Breaking News :

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಬಿಜೆಪಿಯ ಮಾಜಿ ಶಾಸಕನಿಗೆ ಕ್ಷಮಾಧಾನ ನೀಡಿದ ರಾಜ್ಯಪಾಲೆ

ಸಮಾಜವಾದಿ ಪಕ್ಷದ ಶಾಸಕ ಜವಾಹರ್‌ ಯಾದವ್‌ ಅವರ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದ ಬಿಜೆಪಿಯ ಮಾಜಿ ಶಾಸಕ ಉದಯಭನ್‌ ಕರ್ವಾರಿಯಾಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಕ್ಷಮಾಧಾನ ನೀಡಿ ಬಿಡುಗಡೆಗೊಳಿಸಿದ್ದಾರೆ. ಸಂವಿಧಾನದ ವಿಧಿ 161 ಅನ್ವಯ ಇರುವ ಅಧಿಕಾರಗಳನ್ನು ಬಳಸಿಕೊಂಡು ರಾಜ್ಯಪಾಲೆ ಆನಂದಿಬೆನ್, ಕರ್ವಾರಿಯಾ ಅವರ ಬಿಡುಗಡೆಗೆ ಆದೇಶಿಸಿದ್ದರು. ಜೈಲಿನಲ್ಲಿರುವಾಗ ಸನ್ನಡತೆಯ ಕಾರಣ ನೀಡಿ ಕರ್ವಾರಿಯಾ ಅವರ ಬಿಡುಗಡೆಗೆ ಈ ಹಿಂದೆ ಪ್ರಯಾಗರಾಜ್‌ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ […]

ಬಂಟ್ವಾಳ; ಮನೆಯೊಳಗೆ ಜುಗಾರಿ ಅಡ್ಡೆ; ಪೊಲೀಸ್ ದಾಳಿ, ಹಲವರು ವಶಕ್ಕೆ

ಬಂಟ್ವಾಳ:  ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ನಡ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಶಿವರಾಮ ನಾಯಕ್ (56), ಗೋಪಾಲ (41), ಯೋಗೀಶ ಪ್ರಭು, (46) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಯಚಂದ್ರ ಬೊಳ್ಳಾರ್ ಎಂಬಾತನ ಒಡೆತನದ ಪಿಲಿಮೊಗರು ಗ್ರಾಮದ ನಡಾಯಿ ಎಂಬಲ್ಲಿರುವ ಮನೆಯೊಳಗೆ ಇಸ್ಪೀಟ್ ಎಲೆಗಳನ್ನು ಬಳಸಿ ಆಟವಾಡುವಾಗ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ […]

ವಿಟ್ಲ: ರಿಕ್ಷಾ & ಕಾರಿನ ನಡುವೆ ಭೀಕರ ಅಪಘಾತ: ರಿಕ್ಷಾ ಚಾಲಕ ಮೃತ್ಯು

ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. ರಿಕ್ಷಾ ಚಾಲಕ ಪೆರುವಾಯಿ ನಿವಾಸಿ ಅಬ್ಬಾಸ್ ಮೃತರು. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಮಾಣಿ; ಜ್ವರದಿಂದ 22 ವರ್ಷದ ಯುವಕ ಮೃತ್ಯು

ಯುವಕನೋರ್ವ ಅನಾರೋಗ್ಯದಿಂದ ನಿಧನರಾದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಪಂತಡ್ಕದಲ್ಲಿ ನಡೆದಿದೆ. ನೇರಳಕಟ್ಟೆ ಪಂತಡ್ಕದ ಹನೀಫ್ ಎಂಬವರ ಪುತ್ರ ಬಾತಿಷಾ(22) ಮೃತಪಟ್ಟ ಯುವಕ. ಇವರು ಮಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಮೃತಪಟ್ಟಿದ್ದಾರೆ. ಯುವಕ ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹ ಮಂಗಳೂರಿನ ಆಸ್ಪತ್ರೆಯಲ್ಲಿದ್ದು, ಮನೆಗೆ ತರಲು ಸಿದ್ಧತೆ ನಡೆಯುತ್ತಿದೆ            

ರಾಷ್ಟ್ರಪತಿ ಭವನದ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಹೆಸರು ಬದಲಾವಣೆ

ರಾಷ್ಟ್ರಪತಿ ಭವನದ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಅನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ್ ಮಂಟಪ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮರುನಾಮಕರಣ ಮಾಡಿದ್ದಾರೆ. ‘ದರ್ಬಾರ್ ಹಾಲ್’ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನದಂತಹ ಪ್ರಮುಖ ಸಮಾರಂಭಗಳು ಮತ್ತು ಆಚರಣೆಗಳ ಸ್ಥಳವಾಗಿದೆ. ‘ದರ್ಬಾರ್’ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷರ ನ್ಯಾಯಾಲಯಗಳು, ಅಸೆಂಬ್ಲಿಗಳನ್ನು ಸೂಚಿಸುತ್ತದೆ. ಭಾರತವು ಗಣರಾಜ್ಯವಾದ ನಂತರ ಅದು ಪ್ರಸ್ತುತತೆಯನ್ನು ಕಳೆದುಕೊಂಡಿತು, ಅಂದರೆ ‘ಗಣತಂತ್ರ’. ‘ಗಣತಂತ್ರ’ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದೆ, […]

ದರ್ಶನ್ ಗೆ ಕ್ಷಮೆ ನೀಡುತ್ತಾ ರೇಣುಕಾಸ್ವಾಮಿ ಕುಟುಂಬ? ರೇಣುಕಾಸ್ವಾಮಿ ತಂದೆ ಹೇಳಿದ್ದೇನು?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದು, ಅವರ ವಿರುದ್ಧ ಬಲವಾದ ಸಾಕ್ಷ್ಯಾಗಳು ಪೊಲೀಸರಿಗೆ ಸಿಕ್ಕಿದೆ. ರೇಣುಕಾಸ್ವಾಮಿ ಕುಟುಂಬ ಬಯಸದೆ ದರ್ಶನ್ ರಕ್ಷಣೆ ಸಾಧ್ಯವಿಲ್ಲ ಎನ್ನಲಾಗಿದೆ. ದರ್ಶನ್ ಕುಟುಂಬ ರೇಣುಕಾಸ್ವಾಮಿ ಕುಟುಂಬದ ಜೊತೆ ಮಾತುಕತೆಗೆ ಪ್ರಯತ್ನಿಸುತ್ತದೆ ಎನ್ನಲಾಗಿತ್ತು. ದರ್ಶನ್ ಜೊತೆ ಕಾಂಪ್ರಮೈಸ್ ಗೆ ತಯಾರಿದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಗೆ ನಾವು ಒಪ್ಪಲ್ಲ. ನನ್ನ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಅಷ್ಟೇ ನಮಗಿರುವ ಗುರಿ ಎಂದಿದ್ದಾರೆ. ದರ್ಶನ್ ಇರಲಿ ಯಾರೇ […]

ವಿಟ್ಲ; ಕಾಡಿನಲ್ಲಿ ರೊಮ್ಯಾನ್ಸ್ ಮೂಡಿನಲ್ಲಿ ಸಿಕ್ಕಿಬಿದ್ದ ಜೋಡಿ

ಜೋಡಿಯೊಂದು ಕಾಡಿನಲ್ಲಿ ರೊಮ್ಯಾನ್ಸ್ ಮೂಡಿನಲ್ಲಿದ್ದ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಘಟನೆ ವಿಟ್ಲ ಸಮೀಪದ ಕಳೆಂಜಿಮಲೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಜೋಡಿಯೊಂದು ಕಳೆಂಜಿಮಲೆ ಕಾಡಿಗೆ ಬಂದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಹಾಗಾಗಿ ಅವರನ್ನು ಪತ್ತೆಹಚ್ಚಲು ಹೊರಟಾಗ ಜೋಡಿ ರೊಮ್ಯಾನ್ಸ್ ಮೂಡಿನಲ್ಲಿರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಜೋಡಿ ಸಾರ್ವಜನಿಕರನ್ನು ಕಂಡು ಅರೆಬರೆ ಬಟ್ಟೆಯಲ್ಲೇ ಓಡಿ ಹೋಗಿದ್ದಾರೆ. ಬಳಿಕ ಅಲ್ಲಿನ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆ, ಕಾಂಡೋಮ್, ಚಪ್ಪಲಿಗಳನ್ನು […]

ಅಳುತ್ತಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತ್ರಕರ್ತೆ: ಆಕೆ ಕೊನೆಯ ವಿಡಿಯೋದಲ್ಲಿ ಹೇಳಿದ್ದೇನು?

ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿದ ಪತ್ರಕರ್ತೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಖ್ಯಾತ ವೆಬ್ ಚಾನೆಲ್‌ನಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಧುಮಿತಾ ಪರಿದಾ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾದ ನಾಲ್ಕೇ ತಿಂಗಳಲ್ಲಿ  ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊನೆಯ ವಿಡಿಯೋದಲ್ಲಿ ಪತ್ರಕರ್ತೆ ಹೇಳಿದ್ದೇನು? ಅಮ್ಮಾ ಕ್ಷಮಿಸಿಬಿಡು, ನನ್ನ ನಿರ್ಧಾರದ ಕುರಿತು ತೀವ್ರ ವಿಷಾಧ ವ್ಯಕ್ತಪಡಿಸುತ್ತಿದ್ದೇನೆ. ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಈ ಜಗತ್ತಿನಲ್ಲಿ ಈ ರೀತಿಯ ಕಪಟ ವ್ಯಕ್ತಿಗಳಿದ್ದಾರೆ ಅನ್ನೋದು ಗೊತ್ತಿರಲಿಲ್ಲ. 5 […]

BREAKING ನೀಟ್ ಪರೀಕ್ಷೆ ರದ್ದು, ಒಂದು ದೇಶ, ಒಂದು ಚುನಾವಣೆ ವಿರುದ್ಧ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ನೀಟ್ ಪರೀಕ್ಷೆ ರದ್ದು ಹಾಗೂ ಕೇಂದ್ರ ಸರ್ಕಾರದ ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ವಿಧಾನಸಭೆ ಅದನ್ನು ಅಂಗೀಕರಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜುಲೈ 22ರಂದು ನಡೆದ ನಡೆದ ಸಂಪುಟ ಸಭೆಯಲ್ಲಿ ನೀಟ್‌ ಪರೀಕ್ಷೆ ಮತ್ತು ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ವಿರೋಧಿಸಲು ನಿರ್ಧರಿಸಲಾಗಿತ್ತು. ಈ ಕುರಿತು ನಿರ್ಣಯ ಮಂಡಿಸಿದ ಕಾನೂನು ಸಚಿವ ಹೆಚ್.ಕೆ  ಪಾಟೀಲ್,  ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆ ಮತ್ತು […]

ಯುವಕನ ಕೈಕಡಿದ ಪ್ರಕರಣ: ಆರೋಪಿಗಳ ಬಂಧನ

ಕನಕಪುರದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಯಲ್ಲಿ  ದಲಿತ ಯುವಕನ‌ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನಕಪುರ ಟೌನ್ ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಶಾಂಕ್, ದರ್ಶನ್, ಪ್ರತೀಕ್ ಹಾಗೂ ಶಿವಶಂಕರ್ ಬಂಧಿತ ಆರೋಪಿಗಳು. ಘಟನೆಯ  ಪ್ರಮುಖ ಆರೋಪಿ ಹರ್ಷ  ಸೇರಿದಂತೆ ಉಳಿದ ಮೂವರು ತಲೆ ಮರೆಸಿಕೊಂಡಿದ್ದಾರೆ. ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರು ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರೊಂದಿಗೆ ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಐಜಿಪಿ […]