ಕೊಡಗು : ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತ

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕಾರು ಅಪಘಾತ ಮಡಿಕೇರಿ : ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿರಾಜಪೇಟೆ ಕಾವೇರಿ ಕಾಲೇಜಿನ ಸಮೀಪದ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಅಪಘಾತಕ್ಕೀಡಾದ ಕಾರು ಹಾನಿಯಾಗಿದೆ.
ಕೊಡ್ಲಿಪೇಟೆ ನಂದಿಪುರ ವ್ಯಾಪ್ತಿಯ ಸರಕಾರಿ ಜಾಗ ಭೂಗಳ್ಳರ ಪಾಲಾಗದಂತೆ ಎಚ್ಚರ ವಹಿಸಿ : ದಸಂಸ ಆಗ್ರಹ

ಕೊಡ್ಲಿಪೇಟೆ ನಂದಿಪುರ ವ್ಯಾಪ್ತಿಯ ಸರಕಾರಿ ಜಾಗ ಭೂಗಳ್ಳರ ಪಾಲಾಗದಂತೆ ಎಚ್ಚರ ವಹಿಸಲು ದಸಂಸ ಆಗ್ರಹ ಮಡಿಕೇರಿ : ಕೊಡ್ಲಿಪೇಟೆ ಹೋಬಳಿ ನಂದಿಪುರ ಗ್ರಾಮದ ಸರ್ವೆ ನಂ.೮೮/೧ರ ೪ ಎಕರೆ ೬೬ ಸೆಂಟು ಪೈಸಾರಿ ಭೂಮಿಯನ್ನು ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸ್ವಾಧೀನಕ್ಕೆ ಪಡೆಯಲು ಸೋಮವಾರಪೇಟೆ ನ್ಯಾಯಾಲಯದ ಆದೇಶವಿದ್ದು, ಸರ್ಕಾರಿ ಜಾಗವನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಭೂಗಳ್ಳರ ಪಾಲಾಗದಂತೆ ಎಚ್ಚರ ವಹಿಸಬೇಕೆಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ […]
ಮಳೆಗಾಲದಲ್ಲೂ ತಪ್ಪದ ಕುಡಿಯುವ ನೀರಿನ ಸಮಸ್ಯೆ : ಗ್ರಾಮ ಪಂಚಾಯಿತಿ ವಿರುದ್ಧ ಜನಾಕ್ರೋಶ

ಮಳೆಗಾಲದಲ್ಲೂ ತಪ್ಪದ ಕುಡಿಯುವ ನೀರಿನ ಸಮಸ್ಯೆ : ಗ್ರಾಮ ಪಂಚಾಯಿತಿ ವಿರುದ್ಧ ಜನಾಕ್ರೋಶ ಸಿದ್ದಾಪುರ : ಇಲ್ಲಿನ ಗುಹ್ಯ ಗ್ರಾಮದ ಕೂಡುಗದ್ದೆ ವ್ಯಾಪ್ತಿಯ ನಿವಾಸಿಗಳಿಗೆ ಮಳೆಗಾಲದಲ್ಲೂ ಕುಡಿಯುವ ನೀರಿಗೆ ಪರದಾಡುವಂತ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಕಾರ್ಮಿಕ ಮನೆಗಳಿರುವ ಈ ವ್ಯಾಪ್ತಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗದಿದ್ದು, ಕೂಲಿ ಕಾರ್ಮಿಕರು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರ್ಕಾರದ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ ಮನೆ ಮನೆಗೆ ಗಂಗೆ ಯೋಜನೆಯಡಿ ಮನೆ ಮನೆಗೆ ನಲ್ಲಿ ಹಾಕಲಾಗಿದೆ. ಆದರೆ […]
ಬೇತ್ರಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬೇತ್ರಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ವಿರಾಜಪೇಟೆ : ವಿರಾಜಪೇಟೆ ವ್ಯಾಪ್ತಿಯ ಬೇತ್ರಿ ಹೊಳೆಯಲ್ಲಿ ಅಪರಿಚಿತ ಪುರುಷನ ಮೃತದೇಹವೊಂದು ಪತ್ತೆಯಾಗಿದೆ. ನದಿ ದಡದ ಬಿದಿರು ಮರಗಳ ನಡುವೆ ಸಿಕ್ಕಿಕೊಂಡಿದ್ದು, ನದಿ ನೀರಿನಲ್ಲಿ ಕೊಚ್ಚಿಕೊಂಡು ಬಂದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೂಡಲೇ ಸ್ಥಳೀಯ ನಿವಾಸಿಗಳು ವಿರಾಜಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ಇತ್ತೀಚೆಗೆ ನಾಪತ್ತೆಯಾಗಿರುವ,ಅಥವಾ ಮನೆಯಿಂದ ಕಾಣೆಯಾಗಿದವರ ಮಾಹಿತಿ ಇದ್ದರೆ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಿದ್ದಾರೆ.
ಮಳೆ ಅವಾಂತರ: ಮನೆಮೇಲೆ ಬಿದ್ದ ಭಾರಿ ಗಾತ್ರದ ಮರ ನಜ್ಜುಗುಜ್ಜಾದ ಕಾರು

ಮಳೆ ಅವಾಂತರ: ಮನೆಮೇಲೆ ಬಿದ್ದ ಭಾರಿ ಗಾತ್ರದ ಮರ ನಜ್ಜುಗುಜ್ಜಾದ ಕಾರು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಸಾಕಷ್ಟು ಅವಾಂತರ ಸಂಭವಿಸಿದೆ. ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು ಮನೆ ಹಾಗೂ ಕಾರಿಗೆ ಹಾನಿಯಾಗಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರ ವಲಯದ ದೇವಸ್ತೂರು ಎಂಬಲ್ಲಿ ನಡೆದಿದೆ. ದೇವಸ್ತೂರು ಗ್ರಾಮದ ಕುಕ್ಕೇರ ಚಿಮ್ಮ ಎಂಬುವವರ ಮನೆ ಮೇಲೆ ಒಣಗಿದ ಗೋಳಿ ಮರ ಬಿದ್ದ ಪರಿಣಾಮ ಮನೆಯ ಮುಂಭಾಗ ನಿಲ್ಲಿಸಿದ ಕಾರು […]
ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು : ಶೀಘ್ರ ಮರುಜೋಡಣೆಗೆ ಕ್ರಮ : ಸೆಸ್ಕ್ ಕಾರ್ಯಪಾಲಕ ಅಭಿಯಂತರ

ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು : ಶೀಘ್ರ ಮರುಜೋಡಣೆಗೆ ಕ್ರಮ : ಸೆಸ್ಕ್ ಕಾರ್ಯಪಾಲಕ ಅಭಿಯಂತರ ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು 800 ರಷ್ಟು ವಿದ್ಯುತ್ ಕಂಬಗಳು ,ಮರಗಳು ಹಾಗೂ ಮರದ ರೆಂಬೆಕೊಂಬೆಗಳು ಮುರಿದು ಬಿದ್ದು ಹಾನಿಯಾಗಿರುತ್ತದೆ ಹಾಗೂ ಅಪಾರ ಪ್ರಮಾಣದಲ್ಲಿ ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿ ಬಹುತೇಕ ಎಲ್ಲಾ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿರುತ್ತದೆ. ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿನ ಬಹುತೇಕ ಕಡೆ […]
ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನ ಊರಲ್ಲಿ ಹಬ್ಬದ ವಾತಾವರಣ

ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನ ಊರಲ್ಲಿ ಹಬ್ಬದ ವಾತಾವರಣ ಕುಶಾಲನಗರ : ಭಾರತಾಂಬೆಯ ಸೇವೆ ಸಲ್ಲಿಸಲು ಸೈನಿಕನಾಗಿ ಪ್ಯಾರಾ ಕಮಾಂಡೋ PARA COMMANDO (SPECIAL FORCE) ಗೆ ಆಯ್ಕೆಯಾಗಿ ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ ಪಿರಿಯಾಪಟ್ಟಣ ತಾಲೂಕಿನ ಚೆನ್ನನಹಳ್ಳಿ ಕೊಪ್ಪಲು ಗ್ರಾಮದ ಯೋಧ ಪ್ರಮೋದ್.ಸಿ.ಎಸ್ ಅವರಿಗೆ ಕುಟುಂಬದವರು ಮತ್ತು ಸ್ನೇಹಿತರು ವಿಶೇಷವಾಗಿ ಸ್ವಾಗತಿಸಿದರು, ದೇಶದ ಹೆಮ್ಮೆಯ ಮಗನಿಗೆ ಪ್ರೀತಿಯಿಂದ ಹಾರೈಸಿದ ಸ್ನೇಹಿತರ ಬಳಗವು ಗ್ರಾಮಸ್ಥರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ಯೋಧನಿಗೆ ಶುಭಕೋರಿದರು
ಮಡಿಕೇರಿಯ ಡಾ.ಸೂರ್ಯಕುಮಾರ್ ಗೆ ರಾಜ್ಯ ಪ್ರಶಸ್ತಿ

ಮಡಿಕೇರಿಯ ಡಾ.ಸೂರ್ಯಕುಮಾರ್ ಗೆ ರಾಜ್ಯ ಪ್ರಶಸ್ತಿ ಮಡಿಕೇರಿ : ಕರ್ನಾಟಕ ರಾಜ್ಯ ವೈದ್ಯ ಬರಹಗಾರರ ಸಂಘದ ವತಿಯಿಂದ ಕರ್ನಾಟಕ ರಾಜ್ಯದ ಎಲ್ಲಾ ವೈದ್ಯರ ಶ್ರೇಷ್ಠ ಪುಸ್ತಕಗಳಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ ಮಡಿಕೇರಿಯ ಖ್ಯಾತ ವೈದ್ಯರಾದ ಡಾ ಸೂರ್ಯಕುಮಾರ್ ಅವರು ಬರೆದು ಹರಿವು ಪ್ರಕಾಶನದವರು ಪ್ರಕಟಿಸಿರುವ ಮಂಗಳಿ – ತೃತೀಯ ಲಿಂಗಿಗಳ ಜೀವನ ಆಧಾರಿತ ಒಂದು ಕಥೆಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಶಿಕ್ಷಕಿ ಬಿ.ಬಿ ಜಾಜಿ ಅವರಿಗೆ ಕಾವೇರಿ ರತ್ನ ಪ್ರಶಸ್ತಿ

ಶಿಕ್ಷಕಿ ಬಿ.ಬಿ ಜಾಜಿ ಅವರಿಗೆ ಕಾವೇರಿ ರತ್ನ ಪ್ರಶಸ್ತಿ ಸಿದ್ದಾಪುರ : ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜಾಜಿ ಬಿ.ಬಿ ಅವರು ಕಾವೇರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್, ಸಂಗಮ ಟಿ.ವಿ., ವಂಶಿ ನ್ಯೂಸ್ ಹಾಗೂ ರಾಷ್ಟ್ರೀಯ ಅಪರಾದ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಬೆಂಗಳೂರು ಇವರ ಸಹಯೋಗದೊಂದಿಗೆ ನಡೆಯಲಿರುವ ಅಂತರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ […]
ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಕುಶಾಲನಗರ : ಶಿರಂಗಾಲ ಶ್ರೀ ಮಂಟಿಗಮ್ಮ ದೇವಾಲಯ ಪ್ರವೇಶದ್ವಾರದ ತಿರುವಿನಲ್ಲಿ ಬುಧವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕು ಕಣಗಾಲು ಹೋಬಳಿಯ ಚಾಮರಾಯನಕೋಟೆ ಗ್ರಾಮದ ನಿವಾಸಿ ಅಶೋಕ್(36) ಮೃತ ದುರ್ದೈವಿಯಾಗಿದ್ದಾನೆ. ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಲಾರಿ ಹಾಗೂ ಶಿರಂಗಾಲದಿಂದ ಕೊಣನೂರು ಕಡೆಗೆ ಹೋಗುತ್ತಿದ್ದ ಬೈಕ್ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ತೀವ್ರವಾಗಿ […]