ಬೆಳಗಾವಿಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

-ಯಾಸೀನ್ ಮೋಮಿನ್ ಕೊಲೆಯಾದ ಯುವಕ ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಬಳಿ ನಡೆದಿದೆ. ಲಕ್ಷ್ಮೇಶ್ವರ ನಿವಾಸಿ ಮೋಮಿನ್ (28) ಕೊಲೆಯಾದ ಯುವಕನಾಗಿದ್ದಾನೆ. ಮಾರಕಾಸ್ತ್ರ ಹಿಡಿದು ಬಂದ ವ್ಯಕ್ತಿ ಏಕಾಏಕಿ ದಾಳಿ ಮಾಡಿ ಮೋಮಿನ್ ಗೆ ಕೊಲೆ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆ ಯುವಕ ಮೇಲೆ ದಾಳಿ ನಡೆದಿದೆ. ಸ್ಥಳಕ್ಕೆ ಕುಲಗೋಡ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಕ್ತಸಿಕ್ತವಾಗಿ […]
ಹಿರಿಯ ಪತ್ರಕರ್ತ ಶಶಿಧರ ಭಟ್ ಗೆ ಅನಾರೋಗ್ಯ; ಚಿಕಿತ್ಸೆ ವೆಚ್ಚ ಭರಿಸುವುದಾಗಿ ಸಿಎಂ ಭರವಸೆ

ಕನ್ನಡದ ಹಿರಿಯ ಪತ್ರಕರ್ತ ಶಶಿಧರ ಭಟ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಅನಾರೋಗ್ಯದಿಂದ ಇರುವ ಬಗ್ಗೆ ಶಶಿಧರ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿದ್ದರು. ಶಶಿಧರ್ ಭಟ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. […]
ಕಲ್ಲಡ್ಕ: ಯುವಕನೋರ್ವ ನಾಪತ್ತೆ; ಪತ್ತೆಗೆ ಮನವಿ

ಕಲ್ಲಡ್ಕ: ಯುವಕನೋರ್ವ ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮಾಣಿಮಜಲು ಎಂಬಲ್ಲಿ ನಡೆದಿದೆ. ಸಮದ್ ನಾಪತ್ತೆಯಾದ ಯುವಕನಾಗಿದ್ದಾನೆ. ಇವರು ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಮಳೆಯಿಂದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಧವಸ ದಾನ್ಯಗಳಿಗೆ ಹಾನಿಯಾಗಿತ್ತು. ಇದರಿಂದ ನೊಂದು ಕೊಂಡಿದ್ದರು ಎಂದು ಕಟುಂಬ ಮೂಲಗಳು ಹೇಳುತ್ತಿದೆ. ಸಮದ್ ವಿವಾಹಿತರಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ತಂದೆ ನಾಪತ್ತೆ ಬಳಿಕ ಕುಟುಂಬ ಕಂಗಾಲಾಗಿದೆ. ಸಮದ್ ಅವರನ್ನು ಎಲ್ಲಿಯಾದರೂ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಅವರ ಕುಟುಂಬ ವರ್ಗವು […]
ಬಸ್ ನಿಲ್ಲಿಸಿಲ್ಲ ಎಂದು ಸರಕಾರಿ ಬಸ್ ಗೆ ಕಲ್ಲು ಹೊಡೆದ ಯುವಕ

ಬೆಂಗಳೂರು; ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಯುವಕನೊಬ್ಬ ಕಲ್ಲು ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ತಿರುವಣ್ಣಮಲೈಗೆ ಬಸ್ ಹೋಗುತ್ತಿತ್ತು. ಟೌನ್‌ಹಾಲ್ ಬಳಿ ಚಲಿಸುತ್ತಿದ್ದ ಬಸ್‌ಗೆ ಯುವಕ ಕಲ್ಲೇಟು ಹೊಡೆದಿದ್ದಾನೆ. ಸೆಟ್‌ಲೈಟ್‌ನಲ್ಲೇ ಬಸ್ ಫುಲ್ ರಶ್ ಅಗಿತ್ತು. ಹಾಗಾಗಿ ಬಸ್ ನ್ನು ನಿಲ್ಲಿಸಿರಲಿಲ್ಲ. ಬಸ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡ ಯುವಕ ಕಲ್ಲು ಹೊಡೆದಿದ್ದಾನೆ. ತಕ್ಷಣ ತಮಿಳುನಾಡು ಮೂಲದ ಮಹಾರಾಜ ಎಂಬ ಯುವಕನನ್ನು ಎಸ್‌ಜೆ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರ ಸಮೇತ ಬಸ್ಸನ್ನು ಎಸ್‌ಜೆ ಪಾರ್ಕ್ […]
ದರ್ಶನ್ ಪ್ರಕರಣದಲ್ಲಿ ಮುಂದೆ ಬೇರೆಯೇ ಆಗಲಿದೆ! ಅಧಿಕಾರಿಯೋರ್ವರು ಹೇಳುವುದೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ದರ್ಶನ್ ಮತ್ತು ಗ್ಯಾಂಗ್ ಜೈಲಿನಲ್ಲಿದೆ. ದರ್ಶನ್ ಗೆ ಜೈಲಿನಿಂದ ಹೊರತರಲು ಆತನ ಕುಟುಂಬ, ಆಪ್ತ ವಲಯಗಳು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಇದೆಲ್ಲವೂ ಅವರು ಅಂದುಕೊಂಡಂತಿಲ್ಲ ಎನ್ನುವುದು ವಾಸ್ತವ. ಪ್ರಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ವಿಚಾರಣೆ ನಡಯುತ್ತಿದೆ. ದರ್ಶನ್ ಜೈಲಿನಿಂದ ಹೊರಗಡೆ ಬರುತ್ತಾರೆಯಾ ಅಥವ ಇಲ್ಲವಾ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಈ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ಸಾಕ್ಷಿಗಳು ಪೊಲೀಸರ ಕೈಸೇರಿವೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಮೂಲಕ […]
ಪಿಯುಸಿಯಲ್ಲಿ ಫೈಲ್ ವಿದ್ಯಾರ್ಥಿನಿಗೆ ನೀಟ್ ನಲ್ಲಿ ಟಾಪ್ ಮಾರ್ಕ್: ಅಕ್ರಮದ ಆರೋಪದ ಬೆನ್ನಲ್ಲಿ ಚರ್ಚೆಗೆ ಗ್ರಾಸವಾದ ಅಂಕ

ನವದೆಹಲಿ: ನೀಟ್ ಪರೀಕ್ಷೆಯಲ್ಲಿ ಅವ್ಯವಹಾರದ ಬಗ್ಗೆ ದೇಶದಾದ್ಯಂತಆರೋಪ ಕೇಳಿ ಬಂದಿತ್ತು. ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಗುಜರಾತಿನ ವಿದ್ಯಾರ್ಥಿನಿಯೋರ್ವಳು ನೀಟ್ ಯುಜಿ ಪರೀಕ್ಷೆಯಲ್ಲಿ 705 ಅಂಕ ಗಳಿಸುವ ಮೂಲಕ ಸುದ್ದಿಯಲ್ಲಿದ್ದಾಳೆ. ವಿದ್ಯಾರ್ಥಿನಿಗೆ ಪಿಯುಸಿ ಪರೀಕ್ಷೆಯಲ್ಲಿ ಹಾಗೂ ನೀಟ್ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳಲ್ಲಿನ ವ್ಯತ್ಯಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನೆಯೆತ್ತಿದ್ದಾರೆ. ವರದಿ ಪ್ರಕಾರ, ಅಹಮದಾಬಾದ್‌ನ ವಿದ್ಯಾರ್ಥಿನಿಯೊಬ್ಬಳ 12ನೇ ತರಗತಿಯ ಅಂಕಪಟ್ಟಿಯು, ಆಕೆಯ ಕಳಪೆ ಪ್ರದರ್ಶನವನ್ನು ಹೇಳುತ್ತಿದ್ದು , ಭೌತಶಾಸ್ತ್ರದಲ್ಲಿ 21, ರಸಾಯನ ಶಾಸ್ತ್ರದಲ್ಲಿ 31, ಜೀವಶಾಸ್ತ್ರದಲ್ಲಿ […]
ಸಿಕ್ಕಾಪಟ್ಟೆ ತಿನ್ನುವುದಕ್ಕೆ ಹೆಸರುವಾಸಿಯಾಗಿದ್ದ ಯುವತಿ ಸ್ಪರ್ಧೆಯ ನೇರಪ್ರಸಾರದ ವೇಳೆಯೇ ಮೃತ್ಯು

ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಜಾಲತಾಣದ ತಾರೆಯೊಬ್ಬರು ಕಾರ್ಯಕ್ರಮದ ನೇರ ಪ್ರಸಾರದ ವೇಳೆಯೇ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ. ಜುಲೈ 14ರಂದು ಈ ಘಟನೆ ನಡೆದಿದೆ. ಪ್ಯಾನ್ ಕ್ಸಿಯಾಟಿಂಗ್(24) 10 ಗಂಟೆಗಳಿಗೂ ಹೆಚ್ಚು ಕಾಲ ತಿನ್ನುವಂತಹ ಸವಾಲುಗಳನ್ನು ಸ್ವೀಕರಿಸಿ ಹೆಸರುವಾಸಿಯಾಗಿದ್ದರು. ಕ್ಸಿಯಾಟಿಂಗ್ ಪ್ರತಿ ಊಟಕ್ಕೆ 10 ಕೆಜಿ ಆಹಾರವನ್ನು ಸೇವಿಸುತ್ತಿದ್ದರು. ಆಕೆಯ ಪೋಷಕರು ಮತ್ತು ಹಿತೈಷಿಗಳ ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ, ಕ್ಸಿಯಾಟಿಂಗ್ ಅದನ್ನು ಮುಂದುವರಿಸಲು ನಿರ್ಧರಿಸಿದ್ದರು ಎಂದು ವರದಿಯು ಉಲ್ಲೇಖಿಸಿದೆ. ಕ್ಸಿಯಾಟಿಂಗ್ ಅವರ ಮರಣೋತ್ತರ ವರದಿಯಲ್ಲಿ, ಆಕೆಯ […]
ಕೊಡಗು: ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟ ಸಚಿವರಿಗೆ ತರಾಟೆಗೆ ತಗೆದುಕೊಂಡ ಜನರು

ಕೊಡಗು: ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ಬೋಸರಾಜು ಅವರನ್ನು ಸಂತ್ರಸ್ತ ಜನರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಸೋಮವಾರಪೇಟೆ ಜಂಬೂರಿಗೆ ಸಚಿವ ಬೋಸರಾಜು ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ಭೇಟಿ ನೀಡಿದ್ದರು. ಮಳೆಯಿಂದ ಹಾನಿಗೊಳಗಾಗಿರುವ ಸ್ಥಳಗಳಿಗೆ ತೆರಳಿ ವೀಕ್ಷಣೆ ಮಾಡಿದ್ದರು. ಈ ವೇಳೆ ಸಚಿವರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, 2018 ರಲ್ಲಿ ಮಹಾ ಮಳೆಯಿಂದ ಆಸ್ತಿಪಾಸ್ತಿ, ಮನೆಗಳನ್ನು ಕಳೆದುಕೊಂಡ ನಮಗೆ ಸರ್ಕಾರ ಮನೆ ನೀಡಿದೆ. ಅದರೆ ಯಾವುದೇ ರೀತಿಯಲ್ಲಿ […]
ಉತ್ತರಪ್ರದೇಶದ ಗೊಂಡಾದಲ್ಲಿ ರೈಲು ಅವಘಡಕ್ಕೆ ಕಾರಣವೇನು? ತನಿಖಾ ತಂಡ ಹೇಳಿದ್ದೇನು?

ಉತ್ತರಪ್ರದೇಶದ ಗೊಂಡಾದಲ್ಲಿ ಗುರುವಾರ ಚಂಡೀಗಢ-ದಿಬ್ರೂಗಢ ಎಕ್ಸಪ್ರೆಸ್ ರೈಲು ಹಳಿತಪ್ಪಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ರೈಲ್ವೆ ಅಧಿಕಾರಿಗಳ ತಂಡವು ದುರಂತಕ್ಕೆ ಕಾರಣವನ್ನು ಪತ್ತೆ ಹಚ್ಚಿದೆ. ಅಧಿಕಾರಿಗಳು ತನಿಖೆಯ ವೇಳೆ ರೈಲು ಹಳಿಯನ್ನು ಸರಿಯಾಗಿ ಜೋಡಿಸದಿರುವುದೇ ಅಪಘಾತಕ್ಕೆ ಕಾರಣ ಎಂದು ಪತ್ತೆ ಹಚ್ಚಿದ್ದಾರೆ. ಐವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆದರೆ ತನಿಖಾ ಸಮಿತಿಯ ವರದಿಯ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು ಈಶಾನ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ […]
ಕೇರಳಕ್ಕೆ ಪ್ರತ್ಯೇಕ ವಿದೇಶಾಂಗ ಕಾರ್ಯದರ್ಶಿಯ ನೇಮಕ; ಭುಗಿಲೆದ್ದ ವಿವಾದ

ಕೇರಳದಲ್ಲಿನ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿ ಕೆ. ವಾಸುಕಿ ಅವರನ್ನು ಕೇರಳದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಬಿಜೆಪಿ ಈ ಬಗ್ಗೆ ವಿವಾದವನ್ನೇ ಸೃಷ್ಟಿಸಿದೆ. ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಕಾರ್ಯದರ್ಶಿ ಕೆ.ವಾಸುಕಿ, ವಿದೇಶ ಸಹಕಾರ ಸಂಬಂಧಿಸಿದ ವಿಷಯಗಳ ಹೆಚ್ಚುವರಿ ಉಸ್ತುವಾರಿ ವಹಿಸುತ್ತಾರೆ. ಅಸ್ತಿತ್ವದಲ್ಲಿರುವ ಅಧಿಕಾರಿಗಳೊಂದಿಗೆ ಹೆಚ್ಚುವರಿಯಾಗಿ ಅಧಿಕಾರಿಯು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಮನ್ವಯಗೊಳಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಕೇರಳ ಸರಕಾರ ಆದೇಶದಲ್ಲಿ ಹೇಳಿದೆ. ಈ ವಿಚಾರವಾಗಿ ಬಿಜೆಪಿ ಕಿಡಿಕಾರಿದ್ದು, […]