Breaking News :

ಕಾಡುಕೋಣಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಗೂಡ್ಸ್‌ ವಾಹನ

ಜನವಾಹಿನಿ News ಸಿದ್ದಾಪುರ : ಕಾಡುಕೋಣ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾದ ಘಟನೆ ಸಮೀಪದ ಕರಡಿಗೋಡು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಾಫಿ ತೋಟದಿಂದ ಏಕಾಏಕಿ ರಸ್ತೆ ದಾಟಲು ಬಂದ ಕಾಡುಕೋಣ ಕರಡಿಗೋಡು ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ತೆರಳುತ್ತಿದ್ದ ವಾಹನಕ್ಕೆ ಅಡ್ಡ ಬಂದಿದೆ. ವಾಹನಕ್ಕೆ ಕಾಡುಕೋಣ ಡಿಕ್ಕಿಯಾದ ಪರಿಣಾಮ ಗೂಡ್ಸ್ ವಾಹನ ಸಂಪೂರ್ಣ ಜಖಂಗೊಂಡಿದೆ. ವಾಹನದ ಚಾಲಕ ಹಾಗೂ ಓರ್ವ ಕಾರ್ಮಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ವಿರಾಜಪೇಟೆ ವಲಯ ಅರಣ್ಯ […]

ಮಡಿಕೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ- ಸರಬರಾಜು ಮಾಡುತ್ತಿದ್ದ ಐವರ ಬಂಧನ

ಜನವಾಹಿನಿ News ಮಡಿಕೇರಿ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ- ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಚೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬಂದಿದ್ದು ನಿಷೇಧಿತ ಮಾದಕ ವಸ್ತುಗಳ ಮಾರಾಟ-ಸರಬರಾಜು ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಸೇವನೆ ಕುರಿತು […]

ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ

ಜನವಾಹಿನಿ News ಮಡಿಕೇರಿ : ಕೊಡಗು ಜಿಲ್ಲೆಯ ಮರಗೋಡು, ಚೆಟ್ಟಳ್ಳಿ ಮತ್ತು ಮೂರ್ನಾಡುವಿನಲ್ಲಿ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965 ರ ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಫೆಬ್ರವರಿ, 21 ರಂದು ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಮರಗೋಡು ಸುತ್ತಮುತ್ತಲಿನ 05 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಫೆಬ್ರವರಿ, 22 ರಂದು ಬೆಳಗ್ಗೆ 6 ಗಂಟೆಯಿಂದ ಅದೇ […]

ಸಿದ್ದಾಪುರದಲ್ಲಿ ಫೆ.23ರಂದು ಹಿಂದೂ ಸಂಗಮ ಬೃಹತ್ ಸಮಾವೇಶ

ಜನವಾಹಿನಿ News ಸಿದ್ದಾಪುರ : ಸಿದ್ದಾಪುರದ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಫೆ. 23ರಂದು ಸಿದ್ದಾಪುರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಮುಖ ರೂಪೇಶ್  ತಿಳಿಸಿದ್ದಾರೆ. ಸನಾತನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಾಮಾಜಿಕ ಏಕತೆಗಾಗಿ ಎಲ್ಲ ವರ್ಗದ ಜನರನ್ನು ಒಂದು ವೇದಿಕೆ ಯಡಿ ಸೇರಿಸುವ ಹಾಗೂ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಸಂಗಮ ನಡೆಸಲಾಗುತ್ತಿದ್ದು, ಕಾರ್ಯಕ್ರಮದ ಭಾಗವಾಗಿ 23ರಂದು ಮಧ್ಯಾಹ್ನ 2.30ಕ್ಕೆ […]

‘ನಾಯಕಂಡ ಬೇಬಿ ಚಿಣ್ಣಪ್ಪ ಅವರಿಗೆ ಸಂತಾಪ’

ಜನವಾಹಿನಿ News ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಿಧನರಾದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ, ಕವಯತ್ರಿ ನಾಯಕಂಡ ಬೇಬಿ ಚಿಣ್ಣಪ್ಪರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸರ್ವ ಸಮಿತಿ ಸಭೆಯಲ್ಲಿ ಬೇಬಿ ಚಿಣ್ಣಪ್ಪರ ಅನಿರೀಕ್ಷಿತವಾದ ನಿಧನಕ್ಕೆ ಕಂಬನಿ ಮಿಡಿಯಲಾಯಿತು. ಈ ವೇಳೆ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಕೊಡವ ಕವನ, ಕತೆಗಳನ್ನು ಓದುಗರ ಮನ ಮಿಡಿಯುವ ರೀತಿಯಲ್ಲಿ […]

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಜನವಾಹಿನಿ News ಮಡಿಕೇರಿ : ಛತ್ರಪತಿ ಶಿವಾಜಿ ಮಹಾರಾಜರು ಭರತಖಂಡದಲ್ಲಿ ಜನಿಸದಿದ್ದರೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯವರಿಂದ ಮಕ್ಕಳನ್ನು ಹೇಗೆ ಬೆಳೆಸಬೇಕು […]

ಗೋಶಾಲೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ : ಪರಿಶೀಲನೆ  

ಜನವಾಹಿನಿ News ಮಡಿಕೇರಿ : ಜಿಲ್ಲಾಧಿಕಾರಿಗಳು ಹಾಗೂ ಪ್ರಾಣಿದಯಾ ಸಂಘದ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಅವರು ಮಡಿಕೇರಿ ಕೆ.ನಿಡುಗಣೆ ಜಿಲ್ಲಾ ಸರ್ಕಾರಿ ಗೋಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಗೋಶಾಲೆಯಲ್ಲಿ 37 ಜಾನುವಾರುಗಳನ್ನು ಸಾಕುತ್ತಿದ್ದು, ಜಾನುವಾರುಗಳ ನಿರ್ವಹಣೆಗೆ ಬೇಕಾಗುವ ಒಣ ಮೇವು ದಾಸ್ತಾನು, ಪಶು ಆಹಾರ ದಾಸ್ತಾನು ಕೊಠಡಿ ಹಾಗೂ ಚಿಕಿತ್ಸೆಗೆ ಬೇಕಾಗುವ ಔಷಧ ದಾಸ್ತಾನನ್ನು ಜಿಲ್ಲಾಧಿಕಾರಿ ಅವರು ವೀಕ್ಷಿಸಿದರು. ಗೋಶಾಲೆಯಲ್ಲಿನ ಜಾನುವಾರುಗಳ ನಿರ್ವಹಣೆಗೆ 3 ಜನ ಹೊರಗುತ್ತಿಗೆ ‘ಡಿ’ ದರ್ಜೆ ನೌಕರರು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು […]

ಹೊದ್ದೂರು ಬಳಿಯ ಕಬಡಗೇರಿ ಕುಟುಂಬಗಳಿಗೆ ಶಾಸಕರಾದ ಡಾ.ಮಂತರ್ ಗೌಡರಿಂದ ನಿವೇಶನ ಹಕ್ಕುಪತ್ರ ವಿತರಣೆ 

ಜನವಾಹಿನಿ News ಮಡಿಕೇರಿ : ಹೊದ್ದೂರು ಗ್ರಾಮದ ಕಬಡಗೇರಿಯ ನಿವೇಶನ ರಹಿತ 47 ಕುಟುಂಬಗಳಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಹಕ್ಕುಪತ್ರ ವಿತರಿಸಿದರು. ಹಾಗೆಯೇ ಹೊದ್ದೂರು ಗ್ರಾಮದ ಪಾಲೆಮಾಡಿನ 14 ಕುಟುಂಬಗಳಿಗೆ 94ಸಿ ರಡಿ ಹಕ್ಕುಪತ್ರವನ್ನು ಶಾಸಕರು ವಿತರಿಸಿದರು. ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೇಶನ ಹಕ್ಕುಪತ್ರವನ್ನು ವಿತರಿಸಿದರು. ಹೊದವಾಡ ಗ್ರಾಮದ ಅಂಬಲ ಅಂಗನವಾಡಿ ಕೇಂದ್ರವನ್ನು ಇದೇ ಸಂದರ್ಭದಲ್ಲಿ ಶಾಸಕರು ಉದ್ಘಾಟಿಸಿದರು. ಹಾಗೆಯೇ ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ […]

ಫೆ.22ರಂದು ಮೂರ್ನಾಡುವಿನ ಪಾಂಡಾಣೆ ನಾಡ್‌ಮಂದ್ ಮತ್ತು ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮ

  ಜನವಾಹಿನಿ News ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿಯ ಮೂರ್ನಾಡು ಮಂಡಲ ವತಿಯಿಂದ ಫೆ.೨೨ ರಂದು ಮೂರ್ನಾಡುವಿನ ಪಾಂಡಾಣೆ ನಾಡ್‌ಮಂದ್ ಮತ್ತು ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭೂಮಿ, ಹಿಂದೂಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಹಿಂದೂ ಸಂಘಟಿತನಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ. ಮಾತೃಭೂಮಿ ರಕ್ಷಣೆಯಾಗುತ್ತದೆ. ಈ ಮಹತ್ವದ ಉದ್ದೇಶದಿಂದ […]

ರದ್ದುಗೊಳಿಸಿದ ಬಿ.ಪಿ.ಎಲ್ ಕಾರ್ಡ್‌ಗಳನ್ನು ಮರಳಿ ನೀಡಲು SDPI ಆಗ್ರಹ 

  ಜನವಾಹಿನಿ News ಮಡಿಕೇರಿ : ಜಿಲ್ಲೆಯಲ್ಲಿ ೪,೫೦೦ ಬಿ.ಪಿ.ಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದು, ಈ ಪ್ರಕ್ರಿಯೆ ಮುಂದುವರಿಸುತ್ತಿರುವುದು ಸರಿಯಲ್ಲ ಎಂದಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಕೂಡಲೇ ರದ್ದುಗೊಳಿಸಿದ ಎಲ್ಲಾ ಬಿ.ಪಿ.ಎಲ್ ಕಾರ್ಡ್‌ಗಳನ್ನು ಮರಳಿ ನೀಡಬೇಕೆಂದು ಒತ್ತಾಯಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಸೇವೆ, ಬಡತನ ನಿರ್ಮೂಲನೆ, ಆಹಾರ, ಆರೋಗ್ಯ ಭದ್ರತೆ, ಶಿಕ್ಷಣ, ಉದ್ಯೋಗಕ್ಕೆ ಉತ್ತೇಜನೆ ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ. ವಿಶೇಷ ಆರ್ಥಿಕ ದುರ್ಬಲ ವರ್ಗದ ಆರ್ಥಿಕ ಮಿತಿ ೮ ಲಕ್ಷಕ್ಕೆ ಸರ್ಕಾರ ನಿಗದಿಪಡಿಸಿದೆ. ಆದರೆ, ಬಿ.ಪಿ.ಎಲ್ […]