Breaking News :

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಆಡಿಟೋರಿಯಂ ಪುನಶ್ಚೇತನಕ್ಕೆ ಡಾ ಮಂತರ್ ಗೌಡ ಸೂಚನೆ

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಆಡಿಟೋರಿಯಂ ಪುನಶ್ಚೇತನಕ್ಕೆ ಡಾ ಮಂತರ್ ಗೌಡ ಸೂಚನೆ ಮಡಿಕೇರಿ : ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಶಿಕ್ಷಣ ಕಾಶಿಯೆಂದೇ ಪ್ರಖ್ಯಾತ ಗಳಿಸಿದ್ದ ಮೆರ್ಕಾರ ಸೆಂಟ್ರಲ್ ಹೈ ಸ್ಕೂಲ್ ( ಸರ್ಕಾರಿ ಪದವಿಪೂರ್ವ ಕಾಲೇಜು) ನಲ್ಲಿ ಹಳೆಯ ವಿಧ್ಯಾರ್ಥಿಗಳ ಪರಿಶ್ರಮದ ಫಲವಾಗಿ ಭವ್ಯವಾಗಿ ಇಪ್ಪತೈದು ವರ್ಪಗಳ ಹಿಂದೆ ನಿರ್ಮಾಣವಾಗಿ ಈಗ ದುಸ್ಥಿತಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿವಿಧೋದ್ದೇಶ ಸಭಾಂಗಣಕ್ಕೆ ಹೊಸ ಕಾಯಕಲ್ಪ ನೀಡಲು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಮುಂದಾಗಿದ್ದಾರೆ. […]

ಬಿರುಕು ಬಿಟ್ಟಿರುವ ತಡೆಗೋಡೆನ್ನು ಶಾಸಕ ಮಂತರ್ ಗೌಡ ವೀಕ್ಷಿಸಿದರು

ಬಿರುಕು ಬಿಟ್ಟಿರುವ ತಡೆಗೋಡೆನ್ನು ಶಾಸಕ ಮಂತರ್ ಗೌಡ ವೀಕ್ಷಿಸಿದರು  ಮಡಿಕೇರಿ : ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಬಿಟ್ಟಿರುವ ತಡೆಗೋಡೆಯನ್ನು ಶಾಸಕರಾದ ಡಾ.ಮಂತರ್ ಗೌಡ ಭೇಟಿ ನೀಡಿ ವೀಕ್ಷಿಸಿದರು. ಬಿರುಕು ಬಿಟ್ಟಿರುವ ತಡೆಗೋಡೆ ಕುಸಿದು ಬಿದ್ದರೆ ಇಡೀ ಹೆದ್ದಾರಿಯೇ ಬಂದ್ ಆಗಲಿದೆ. ಆದ್ದರಿಂದ ತಜ್ಞ ಎಂಜಿನಿಯರ್‍ಗಳನ್ನು ಆಹ್ವಾನಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹೆದ್ದಾರಿ ವಿಭಾಗದ ಎಂಜಿನಿಯರ್‍ಗೆ ಶಾಸಕರು ಸೂಚಿಸಿದರು. ಹೆದ್ದಾರಿ ಸುರಕ್ಷತೆ ಸಂಬಂಧಿಸಿದಂತೆ ಟಾರ್ಪಲ್ ಹೊದಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತ ಕ್ರಮ […]

ಸಂತ್ರಸ್ತರಿಗೆ ಧೈರ್ಯ ತುಂಬಿದ ಶಾಸಕ ಮಂತರ್ ಗೌಡ : ಪರಿಶೀಲಿಸಿ ಕೂಡಲೇ ಮನೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ

ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದ ಶಾಸಕ ಮಂತರ್ ಗೌಡ : ಪರಿಶೀಲಿಸಿ ಕೂಡಲೇ ಮನೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ಮಡಿಕೇರಿ : ನಗರದ ರೆಡ್‍ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಶುಕ್ರವಾರ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ನಗರದ ಸಮೀಪದಲ್ಲಿರುವ ತಡೆಗೋಡೆ ಬಳಿ 5 ಕುಟುಂಬಗಳು ರೆಡ್‍ಕ್ರಾಸ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿರುವ ಹಿನ್ನೆಲೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ತಡೆಗೋಡೆ ಬಿರುಕು ಬಿಟ್ಟಿರುವ ಹಿನ್ನೆಲೆ ಮುಂದಿನ […]

ಮೊದಲ ದಿನವೇ ಪ್ರೇಕ್ಷಕರ ಮನಗೆದ್ದ ಎಲ್ಟು ಮುತ್ತಾ : ಪುಟ್ಟ ಬಾಲಕಿಯ ನಟನೆಗೆ ಪ್ರೇಕ್ಷರು ಫಿದಾ

ಮೊದಲ ದಿನವೇ ಪ್ರೇಕ್ಷಕರ ಮನಗೆದ್ದ ಎಲ್ಟು ಮುತ್ತಾ : ಬಾಲಕಿಯ ನಟನೆಗೆ ಪ್ರೇಕ್ಷರು ಫಿದಾ ಮಡಿಕೇರಿ : ಕೊಡಗಿನಲ್ಲಿ ಚಿತ್ರೀಕರಣಗೊಂಡು ಇಂದು ಬೆಳ್ಳಿ ತೆರೆ ಕಂಡಿರುವ ಕನ್ನಡದ ಎಲ್ಟು ಮುತ್ತಾ ಸಿನಿಮಾ ಮೊದಲ ದಿನವೇ ಪ್ರೇಕ್ಷಕರ ಮನಗೆದಿದ್ದು, ಉತ್ತಮ ಸ್ಪಂದನೆ ದೊರೆತಿದೆ. ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಕೊಡಗಿನ ಎಲ್ಟು ಮುತ್ತಾ ಸಿನಿಮಾ ಕೊಡಗಿನ ಕಲಾವಿದರ ಪಾಲಿಗೆ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಪ್ರೇಕ್ಷಕರು ಕೂಡ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೊಡಗಿನ ಸಂಸ್ಕೃತಿ ಹಾಗೂ ಇಲ್ಲಿನ […]

ಪ್ಲೀಸ್ ನೀವಾದ್ರೂ ಮನೆ ಕೊಡ್ಸಿ ಸಾ*ರ್‌ ಎಂದು ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ಅಂಗಲಾಚಿದ ಮಹಿಳೆ.!

  ಪ್ಲೀಸ್ ನೀವಾದ್ರೂ ಮನೆ ಕೊಡ್ಸಿ ಸಾ*ರ್‌ ಎಂದು ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ಅಂಗಲಾಚಿದ ಮಹಿಳೆ.! ಮಡಿಕೇರಿ : ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಪರಿಶೀಲನೆಗೆಂದು ತೆರಳಿದ್ದ ಸಂದರ್ಭ ಮಹಿಳೆಯೊಬ್ಬರು ಜಿಲ್ಲಾಧಿಕಾರಿಯ ಕಾಲಿಗೆ ಬಿದ್ದು ಮನೆ ಕೊಡ್ಸಿ ಸಾರ್ ಎಂದು ಕಣ್ಣೀರಿಟ್ಟ ಪ್ರಸಂಗ ಮಡಿಕೇರಿಯಲ್ಲಿ ನಡೆದಿದೆ. ಐದು ವರ್ಷದ ಹಿಂದೆ ಮನೆ ಕಳೆದುಕೊಂಡಿದ್ದೇನೆ. ನನಗೆ ಗಂಡ ಇಲ್ಲ. ಮನೆ ಮಾಡಿ ಕೊಡ್ತೇನೆ ಅಂತ ಹೇಳಿ ಇಲ್ಲಿವರೆಗೆ ಯಾರೂ ಮಾಡಿಕೊಟ್ಟಿಲ್ಲ. ದಯವಿಟ್ಟು ನೀವಾದ್ರು ಮನೆ ಮಾಡ್ಸಿ […]

ಇಂಡಿಯಾದ ಸಬ್ ಜೂನಿಯರ್ ಹಾಕಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಮಂಡೆಪಂಡ ಕಾಳಪ್ಪ ಆಯ್ಕೆ

ಇಂಡಿಯಾ ಸಬ್ ಜೂನಿಯರ್ ಹಾಕಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಮಂಡೆಪಂಡ ಕಾಳಪ್ಪ ಆಯ್ಕೆ ಸಬ್ ಜೂನಿಯರ್ ಇಂಡಿಯಾ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಅಮ್ಮತಿ ಹೋಬಳಿ ಕಾವಾಡಿ ಗ್ರಾಮದ ಮಂಡಪಂಡ ಕಾಳಪ್ಪ ಕರ್ನಾಟಕ ತಂಡದಲ್ಲಿ ಆಡಲು ಆಯ್ಕೆಯಾಗಿದ್ದಾರೆ. 15ನೇ ಸಬ್ ಜೂನಿಯರ್ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ 2025 ಪಂದ್ಯಾಟವು ಆಗಸ್ಟ್ 1ರಿಂದ 12ರ ವರೆಗೆ ತಮಿಳುನಾಡಿನ ಚೆನೈಯಲ್ಲಿ ನಡೆಯಲಿದೆ. ಅಮ್ಮತಿ ಹೋಬಳಿಯ ಕಾವಾಡಿ ಗ್ರಾಮದ ಮಂಡೆಪಂಡ ಲವ ಹಾಗೂ ಶಬೀತ ( ತಾಮನೆ ಮಾಣಿಪಂಡ) ದಂಪತಿಯಾ ಪುತ್ರರಾಗಿರುವ […]

ಮೇಕೇರಿ ಶಕ್ತಿ ನಗರದ ನಿವಾಸಿಗಳಿಗೆ ಶಾಸಕ ಪೊನ್ನಣ್ಣ ನೆರವು

ಮಡಿಕೇರಿ : ಕಳೆದ ಕೆಲದಿನಗಳಿಂದ ಸುರಿದ ಭಾರಿ ಮಳೆಗೆ ಬರೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು, ನಾಪೋಕ್ಲು ಬ್ಲಾಕ್ ಮೇಕೇರಿ ಗ್ರಾಮದ ಶಕ್ತಿನಗರ ಕಾಲೋನಿ ನಿವಾಸಿಗಳಿಗೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ತಮ್ಮ ಸ್ವಂತ ವೆಚ್ಚದಲ್ಲಿ ಟಾರ್ಪಲ್ ಗಳನ್ನು ವಿತರಿಸಿ ಸಹಾಯ ಹಸ್ತ ಚಾಚಿದ್ದಾರೆ. ಕಾರ್ಯನಿಮಿತ್ತ ಬೆಂಗಳೂರಿನಲ್ಲಿರುವ ಶಾಸಕರು, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್ ಮುಖಾಂತರ ಸಂತ್ರಸ್ತರಿಗೆ ಟಾರ್ಪಲ್ ವಿತರಿಸಿದ್ದಾರೆ. ಈ […]

ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಿ : ಅಚ್ಚಪಂಡ ಬೋಪಣ್ಣ.

ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಿ: ಅಚ್ಚಪಂಡ ಬೋಪಣ್ಣ. ವಿರಾಜಪೇಟೆ : ಸರಕಾರದ ಯೋಜನೆಗಳಾದ ಬಸವ ವಸತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಯೋಜನೆ ಗ್ರಾಮೀಣ ಭಾಗದ ಹೆಚ್ಚುವರಿ ಯೋಜನೆಯಡಿ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಇನ್ನು ಅರ್ಜಿ ಸಲ್ಲಿಸಿರುವ ಉಳಿದ ಫಲಾನುಭವಿಗಳಿಗೆ ಮುಂದಿನ ಸಾಲಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ.ಬೋಪಣ್ಣ ಹೇಳಿದರು. ವಿರಾಜಪೇಟೆ ಬಳಿಯ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆದ ”ಹೆಚ್ಚುವರಿ ಯೋಜನೆಯಡಿ […]

ಮಡಿಕೇರಿಯಲ್ಲಿ ಬಿರುಕು ಬಿಟ್ಟ ಭಾರಿ ತಡೆಗೋಡೆ : ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಮಡಿಕೇರಿಯಲ್ಲಿ ಬಿರುಕು ಬಿಟ್ಟ ಭಾರಿ ತಡೆಗೋಡೆ : ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ಮಡಿಕೇರಿ : ಮಡಿಕೇರಿ-ಮಂಗಳೂರು ರಸ್ತೆಗೆ ನಿರ್ಮಿಸಲಾಗಿದ್ದ ಬೃಹತ್ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ವೆಂಕಟರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 2018ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಭೂ ಕುಸಿತ ಉಂಟಾದ ಹಿನ್ನೆಲೆ ರಸ್ತೆ ಬದಿಗೆ ಬೃಹತ್ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ತಡೆಗೋಡೆಯಲ್ಲಿ ಬೃಹತ್ ಗಾತ್ರದ ಬಿರುಕು ಕಾಣಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ […]

ವಸತಿ ಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ : ಸಚಿವರಿಗೆ ಧನ್ಯವಾದ ಸಲ್ಲಿಸಿದ ಮಂತರ್ ಗೌಡ

ವಸತಿ ಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ : ಸಚಿವರಿಗೆ ಧನ್ಯವಾದ ಸಲ್ಲಿಸಿದ ಮಂತರ್ ಗೌಡ ಮಡಿಕೇರಿ : ಸೋಮವಾರಪೇಟೆ ತಾಲ್ಲೂಕಿನ ಚನ್ನಾಪುರದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ವತಿಯಿಂದ 6 ನೇ ತರಗತಿಯಿಂದ 12 ನೇ ತರಗತಿಯವರೆಗೆ 37.55 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ವಸತಿ ಶಾಲೆ ನಿರ್ಮಿಸಲು ಕರ್ನಾಟಕ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಕಾರ್ಮಿಕ ಇಲಾಖೆ […]