Breaking News :

ಬಜ್ಪೆ; ಅಕ್ರಮವಾಗಿ ಗೋವಿನ ಮಾಂಸ ಸಾಗಾಟ; ಇಬ್ಬರ ಬಂಧನ

ಬಜ್ಪೆ: ಅಕ್ರಮವಾಗಿ ಗೋವಿ‌ನ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಮೂಡುಬಿದ್ರೆಯ ಹಂಡೇಲು ನಿವಾಸಿಗಳಾದ ಆರೀಫ್ (24) ಹಾಗೂ ಸುಲ್ತಾನ್ (19) ಎಂದು ಗುರುತಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಬಂಧಿತರಿಂದ ದನದ ಮಾಂಸ ಹಾಗು ಕಾರ‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಜ್ಪೆ ಪೊಲೀಸ್ ಠಾಣೆಯ ಪಿ.ಎಸ್.ಐ ರೇವಣಸಿದ್ದಪ್ಪ ಅವರು ಸಿಬ್ಬಂದಿಯೊಂದಿಗೆ ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು […]

ಸಕಲೇಶಪುರ ಬಳಿ ಭೂ ಕುಸಿತಕ್ಕೆ ಕೊಚ್ಚಿಕೊಂಡು ಹೋದ ರಸ್ತೆ; ಹಲವು ಗ್ರಾಮಗಳ ಸಂಪರ್ಕ ಕಡಿತ

ಹಾಸನ:  ಭಾರೀ ಮಳೆಗೆ ಸಕಲೇಶಪುರ ಬಳಿ ಗುಡ್ಡ ಕುಸಿತದಿಂದ  ಸುಮಾರು 200 ಅಡಿಗಳಷ್ಟು ದೂರದ ರಸ್ತೆ ಕುಸಿದುಕೊಂಡು ಹೋಗಿದ್ದು, 10 ಗ್ರಾಮಗಳ ಜನತೆ ಸಂಪರ್ಕ  ಕಳೆದುಕೊಂಡಿದ್ದಾರೆ. ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ಘಟನೆ ನಡೆದಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತವಾಗಿದೆ. 200 ಮೀಟರ್‌ಗೂ ಹೆಚ್ಚು ದೂರ ರಸ್ತೆ ಕೊಚ್ಚಿಹೋಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತವಾಗಿದೆ ಎಂದು ಆರೋಪಿಸಲಾಗಿದೆ.

ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ; ಸ್ಥಳದಲ್ಲಿ 19 ಮೃತದೇಹಗಳು ಪತ್ತೆ, ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಶಂಕೆ

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ ಸಂಭವಿಸಿದ್ದು, ಸ್ಥಳದಲ್ಲಿ 19 ಮೃತದೇಹಗಳು ಪತ್ತೆಯಾಗಿವೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದ್ದು, ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳು, ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ […]

ಬೆಳ್ತಂಗಡಿ; ಭಾರೀ ಮಳೆ ಹಿನ್ನೆಲೆ; ಇಂದು ತಾಲೂಕಿನ ಶಾಲೆಗಳಿಗೆ ರಜೆ

ಬೆಳ್ತಂಗಡಿ; ಭಾರೀ ಮಳೆಯ ಹಿನ್ನೆಲೆ ಬೆಳ್ತಂಗಡಿ ತಾಲೂಕಿನಲ್ಲಿ  ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ ನೀಡಿ ಬೆಳ್ತಂಗಡಿ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿದೆ. ಇದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ವಾಹನ ಚಾಲಕರಿಗೆ ಬಹುಮುಖ್ಯ ಮಾಹಿತಿ: ನೀವು ಈ ತಪ್ಪು ಮಾಡಿದ್ರೆ ಆ.1ರಿಂದ ದಂಡ ಗ್ಯಾರೆಂಟಿ

ವಾಹನ ಚಾಲಕರಿಗೆ ಇದು ಬಹುಮುಖ್ಯ ಮಾಹಿತಿಯಾಗಿದ್ದು, ಆಗಸ್ಟ್ 1ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ. ಈ ಕುರಿತು ಮಾತನಾಡಿದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಸ್ಪಾಟ್ ಸ್ಪೀಡ್ ಮತ್ತು ಸೆಕ್ಷನಲ್ ಸ್ಪೀಡ್ ಆಧಾರದಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ರಾಜ್ಯಾದ್ಯಂತ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡಿದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ಈ […]

ಪುತ್ತೂರು; ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ; ಇಬ್ಬರ ಬಂಧನ

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ  ಹೊಡೆದಾಡಿಕೊಂಡು ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಭಾನುವಾರ ರಾತ್ರಿ ವೇಳೆ ಪಂಚೋಡಿ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಳಮಜಲು, ಸಂಜನ್ ರೈ ಹೊಡೆದಾಡಿಕೊಂಡಿದ್ದಾರೆ. ಈ ಪೈಕಿ ರಾಕೇಶ್ ಪಂಚೋಡಿ ಎಂಬಾತ ತಲ್ವಾರ್ ಹಿಡಿದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಸಂಪ್ಯ ಠಾಣೆ ಎಸ್‌ಐ ಜಂಬೂರಾಜ್ ಬಿ.ಮಹಾಜನ್ ನೇತೃತ್ವದ ಪೊಲೀಸರು […]

ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಭೂಹಳ್ಳಿ ಪುಟ್ಟಸ್ವಾಮಿ ಆತ್ಮಹತ್ಯೆ; ಆತ್ಮಹತ್ಯೆಗೆ ಮೊದಲು ಹಾಕಿದ ಪೋಸ್ಟ್‌ನಲ್ಲಿ ಏನಿದೆ?

ಸಾಹಿತಿ ಹಾಗೂ ಪರಿಸರವಾದಿಯಾಗಿದ್ದ ಭೂಹಳ್ಳಿ ಪುಟ್ಟಸ್ವಾಮಿ (76) ಭಾನುವಾರ ತಡ ರಾತ್ರಿ ಚನ್ನಪಟ್ಟಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುಟ್ಟಸ್ವಾಮಿ ಅವರ ಕುಟುಂಟ ಮೈಸೂರಿನಲ್ಲಿ ನೆಲೆಸಿದೆ.  ಪುಟ್ಟಸ್ವಾಮಿ ಅವರು ಮಾತ್ರ ಚನ್ನಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡ ಜೀವನ ಯಾತ್ರೆ ಮುಗಿಸುತ್ತಿದ್ದೇನೆ. 28.07.24 ರಾತ್ರಿ 2.40 ಇಂತಿ ಭೂಹಳ್ಳಿ ಪುಟ್ಟಸ್ವಾಮಿ ಎಂದು ಪೋಸ್ಟ್ ಮಾಡಿ ಚನ್ನಪಟ್ಟಣದಲ್ಲಿ ನೇಣಿಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ […]

ಉಕ್ರೇನ್ ವಿರುದ್ಧ ರಷ್ಯಾ ಒತ್ತಾಯವಾಗಿ ಯುದ್ಧಕ್ಕೆ ನೇಮಿಸಿದ್ದ ಭಾರತೀಯ ಮೃತ್ಯು

ಉಕ್ರೇನ್ ಜೊತೆಗಿನ ಯುದ್ಧಕ್ಕೆ ರಷ್ಯಾ ನೇಮಿಸಿದ್ದ ಭಾರತೀಯ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಈ ಯುದ್ಧದಲ್ಲಿ ಭಾಗವಹಿಸಿದ್ದ ಹರಿಯಾಣದ ಕೈತಾಲ್ ಜಿಲ್ಲೆ ಮಾತೋರ್ ಗ್ರಾಮದ ರವಿ ಮೌನ್ ಮೃತಪಟ್ಟಿದ್ದಾರೆ. ರವಿ ಸಾವಿನ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕಳೆದ ಐದು ತಿಂಗಳಿನಿಂದ ರಶ್ಯದಲ್ಲಿರುವ ರವಿ ಬಗ್ಗೆ ಮಾಹಿತಿ ಇಲ್ಲದ ಕಾರಣ ರವಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ, ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸಲು ರವಿಯನ್ನು ರಷ್ಯಾ […]

ಯುವಕನ ಹೊಟ್ಟೆಯಲ್ಲಿ ಕಾಣಿಸಿಕೊಂಡ ಹಾವಿನ ರೀತಿಯ ಹುಳ; ವೈದ್ಯರು ಶಾಕ್

ಯುವಕನೋರ್ವನ ಹೊಟ್ಟೆಯಿಂದ ಹಾವಿನ ರೀತಿಯ ಅಪಾಯಕಾರಿ ಹುಳವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ರಾಜಸ್ಥಾನದ ಕುಚ್ಮಾನ ನಗರದ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಹೊಟ್ಟೆಯಿಂದ 30 ಸೆಂಟಿಮೀಟರ್ ಉದ್ದದ ಅಪಾಯಕಾರಿ ಹುಳು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 30 ವರ್ಷದ ಯುವಕ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಈ ಸಮಸ್ಯೆ ನಿವಾರಣೆಗಾಗಿ ಹಲವು ಔಷಧಿಯನ್ನು ಮಾಡಿದ್ದನು. ಆದರೆ ಗುಣವಾಗಿರಲಿಲ್ಲ. ಇದರಿಂದ ಸ್ಥಳೀಯ ವೈದ್ಯರು ಸೋನೋಗ್ರಾಫಿ […]

ಕಾರ್ಕಳ; ಬೈಕ್ ಗೆ ಟಿಪ್ಪರ್ ಢಿಕ್ಕಿ; ಯುವಕ ಮೃತ್ಯು

ಕಾರ್ಕಳ: ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಕಾರ್ಕಳ ಪುಕ್ಕೇರಿ ಬಳಿಯ ಫುಡ್ ಬಾಸ್ಕೆಟ್ ಮುಂಭಾಗದಲ್ಲಿ ನಡೆದಿದೆ. ಮೃತ ಯುವಕನನ್ನು ಬೈಪಾಸ್ ನಿವಾಸಿ, ಕಾರ್ ಮೆಕ್ಯಾನಿಕ್ ನಿಝಾಂ (21) ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ಬೈಪಾಸ್ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಬೈಪಾಸ್ ನಿಂದ ಕಾರ್ಕಳದತ್ತ ಬರುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸವಾರ ಕಾರ್ ಮೆಕ್ಯಾನಿಕ್ ನಿಝಾಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕಾರ್ಕಳ ಸರ್ಕಾರಿ ಮೃತದೇಹ ಆಸ್ಪತ್ರೆಯಲ್ಲಿ […]