ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ ಪ್ರತಿಭಟನೆ

ಮಡಿಕೇರಿ : ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಸಿಐಟಿಯು ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರು ವೈಜ್ಞಾನಿಕ ಕನಿಷ್ಠ ವೇತನವೂ ಇಲ್ಲದೆ, ಕಡಿಮೆ ಸಂಬಳಕ್ಕೆ ಒತ್ತಡದ ಹೆಚ್ಚಿನ ಕೆಲಸವನ್ನು ಮಾಡಬೇಕಿದೆ. ೨೦೧೬ರಲ್ಲಿ ಅತ್ಯಲ್ಪ ವೇತನವನ್ನು ಜಾಸ್ತಿ ಮಾಡಿದ್ದು ಬಿಟ್ಟರೆ, ಇಲ್ಲಿಯವರೆಗೆ ವೇತನ ಹೆಚ್ಚು ಮಾಡಿಲ್ಲ. ನೌಕರರಿಗೆ […]
ಕಾರ್ಯಕರ್ತರನ್ನು ಸಂಘಟಿಸಿ ಪಕ್ಷ ಬಲವರ್ಧನೆಗೆ ಕೈಜೋಡಿಸಿ : ಬಿಜೆಪಿ ಎಸ್.ಸಿ ಮೂರ್ಚಾ ಜಿಲ್ಲಾಧ್ಯಕ ರವಿ ಮನವಿ

ಮಡಿಕೇರಿ : ಜಿಲ್ಲೆಯ ಎಲ್ಲಾ ಭಾಗದಲ್ಲೂ ಎಸ್.ಸಿ ಮೂರ್ಚಾದ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷದ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮನವಿ ಮಾಡಿದ್ದಾರೆ. ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಭಾರತೀಯ ಜನತಾ ಪಾರ್ಟಿ ಎಸ್.ಸಿ.ಮೋರ್ಚಾದ ಜಿಲ್ಲಾ, ನಗರಮಂಡಲ ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯ ಕೊರತೆಯಿದ್ದು, ಯೋಜನೆಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಜತೆಗೆ […]
ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಮೆಂಟ್ : ಕೊಡಗಿನ ಆಟಗಾರರ ತಂಡಕ್ಕೆ ಮೂರು ಚಿನ್ನದ ಪದಕ

ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಮೆಂಟ್ : ಕೊಡಗಿನ ಆಟಗಾರರ ತಂಡಕ್ಕೆ ಮೂರು ಚಿನ್ನದ ಪದಕ ವಿರಾಜಪೇಟೆ : ಕೇರಳದ ತಿರುವನಂತಪುರದಲ್ಲಿ ಸ್ಟೀಫನ್ ಜಾಕೋಬ್ ಕೋಶಿ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಪಂದ್ಯಾಟವು ಅಲ್ಲಿನ ಗ್ರೀನ್ ಫೀಲ್ಡ್ ಸ್ಟೇಡಿಯಂ ನಲ್ಲಿ ಜರುಗಿತು. ಭಾರತೀಯ ಟೆಕ್ ಸಿಲ್ಕೋ ತಂಡವನ್ನು ಕೊಡಗಿನ ಹಿರಿಯ ಬಾಸ್ಕೆಟ್ ಬಾಲ್ ಆಟಗಾರರು ಪ್ರತಿನಿಧಿಸಿ ಮೂರು ಚಿನ್ನದ ಪದಕಗಳನ್ನು ಗಳಿಸುವುದರೊಂದಿಗೆ ಸಾಧನೆಯನ್ನು ಮೆರೆದಿರುತ್ತಾರೆ. 55 ವರ್ಷ ಮೇಲ್ಪಟ್ಟವರ ಪಂದ್ಯಾಟದಲ್ಲಿ ಒಂದು ಚಿನ್ನದ ಪದಕ, 60 […]
ನಾಲ್ವತ್ತೇಕೆರೆ ಶ್ರೀ ಮಹಾದೇವ ಮಾರಿಯಮ್ಮ ದೇವಸ್ಥಾನದಲ್ಲಿ ನಾಗಪಂಚಮಿ ಪ್ರಯುಕ್ತ ವಿಶೇಷ ಪೂಜೆ

ನೆಲ್ಯಹುದಿಕೇರಿ : ನೆಲ್ಯಹುದಿಕೇರಿ ನಾಲ್ವತ್ತೇಕೆರೆ ಶ್ರೀ ಮಹಾದೇವ ಮಾರಿಯಮ್ಮ ದೇವಸ್ಥಾನದಲ್ಲಿ ನಾಳೆ (ಜು. 29ರಂದು) ನಾಗಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಲಿದೆ. ಬೆಳಿಗ್ಗೆ 8.30ರಿಂದ 10=30 ರ ತನಕ ವಿಶೇಷ ಪೂಜೆ ನಡೆಯುವುದು. ತಂಬಿಲನೈವೇದ್ಯ ಹರಿದ್ದಾರ್ಚನೆ ಪೂಜೆಗೆ ರೂ 251 ಸಲ್ಲಿಸಬೇಕಾಗುತ್ತದೆ . ವಸಂತಕುಮಾರ್ ಹೊಸಮನೆ ಮೊಬೈಲ್ 9448433189 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಮಹಾದೇವರ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಸಿದ್ದಾಪುರ : ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ

ಸಿದ್ದಾಪುರ : ನಾಳೆ ಕಾಡಾನೆಗಳನ್ನು ಕಾಡಿಗೆ ಅಟ್ಟಿಸುವ ಕಾರ್ಯಾಚರಣೆ ಸಿದ್ದಾಪುರ : ವಿರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಅಮ್ಮತ್ತಿ ಪುಲಿಯೇರಿ ಇಂಜಿಲಗರೆ ಕರಡಿಗೋಡು ಸಿದ್ದಾಪುರ ಬೀಡುಬಿಟ್ಟಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಿಸುವ ಕಾರ್ಯಾಚರಣೆ ಜು.29ರಂದು ನಡೆಯಲಿದೆ. ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ಗ್ರಾಮಸ್ಥರು ಶಾಲಾ ಮಕ್ಕಳು ಮತ್ತು ವಾಹನ ಚಾಲಕರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಹಾಗೂ ಈ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು […]
ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ : ಸರ್ಕಾರ ಹಾಗೂ ಶಾಸಕರ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ : ಬೃಹತ್ ಹೋರಾಟಕ್ಕೆ ಚಿಂತನೆ

ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ : ಸರ್ಕಾರ ಹಾಗೂ ಶಾಸಕರ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ : ಬೃಹತ್ ಹೋರಾಟಕ್ಕೆ ಚಿಂತನೆ ಸಿದ್ದಾಪುರ : ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರು ಬಲಿಯಾಗುತ್ತಿರುವುದರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲರಾದ ಸುನೀಲ್ ಕುಮಾರ್ ಕುಮಾರ್ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಆಡಿಯೋ ಒಂದನ್ನು ಹಂಚಿಕೊಂಡಿರುವ ಅವರು ಬಿಜೆಪಿ […]
ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ : ಕಾರ್ಮಿಕರಿಬ್ಬರು ಗಂಭೀರ

ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ : ಕಾರ್ಮಿಕರಿಬ್ಬರು ಗಂಭೀರ ಸಿದ್ದಾಪುರ : ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ. ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಗಂಭೀರ ಸಿದ್ದಾಪುರ ಸಮೀಪದ ಕಂಬಿರಂಡ ಮತ್ತು ಸ್ವರ್ಣಗಿರಿ ಎಸ್ಟೇಟ್ ನಲ್ಲಿ ನಡೆದ ಘಟನೆ. ತೋಟ ಕಾರ್ಮಿಕರಾದ ಕಣ್ಣನ್ ಮತ್ತು ಸಾಬು ಆಲಿ ಎಂಬುವವರೇ ಕಾಡಾನೆ ದಾಳಿಗೊಳಗಾದ ಕಾರ್ಮಿಕರು. ಸಿದ್ದಾಪುರ ಸಮೀಪದ ಕಂಬಿರಂಡ ಹಾಗೂ ಸ್ವರ್ಣಗಿರಿ ಎಸ್ಟೇಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ದಾಳಿಗೆ ಒಳಗಾದ ಇಬ್ಬರು ಕಾರ್ಮಿಕರನ್ನು […]
ಕೊಡವ ಸಮಾಜ ರುದ್ರಭೂಮಿ ರಸ್ತೆಗೆ ಡಾ ಮಂತರ್ ಗೌಡ ರಿಂದ 10 ಲಕ್ಷ ರೂ ಅನುದಾನ

ಕೊಡವ ಸಮಾಜ ರುದ್ರಭೂಮಿ ರಸ್ತೆಗೆ ಡಾ ಮಂತರ್ ಗೌಡ ರಿಂದ 10 ಲಕ್ಷ ರೂ ಅನುದಾನ ಮಡಿಕೇರಿ : ಮಡಿಕೇರಿಯಲ್ಲಿರುವ ಕೊಡವ ಸಮಾಜದ ರುದ್ರಭೂಮಿಯ ರಸ್ತೆ ಅಭಿವೃದ್ದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಹತ್ತು ಲಕ್ಷರೂಗಳನ್ನು ಮೀಸಲಿರಿಸಿದ್ದಾರೆ. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು ಮತ್ತು ನಿರ್ದೇಶಕರು ಸಲ್ಲಿಸಿದ ಕೋರಿಕೆಯನ್ನು ಪರಿಗಣಿಸಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನವನ್ನು ನೀಡಲಾಗಿದ್ದು ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ಮಡಿಕೇರಿ ನಗರ ಸಭೆಯ ಇಂಜಿನಿಯರ್ ಗಳು ರಾಜೀವ್ ಗಾಂಧಿ […]
ವಾಹನ ಸವಾರರೇ ಎಚ್ಚರ…! ಇನ್ಮುಂದೆ ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ..

ವಾಹನ ಸವಾರರೇ ಎಚ್ಚರ…! ಇನ್ಮುಂದೆ ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ.. ಸಿದ್ದಾಪುರ : ಅಪರಾಧ ಪ್ರಕರಣಗಳು ಸೇರಿದಂತೆ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಿದ್ದಾಪುರ ಪಟ್ಟಣದ ಮಧ್ಯೆ ಇರುವ ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಮುಂದೆ ಎಲ್ಮೆಟ್ ಹಾಕದ ಬೈಕ್ ಸವಾರರು ಹಾಗೂ ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುವ ಚಾಲಕರಿಗೆ ಅಂಚೆ ಮುಖಾಂತರ ದಂಡದ ನೋಟಿಸ್ ರವಾನೆ ಆಗಲಿದೆ ಎಂದು ಸಿದ್ದಾಪುರ ಪೊಲೀಸ್ […]
ರಸ್ತೆ ಮಧ್ಯೆ ಮೋರಿ ಕುಸಿದು ಸಂಚಾರಕ್ಕೆ ಅಡ್ಡಿ

ರಸ್ತೆ ಮಧ್ಯೆ ಮೋರಿ ಕುಸಿದು ಸಂಚಾರಕ್ಕೆ ಅಡ್ಡಿ ವಿರಾಜಪೇಟೆ : ಇಲ್ಲಿನ ಮಗ್ಗುಲ ಗ್ರಾಮ ವಿನಾಯಕನಗರದ ಕೆಳಭಾಗದಲ್ಲಿ ಇರುವಂತ ರಸ್ತೆಯೊಂದು ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಮಕ್ಕಳಿಗೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕುಸಿದಿರುವ ಮೋರಿ ಬದಲಾಯಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.