ದೆಹಲಿಯಲ್ಲಿ ಸ್ಫೋಟ ಹಿನ್ನೆಲೆ ಕೊಡಗಿನಲ್ಲೂ ಕಟ್ಟೆಚ್ಚರ – ವಿವಿಧ ಕಡೆ ಶೋಧ ಕಾರ್ಯ

ಜನವಾಹಿನಿ News ಮಡಿಕೇರಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಹಿನ್ನೆಲೆಯಲ್ಲಿ, ಕರ್ನಾಟಕದಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ರಾಜ್ಯದ ಎಲ್ಲಾ ನಗರಗಳಲ್ಲಿ ತಪಾಸಣೆ, ಗಸ್ತು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲು ಆದೇಶಿಸಲಾಗಿದೆ. ಈ ಹಿನ್ನೆಲೆ ಕೊಡಗಿನ ಜನನಿಬಿಡ ಪ್ರದೇಶಗಳಲ್ಲಿ, ಸರ್ಕಾರಿ ಬಸ್ಸು ನಿಲ್ದಾಣ, ರಾಜಾಸೀಟು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಿದ್ದು, ವಿಶೇಷ ನಿಗಾ ವಹಿಸಲಾಗಿದೆ. ಮಡಿಕೇರಿ ಬಸ್ಸು ನಿಲ್ದಾಣದಲ್ಲಿದ್ದ […]
ಕಾಡಾನೆ ದಾಳಿ: ತೋಟ ಕಾರ್ಮಿಕನ ದುರ್ಮರಣ : ಆಸ್ಪತ್ರೆ ಎದುರು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಜನವಾಹಿನಿ News ಸಿದ್ದಾಪುರ : ಎಮ್ಮೆಗುಂಡಿ ತೋಟದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಮೃತರನ್ನು ಹನುಮಂತ ಎಚ್.ಡಿ (56) ಎಂದು ಗುರುತಿಸಲಾಗಿದೆ. ಟಾಟಾ ಸಂಸ್ಥೆಯ ಎಮ್ಮೆಗುಂಡಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದೀಡರ್ ದಾಳಿ ನಡೆಸಿದ್ದು, ಕಾಡಾನೆ ಅವರ ಹೊಟ್ಟೆ ಭಾಗಕ್ಕೆ ದಂತದಿಂದ ತಿವಿದ ಪರಿಣಾಮ ಅವರ ಹೊಟ್ಟೆಯೊಳಗಿನ ಭಾಗಗಳು ಹೊರಗಡೆ ಬಂದಿದ್ದು ಹನುಮಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಮೃತದೇಹವನ್ನು ಸಿದ್ದಾಪುರ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ತಂದ ಸಂಧರ್ಭ […]
ಅರ್ವತ್ತೋಕ್ಕು ಎ.ಕೆ.ಸಿ ವತಿಯಿಂದ ಕೈಲ್ ಪೋಳ್ದ್ ಕ್ರೀಡಾ ಕೂಟ

ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಎ.ಕೆ.ಸಿ ಸಂಸ್ಥೆಯ ವತಿಯಿಂದ ಕೈಲ್ ಪೋಳ್ದ್ ವಾರ್ಷಿಕ ಕ್ರೀಡಾ ಕೂಟ ಜಬ್ಬಂಡ ವಾಡೆ ಮಂದ್ ನಲ್ಲಿ ಜರುಗಿತು. ಬೆಳಿಗ್ಗೆ ಸಾಂಪ್ರದಾಯಿಕ ಮಂದ್ ಮರಿಯುವ ಕಾರ್ಯಕ್ರಮದೊಂದಿಗೆ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು. ಸುಮಾರು 40 ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ಇದ್ದು ಹಿರಿಯರು ಕಿರಿಯರು ಮಹಿಳೆಯರು ಸ್ಪರ್ಧಿಗಳಾಗಿ ಭಾಗವಹಿಸಿ ಸಂಭ್ರಮಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಳುಮಾಡಂಡ ರಘು ಪೂವಪ್ಪ ನವರು ಪಾರಂಪರಿಕ […]
ಬೇಂಗೂರು ಕೊಡವ ಸಮಾಜದಿಂದ ಶಾಸಕ ಪೊನ್ನಣ್ಣ ನವರಿಗೆ ಮನವಿ

ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಬೇಂಗ್ ನಾಡ್( ಚೇರಂಬಾಣೆ) ಕೊಡವ ಸಮಾಜದ ಪದಾಧಿಕಾರಿಗಳು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರನ್ನು ಭೇಟಿ ಮಾಡಿ ಸಮಾಜದ ಕಟ್ಟಡದ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರು. ಸುಮಾರು 4 ಕೋಟಿ ವೆಚ್ಚದಲ್ಲಿ ಬೇಂಗ್ ನಾಡ್ ಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಸುಸಜ್ಜಿತ ಭವನ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದು ಸರ್ಕಾರದಿಂದ ಅನದಾನ ಒದಗಿಸುವಂತೆ ಶಾಸಕರಲ್ಲಿ ಕೋರಲಾಯಿತು. ಶಾಸಕ […]
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ : ಸಚಿವ ಮಧು ಬಂಗಾರಪ್ಪ

ಜನವಾಹಿನಿ News ಮಡಿಕೇರಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗೆ 12 ಸಾವಿರ ಹಾಗೂ ಅನುದಾನಿತ ಶಾಲೆಗೆ 6 ಸಾವಿರ ಒಟ್ಟು 18 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಸೋಮವಾರ ಪೇಟೆ ಬಳಿಯ ಬೇಳೂರು ಕುಸುಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಸರ್ಕಾರಿ ಶಾಲೆಯನ್ನು ಬಲಪಡಿಸಲು […]
ನಗರ ಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯ ವಾಗಿದೆ : ರಾಜೇಶ್ ಯಲ್ಲಪ್ಪ ಆರೋಪ

ಮಡಿಕೇರಿ : ಮಡಿಕೇರಿ ನಗರ ಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯ ವಾಗಿದ್ದು ಮಡಿಕೇರಿ ನಗರದ ಇತಿಹಾಸದಲ್ಲಿ ಇಂತಹ ಅವ್ಯವಸ್ಥೆ ಹಿಂದೆಂದೂ ಕಾಣಲಿಲ್ಲ ಎಂದು ಮಡಿಕೇರಿ ನಗರ ಸಭೆಯ ಕಾಂಗ್ರೆಸ್ ಸದಸ್ಯ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ತಮ್ಮ ವಿಶೇಷ ಅನುದಾನದಡಿ ಮೂರು ಕೋಟಿ ರೂಗಳನ್ನು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದು ಅದರಿಂದ ಮಡಿಕೇರಿಯಲ್ಲಿ […]
ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಜನತೆಗೆ ಪ್ರತಕ್ಷಲಾದ ಕಾವೇರಿ ಮಾತೆ

ಜನವಾಹಿನಿ NEWS ಮಡಿಕೇರಿ : ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 1.44 ಗಂಟೆಗೆ ಸರಿಯಾಗಿ ತೀರ್ಥರೂಪಿಣಿಯಾಗಿ ಶ್ರೀ ಕಾವೇರಿ ಮಾತೆ ಭಕ್ತಾದಿಗಳಿಗೆ ದರ್ಶನ ನೀಡಿದಳು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಜೈ ಜೈ ಮಾತಾ, ಕಾವೇರಿ ಮತಾ ಜಯಘೋಷದ ನಡುವೆ ಶ್ರೀ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಕಂಡಳು. ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನಗಳು ಆರಂಭವಾಗಿದ್ದವು, ಭಕ್ತರು ತಂಡೋಪ ತಂಡವಾಗಿ ಆಗಿಮಿಸುತ್ತಿದ್ದು ಕಂಡು ಬಂದಿತ್ತು. ಮಧ್ಯಾಹ್ನ 1 ಗಂಟೆ […]
ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಆರ್.ಪುಷ್ಪಲತಾ ನೇಮಕ

ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಜಿ.ಆರ್.ಪುಷ್ಪಲತಾ ನೇಮಕಗೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಲಂಬಾ ರವರ ನಿರ್ದೇಶನದ ಮೇರೆಗೆ ಕರ್ನಾಟಕ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೌಮ್ಯ ರೆಡ್ಡಿಯವರು ನೇಮಕಾತಿ ಆದೇಶ ಜಾರಿಗೊಳಿಸಿದ್ದಾರೆ. ಪುಷ್ಪಲತಾ ರವರು ಈ ಹಿಂದೆ 2017-18 ರಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಈಗ ಎರಡನೇ ಬಾರಿಗೆ ಕೊಡಗು ಮಹಿಳಾ […]
ಮೂರ್ನಾಡು : ಕೈಲ್ ಮುಹೂರ್ತ ಹಬ್ಬದ ಆಟೋಟ

ಜನವಾಹಿನಿ NEWS ಮೂರ್ನಾಡು : ಇಲ್ಲಿನ ನಂ.೪೩೯ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ೧೦೧ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ಲಬ್‌ನ ವತಿಯಿಂದ ಆಯೋಜಿಸಲಾಗಿದ್ದ ಆಟೋಟಗಳ ಕಾರ್ಯಕ್ರಮಗಳನ್ನು ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಮೂರ್ನಾಡು ಪೊಲೀಸ್ ಉಪಠಾಣೆಯ ಪೊಲೀಸ್ ಅಧಿಕಾರಿ ಪಟ್ರಪಂಡ ಮೊಣ್ಣಪ್ಪ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿ ಕೊಡಗಿನ ಯುವಜನತೆ ಎಲ್ಲರೂ ಕ್ರೀಡಾಪುಟುಗಳಾಗಬೇಕು. ಮೂರ್ನಾಡು ಪಕ್ಕದಲ್ಲಿಯೆ ಅಂತರಾಷ್ಟ್ರೀಯ […]
ಪ್ರವೀಣ್ ಗೆ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ – ಸಿದ್ದಾಪುರದಲ್ಲಿ ಸಂಭ್ರಮ

ಜನವಾಹಿನಿ NEWS ಸಿದ್ದಾಪುರ : ನ್ಯಾಶನಲ್ ಯೂತ್ ಅವಾರ್ಡ್ಸ್ ಪ್ರಶಸ್ತಿ ವಿಜೇತರಾದ ನಿಫಾ ಇಂಡಿಯಾ ತನ್ನ ಸಿಲ್ವರ್ ಜ್ಯೂಬಿಲಿ ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ರಾಲಿಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಸಿದ್ದಾಪುರದ ಪ್ರವೀಣ್ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿಗೆ ಭಾಜನರಾಗಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿಯನ್ನು ತಂದ ಪ್ರವೀಣ್ ದೆಹಲಿಯಿಂದ ತನ್ನ ಹುಟ್ಟೂರಾದ ಸಿದ್ಧಾಪುರ ನಗರಕ್ಕೆ ಬಂದ ಸಂದರ್ಭ ಚೆಂಡ ಮೇಳದೊಂದಿಗೆ ಬರಮಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸದರು. ಕೇಸರಿ ಯೂತ್ ಕ್ಲಬ್ ನ […]