Breaking News :

ಅಸ್ಸಾಂನಲ್ಲಿ 1935ರ ಮುಸ್ಲಿಂ ವಿವಾಹ ಕಾಯ್ದೆ ರದ್ದು ಪಡಿಸಲು ಮುಂದಾದ ಸರಕಾರ!

ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಅಪ್ರಾಪ್ತ ವಯಸ್ಸಿನವರಿಗೆ ವಿವಾಹ ಅವಕಾಶ ನೀಡುವ 1935ರ ಕಾಯ್ದೆಯನ್ನು ರದ್ದುಪಡಿಸಲು ಸರಕಾರ ನಿರ್ಧರಿಸಿದೆ. ಷರತ್ತು ಪೂರೈಸುವುದರೊಂದಿಗೆ, ಈ ವಿವಾಹಕ್ಕೆ ಅವಕಾಶ ನೀಡುವ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಗುರುವಾರ ಸಂಪುಟ ಸಭೆ ಅಂಗೀಕರಿಸಿದೆ. ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದ್ದು, ಇದು ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ಹಾಗೂ ನಿಯಮಾವಳಿಗಳನ್ನು ರದ್ದುಪಡಿಸುತ್ತದೆ. ವಿಧಾನಸಭೆಯ ಮುಂದಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಹೇಳಲಾಗಿದೆ. ಬಾಲ್ಯವಿವಾಹವನ್ನು ಕೊನೆಗೊಳಿಸುವ ಉದ್ದೇಶದಿಂದ […]

ಡಾಲರ್ ಎದುರು ಪಾತಾಳಕ್ಕೆ ಕುಸಿದ ರುಪಾಯಿ ಮೌಲ್ಯ

ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ‌. ಗುರುವಾರ ವ್ಯವಹಾರದ ಕೊನೆಯಲ್ಲಿ ಡಾಲರ್ ವಿರುದ್ಧದ ರೂಪಾಯಿ ಮೌಲ್ಯ 83.6500 ಆಗಿತ್ತು. ನಿನ್ನೆ ಬುಧವಾರ ವ್ಯವಹಾರದಲ್ಲಿ ಅದು 83.5825ರಲ್ಲಿ ನೆಲೆಗೊಂಡಿತ್ತು. ಜೂನ್ 20ರಂದು ಅದು ಸಾರ್ವಕಾಲಿಕ ಕನಿಷ್ಠ ಮಟ್ಟ 83.6650 ಇಳಿದಿತ್ತು. ಡಾಲರ್ ಮತ್ತು ಅಮೆರಿಕ ಬಾಂಡ್ ಉತ್ಪತ್ತಿಯಲ್ಲಿ ವ್ಯಾಪಕ ಕುಸಿತ ಕಂಡು ಬಂದ ಹೊರತಾಗಿಯೂ ಭಾರತದ ಕರೆನ್ಸಿಯು ಅವುಗಳ ವಿರುದ್ಧ ಕುಸಿತ ಕಂಡಿದೆ. ಹಿಂದಿನ ಅವಧಿಯ ವ್ಯವಹಾರದಲ್ಲಿ ನಾಲ್ಕು ತಿಂಗಳ ಕನಿಷ್ಠ […]

ಗಾಝಾದಲ್ಲಿ ಕದನ ವಿರಾಮಕ್ಕೆ ಬೆಂಬಲ ಪುನರುಚ್ಚರಿಸಿದ ಭಾರತ

ಭಾರತವು ಗಾಝಾದಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮದ ಕರೆಯನ್ನು ಬುಧವಾರ ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ್ದು, ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿದೆ. ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಉಪ ಪ್ರತಿನಿಧಿ ಆರ್.ರವೀಂದ್ರ ಅವರು, ‘2023,ಅ.7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ವೇಳೆ ನಾಗರಿಕರ ಜೀವಹಾನಿಯನ್ನೂ ನಾವು ಖಂಡಿಸಿದ್ದೇವೆ. ಸಂಯಮವನ್ನು […]

ನೇಪಾಲದ ಪ್ರಧಾನಿಯಾಗಿ ಕೆಪಿ ಶರ್ಮಾ ಓಲಿ ಆಯ್ಕೆ

ನೇಪಾಳದ ಅಧ್ಯಕ್ಷರಾಗಿ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆಪಿ ಶರ್ಮಾ ಒಲಿ ಅವರು ಆಯ್ಕೆಯಾಗಿದ್ದಾರೆ. ಸೋಮವಾರ ಉನ್ನತ ಹುದ್ದೆಗೆ ಏರಲಿರುವ ಒಲಿ ಅವರು ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ನಂತರ ವಿಶ್ವಾಸ ಮತದಲ್ಲಿ ಅಧಿಕಾರ ವಹಿಸಿಕೊಂಡರು. ಇದೀಗ ಸಮ್ಮಿಶ್ರ ಸರ್ಕಾರವಾದರೂ ನಾಲ್ಕನೇ ಅವಧಿಗೆ ದೇಶದ ಪ್ರಧಾನಿಯಾಗಿ ಮರಳಲು ಸಜ್ಜಾಗಿದ್ದಾರೆ. ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡವಾದ ಶೀತಲ್ ನಿವಾಸ್‌ನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ.ಶರ್ಮಾ […]

ಶ್ರೀಲಂಕಾ; ಕ್ರಿಕೆಟಿಗನ ಹತ್ಯೆ

ಶ್ರೀಲಂಕಾ ಅಂಡರ್ 19 ತಂಡದ ಮಾಜಿ ನಾಯಕ ಧಮಿಕಾ ನಿರ್ಶೋನಾ ಅವರನ್ನು ಮಂಗಳವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಮಾಜಿ ಕ್ರಿಕೆಟಿಗ ಖಂಂಡಾ ಮವಾತಾ ಅವರ ನಿವಾಸದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಈ ಘಟನೆ ನಡೆಯುವ ವೇಳೆಯಲ್ಲಿ ಧಮಿಕಾ ನಿರ್ಶೋನಾ ಅವರ ಜತೆ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಜತೆಗಿದ್ದರು ಎನ್ನಲಾಗುತ್ತಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ, […]

ಹೃದಯವಿದ್ರಾಹಕ ಘಟನೆ: ಮಳೆಗೆ ಗುಡ್ಡೆ ಕುಸಿದು ಇಡೀ ಕುಟುಂಬವೇ ಬಲಿ

ಕಾರವಾರ;ಅಂಕೋಲಾದ ಶಿರೂರು ಬಳಿ ಮಂಗಳೂರು ಗೋವಾಗೆ ಸಂರ್ಪಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಐವರಿದ್ದಾರೆ. 20 ಮಂದಿ ಕಣ್ಮರೆಯಾಗಿರುವ ಶಂಕೆ ಇದ್ದು, ಭಾರೀ ಮಳೆ ನಡುವೆ ಎನ್‌ಡಿಆರ್‌ಎಫ್ ಶೋಧ ಕಾರ್ಯ ನಡೆಸಿದೆ. ಈಗಾಗಲೇ 6 ಶವ ಹೊರತೆಗೆಯಲಾಗಿದೆ. ಇಡೀ ದಿನ ನಡೆದ ಕಾರ್ಯಚರಣೆಯಲ್ಲಿ 6 ಜನರ ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ. ಜೀವನ ನಿರ್ವಹಣೆಗೆಂದು ಕಾರವಾರದಿಂದ […]

ರಾಜ್ಯಸಭೆಯಲ್ಲಿ ಬಿಜೆಪಿಗೆ ಏಕಪಕ್ಷೀಯವಾಗಿ ಇನ್ನು ಬಿಲ್ ಪಾಸ್ ಮಾಡುವುದು ಕಷ್ಟ!

ನವದೆಹಲಿ; ನಾಲ್ವರು ನಾಮನಿರ್ದೇಶಿತ ಬಿಜೆಪಿ ಸಂಸದರು ಇತ್ತೀಚೆಗೆ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಮೇಲ್ಮನೆಯಲ್ಲಿ ಪ್ರಸ್ತುತ ಒಟ್ಟು ಬಲವು 225 ಆಗಿದ್ದು, ಬಹುಮತ ಹೊಂದಲು 113 ಸದಸ್ಯರ ಅಗತ್ಯವಿದೆ. ಆದರೆ ಬಿಜೆಪಿಯ 86 ಸದಸ್ಯರನ್ನು ಸೇರಿ ಎನ್‌ಡಿಎ 101 ಸಂಖ್ಯಾಬಲ ಹೊಂದಿದೆ. ಬಹುಮತಕ್ಕೆ 12 ಸದಸ್ಯರ ಕೊರತೆ ಉಂಟಾಗಿದೆ. ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಾಲ್ ಮಾನ್ಸಿಂಗ್ ಮತ್ತು ಮಹೇಶ್ ಜೇಠ್ಮಲಾನಿ ಅವರು ಸದನದಿಂದ ನಿರ್ಗಮಿಸಿದ್ದಾರೆ.

ಮುಂಬೈ; ಹೋರ್ಡಿಂಗ್ ಕುಸಿತ ಪ್ರಕರಣ; ಮಹತ್ವದ ಮಾಹಿತಿ ಬಯಲು

ಮುಂಬೈನ ಘಾಟ್‌ಕೋಪರ್‌ನಲ್ಲಿ 120×120 ಅಡಿ ಹೋರ್ಡಿಂಗ್ ಅಳವಡಿಸಿದ್ದ ಸ್ಥಳದಲ್ಲಿ ಹುಸಿ ಮಣ್ಣು (ಮೃದುವಾದ ಮಣ್ಣು) ಇದೆ ಎಂದು ಅಲ್ಲಿ ಕಾಮಗಾರಿ ಡನೆಸುವಾಗಲೇ ಕೆಲಸಗಾರರು ಎಚ್ಚರಿಸಿದ್ದರು. ಆದರೆ, ಇದನ್ನು ನಿರ್ಲಕ್ಷಿಸಲಾಗಿದೆ ಎನ್ನುವುದು ಇದೀಗ ಬಯಲಾಗಿದೆ. ಹದಿನಾರು ತಿಂಗಳ ನಂತರ, ಬೃಹತ್ ಜಾಹೀರಾತು ಫಲಕವು ಚಂಡಮಾರುತದ ಸಮಯದಲ್ಲಿ ಕುಸಿದುಬಿದ್ದು, 17 ಜನರು ಸಾವನ್ನಪ್ಪಿ, 74 ಮಂದಿ ಗಾಯಗೊಂಡಿದ್ದರು. ಮುಂಬೈ ನ್ಯಾಯಾಲಯಕ್ಕೆ ಸಲ್ಲಿಸಲಾದ 3,299 ಪುಟಗಳ ಆರೋಪಪಟ್ಟಿಯಲ್ಲಿ, ಮುಂಬೈ ಅಪರಾಧ ವಿಭಾಗದ ವಿಶೇಷ ತನಿಖಾ ತಂಡವು ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ), […]

ಶರದ್ ಬಣಕ್ಕೆ ವಾಪಾಸ್ಸಾದ ಎನ್ ಸಿಪಿ ನಾಯಕರು

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತೊರೆದಿರುವ ಹಲವು ನಾಯಕರು ಹಾಗೂ ಕಾರ್ಪೊರೇಟರ್‌ಗಳು, ಶರದ್ ಪವಾರ್ ನೇತೃತ್ವದ ಎನ್‌ಸಿ‌ಪಿಗೆ ಮತ್ತೆ ವಾಪಾಸ್ಸಾಗಿದ್ದಾರೆ. ಪುಣೆಯಲ್ಲಿನ ಶರದ್ ಪವಾರ್ ನಿವಾಸದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಯಾದ ನಾಯಕರ ಪೈಕಿ ಪಿಂಪ್ರಿ-ಚಿಂಚ್ವಾಡ್ ಎನ್‌ಸಿಪಿ (ಅಜಿತ್ ಪವಾರ್ ಬಣ) ಘಟಕದ ಮುಖ್ಯಸ್ಥರಾದ ಅಜಿತ್ ಗವ್ಹಾನೆ ಕೂಡಾ ಸೇರಿದ್ದಾರೆ. ಇವರೊಂದಿಗೆ, ಪಿಂಪ್ರಿ-ಚಿಂಚ್ವಾಡ್ ಘಟಕದ ಹಿರಿಯ ನಾಯಕರು ಮಂಗಳವಾರ ಅಜಿತ್ ಪವಾರ್ ನೇತೃತ್ವದ ಎನ್‌ಸಿ‌ಪಿಗೆ ರಾಜೀನಾಮೆ ಸಲ್ಲಿಸಿದ್ದರು.