಮೀಷ್ ಅವರಿಗೆ ಮನೆಗೆ ನುಗ್ಗಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಭ್ರಮೀಷ್ ಹಲ್ಲೆ ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾನು ರಾತ್ರಿ ಗಂಟೆ 11ಕ್ಕೆ ಮನೆಯಲ್ಲಿ ಮಲಗಿದ್ದೆ. ಈ ವೇಳೆ ಬಾಗಿಲು ಬಡಿದ ಶಬ್ದ ಆಯಿತು. ಬಾಗಿಲು ತೆರೆದಾಗ ಲೈಟ್ ಹಾಕಿ ಮನೆಯಲ್ಲಿ ಯಾರು ಇಲ್ಲವಾ ಎಂದು […]
ವಯನಾಡು ಭೂಕುಸಿತ; ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ; ಸಿಎಂ ಕಚೇರಿಯಿಂದ ಮಹತ್ವದ ಮಾಹಿತಿ

ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಈಗಾಗಲೇ 35ಕ್ಕೂ ಅಧಿಕ ಮೃತದೇಹವನ್ನು ಹೊರತೆಗೆಯಲಾಗಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾತನಾಡಿದ ಸಿಎಂ ಪಿಣರಾಯ್ ವಿಜಯನ್, ಎಲ್ಲಾ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ. ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಸಚಿವರು ವಯನಾಡಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಅವಘಡಗಳಿಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯು ತುರ್ತು ಸಹಾಯವಾಣಿವನ್ನು ಆರಂಭಿಸಿದೆ. […]
ಉಪ್ಪಿನಂಗಡಿ; ಪತ್ನಿಗೆ ಚೂರಿಯಿಂದ ಇರಿದು ಪತಿ ಪರಾರಿ; ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಉಪ್ಪಿನಂಗಡಿ: ಪತ್ನಿಗೆ ಚೂರಿಯಿಂದ ಇರಿದು ಆರೋಪಿಯೋರ್ವ ಪರಾರಿಯಾಗಿದ್ಸು, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಜೋರು ಕಟ್ಟೆಯ ನಿವಾಸಿ ಮುಹಮ್ಮದ್ ಅವರ ಪುತ್ರಿ ಸಜರಾ (40) ಇರಿತಕ್ಕೊಳಗಾದವರು. ಈಕೆಯ ಪತಿ ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಹಲ್ಲೆ ಆರೋಪಿ. ಹಕೀಂ ಮತ್ತು ಸಜರಾ ವಿವಾಹ 15 ವರ್ಷಗಳ ಹಿಂದೆ ನಡೆದಿದ್ದು, ಮದುವೆಯಾದ ಕೆಲವು ವರ್ಷಗಳ ಬಳಿಕ ಹಕೀಂ ಪತ್ನಿಗೆ ಹಿಂಸೆ ನೀಡಲು ಆರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಸಜರಾ ಮೂರು ವರ್ಷದಿಂದ […]