ಕಾಸರಗೋಡು: ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು

ಕಾಸರಗೋಡು: ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದಾಗ ಶಾಲು ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಪೆರುವಾಡ್ ನಲ್ಲಿ ನಡೆದಿದೆ. ಪೆರುವಾಡ್ ಕೆ .ಕೆ ನಗರದ ಇಸ್ಮಾಯಿಲ್ ರವರ ಪತ್ನಿ ನಫೀಸಾ ( 52) ಮೃತಪಟ್ಟವರು. ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಪತಿ ಇಸ್ಮಾಯಿಲ್ ಕೂಡಲೇ ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ನಫೀಸಾ ಅವರ ಜೀವ ಉಳಿಸಲಾಗಲಿಲ್ಲ . ಈ ಕುರಿತು ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. […]
ಪುತ್ತೂರು: ಲಾರಿಯ ಟಯರ್ ಬದಲಿಸುವಾಗ ಅವಘಡ; ವ್ಯಕ್ತಿಗೆ ಗಂಭೀರ ಗಾಯ

ಪುತ್ತೂರು: ಲಾರಿಯ ಟಯರ್ ಬದಲಿಸುವಾಗ ಡಿಸ್ಕ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ರಾತ್ರಿ ನಡೆದಿದೆ. ಗಂಭೀರ ಗಾಯಗೊಂಡವರನ್ನು ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಎಂದು ಗುರುತಿಸಲಾಗಿದೆ. ಲಾರಿಯ ಟಯರ್ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಪಂಚರ್ ತೆಗಿಸಿ ರಶೀದ್ ಆಟೋ ರಿಕ್ಷಾದಲ್ಲಿ ಟಯರ್ ತಂದಿದ್ದರು. ಟಯರ್ ಬದಲಿಸುವ ವೇಳೆ ಒಮ್ಮೆಲೇ ಟಯರ್‌ನ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ […]
ಹೃದಯ ವಿದ್ರಾಹಕ ಘಟನೆ: ಬೈಕ್ ನಲ್ಲಿ ತೆರಳುವಾಗ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಮೃತ್ಯು

ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಮರವೊಂದು ಬಿದ್ದು ಇಬ್ಬರು ಸವಾರರು ಮೃತಪಟ್ಟ ಘಟನೆ ಹಾವೇರಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಮಾಸೂರು ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಚಿನ್ನಮುಳಗುಂದ ಗ್ರಾಮದ ಮಂಜುನಾಥ ಪುಟ್ಟಲಿಂಗಣ್ಣನವರ (35) ಹಾಗೂ ಯತ್ನಳ್ಳಿ ಗ್ರಾಮದ ಹನುಮಂತಪ್ಪ ನಾಮದೇವ (25) ಮೃತರು. ಇವರು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ, ಜಂಗಲ್ ಕಟಿಂಗ್ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರು ಬೈಕ್ ನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲ್ಲ ಎಂದ ಕೇಂದ್ರ ಸರಕಾರ: ಮೋದಿ ಸರಕಾರದ ವಿರುದ್ಧ ಮುನಿಸಿಕೊಳ್ಳುತ್ತಾರಾ ನಿತೀಶ್ ಕುಮಾರ್?

ನವದೆಹಲಿ; ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಇದರಿಂದಾಗಿ ಮೋದಿ ವಿರುದ್ಧ ನಿತೀಶ್ ಮುನಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿ(ಯು), ರಾಜ್ಯಕ್ಕೆ ಹಿಂದುಳಿದ ಸ್ಥಾನಮಾನಕ್ಕೆ ಒತ್ತಾಯಿಸಿದ ಒಂದು ದಿನದ ನಂತರ ಈ ನಿಲುವು ಪ್ರಕಟವಾಗಿದೆ. ಇದರಿಂದ ಈ ಮೊದಲು ಮೋದಿ ಸರಕಾರ ರಚನೆ ವೇಳೆ ಎನ್ ಡಿಎ ಮೈತ್ರಿ ಜೆಡಿಯು ಇಟ್ಟ ಬೇಡಿಕೆಗೆ ಹಿನ್ನೆಡೆಯಾಗಿದೆ. ಮುಂಗಾರು ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಲಿಖಿತ […]
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸೂರಜ್ ರೇವಣ್ಣಗೆ ಜಾಮೀನು ಮಂಜೂರು

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಸೂರಜ್ ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ. ಸೂರಜ್ ರೇವಣ್ಣ ವಿರುದ್ಧ ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂತ್ರಸ್ತರನ್ನು […]
ಅಂಕೋಲಾ ಗುಡ್ಡೆ ಕುಸಿತ ಕಾರ್ಯಾಚರಣೆಯಲ್ಲಿ ವಿಳಂಬ ಆರೋಪ: ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಕೆ

ಉತ್ತರ ಕನ್ನಡದ ಅಂಕೋಲಾದಲ್ಲಿ ನಡೆದ ಗುಡ್ಡೆ ಕುಸಿತದ ಸ್ಥಳದಲ್ಲಿ ರಕ್ಷಣ ಕಾರ್ಯ 6ನೇ ದಿವೂ ಮುಂದುವರೆದಿದೆ. ಈ ಮಧ್ಯೆ ರಕ್ಷಣಾ ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವು ಕೇಳಿ ಬಂದಿದೆ. ಕರ್ನಾಟಕದ ಮಾಧ್ಯಮಗಳು ಈ ಬಗ್ಗೆ ಸರಿಯಾಗಿ ಸುದ್ದಿಯನ್ನು ಬಿತ್ತರಿಸುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಕೇರಳದ ಮಾಧ್ಯಮಗಳು ಘಟನಾ ಸ್ಥಳಕ್ಕೆ ತೆರಳಿ ವರದಿಯನ್ನು ಮಾಡುತ್ತಿದೆ. ಈ ಮಧ್ಯೆ ದುರ್ಘಟನೆಯ ಬಳಿಕ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಹುಡುಕಾಟ ತೀವ್ರಗೊಳಿಸಲು ಕೇಂದ್ರ ತಕ್ಷಣ […]
ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ- ಮಗ ಮೃತ್ಯು

ಬಾತ್‌ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ತಾಯಿ-ಮಗ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ರಾಮನಗರದ ಜ್ಯೋತಿ ನಗರದಲ್ಲಿ ನಡೆದಿದೆ. ಶೋಭಾ (40), ದಿಲೀಪ್ (17) ಮೃತ ದುರ್ದೈವಿಗಳು. ದಿಲೀಪ್ ಬಿಸಿ ನೀರು ಕಾಯಿಸಲು ಗ್ಯಾಸ್ ಗೀಜರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ತಡವಾದರೂ ಮಗ ಬಾತ್ ರೂಂನಿಂದ ಬಾರದೇ ಇದ್ದಾಗ, ಆತನನ್ನು ಹುಡುಕಿಕೊಂಡು ಬಾತ್‌ರೂಮ್‌ಗೆ ಬಂದ ಶೋಭಾ ವಿಷ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನು ಕಂಡು ಇತರರು […]
ಮಂಗಳೂರಿನಲ್ಲಿ ಕಳ್ಳರ ಹಾವಳಿ; ಎರಡು ಕಡೆ ಕಳ್ಳತನಕ್ಕೆ ಯತ್ನ

ಮಂಗಳೂರು: ಪದವಿನಂಗಡಿ ಬಳಿ ಎರಡು ಕಡೆ ಕಳ್ಳರು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಪದವಿನಂಗಡಿ ಸಮೀಪದ ಮಹಾತ್ಮನಗರ ಬಡಾವಣೆಯ ಮನೆಯೊಂದರ ಮುಖ್ಯಗೇಟ್ ತೆಗೆದು ಒಳನುಗ್ಗಿರುವ ಕಳ್ಳರು ಬಾಗಿಲಿನ ಬಳಿ ಇದ್ದ ಇನ್ನೊಂದು ಸ್ಟೀಲ್ ಗೇಟ್‌ನ್ನು ತೆರೆದು ಮನೆಯ ಬಾಗಿಲನ್ನು ರಾಡ್‌ನಿಂದ ಒಡೆಯಲು ಯತ್ನಿಸಿದ್ದಾರೆ. ರಾತ್ರಿ 1.45ರ ವೇಳೆಗೆ ಈ ಘಟನೆ ನಡೆದಿದ್ದು, ಈ ವೇಳೆ ಎಚ್ಚರಗೊಂಡು ಎಲ್ಲ ಲೈಟ್ ಹಾಕಿ ಮನೆ ಮಂದಿ ಕೂಗಿಕೊಂಡಾಗ ಕಳ್ಳರು ಓಡಿ ಹೋಗಿದ್ದಾರೆ. ತಕ್ಷಣ ಮನೆಯವರು ಪೊಲೀಸರು ಹಾಗೂ ನೆರೆಮನೆಯವರಿಗೆ ಮಾಹಿತಿ […]
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಕಮಲಾ ಹ್ಯಾರಿಸ್ ಹಿನ್ನೆಲೆಯೇನು ಗೊತ್ತಾ?

ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕ ದೇಶದ ಅಧ್ಯಕ್ಷೀಯ ಚುನಾವಣೆ ನವೆಂಬರ್ ನಲ್ಲಿ ನಡೆಯಲಿದೆ. ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅವರು ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರೆ, ಅಮೆರಿಕಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೆಯಾಗಲಿದ್ದಾರೆ. ಕಪ್ಪುವರ್ಣಿಯ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಏಷ್ಯಾ ಮೂಲದ ಮಹಿಳೆ […]
ಆರೆಸ್ಸೆಸ್ ಸಭೆಗಳಲ್ಲಿ ಸರಕಾರಿ ನೌಕರರು ಭಾಗವಹಿಸುವುದಕ್ಕಿದ್ದ ನಿರ್ಬಂಧ ತೆಗೆದು ಹಾಕಿದ ಸರಕಾರ?

ಸರ್ಕಾರಿ ನೌಕರರು, ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ, ಸಭೆಗಳಲ್ಲಿ ಭಾಗವಹಿಸುವುದಕ್ಕಿದ್ದ ನಿಷೇಧವನ್ನು ಕೇಂದ್ರ ಸರಕಾರ ತೆಗೆದು ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ನಾಯಕರು ಈ ಕುರಿತ ಆದೇಶದ ಪ್ರತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ಕುರಿತು ಪೋಸ್ಟ್ ಮಾಡಿದ್ದಾರೆ. 58 ವರ್ಷಗಳ ಹಿಂದೆ ಅಂದರೆ 1966 ರಲ್ಲಿ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ವಿಧಿಸಿದ್ದ ಅಸಂವಿಧಾನಿಕ ನಿಷೇಧವನ್ನು […]