Breaking News :

ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರ ಭಾರತಕ್ಕೆ ತರಲು ಸರಕಾರದಿಂದ ನೆರವು 

ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸರಕಾರದಿಂದ ನೆರವು ಮಡಿಕೇರಿ : ಶಾಸಕ ಪೊನ್ನಣ್ಣ ರವರ ಪ್ರಯತ್ನದಿಂದ, ಅಮೆರಿಕದ ಗಯಾನ ದೇಶದಲ್ಲಿ ನಿಧನರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆನಾಡು ಗ್ರಾಮದ, ಗಿರೀಶ್ ಪಾಲೆ ಬಾಬು ರವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು. ಇತ್ತೀಚೆಗೆ ಅಮೆರಿಕದ ಗಯಾನದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಗಿರೀಶ್ ರವರ ಮೃತ ದೇಹವನ್ನು ಭಾರತಕ್ಕೆ ತರಲು ಅವರ ಬಡ ಕುಟುಂಬಕ್ಕೆ ಸಾಧ್ಯವಾಗದನ್ನು ಸ್ಥಳೀಯರಿಂದ ಮಾಹಿತಿ ಪಡೆದ […]

ವಾಹನ ಅಪಘಾತ: ಗುತ್ತಿಗೆದಾರ ದುರ್ಮರಣ

ವಾಹನ ಅಪಘಾತ: ಗುತ್ತಿಗೆದಾರ ದುರ್ಮರಣ ಕುಶಾಲನಗರ : ಪಿರಿಯಾಪಟ್ಟಣ ತಾಲೂಕಿನ ಮಂತನಹಳ್ಳಿ ಬಳಿ ನಡೆದ ವಾಹನ ಅಪಘಾತದಲ್ಲಿ ಗುತ್ತಿಗೆದಾರ ಬೈಲುಕೊಪ್ಪದ ಅರುಣ (45) ಮೃತಪಟ್ಟಿದ್ದಾರೆ. ರಾತ್ರಿ ಸ್ನೇಹಿತರೊಂದಿಗೆ ಬೈಲುಕೊಪ್ಪದತ್ತ ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಅರುಣ ಸ್ಥಳದಲ್ಲಿ ಮೃತರಾದರು. ಕಾರಿನಲ್ಲಿದ್ದ ಮತ್ತೋರ್ವ ಅರುಣ ಹಾಗೂ ರವಿ ಎಂಬವರಿಗೆ ಗಾಯಗಳಾಗಿದೆ.  

ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಲು ಸರಕಾರಕ್ಕೆ ಮನವಿ 

ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಲು ಸರಕಾರಕ್ಕೆ ಮನವಿ ಬೆಂಗಳೂರು: ಇತ್ತೀಚೆಗೆ ವಿಧಿವಶರಾದ ಹಿರಿಯ ಕಲಾವಿದೆ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ನಟಿ ತಾರಾ ಅನುರಾಧ ಮನವಿ ಮಾಡಿದ್ದಾರೆ. ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದ ನಟಿ ತಾರಾ ಸಿಎಂಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಚೇಲಾವರ : ಶೌಚಾಲಯ ಗುಂಡಿಗೆ ಬಿದ್ದು, ಎದ್ದ ಕಾಡಾನೆ 

ಚೇಲಾವರ : ಶೌಚಾಲಯ ಗುಂಡಿಗೆ ಬಿದ್ದು, ಎದ್ದ ಕಾಡಾನೆ ವಿರಾಜಪೇಟೆ : ಆಹಾರ ಅರಸಿ ಬಂದ ಕಾಡಾನೆಯೊಂದು ಶೌಚಾಲಯ ಗುಂಡಿಗೆ ಬಿದ್ದು ಮೇಲೇಳಲು ಹರಸಾಹಸಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ವಿರಾಜಪೇಟೆ ತಾಲೂಕಿನ ಚೇಲಾವರ ಫಾಲ್ಸ್ ಬಳಿಯ ಖಾಸಗಿ ಕೋಟೆಜ್ ವೊಂದರ ಸಮೀಪದಲ್ಲಿರುವ ಶೌಚಾಲಯದ ಗುಂಡಿಗೆ ಬಿದ್ದಿದ್ದ ಕಾಡಾನೆಯೊಂದು ಕೆಲ ಸಮಯ ಹರಸಾಹಸಪಟ್ಟು ಮೇಲೇರಿ ಹೋಗಿದೆ. ಈ ಸಂಬಂಧ ಪಟ್ರಪಂಡ ಲೀಲಾ ಅಪ್ಪಯ್ಯ ಎಂಬುವವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ […]

ವಿಶ್ವ ಮೆದುಳು ದಿನಾಚರಣೆ

ವಿಶ್ವ ಮೆದುಳು ದಿನಾಚರಣೆ ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಮೆದುಳು ದಿನಾಚರಣೆ ನಡೆಯಿತು. 2025 ನೇ ಸಾಲಿಗೆ ‘ಎಲ್ಲಾ ವಯಸ್ಸಿನವರಿಗೂ ಮೆದುಳಿನ ಆರೋಗ್ಯ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಕೊಡಗು ಜಿಲ್ಲೆಯ ಮೆದುಳು ಆರೋಗ್ಯ […]

ಕರ್ನಾಟಕ ಕಬಡ್ಡಿ ತಂಡದ ನಾಯಕನಾಗಿ ಸಚಿನ್ ಪೂವಯ್ಯ ಆಯ್ಕೆ 

ಕರ್ನಾಟಕ ಕಬಡ್ಡಿ ತಂಡವನ್ನು ನಾಯಕನಾಗಿ ಮುನ್ನಡೆಸಲಿರುವ ಕೊಡಗಿನ ಸಚಿನ್ ಮಡಿಕೇರಿ : ಜುಲೈ 25 ರಿಂದ ಪಂಜಾಬಿನ ಚಂಡೀಗಡದ ಪಂಚಕುಲದಲ್ಲಿ ಆಮೇಚೂರ್ ಕಬಡ್ಡಿ ಫೆಡರೇಷನ್ ಆಪ್ ಇಂಡಿಯಾ ಸಂಸ್ಥೆ ವತಿಯಿಂದ ನಡೆಯಲಿರುವ 72ನೇ ಹಿರಿಯರ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡಕ್ಕೆ ಆಯ್ಕೆಗೊಂಡಿರುವ ಕೊಡಗಿನ ಸಚಿನ್ ಪೂವಯ್ಯ, ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ವಿಚಾರವನ್ನು ಕರ್ನಾಟಕ ತಂಡದ ಮ್ಯಾನೇಜ್ಮೆಂಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ತಂಡಕ್ಕೆ ಆಯ್ಕೆಗೊಂಡಿರುವ ಆಟಗಾರರನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬೆಂಗಳೂರಿನಲ್ಲಿರುವ ತಮ್ಮ […]

ವಿಶೇಷ ಚೇತನರಿಗೆ ಸಲಕರಣೆ ವಿತರಣೆ

ಮಡಿಕೇರಿ : ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಆಡಿಪ್ ಯೋಜನೆಯಡಿ ಮಾನ್ಯ ಶಾಸಕರು ಮಡಿಕೇರಿ ವಿಧಾನಸಭಾ ಕ್ಷೇತ್ರ ಇವರಿಂದ ಸೋಮವಾರಪೇಟೆ ಹಾಗೂ ಕುಶಾಲ ನಗರ ತಾಲೂಕಿನ 89 ವಿಶೇಷ ಚೇತನರಿಗೆ ರೂಪಾಯಿ 19.75 ಲಕ್ಷ ವೆಚ್ಚದ 156 ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆಮ್ಮಯ್ಯ ಅಧ್ಯಕ್ಷರು ರೋಟರಿ ಕ್ಲಬ್ ಕುಶಾಲನಗರ ಇವರು ವಹಿಸಿಕೊಂಡಿದ್ದರು ಕಾರ್ಯಕ್ರಮವನ್ನು ಮಾನ್ಯ ಶಾಸಕರು ಉದ್ಘಾಟನೆ ಮಾಡಿದರು ವೇದಿಕೆಯಲ್ಲಿ ಕೃಷ್ಣಮೂರ್ತಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ […]

ಶಾಸಕ ಪೊನ್ನಣ್ಣರವರನ್ನು ಮಂತ್ರಿ ಮಾಡಬೇಕೆಂದು ಕೊಡಗು ಅರೆಭಾಷೆ ಗೌಡ ಸಮಾಜದ ಪ್ರಮುಖರಿಂದ ಮುಖ್ಯಮಂತ್ರಿಗೆ ಮನವಿ

ಶಾಸಕ ಪೊನ್ನಣ್ಣರವರನ್ನು ಮಂತ್ರಿ ಮಾಡಬೇಕೆಂದು ಕೊಡಗು ಅರೆಭಾಷೆ ಗೌಡ ಸಮಾಜದ ಪ್ರಮುಖರಿಂದ ಮುಖ್ಯಮಂತ್ರಿಗೆ ಮನವಿ ಮಡಿಕೇರಿ : ಅರೆಭಾಷೆ ಗೌಡ ಸಮುದಾಯದ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯೊಂದಿಗೆ, ಸಮಾಜದ ಪ್ರಮುಖರು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು, ಅವರ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭ ಪ್ರಮುಖ ಬೇಡಿಕೆಯಾಗಿ ಮಾನ್ಯ ಪೊನ್ನಣ್ಣ ರವರನ್ನು ಮುಂದಿನ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆಯೊಂದಿಗೆ ಸಂಪುಟ ದರ್ಜೆ ಸಚಿವ ಸ್ಥಾನ […]

ಕೊಡಗು ಗೌಡ ಸಮಾಜದ ಮುಖಂಡರಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಅಭಿನಂದನೆ

ಕೊಡಗು ಗೌಡ ಸಮಾಜದ ಮುಖಂಡರಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಅಭಿನಂದನೆ ಮಡಿಕೇರಿ  : ಕೊಡಗು ಗೌಡ ಸಮಾಜದ ಮುಖಂಡರಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ನಿಯೋಗವು ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ನೀಡಿದ ಮನವಿಗೆ ಸ್ಪಂದಿಸಿ, ಸಮುದಾಯ ಭವನ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರು ಮಾಡುವ ಭರವಸೆ ನೀಡಿದ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಕಚೇರಿಗೆ ಭೇಟಿ ನೀಡಿದ ಕೊಡಗು ಗೌಡ ಸಮಾಜದ […]

ಬೆಟ್ಟಗೇರಿಯಲ್ಲಿ ಮನೆ ಮನೆ ಜ್ವರ ಸಮೀಕ್ಷೆ : ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸಲಹೆ 

ಬೆಟ್ಟಗೇರಿಯಲ್ಲಿ ಮನೆ ಮನೆ ಜ್ವರ ಸಮೀಕ್ಷೆ : ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸಲಹೆ  ಮಡಿಕೇರಿ  : ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಂಡರೆ ಡೆಂಗ್ಯೂ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂದು ಜಿಲ್ಲಾ ಎಂಟಮಾಲಜಿಸ್ಟ್ ಮಂಜುನಾಥ್ ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ನೀಡಿದರು. ಬೆಟ್ಟಗೇರಿ ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಮನೆ ಮನೆ ಜ್ವರ ಸಮೀಕ್ಷೆ ನಡೆಸಿ ಜನರಿಗೆ ತಿಳುವಳಿಕೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಯಾವುದೇ ಜ್ವರವಿರಲಿ ಹತ್ತಿರದ ಆಸ್ಪತ್ರೆ ವೈದ್ಯರಿಗೆ […]