Breaking News :

ಪುತ್ತೂರು ನದಿ ಬಳಿ ಬೈಕ್ ಪತ್ತೆ: ಯುವಕನೋರ್ವ ನದಿಗೆ ಹಾರಿರುವ ಶಂಕೆ

ಪುತ್ತೂರು; ಯುವಕನೋರ್ವ ಬೈಕ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಯುವಕ ಸರ್ವೆ ಗೌರಿ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದು, ಗೌರಿ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಬೈಕ್ ಪತ್ತೆ ಹಿನ್ನೆಲೆ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಯುವಕ ಹೊಳೆಗೆ ಹಾರಿದ್ದಾನೆಯೇ ಅಥವಾ ಬೇರೆಯೆಲ್ಲಾದರೂ ಹೋಗಿದ್ದಾನೆಯೇ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

ಪ್ರಾದೇಶಿಕ ಪಕ್ಷಗಳಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಅತ್ಯಧಿಕ ಆದಾಯ ಹರಿದು ಬಂದಿದೆ ಗೊತ್ತಾ?

ಹೊಸದಿಲ್ಲಿ: ಭಾರತ್ ರಾಷ್ಟ್ರ ಸಮಿತಿಯು 2022-23ರ ಆರ್ಥಿಕ ವರ್ಷಕ್ಕೆ ಪ್ರಾದೇಶಿಕ ಪಕ್ಷಗಳ ಆದಾಯ ಪಟ್ಟಿಯಲ್ಲಿ 737.67 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಂದರೆ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ಶೇಕಡಾ ಆದಾಯದಲ್ಲಿ ಈ ಪಕ್ಷದ ಆದಾಯ 42.38 ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ತಿಳಿಸಿದೆ. ಅತ್ಯಧಿಕ ವೆಚ್ಚ ಮಾಡಿದ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಅಗ್ರಸ್ಥಾನಿಯಾಗಿದೆ. ಈ ಪಕ್ಷ 181.1 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇದು ಎಲ್ಲ ಪ್ರಾದೇಶಿಕ ಪಕ್ಷಗಳ ಒಟ್ಟು ಖರ್ಚಿನ ಶೇಕಡ 36.7ರಷ್ಟಾಗಿದೆ ನಂತರದ […]

ಬಾಗಲಕೋಟೆಯಲ್ಲಿ ಅಪರೂಪದ ಮಗು ಜನನ

ಬಾಗಲಕೋಟೆ; ನವಜಾತ ಶಿಶುವೊಂದು 12 ಕಾಲ್ಬೆರಳುಗಳು ಮತ್ತು 13 ಬೆರಳುಗಳೊಂದಿಗೆ ಜನಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಈ ನವಜಾತ ಶಿಶು ಜನಿಸಿದೆ. ಮಗುವಿನ ಬಲಗೈನಲ್ಲಿ 6, ಎಡಗೈನಲ್ಲಿ 7 ಮತ್ತು ಪ್ರತಿ ಕಾಲಿನಲ್ಲಿ 6 ಬೆರಳುಗಳು ಕಂಡು ಬಂದಿದೆ.ಅಪರೂಪದ ಸ್ಥಿತಿಯನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ಭಾರತಿ ಮತ್ತು  ಗುರಪ್ಪ ಕೊಣ್ಣೂರ ದಂಪತಿಗೆ ಈ ಅಪರೂಪದ ಮಗು ಜನಿಸಿದ್ದು, ಇದರಿಂದ ಕುಟುಂಬವು ಸಂತೋಷವಾಗಿದೆ. ನನ್ನ ಪತ್ನಿ ಪ್ರತಿ ವಾರ ಕುಂದರಗಿಯ ಭುವನೇಶ್ವರಿ […]

ಬಾಂಗ್ಲಾದಲ್ಲಿ ಹಿಂಸಾಚಾರ; ಆಶ್ರಯ ಅರಸಿ ಭಾರತಕ್ಕೆ ಬರುತ್ತಿರುವ ಜನ!

ಬಾಂಗ್ಲಾದೇಶದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಮೃತರ ಸಂಖ್ಯೆ 105 ತಲುಪಿದೆ. ಈ‌ ಮಧ್ಯೆ ಅಲ್ಲಿನ ನಾಗರಿಕರು ದೇಶದ ಗಡಿ ದಾಟಿ ಭಾರತಕ್ಕೆ ಪಲಾಯನ ಮಾಡುತ್ತಿರುವುದು ಕಂಡು ಬಂದಿದೆ. ಭಾರತ, ನೇಪಾಳ ಮತ್ತು ಭೂತಾನ್‌ನ 360ಕ್ಕೂ ಹೆಚ್ಚು ನಾಗರಿಕರು ಶುಕ್ರವಾರ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ  ರಾಜ್ಯಕ್ಕೆ ಆಶ್ರಯ ಅರಸಿ ಬಂದವರ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ್ವಾಕಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ […]

ಚಾಂದಿಪುರ ವೈರಸ್ ಸೋಂಕಿಗೆ 20 ಮಂದಿ ಬಲಿ: ಏನಿದು ಭಯಾನಕ ವೈರಸ್?

ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಸೋಂಕಿಗೆ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಶಂಕಿತ ಪ್ರಕರಣದಲ್ಲಿ ಈವರೆಗೆ ಮೃತರ ಸಂಖ್ಯೆ  20ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ನ ಅಹ್ಮದಾಬಾದ್‌ನಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಚಾಂದಿಪುರ ವೈರಸ್ ಸೋಂಕಿನ ಲಕ್ಷಣವುಳ್ಳ ಕನಿಷ್ಠ 35 ಮಂದಿ ರಾಜ್ಯಾದ್ಯಂತದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗುಜರಾತ್ ಸರಕಾರ ಪರೀಕ್ಷೆಗೆ ಕಳುಹಿಸಿದ್ದ 18 ಮಾದರಿಗಳ ಪೈಕಿ 2ರಲ್ಲಿ ಮಾತ್ರ ಚಾಂದಿಪುರ ವೈರಸ್ ಇರುವುದು ದೃಢಪಟ್ಟಿದೆ ಎಂದು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ […]

ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ತಾಯಿ & ಇಬ್ಬರು ಮಕ್ಕಳು ಮೃತ್ಯು

ಹಾವೇರಿ: ಮಳೆಗೆ ಮನೆಯ ಮೇಲ್ಫಾವಣಿ ಕುಸಿದು  ಅವಳಿ ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ನಡೆದಿದೆ. ಮಾದಾಪುರ ಗ್ರಾಮದ ನಿವಾಸಿ ಚೆನ್ನಮ್ಮ (30) ಮತ್ತು ಅವಳಿ ಮಕ್ಕಳಾದ ಅನುಶ್ರೀ(1), ಅಮೂಲ್ಯ (1) ಮೃತ ದುರ್ದೈವಿಗಳು. ಘಟನೆಯಲ್ಲಿ  ಮೂವರು ಗಾಯಗೊಂಡಿದ್ದು, ಅವರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 3:30ಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಎಲ್ಲರೂ ಮಲಗಿರುವಾಗ ಈ […]

ಮಂಗಳೂರು: ವಿದ್ಯುತ್ ತಗುಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತ್ಯು

ಮಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಗುರುಪುರ ಕಲ್ಲಕಲೆಂಬಿ ಎಂಬಲ್ಲಿ ಘಟನೆ ನಡೆದಿದೆ. ಆಶ್ಮಿ ಶೆಟ್ಟಿ (19)ಮೃತ ವಿದ್ಯಾರ್ಥಿನಿ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಿಎ ಕಲಿಯುತ್ತಿದ್ದ ಆಶ್ಮಿ ಶೆಟ್ಟಿ, ದನಗಳನ್ನು ಮೇಯಿಸಿಲು ಗದ್ದೆಗೆ ತೆರಳಿದ್ದಳು. ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಗಂಭೀರ ಗಾಯಗೊಂಡಿದ್ದ ಆಶ್ಮಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಆಶ್ಮಿ ಜತೆ ಬಂದಿದ್ದ ಎರಡು […]

ವಿವಾದಿತ ಐಎಎಸ್ ಅಧಿಕಾರಿ ಪೂಜಾ ವಿರುದ್ಧ ಎಫ್ ಐಆರ್

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳಲು ಅಂಗವಿಕಲತೆ ಪ್ರಮಾಣಪತ್ರಗಳನ್ನು ಫೋರ್ಜರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿರುವ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಯುಪಿಎಸ್‌ಸಿ ಇಂದು ಪ್ರಕರಣ ದಾಖಲಿಸಿದೆ. ಆಕೆಯು ವಂಚನೆಗೈದಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆಕೆಯ ಆಯ್ಕೆಯನ್ನು ರದ್ದುಗೊಳಿಸಲು ಮತ್ತು ಭವಿಷ್ಯದಲ್ಲಿ ಆಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡದಂತೆ ಆಯೋಗ ಆಕೆಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.  

ಗಂಗಾವತಿಯಲ್ಲಿ ಭಯಾನಕ ಘಟನೆ: ರೈಲ್ವೇ ಹಳಿಯಲ್ಲಿ ಮಲಗಿದ್ದ ಯುವಕರ ಮೇಲೆ ರೈಲು ಹರಿದು ಮೂವರು ಮೃತ್ಯು

ಗಂಗಾವತಿ: ಮದ್ಯ ಸೇವನೆ ಮಾಡಿ ರೆಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಮೂವರು ಯುವಕರ ಮೇಲೆ ರೈಲು ಹರಿದ ದುರಂತ ಘಟನೆ ನಡೆದಿದ್ದು, ಘಟನೆಯಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮ ಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್​​ನ ವೆಂಕಟ ಭೀಮರಾಯ (20) ಮೃತ ಯುವಕರು. ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಮೃತಪಟ್ಟಿದ್ದಾರೆ. ರೈಲ್ವೆ ಹಳಿಯ ಪಕ್ಕದಲ್ಲಿ […]

ವೈದ್ಯಕೀಯ ವಿದ್ಯಾರ್ಥಿ ಡೆಂಘಿ ಜ್ವರಕ್ಕೆ ಬಲಿ

ವೈದ್ಯಕೀಯ ವಿದ್ಯಾರ್ಥಿಯೋರ್ವ ಡೆಂಘಿ ಜ್ವರಕ್ಕೆ ಬಲಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಕುಶಾಲ್‌ (22) ಮೃತ ವಿದ್ಯಾರ್ಥಿಯಾಗಿದ್ದು, ಈತ ಹೊಳೆನರಸೀಪುರ ಗೋಹಳ್ಳಿ ನಿವಾಸಿಯಾಗಿದ್ದಾನೆ. ಕುಶಾಲ್‌ ತಂದೆ ಶಿಕ್ಷಕ ವೃತ್ತಿಯಲ್ಲಿದ್ದರೆ ತಾಯಿ ರೇಖಾ ಟೈಲರ್‌ ಕೆಲಸ ಮಾಡುತ್ತಿದ್ದರು. ಕುಶಾಲ್‌ ಬಡತನವಿದ್ದರೂ ಹಾಸನದ ಹಿಮ್ಸ್‌ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ  ಕಲಿಯುತ್ತಿದ್ದ. ಕಳೆದ ವಾರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕುಶಾಲ್‌, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮಗನ ಸಾವಿನಿಂದ ನೊಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.