ಉಳ್ಳಾಲ ಖಾಝಿಯಾಗಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ನೇಮಕ

ಉಳ್ಳಾಲ; ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫ್ತಿ , ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಅಂಗೀಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಉಳ್ಳಾಲ ಖಾಝಿಯಾಗಿದ್ದ ಕುರ್ರತ್ ಸಾದಾತ್ ಕೂರ ತಂಙಳದ ನಿಧನದಿಂದ ತೆರವಾದ ಸ್ಥಾನಕ್ಕೆ ಎಪಿ ಉಸ್ತಾದ್ ಅವರನ್ನು ನೇಮಕ ಮಾಡಲಾಗಿದೆ.
BREAKING ಪುತ್ತೂರು: ಹೊಳೆಯ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಪುತ್ತೂರು; ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ ಸಿಕ್ಕಿದ್ದು, ಸರ್ವೆ ಹೊಳೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಕುದ್ಮಾರು ಗ್ರಾಮದ ಕೆಕ್ಕಿತ್ತಾಡಿಯ ಸನ್ಮಿತ್( 21) ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ನಿರಂತರವಾಗಿ ಹುಡುಕಾಟದ ಬಳಿಕ ಇದೀಗ ಸನ್ಮಿತ್ ಮೃತದೇಹವನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ಹೊಳೆಯಿಂದ ಹೊರಕ್ಕೆ ತೆಗೆದಿದ್ದಾರೆ.
ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋದ ಯುವಕ; ವಿಡಿಯೋ ವೈರಲ್..

ಮಂಡ್ಯ; ಯುವಕನೋರ್ವ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಈ ನೀರಿನಲ್ಲಿ ಅಪರಿಚಿತ ಯುವಕ ಕೊಚ್ಚಿ ಹೋಗಿದ್ದಾನೆ. ನದಿಯಲ್ಲಿ ಸ್ನಾನ ಮಾಡುವ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ. ಈ ದೃಶ್ಯ ಕಂಡ ಸ್ಥಳೀಯರು ಯುವಕನನ್ನು ರಕ್ಷಿಸಲು ಸಾಧ್ಯವಾಗದೆ […]
ಐಐಟಿ ಘಟಿಕೋತ್ಸವದಲ್ಲಿ ಗಾಝಾ ಹತ್ಯಾಕಾಂಡದ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿ

ಚೆನ್ನೈ: ಐಐಟಿ-ಮದ್ರಾಸ್‌ನ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರ ಪ್ರಶಸ್ತಿಗೆ ಭಾಜನರಾದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಧನಂಜಯ ಬಾಲಕೃಷ್ಣನ್ ಗಾಝಾದಲ್ಲಿ ನ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. ಧನಂಜಯ ಬಾಲಕೃಷ್ಣನ್ ಮಾತನಾಡುತ್ತಾ, ವಿಜ್ಞಾನ,ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತವನ್ನು ಐತಿಹಾಸಿಕವಾಗಿ ಇಸ್ರೇಲ್‌ನಂತಹ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ನೆರವಾಗಲು ಬಳಸಲಾಗಿದೆ ಎಂದು ಹೇಳಿದ್ದಾರೆ. ಅತ್ಯಂತ ಮಹತ್ವದ ವಿಷಯವನ್ನು ಹೇಳಲು ನಾನು ಈ ವೇದಿಕೆಯನ್ನು ಬಳಸದಿದ್ದರೆ ಅದು ಅನ್ಯಾಯವಾಗುತ್ತದೆ. ಫೆಲೆಸ್ತೀನ್‌ನಲ್ಲಿ ಹತ್ಯಾಕಾಂಡ ನಡೆಯುತ್ತಿದೆ. ಜನರು ಸಾಯುತ್ತಿದ್ದಾರೆ. ಇದು ಕೊನೆಯಾಗುತ್ತಿಲ್ಲ. ಈ ವೇದಿಕೆಯ ಮೂಲಕ ಗಾಝಾ ನರಮೇಧದ ವಿರುದ್ಧ ಕ್ರಮಕ್ಕೆ […]
ಚಾಮರಾಜನಗರ: ಬಸ್ & ಕಾರಿನ ನಡುವೆ ಭೀಕರ ಅಪಘಾತ; ಇಬ್ಬರು ಮೃತ್ಯು

ಚಾಮರಾಜನಗರ: ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಪಟ್ಟಣದ ಹೊರ ವಲಯದ ಎಪಿಎಂಸಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-766 ರಲ್ಲಿ ನಡೆದಿದೆ. ಚಾಮರಾಜನಗರ ಅಂಬೇಡ್ಕರ್ ಬಡಾವಣೆ ನಿವಾಸಿಗಳಾದ ಮಹೇಶ್, ದರ್ಶನ್ ಮೃತರು. ಸಚಿನ್ ಮತ್ತು ಚಾಲಕ ಕಿಟ್ಟಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಇವರು ಗುಂಡ್ಲುಪೇಟೆಯಿಂದ ಮೈಸೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ […]
ಮಾಂಸದ ಅಂಗಡಿಗಳಲ್ಲಿ ಹಲಾಲ್, ಝಟಕಾ ಬೋರ್ಡ್ ಕಡ್ಡಾಯ? ಏನಿದು ಮೇಯರ್ ಆದೇಶ?

ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಹಲಾಲ್ ಅಥವಾ ಝಟಕಾ ಮಾಂಸ ಎಂದು ಅಂಗಡಿಯ ಮೇಲೆ ಬರೆಯುವುದು ಕಡ್ಡಾಯಗೊಳಿಸುವುದಾಗಿ ಜೈಪುರ ಮೇಯರ್ ಡಾ.ಸೌಮ್ಯ ಗುರ್ಜರ ಹೇಳಿದ್ದಾರೆ. ಜೈಪುರ ಮಹಾನಗರಪಾಲಿಕೆಯು ಮಾಂಸ ಮಾರಾಟ ಮಾಡುವ ಎಲ್ಲಾ ಅಂಗಡಿಳಿಗೆ ಈ ಬಗ್ಗೆ ಆದೇಶ ನೀಡಿದೆ ಎನ್ನಲಾಗಿದೆ. ಜೈಪುರದ ಜನರು ಅನೇಕ ಬಾರಿ ನನ್ನ ಬಳಿ ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಮಾಂಸದ ಅಂಗಡಿಯ ಬಳಿ ಕಸವನ್ನು ಎಸೆಯುತ್ತಿರುವುದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆಯೆಂದೂ ದೂರುಗಳು ಬಂದಿವೆ. ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾಂಸ […]
ಗುಜರಾತ್: ಸಾಂಪ್ರದಾಯಿಕ ಪೇಟ ಧರಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಗ್ರಾಮವೊಂದರಲ್ಲಿ ಸಾಂಪ್ರದಾಯಿಕ ಪೇಟ ತೊಟ್ಟು ತೆಗೆಸಿಕೊಂಡಿದ್ದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ 24 ವರ್ಷ ವಯಸ್ಸಿನ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಜು.17ರಂದು ಘಟನೆ ನಡೆದಿದ್ದು, ಥಳಿತಕ್ಕೊಳಗಾದ ವ್ಯಕ್ತಿಯನ್ನು ಆಟೋರಿಕ್ಷಾ ಚಾಲಕ ಅಜಯ್ ಪಾರ್ಮಾರ್ ಎಂದು ಗುರುತಿಸಲಾಗಿದೆ. ಮನೆಗೆ ತೆರಳುವಾಗ ಸವರ್ಣೀಯ ಜಾತಿಯ ಜನರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದರ್ಬಾರ್ ಸಮುದಾಯದ ಮಂದಿ ಮಾತ್ರ ಸಫಾ ಮತ್ತು ತಂಪು ಕನ್ನಡಕ ಧರಿಸಲು ಯೋಗ್ಯರು. ಹೀಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ […]
ಕುವೈಟ್ ನಲ್ಲಿ ಭೀಕರ ಅಗ್ನಿ ಅವಘಡ; ಕೇರಳದ ದಂಪತಿ & ಇಬ್ಬರು ಮಕ್ಕಳು ಮೃತ್ಯು

ಕುವೈಟ್ ನ ಮನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ಮ್ಯಾಥ್ಯೂ ಮುಲಕಲ್, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್ ಮತ್ತು ಐರಿನ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಮ್ಯಾಥ್ಯೂ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದು, ಅಬ್ಬಾಸಿಯಾದಲ್ಲಿ ಕಳೆದ 15 ವರ್ಷದಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲಿ ಎ.ಸಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಕೊಚ್ಚಿ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಲಕಲ್ ಅವರು ತಾಯಿ ಹಾಗೂ […]
ಉಪ್ಪಿನಂಗಡಿ: ಬೈಕ್ ಗಳು ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು

ಉಪ್ಪಿನಂಗಡಿ: ಬೈಕ್ ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ಉಪ್ಪಿನಂಗಡಿಯ ತುರ್ಕಳಿಕೆ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಬೈಕ್ ಸವಾರ ಬಾರ್ಯ ನಿವಾಸಿ ಶಿವಾನಂದ ಮೃತ ದುರ್ದೈವಿ. ಶಿವಾನಂದ ಅವರು ಸಹೋದರನ ಜೊತೆ ಕಲ್ಲೇರಿಯಿಂದ ಬಾರ್ಯದಲ್ಲಿರುವ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಕರೀಂ ಎಂಬವರ ಬೈಕ್ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಶಿವಾನಂದ ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಂಭೀರವಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಧನಂಜಯ, […]
ಕಡಬ; ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಡಬ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ಕಡಬದಲ್ಲಿ ನಡೆದಿದೆ. ಕಡಬ ತಿಮರಡ್ಡ ನಿವಾಸಿ ಅಝರ್(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಝರ್ ಶನಿವಾರ ರಾತ್ರಿ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಝರ್ ವಿವಾಹಿತರಾಗಿದ್ದು, ಒಂದು ಮಗು ಕೂಡ ಇದೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.