Breaking News :

ಏಳನೇ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಮಹಿಳೆ: ಜಡ್ಜ್ ಶಾಕ್

ಬೆಂಗಳೂರಿನಲ್ಲಿ 6 ವಿವಾಹವಾಗಿ ಪತಿಯಿಂದ ಡೈವೋರ್ಸ್ ಪಡೆದುಕೊಂಡಿದ್ದ ಮಹಿಳೆ 7ನೇ ವಿವಾಹದ ಡೈವೋರ್ಸ್ ಕೇಸ್ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧೀಶರೇ ಅಚ್ಚರಿಗೊಂಡಿದ್ದಾರೆ. ಡಿವೋರ್ಸ್ ಪ್ರಕರಣದಲ್ಲಿ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಮದುವೆಯಾದ ಬಳಿಕ 6 ತಿಂಗಳು ಸಂಸಾರ ನಡೆಸಿ ಬಳಿಕ 6 ತಿಂಗಳಲ್ಲಿ ಪತಿ ವಿರುದ್ಧ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಸಕ್ಷನ್ 498ಎ ಅಡಿ ಪ್ರಕರಣ ದಾಖಲಿಸಿ […]

8 ತಿಂಗಳಿನಿಂದ ಕೋಮಾದಲ್ಲಿರುವ ನಿಫಾ ಸೋಂಕಿತರ ಆರೈಕೆ ಮಾಡಿದ್ದ ಕಡಬದ ಯುವಕ

ಕೇರಳದಲ್ಲಿ  ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ಯುವ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆಯಂಡ್ ರಿಸರ್ಚ್ ಸೆಂಟರ್ […]

ಕುಂದಾಪುರ: ಪೊಲೀಸರ ಸೋಗಿನಲ್ಲಿ ಉದ್ಯಮಿಯ ಮನೆಗೆ ಬಂದ ಅಪರಿಚಿತರ ತಂಡ

ಕುಂದಾಪುರ: ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್‌ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರ ತಂಡವೊಂದು ಬಂಧಿರುವ ಬಗ್ಗೆ ವರದಿಯಾಗಿದೆ. ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ […]

ವಿಟ್ಲ; ಬಾಲಕಿ ಅನಾರೋಗ್ಯದಿಂದ ನಿಧನ

ವಿಟ್ಲ: ಬಾಲಕಿಯೋರ್ವಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ವಿಟ್ಲದ ಪರ್ತಿಪ್ಪಾಡಿಯಲ್ಲಿ ನಡೆದಿದೆ. ಪರ್ತಿಪ್ಪಾಡಿ  ನಿವಾಸಿ ಗ್ಲೀನಾ ಡಿಸೋಜಾ(14) ಮೃತ ಬಾಲಕಿ. ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಗ್ಲೀನಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಂದೆ ವಿನ್ಸೆಂಟ್ ಡಿಸೋಜಾ ತಾಯಿ ಲವಿನಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ

ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್  ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ಏಕಾಏಕಿ ರಕ್ತ ಸುರಿದಿದೆ. ಮೊದಲು ತಮ್ಮ ಬಳಿ ಇರುವ ಟವೆಲ್‌ನಿಂದ ಹೆಚ್‌ಡಿಕೆ ರಕ್ತ ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಜಾಸ್ತಿ ರಕ್ತ ಬಂದು ಅವರ ಬಿಳಿ ಶರ್ಟ್‌ಗೂ ತಗುಲಿದೆ. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿ ಕೊಂಚ ಗಾಬರಿಗೊಂಡಿದ್ದಾರೆ. ಈ ವೇಳೆ ಅವರ ಬಳಿಯೇ ಇದ್ದ ಮಾಜಿ ಸಿಎಂ […]

ಮಾಂಸ ವಿವಾದ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರು ನಾಯಿ ಮಾಂಸ ಪ್ರಕರಣ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ, ಲ್ಯಾಬ್‌ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, 15 ದಿವಸಕ್ಕೊಮ್ಮೆ ಮಾಂಸ […]

20ರ ಯುವತಿಯೊಂದಿಗೆ 70ರ ವೃದ್ಧನಿಗೆ ಮದುವೆ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಶೇಷ ವಿವಾಹ

70 ವರ್ಷದ ವೃದ್ಧನೋರ್ವ ತನ್ನ ಪತ್ನಿಯ ಸಾವಿನ ಬಳಿಕ 25 ವರ್ಷದ ಯುವತಿಯೊಂದಿಗೆ ಮರುಮದುವೆ ಮಾಡಿಕೊಂಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಎಂಬವರು  ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ಮದುವೆಯಾಗಿದ್ದಾರೆ. ವೃದ್ಧ ನೂರಾನಿ ರೈತನಾಗಿದ್ದು, ಅವರ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ನೂರಾನಿ ಅವರು ತನ್ನ ಮಕ್ಕಳಿಗೆ ಮದುವೆ ಮಾಡಿದ ನಂತರ ತಾನು ಒಂಟಿ ಜೀವನ ನಡೆಸುತ್ತಿದ್ದೇನೆ. ನನಗೆ ಆಸರೆಯಾಗಲು ಯಾರೂ ಇರಲಿಲ್ಲ ಎಂದು ಸ್ಥಳೀಯರೆದುರು […]

ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಢಿಕ್ಕಿ: ಇಬ್ಬರು ಯುವಕರು ಮೃತ್ಯು

ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ  ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಯಚೂರಿನ ಲಿಂಗಸಗರೂ ತಾಲೂಕಿನ ಅಡವಿಬಾವಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ. ಲಿಂಗಸಗೂರು ಹೊರವಲಯದ ಕರಡಕಲ್ ಗ್ರಾಮದ ನಿವಾಸಿಗಳಾದ ವಿರೇಶ್ (25), ಚನ್ನಬಸವ (24) ಮೃತ ದುರ್ದೈವಿಗಳು. ಇವರು ನಾರಾಯಣಪುರ ಜಲಾಶಯದತ್ತ ಹೊರಟ್ಟಿದ್ದು, ಇದೇ ವೇಳೆ ಮುದ್ದೇಬಿಹಾಳ ಕಡೆಯಿಂದ ಲಿಂಗಸಗೂರಿನತ್ತ ಬಸ್‌ ಬರುತ್ತಿತ್ತು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ವಿರೇಶ್‌ ಹಾಗೂ ಚನ್ನಬಸವ ಗಂಭೀರ ಗಾಯಗೊಂಡು […]

ಬಂಟ್ವಾಳ: ಹಫ್ತಕ್ಕಾಗಿ ಬೆದರಿಕೆ ಆರೋಪ, ಮೂವರ ವಿರುದ್ಧ ದೂರು ದಾಖಲು

ಬಂಟ್ವಾಳ: ಮೂವರು ವ್ಯಕ್ತಿಗಳು ಹಫ್ತಾಕ್ಕಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಉದ್ಯಮಿಗಳು ನ್ಯಾಯಾಲಯದ ಮೂಲಕ ಖಾಸಗಿ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ. ಖಾಲಿದ್ ನಂದಾವರ, ಇಕ್ಬಾಲ್ ಮತ್ತು ಮತ್ತೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಉದ್ಯಮಿಗಳು ಗಣಿ ಇಲಾಖೆಯ ಪರವಾನಿಗೆ ಪಡೆದು ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಆರೋಪಿಗಳು ಲಾರಿ ಚಾಲಕ, ಹಿಟಾಚಿ ಚಾಲಕ, ಮಾಲಕರಿಗೆ ಪ್ರತೀ ಟ್ರಿಪ್ ಲಾರಿಗೆ 500 ರೂ. ಇಲ್ಲವೇ ಒಂದು ಸಾವಿರ ರೂ. ಕೊಡಬೇಕು, […]

ಶಾಕಿಂಗ್ ಸುದ್ದಿ: ಕೋಚಿಂಗ್ ಸೆಂಟರ್ ಗೆ ನುಗ್ಗಿದ ಮಳೆ ನೀರು: ಮೂವರು ವಿದ್ಯಾರ್ಥಿಗಳು ಸಾವು

ಮಳೆನೀರು ನೆಲಮಾಳಿಗೆಯಲ್ಲಿರುವ ಗ್ರಂಥಾಲಯಕ್ಕೆ ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯ ದೆಹಲಿಯ ಹಳೆಯ ರಾಜೇಂದರ್ ನಗರದಲ್ಲಿರುವ ರಾವ್ ಅವರ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ನಡೆದಿದೆ. ಕೋಚಿಂಗ್ ಸೆಂಟರ್ ನಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದರು. ಇಪ್ಪತ್ತೇಳು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಾತ್ರಿ 10.30 ರ ವೇಳೆಗೆ, ಎನ್ಡಿಆರ್‌ಎಫ್ ವಿದ್ಯಾರ್ಥಿನಿಯೋರ್ವಳ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರಿಂದ ಅಧಿಕಾರಿಗಳು ಮೊದಲ ಸಾವನ್ನು ದೃಢಪಡಿಸಿದ್ದರು. ರಾತ್ರಿ 11.15 ರ ಸುಮಾರಿಗೆ ಎರಡನೇ ಶವವನ್ನು ಹೊರತೆಗೆಯಲಾಯಿತು. ಮುಳುಗುತಜ್ಞರು ಮಧ್ಯರಾತ್ರಿಯ ನಂತರ […]