Breaking News :

ಕಾಯ೯ಪ್ಪ ಪ್ರತಿಮೆ ಶುಚಿಗೊಳಿಸಿ ಕಾಗಿ೯ಲ್ ವಿಜಯ್ ದಿವಸ್ ಆಚರಿಸಿದ ಕೊಡಗು ವಿದ್ಯಾಲಯದ ಕೆಡೆಟ್ ಗಳು

ಕಾಯ೯ಪ್ಪ ಪ್ರತಿಮೆ ಶುಚಿಗೊಳಿಸಿ ಕಾಗಿ೯ಲ್ ವಿಜಯ್ ದಿವಸ್ ಆಚರಿಸಿದ ಕೊಡಗು ವಿದ್ಯಾಲಯದ ಕೆಡೆಟ್ ಗಳು ಮಡಿಕೇರಿ: ಕೊಡಗು ವಿದ್ಯಾಲಯದ ಎನ್ ಸಿ ಸಿ ಘಟಕದ ವತಿಯಿಂದ ನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಪ್ರತಿಮೆ ಶುಚಿಗೊಳಿಸುವುದರ ಮೂಲಕ ಕಾರ್ಗಿಲ್ ವಿಜಯ ದಿವಸ್ ನ್ನು ಆಚರಿಸಲಾಯಿತು.  ಕೊಡಗು ವಿದ್ಯಾಲಯದ ಎನ್ ಸಿ ಸಿ ಕೆಡೆಟ್ ಗಳು ಪ್ರತಿಮೆಯನ್ನು ಶುಚಿಗೊಳಿಸಿ, ಆವರಣದ ಸುತ್ತ ಬೆಳೆದಿದ್ದ ಕಾಡು ಸಸಿಗಳನ್ನು ಕಿತ್ತು, ಗುಡಿಸಿ ಶುಚಿಗೊಳಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ […]

ಒತ್ತಡ ನಡುವೆ ಕೆಸರುಗದ್ದೆಯಲ್ಲಿ ಕಾದಾಡಲಿರುವ ಖಾಕಿ ಪಡೆ : ನಾಳೆ ಗೋಣಿಕೊಪ್ಪಲುವಿನಲ್ಲಿ ಜಿಲ್ಲಾ ಪೊಲೀಸರ ಕೆಸರುಗದ್ದೆ ಕ್ರೀಡಾಕೂಟ

ಒತ್ತಡ ನಡುವೆ ಕೆಸರುಗದ್ದೆಯಲ್ಲಿ ಕಾದಾಡಲಿರುವ ಜಿಲ್ಲಾ ಖಾಕಿ ಪಡೆ : ನಾಳೆ ಗೋಣಿಕೊಪ್ಪಲುವಿನಲ್ಲಿ ಪೊಲೀಸರ ಕೆಸರುಗದ್ದೆ ಕ್ರೀಡಾಕೂಟ –  ಮಡಿಕೇರಿ : ಸದಾ ಒತ್ತಡಲ್ಲೇ ಕಾರ್ಯ ನಿರ್ವಹಿಸುವ ಜಿಲ್ಲೆಯ ಆರಕ್ಷಕರಿಗೆ ರಿಲಿಪ್ ನೀಡುವ ಸಲುವಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ವಿರಾಜಪೇಟೆ ಉಪ ವಿಭಾಗದ ವತಿಯಿಂದ ಪೊಲೀಸ್ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರಿಗಾಗಿ ಇದೆ ಮೊದಲ ಬಾರಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ. ಗೋಣಿಕೊಪ್ಪಲು ಕಾವೇರಿ ಕಾಲೇಜು ಹಿಂಭಾಗದ ಗದ್ದೆಯಲ್ಲಿ ನಾಳೆ (ಜುಲೈ […]

ಮನೆಯ ಗೋಡೆ ಕುಸಿದು ಕಾರ್ಮಿಕ‌ ಮಹಿಳೆ ದುರ್ಮರಣ

ಮನೆಯ ಗೋಡೆ ಕುಸಿದು ಕಾರ್ಮಿಕ‌ ಮಹಿಳೆ ದುರ್ಮರಣ ಮಡಿಕೇರಿ : ಮನೆಯ ಗೋಡೆ ಕುಸಿದು ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಅಫ್ಜಲ್ ಪುರದ ರವಿ ಎಂಬುವವರ ಪತ್ನಿ ಸುಷ್ಮಾ(29) ಮೃತ ಮಹಿಳೆ. ಮೃತ ಮಹಿಳೆ, ಸಹೋದರ ಹಾಗೂ ಮಕ್ಕಳು ಕಳೆದ ಎರಡು ವರ್ಷಗಳ ಹಿಂದೆ ಸೋಮವಾರಪೇಟೆಗೆ ಆಗಮಿಸಿದ್ದು, ಹಾನಗಲ್ಲು ಗ್ರಾಮದ ಸಚಿನ್ ಎ.ಎನ್ ಎಂಬುವವರ ವಾಸದ ಮನೆಯಲ್ಲಿ ಬಾಡಿಗೆ ಇದ್ದರು. ಇಂದು ಬೆಳಿಗ್ಗೆ 5.30 […]

ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸಿ : ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸಿ : ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ಮಡಿಕೇರಿ : ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹಂತದ ವರೆಗೂ ಇ ಕಚೇರಿ ವ್ಯವಸ್ಥೆ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸಿ ಕೆಲಸ ನಿರ್ವಹಿಸುಂತಾಗಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಆಡಳಿತಾಧಿಕಾರಿಗಳಿಗೆ ಗ್ರಾ.ಪಂ.ಕಚೇರಿಯಲ್ಲಿ ಸ್ಥಳಾವಕಾಶ […]

ಸೆ.13 ರಂದು ರಾಷ್ಟ್ರೀಯ ಲೋಕ ಅದಾಲತ್ 

ಸೆ.13 ರಂದು ರಾಷ್ಟ್ರೀಯ ಲೋಕ ಅದಾಲತ್ ಮಡಿಕೇರಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆಪ್ಟೆಂಬರ್, 13 ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಅದರಂತೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್, 13 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.  

ನಾಳೆ ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥ ದತ್ತಿನಿಧಿ ಸ್ವೀಕಾರ : ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರ ಪುಸ್ತಕ ಬಿಡುಗಡೆ

ನಾಳೆ ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥ ದತ್ತಿನಿಧಿ ಸ್ವೀಕಾರ : ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರ ಪುಸ್ತಕ ಬಿಡುಗಡೆ ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡು ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡು ಪಿಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥವಾಗಿ ದತ್ತಿನಿಧಿ ಸ್ವೀಕಾರ, ಜಿಲ್ಲೆಯ ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರ ಪುಸ್ತಕ ಬಿಡುಗಡೆ […]

ಕಂಪ್ಯೂಟರೈಸ್ಡ್ ಅಕೌಂಟಿಂಗ್(ಟ್ಯಾಲಿ) ಕುರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ 

ಕಂಪ್ಯೂಟರೈಸ್ಡ್ ಅಕೌಂಟಿಂಗ್(ಟ್ಯಾಲಿ) ಕುರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ  ಮಡಿಕೇರಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಕಂಪ್ಯೂಟರೈಸ್ಡ್ ಅಕೌಂಟಿಂಗ್(ಟ್ಯಾಲಿ) ಕುರಿತ 38 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್, 23 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು.  ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾμÉ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ […]

ನಾಳೆ ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಕರೆಂಟ್ ಇರಲ್ಲ..! ಇಲ್ಲಿದೆ ಮಾಹಿತಿ

ಜು.26 ರಂದು ವಿದ್ಯುತ್ ವ್ಯತ್ಯಯ ಮಡಿಕೇರಿ : ವಿರಾಜಪೇಟೆ 66/33/11 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್3 ಕೆಎಸ್‍ಆರ್‍ಟಿಸಿ ಮತ್ತು ವಿಎಫ್-7 ಹೆಗ್ಗಳ ಫೀಡರ್‍ಗಳಲ್ಲಿ ಜುಲೈ, 26 ರಂದು 09.30 ರಿಂದ ಸಂಜೆ 5.00 ಗಂಟೆಯವರೆಗೆ ಸದರಿ ಫೀಡರ್‍ಗಳ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‍ನಿಂದ ಹೊರಹೊಮ್ಮುವ ವಿರಾಜಪೇಟೆ ಪಟ್ಟಣದ ಮೀನುಪೇಟೆ, ಆರ್ಜಿ, ಬೇಟೋಳಿ, ಹೆಗ್ಗಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ, ಕಾರ್ಯ ಮತ್ತು […]

ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ 

ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ಮಡಿಕೇರಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ಕರಿಕೆ, ಮಡಿಕೇರಿ ತಾಲ್ಲೂಕು ಇಲ್ಲಿಗೆ 8ನೇ ತರಗತಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲು ಗೌರವಧನ ಆಧಾರದ ಮೇಲೆ ಶಿಕ್ಷಕರ ಸೇವೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್,್ಟ 14 ಕೊನೆಯ ದಿನಾಂಕವಾಗಿದ್ದು, ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸಲು ಬಿಎಸ್ಸಿ, ಬಿಇಡಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ […]