Breaking News :

ಚೆಸ್ಕಂ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ

ಚೆಸ್ಕಂ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ: ವಿರಾಜಪೇಟೆ: : ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಮತ್ತು ಉನ್ನತಿ ಲಭಿಸಲು ಸಲುವಾಗಿ ಕಛೇರಿಯಲ್ಲಿ ಆಷಾಢ ಚಾಮುಂಡೇಶ್ವರಿ ಪೂಜೆ ನಡೆಸಲಾಯಿತು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನೆ ಉಪವಿಭಾಗ ವಿರಾಜಪೇಟೆ ಇಲಾಖೆಯ ಸಿಬ್ಬಂದಿಗಳು ಮತ್ತು ಅನುಮತಿ ಪಡೆದ ಗುತ್ತಿಗೆದಾರರ ಸಂಘ ವಿರಾಜಪೇಟೆ ತಾಲೂಕು ಸಂಯುಕ್ತ ಆಶ್ರಯದಲ್ಲಿ ನಗರದ ಮೂರ್ನಾಡು ರಸ್ತೆಯ ಶಾಖಾ ಕಛೇರಿಯಲ್ಲಿ ೨ ನೇ ವರ್ಷದ ಶ್ರೀ ಚಾಮುಂಡೇಶ್ವರಿ ಪೂಜೆ ಮತ್ತು ಇಲಾಖೆಯ ಸಿಬ್ಬಂದಿಗಳಿಗೆ ಉಚಿತ […]

ವೀರಾಜಪೇಟೆ ಲಯನ್ಸ್ ಕ್ಲಬ್ ಗೆ ಆಯ್ಕೆ

ವೀರಾಜಪೇಟೆ ಲಯನ್ಸ್ ಕ್ಲಬ್ ಗೆ ಆಯ್ಕೆ ವಿರಾಜಪೇಟೆ : ವಿರಾಜಪೇಟೆ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವಕೀಲ ಅಂಬಿ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಯಾಗಿ ವೀರಾಜಪೇಟೆ ಟೆರೆಷಿಯನ್ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಪೌಲ್ ಕ್ಷೇವಿಯರ್ ಆಯ್ಕೆಯಾಗಿದ್ದಾರೆ. 2025-26 ನೇ ಸಾಲಿನಲ್ಲಿ ವೀರಾಜಪೇಟೆ ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಖಜಾಂಚಿಯಾಗಿ ಮಂಡೇಟಿರ ಸುರೇಶ್, ಉಪಾಧ್ಯಕ್ಷರಾಗಿ ಪಿ.ಪಿ.ಸುಬ್ಬಯ್ಯ, ಅಜಿತ್ ಎ.ಎ. ಹಾಗೂ ಕೆ.ಪಿ.ನಿಯಾಸ್ ಮತ್ತು ನಿರ್ದೇಶಕರಾಗಿ ಕೆ.ಆರ್.ಮೋಹನ್ ರೈ, ಕೆ.ಎಂ.ರಘು ಸೋಮಯ್ಯ, ಎ.ಪಿ.ಪ್ರಸನ್ನ,ಎ.ಪಿ.ಸುಬ್ರಮಣಿ ಸಿ.ಗಿಲ್ ಸೋಮಯ್ಯ ಹಾಗೂ ಪ್ರತಾಪ್ […]

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ವಿರಾಜಪೇಟೆ : ವಿರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಕಾನೂರು ವಲಯದ ಕುಟ್ಟ ಕಾರ್ಯಕ್ಷೇತ್ರದ ನಾಗರಹೊಳೆ ಅಭಯಾರಣ್ಯದ ಕಾಡಂಚಿನಲ್ಲಿರುವ ನಾಣಚ್ಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಕೆ. ಬಾಡಗ ಪಂಚಾಯತ್ ಅಧ್ಯಕ್ಷ ರಿತೇಶ್ ಬಿದ್ದಪ್ಪ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ […]

ರಾಜ್ಯದ ಜನರ ಮನೆ ಬಾಗಿಲಿಗೆ ನಮ್ಮ ಯೋಜನೆಗಳ ಮೂಲಕ ತಲುಪಿದ್ದೇವೆ : ಸಿಎಂ ಸಿದ್ದರಾಮಯ್ಯ

ರಾಜ್ಯದ ಜನರ ಮನೆ ಬಾಗಿಲಿಗೆ ನಮ್ಮ ಯೋಜನೆಗಳ ಮೂಲಕ ತಲುಪಿದ್ದೇವೆ : ಮೈಸೂರಿನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ  ಮೈಸೂರು : ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ನಮ್ಮ ಯೋಜನೆಗಳ ಮೂಲಕ ತಲುಪಿದ್ದೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ  ₹2,578 ಕೋಟಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಹಾಗೂ ರಾಜ್ಯ ಸರ್ಕಾರದ ಎರಡು […]

ಪ್ರತಿಭೆ ಯಾರ ಸ್ವತ್ತೂ ಅಲ್ಲ ಅವಕಾಶ ಸಿಕ್ಕರೆ ಪ್ರತಿಯೊಬ್ಬರ ಪ್ರತಿಭೆ ಹೊರ ಬರುತ್ತೆ : ಸಿಎಂ ಸಿದ್ದರಾಮಯ್ಯ 

ಪ್ರತಿಭೆ ಯಾರ ಸ್ವತ್ತೂ ಅಲ್ಲ ಅವಕಾಶ ಸಿಕ್ಕರೆ ಪ್ರತಿಯೊಬ್ಬರ ಪ್ರತಿಭೆ ಹೊರ ಬರುತ್ತೆ : ಸಿಎಂ ಸಿದ್ದರಾಮಯ್ಯ ಬೆಂಗಳೂರು : ಪ್ರತಿಭೆ ಯಾರ ಸ್ವತ್ತೂ ಅಲ್ಲ ಅವಕಾಶ ಸಿಕ್ಕರೆ ಪ್ರತಿಯೊಬ್ಬರ ಪ್ರತಿಭೆ ಹೊರಗೆ ಬರತ್ತದೆ. ಮಕ್ಕಳ ಪ್ರತಿಭೆ ರೂಪುಗೊಳ್ಳಲು ಶಿಕ್ಷಕರಷ್ಟೇ ಪೋಷಕರ ಶ್ರಮ ಕೂಡ ಅಗತ್ಯ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಯಾರನ್ನೂ ದೂರಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ […]

ಅರಣ್ಯ ಇಲಾಖೆಯ ಕಾರ್ಯಾಚರಣೆ : 27 ಕಾಡಾನೆಗಳು ಮರಳಿ ಅರಣ್ಯಕ್ಕೆ 

ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ : 27 ಕಾಡಾನೆಗಳು ಮರಳಿ ಅರಣ್ಯಕ್ಕೆ ಮಡಿಕೇರಿ : ವಿರಾಜಪೇಟೆ ಅರಣ್ಯ ವಿಭಾಗದ ತಿತಿಮತಿ ವಲಯಕ್ಕೆ ಒಳಪಡುವ ಪಾಲಿಬೆಟ್ಟ ವ್ಯಾಪ್ತಿಯ ಚೆನ್ನನಕೋಟೆ, ಮಾಲ್ದಾರೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಸುಮಾರು 27 ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದರಿಂದ ಕಾರ್ಮಿಕರು ಪ್ರತಿನಿತ್ಯ ಆತಂಕದಲ್ಲೇ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಆನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವಂತೆ ಒತ್ತಾಯ ಕೇಳಿಬಂದಿದ್ದ ಹಿನ್ನೆಲೆ ಜುಲೈ 18 ಹಾಗೂ 19 ರಂದು […]

ವಿರಾಜಪೇಟೆ : ರೂ.50 ಲಕ್ಷ ವೆಚ್ಚದ ರಸ್ತೆ, ಸೇತುವೆ ಉದ್ಘಾಟನೆ

ವಿರಾಜಪೇಟೆ : ರೂ.50 ಲಕ್ಷ ವೆಚ್ಚದ ರಸ್ತೆ, ಸೇತುವೆ ಉದ್ಘಾಟನೆ ಮಡಿಕೇರಿ  : ವಿರಾಜಪೇಟೆ ತಾಲ್ಲೂಕಿನಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಕೊಂಡಗೇರಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ರಸ್ತೆ, ಹಾಲುಗುಂದದಲ್ಲಿ 15 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆ, ಚೆಂಬೆಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ದೇವಣಗೇರಿಯಲ್ಲಿ 10 ಲಕ್ಷ […]

ಜು.27 ರಂದು ವಿರಾಜಪೇಟೆಯಲ್ಲಿ ಶೌರ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಜು.27 ರಂದು ವಿರಾಜಪೇಟೆಯಲ್ಲಿ ಶೌರ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ ಮಡಿಕೇರಿ  : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ 2024-25ನೇ ಸಾಲಿನ 4ನೇ ವಾರ್ಷಿಕ ಮಹಾಸಭೆ ಮತ್ತು ಶೌರ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ ಸಮಾರಂಭ ಜು.27ರಂದು ವಿರಾಜಪೇಟೆಯಲ್ಲಿ ನಡೆಯಲಿದೆ. ಈ ಕುರಿತು ನಗರದದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ , ವಿರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಮಹಾ ಸಭೆ ನಡೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ಶೌರ್ಯ ಪ್ರಶಸ್ತಿ […]

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : ಆಗಸ್ಟ್ ಅಂತ್ಯದವರೆಗೂ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : ಆಗಸ್ಟ್ ಅಂತ್ಯದವರೆಗೂ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ : ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ ಎಂದು ಮೈಮರೆಯದೆ ಆಗಸ್ಟ್ ಅಂತ್ಯದವರೆಗೂ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮೇ ಕೊನೆ ವಾರ ಹಾಗೂ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಜುಲೈನಲ್ಲಿ ಸಾಧಾರಣಾ ಮಳೆಯಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ […]

ಸುಂಟಿಕೊಪ್ಪ : ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಂ.ನಿಖಿಲ್ ಆಯ್ಕೆ

ಸುಂಟಿಕೊಪ್ಪ : ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಂ.ನಿಖಿಲ್ ಆಯ್ಕೆ ಕುಶಾಲನಗರ  : ವಿಶ್ವ ಹಿಂದೂ ಪರಿಷದ್ 61ನೇ ವರ್ಷದ ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಕ್ಷರಾಗಿ ಬಿ.ಕೆ.ಪ್ರಶಾಂತ್, ಸಿ.ಸಿ.ಸುನಿಲ್ ಕುಮಾರ್, ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಂ.ನಿಖಿಲ್, ಖಜಾಂಚಿಯಾಗಿ ಪದ್ಮನಾಭ, ಕಾರ್ಯದರ್ಶಿಗಳಾಗಿ ಎಂ.ಪಾಂಡ್ಯನ್, ಹೆಚ್.ನವೀನ್, ಜಿ.ಹೃತಿಕ್, ಸಹ ಕಾರ್ಯದರ್ಶಿಗಳಾಗಿ ಆರ್.ಮಣಿ, ಕೆ.ಎಂ.ಅಜಿತ್, ಆರ್.ಪ್ರಶಾಂತ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ರಾಜೇಶ್, ಬಿ.ಡಿ.ಆಶ್ವಥ್, ಹೆಚ್.ಸಿ.ಯೋಗೇಶ್, ಚೇತನ್, ಆರ್.ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, […]