Breaking News :

ಈ ಬಾರಿಯ mysore ದಸರಾದಲ್ಲಿ ಯಾವೆಲ್ಲಾ ಆನೆಗಳು ಭಾಗವಹಿಸುತ್ತೆ ಗೊತ್ತಾ.!? ಇಲ್ಲಿದೆ ನೋಡಿ ಸಪೂರ್ಣ ಮಾಹಿತಿ

ಈ ಬಾರಿಯ (mysore Dasara) ದಸರಾದಲ್ಲಿ ಯಾವೆಲ್ಲಾ ಆನೆಗಳು ಭಾಗವಹಿಸುತ್ತೆ ಗೊತ್ತಾ.!? ಇಲ್ಲಿದೆ ನೋಡಿ ಸಪೂರ್ಣ ಮಾಹಿತಿ ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯ 2025 ನೇ ಮೊದಲ ಹಂತದ ಗಜಪಡೆಯ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಈ ಬಾರಿಯು ಗಜಪಡೆಯ ಕ್ಯಾಪ್ಟನ್ ಆಗಿ ಅಭಿಮನ್ಯು ಹೊರಹೊಮ್ಮಿದ್ದಾನೆ. ದಸರಾಗೆ ಗಜ ಪಡೆಯನ್ನು ಕಟ್ಟುವುದಕ್ಕೆ ಅರಣ್ಯ ಇಲಾಖೆ ಕಳೆದೊಂದು ತಿಂಗಳಿನಿಂದ ಹುಡುಕಾಟ ನಡೆಸಿದ್ದು, ಕೊನೆಗೂ ಮೊದಲ ಹಂತದಲ್ಲಿ […]

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಆಹ್ವಾನ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಆಹ್ವಾನ ಬೆಂಗಳೂರು : ಸೆಪ್ಟೆಂಬರ್ ಒಂದರಿಂದ ತಿಂಗಳಾವಧಿಗೆ ಜರುಗಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ, ಲಿಂಗಾಯಿತ ಮಠದಿಪತಿಗಳ ಒಕ್ಕೂಟದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಆಹ್ವಾನಿಸಲಾಯಿತು. ಅಕ್ಟೋಬರ್ ಐದರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ರವರ ನೇತೃತ್ವದಲ್ಲಿ ಸುಮಾರು ಹತ್ತಕ್ಕೂ ಅಧಿಕ ಪೀಠಾಧಿಪತಿಗಳು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾನ್ಯ ಮುಖ್ಯಮಂತ್ರಿಗಳ ಕಾನೂನು […]

ಮಡಿಕೇರಿ ದಸರಾ ಸಮಿತಿ ಕಾಯಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ

ಮಡಿಕೇರಿ ದಸರಾ ಸಮಿತಿ ಕಾಯಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ. ಮಡಿಕೇರಿ : ಮಡಿಕೇರಿಯಲ್ಲಿ ಗುರುವಾರ ನಡೆದ ದಶಮಂಟಪ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ವರು ಆಕಾಂಕ್ಷಿಗಳ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಚುನಾವಣೆ ಮೂಲಕ ಕಾರ್ಯಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ದಶಮಂಟಪ ಸಮಿತಿ ಅಧ್ಯಕ್ಷ ಸೇರಿದಂತೆ ದಶ ದೇವಾಲಯ, ಕರಗ ಪ್ರಮುಖರಿಂದ ಮತದಾನದ ಮೂಲಕ ಆಯ್ಕೆ ನಡೆದು ಅಂತಿಮವಾಗಿ ಅರುಣ್ ಕುಮಾರ್ ಆಯ್ಕೆಗೊಂಡರು.

ಸುರತ್ಕಲ್‌ –ಬಿ.ಸಿ. ರೋಡ್‌ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರಿಸುವಂತೆ ಕೇಂದ್ರ ಸಚಿವರಿಗೆ ಬ್ರಿಜೇಶ್ ಚೌಟ ಮನವಿ

ನವದೆಹಲಿ : ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್‌ -ಬಿ.ಸಿ. ರೋಡ್ ನಡುವಿನ ಹೆದ್ದಾರಿಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ತಂದು ಅದರ ಸಮರ್ಪಕ ನಿರ್ವಹಣೆ, ವಾಹನಗಳ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿಯಾದ ಸಂಸದರು, ಮಂಗಳೂರಿನ ಬಂದರು ಸಂಪರ್ಕ ಹೆದ್ದಾರಿ […]

ಬೆಲ್ಜಿಯಂ ದೇಶದ ರಾಯಭಾರಿಯೊಂದಿಗೆ ಸಿಎಂ ಸಭೆ

ಬೆಲ್ಜಿಯಂ ದೇಶದ ರಾಯಭಾರಿಯೊಂದಿಗೆ ಸಭೆ ಬೆಂಗಳೂರು : ಬೆಲ್ಜಿಯಂ ದೇಶದ ರಾಯಭಾರಿಯವರಾದ H.E. Mr ಡಿಡ್ಯಾರ್ ವ್ಯಾಂಡೆರ್ ಹಾಸ್ಸೇಲ್ಟ್ ರವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾತುಕತೆ ನಡೆಸಿದರು. ತಮ್ಮ ದೇಶದ ನಿಯೋಗದೊಂದಿಗೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿಯಾದ ಬೆಲ್ಜಿಯಂ ರಾಯಭಾರಿ ಅವರು ಹಲವು ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ […]

ಕೊಂಡಂಗೇರಿ ಸರ ಕಳ್ಳತನಕ್ಕೆ ಬಿಗ್ ಟ್ವಿಸ್ಟ್ : ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಬಂಧನ 

ಕೊಂಡಂಗೇರಿ ಸರ ಕಳ್ಳತನಕ್ಕೆ ಬಿಗ್ ಟ್ವಿಸ್ಟ್ : ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಬಂಧನ ಮಡಿಕೇರಿ : ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮ ಪೆರಂಬು ಎಂಬಲ್ಲಿ ವಾಸವಿರುವ ಶ್ರೀಮತಿ ಸಫಾನ ಮತ್ತು ಶ್ರೀಮತಿ ಸಾರಮ್ಮ ಎಂಬುವವರು ಮನೆಯಲ್ಲಿದ್ದ ಸಂದರ್ಭ ದಿನಾಂಕ: 21-07-2025 ರಂದು ಮಧ್ಯಾಹ್ನ ಸುಮಾರು 01.30 ಘಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ನೀರು ಕೇಳುವ ನೆಪದಲ್ಲಿ ಮನೆಯ ಬಳಿ ಬಂದು ಮಹಿಳೆಯರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕುತ್ತಿಗೆಯಲ್ಲಿದ ಚಿನ್ನದ ಸರವನ್ನು ಕಿತ್ತುಕೊಂಡು […]

ಮುಸುಕಿನ ಜೋಳ ಬೆಳೆಯುವ ರೈತರ ಗಮನಕ್ಕೆ

ಮುಸುಕಿನ ಜೋಳ ಬೆಳೆಯುವ ರೈತರ ಗಮನಕ್ಕೆ ಮಡಿಕೇರಿ : 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕುಶಾಲನಗರ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೈತರು ಮುಸುಕಿನ ಜೋಳ ಬೆಳೆಯನ್ನು ಬೆಳೆದಿದ್ದು ಪ್ರಸ್ತುತ ಅಲ್ಲಲ್ಲಿ ಮುಸುಕಿನ ಜೋಳ ಬೆಳೆಗೆ ಸುಳಿ ಎಲೆ ಬಿಳಿ ರೋಗ ಅಥವಾ ಕೇದಿಗೆ ರೋಗ ಅಥವಾ Downey mildew ರೋಗದ ಬಾಧೆ ಕಂಡು ಬಂದಿರುತ್ತದೆ. ಈ ರೋಗವನ್ನು ಹತೋಟಿ ಮಾಡಲು ರೈತರು ಈ ಕ್ರಮಗಳನ್ನು ಅನುಸರಿಸಲು ಕೋರಿದೆ. ಮುಸುಕಿನ ಜೋಳ ಬೆಳೆಯ ಹೊಲದಲ್ಲಿರುವ […]

ಗುಡ್ಡ ಜರಿದು ಮನೆಗೆ ಹಾನಿ

ಪುತ್ತೂರು :  ಬಾರೀ ಮಳೆಯಿಂದಾಗಿ ದ.ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಡೆಮ್ಮಂಗಾರ ಎಂಬಲ್ಲಿ ಗುರುವಾರ ಸಂಜೆ ಮನೆಯ ಪಕ್ಕದ ಗುಡ್ಡ ಜರಿದು ಮನೆಗೆ ಭಾಗಶಃ ಹಾನಿಯಾಗಿದೆ. ಇಲ್ಲಿನ ನಿವಾಸಿ ವಿಶ್ವನಾಥ ಎಂಬವರ ಪುತ್ರ ಕೃಷ್ಣಪ್ರಸಾದ್ ಎಂಬವರ ವಾಸದ ಮೆನೆಗೆ ಧರೆ ಜರಿದು ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಜು.27ರಂದು ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ

ಮಡಿಕೇರಿ : ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಸಹಯೋಗದಲ್ಲಿ ಜು.೨೭ರಂದು ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಅಪ್ಪಾಜ, ಅಂದು ೩೫ ವರ್ಷ ಮೇಲ್ಪಟ್ಟವರಿಗೆ(ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆ) ಮತ್ತು ಕಬ್ಬಿಣಾಂಶದ ಪೋಲಿಕ್ ಆಮ್ಲ ಮಾತ್ರೆ ಹಾಗೂ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ವಿತರಣೆ […]

ಗುಹ್ಯ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭೋತ್ಸವ

ಸಿದ್ದಾಪುರ : ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ (ದ್ವಿಭಾಷ ) ಪ್ರಾರಂಭೋತ್ಸವ ಗುಹ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಮಂಜುಳ ಮಾತನಾಡಿ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಇದರ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮವು ಪ್ರಾರಂಭವಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ […]