ಜೈಲು ಶಿಕ್ಷೆ ಭಯದಿಂದ ನ್ಯಾಯಾಲಯದಲ್ಲೇ ವಿಷ ಸೇವನೆ; ಆರೋಪಿ ಆಸ್ಪತ್ರೆಗೆ ದಾಖಲು

ದಾವಣಗೆರೆ: ಜೈಲು ಶಿಕ್ಷೆಯ ಭಯದಿಂದ ನ್ಯಾಯಾಲಯ ದಲ್ಲಿಯೇ ವಿಷ ಸೇವಿಸಿ ಆರೋಪಿಯೊಬ್ಬ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿನ ಆರೋಪಿ ಫಜಲ್ ಅಲಿ (38) ಶನಿವಾರ) ದಾವಣಗೆರೆ ಜಿಲ್ಲೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ಗೆ ಹಾಜರಾಗಿದ್ದ. ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆರೋಪಿಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಫಜಲ್ ಅಲಿ ಹಾಗೂ ಆತನ ಪತ್ನಿ ವಿಚ್ಚೇಧನ ಪಡೆದಿದ್ದರು. ಬಳಿಕ ಕೋರ್ಟ್ ಆದೇಶದಂತೆ ಪತ್ನಿಗೆ […]
ಭಾರೀ ಸದ್ದು ಮಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಎಷ್ಟು ವೆಚ್ಚವಾಗಿದೆ ಗೊತ್ತಾ?

ದರ್ಶನ್ ಗ್ಯಾಂಗ್ ನ್ನು ಜೈಲಿಗಟ್ಟಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಎಷ್ಟು ವೆಚ್ಚವಾಗಿದೆ ಎಂಬುವುದು ಎಲ್ಲರ ಕುತೂಹಲವಾಗಿದೆ. ಎಸಿಪಿ ಚಂದನ್ ನೇತೃತ್ವದ ತಂಡ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಬಂಧಿಸಿತ್ತು. ಆ ಬಳಿಕ ಕೊಲೆಗೆ ಸಂಬಂಧಿಸಿ ಮಹತ್ವದ ಸಾಕ್ಷಿಯನ್ನು ಸಂಗ್ರಹಿಸಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ವೆಚ್ಚ ಈವರೆಗೆ 5 ಲಕ್ಷ ಎನ್ನಲಾಗಿದೆ. ಪ್ರಕರಣದ ತನಿಖೆಗೆ ಈವರೆಗೆ ಖಾಕಿ ಪಡೆ 5 ಲಕ್ಷ ವೆಚ್ಚ ಮಾಡಿದೆ ಎನ್ನಲಾಗಿದೆ. ಅದರಲ್ಲಿಯೂ ಎಲೆಕ್ಟ್ರಾನಿಕ್ ಡಿವೈಸ್ ಗಳ ಖರೀದಿಗೆ ಹೆಚ್ಚು ವೆಚ್ಚವಾಗಿರುವುದಾಗಿ […]
ಒಂದೇ ಶಾಲೆಯ 10 ಶಿಕ್ಷಕರಿಗೆ ಬ್ರೈನ್ ಟ್ಯೂಮರ್!

ಬದ್ರಾವ್‌ನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಿಯೋಜನೆಗೊಂಡ 10 ಶಿಕ್ಷಕರು ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಘಟನೆಯು ಸರ್ಕಾರದ ಗಮನಕ್ಕೆ ಬಂದ ಬೆನ್ನಲ್ಲೇ ರೇವಾ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. 2022ರಲ್ಲಿ ಮಧ್ಯಪ್ರದೇಶ ಸರ್ಕಾರವು ಶಿಕ್ಷಕರಿಗೆ ವರ್ಗಾವಣೆ ನೀತಿಯನ್ನು ಅನುಮೋದಿಸಿತ್ತು. ಈ ವೇಳೆ ಹೆಚ್ಚಿನ ಶಿಕ್ಷಕರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದೇವೆ ಎಂದು ಹೇಳಿದ್ದರು. ಹೀಗಾಗಿ ಇವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿತ್ತು. ಬಹುಶಃ ಆ ಸಮಯದಲ್ಲಿಯೇ ಕೆಲವು ಶಿಕ್ಷಕರು ವರ್ಗಾವಣೆಯನ್ನು ತಪ್ಪಿಸಲು ಶಿಕ್ಷಣ ಪೋರ್ಟಲ್‌ನಲ್ಲಿ ಈ ರೀತಿಯ ಮಾಹಿತಿಯನ್ನು […]
ತಾಯಿಯನ್ನು ಕೊಂದು ” ಕ್ಷಮಿಸು ತಾಯಿ” ಎಂದು ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ

ಮಗನೋರ್ವ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದ್ದು, ಈತ ಕೃತ್ಯದ ಬಳಿಕ ನಿನ್ನನ್ನು ಕೊಂದಿದ್ದಕ್ಕೆ ನನ್ನ ಕ್ಷಮಿಸಿ ಬಿಡು ಅಮ್ಮ ಎಂದು ಕ್ಯಾಪ್ಷನ್ ಹಾಕಿದ್ದಾನೆ. ನಿಲೇಸ್ ಗೋಸಾಯಿ ಎಂಬಾತ ತನ್ನ ತಾಯಿ ಜ್ಯೋತಿ ಬೆನ್ ಅವರನ್ನು ಕತ್ತು ಹಿಸುಕಿ ಕೊಂದಿದ್ದು, ಇದಾದ ಬಳಿಕ ಆರೋಪಿ ಮಗ ತನ್ನ ಇನ್ಸ್ಟಾಗ್ರಾಂನಲ್ಲಿ ತನ್ನ ತಾಯಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ತನ್ನ ಸ್ಟೇಟಸ್ನಲ್ಲಿ ಕ್ಷಮಿಸಿ ಬಿಡು ಅಮ್ಮ, ನಾನು ನಿನ್ನನ್ನು ಕೊಂದಿದ್ದೇನೆ, ನಾನು ನಿನ್ನನ್ನು ಕಳೆದುಕೊಂಡಿದ್ದೇನೆ, ಓಂ […]
ಮಂಗಳೂರು: ಯುವತಿ ಮೇಲೆ ಹಲ್ಲೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು: ಅನುಪಮ್ ಅಗರ್ ವಾಲ್

ಮಂಗಳೂರು ನಗರದ ಲಾಲ್‌ಬಾಗ್ ಬಳಿಯ ರೆಸ್ಟೋರೆಂಟ್ ಒಂದರಲ್ಲಿ ಯುವತಿ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.25ರಂದು ಘಟನೆ ನಡೆದಿದ್ದು, ಹೊಟೇಲ್‌ನ ಪಾರ್ಕಿಂಗ್ ಜಾಗದಲ್ಲಿ ಗಲಾಟೆಯಾಗಿದೆ. ಯುವತಿ ನೀಡಿದ ದೂರಿನ ಪ್ರಕಾರ ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಿಸಿ […]
ಸುಳ್ಯ: ಪಾರಿನ್ ನಲ್ಲಿ ಕೆಲಸ ಸಿಕ್ಕಿದೆ ಎಂದ ಮಗಳನ್ನು ಏರ್ ಪೋರ್ಟ್ ತನಕ ಬಿಟ್ಟು ಬಂದ ಮನೆ ಮಂದಿ, ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆ ಪರಾರಿಯಾದ ಯುವತಿ!

ಅಪ್ಪ-ಅಮ್ಮನಿಗೆ ಮಗಳು ಪಾರಿನ್ ಗೆ ಹೋಗುವುದಾಗಿ ಹೇಳಿ ಏರ್ ಪೋರ್ಟ್ ತನಕ ಕರೆದುಕೊಂಡು ಬಂದು ಬಳಿಕ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ಪಿಯುಸು ಪಾಸ್ ಆಗಿದ್ದಳು. ವಿದೇಶದಲ್ಲಿ ನನಗೆ ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ಪಾಸ್‌ಪೋರ್ಟ್ ಕೂಡ ರೆಡಿ ಮಾಡಿಕೊಂಡಿದ್ದೇನೆ. ವಿಮಾನದ ಟಿಕೆಟ್ ಕೂಡ ಬುಕ್ ಆಗಿದೆ ಎಂದು ಪೋಷಕರಿಗೆ ನಂಬಿಸಿದ್ದಳು. ಅದರಂತೆ ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ಬೆಂಗಳೂರು […]
ಮದುವೆ ಮನೆಯಲ್ಲಿ ಮಟನ್ ಕರಿಗಾಗಿ ಹೊಡೆದಾಟ: 10 ಮಂದಿಗೆ ಗಾಯ

ಮದುವೆ ಮನೆಯಲ್ಲಿ ಮಟನ್ ಕರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ 10 ಮಂದಿ ಗಾಯಗೊಂಡ ವಿಲಕ್ಷಣ ಘಟನೆ ತೆಲಂಗಾಣದ ನಿಜಾಮಾಬಾದ್‌ನ ನವಿಪೇಟ್‌ನಲ್ಲಿ ನಡೆದಿದೆ. ನವಿಪೇಟೆಯ ವಧುವಿಗೂ ನಂದಿಪೇಟ್ ಮಂಡಲದ ಬಡಗುಣ ಗ್ರಾಮದ ವರನಿಗೂ ಮದುವೆ ನಡೆಯುತ್ತಿತ್ತು. ಊಟದಲ್ಲಿ ಮಟನ್ ಕರಿ ವಿಚಾರವಾಗಿ ವಧು ಹಾಗೂ ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪ್ಲೇಟ್‌ಗಳು, ಗ್ಲಾಸ್‌ಗಳು, ಕುರ್ಚಿಗಳು ಮತ್ತು ಇತರ ವಸ್ತುಗಳ ಮೂಲಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ವರನ ಕಡೆಯ ಕೆಲವು ಯುವಕರು, ಕಡಿಮೆ ಮಟನ್ ಬಡಿಸಿದ್ದಾರೆ ಎಂದು ಅತೃಪ್ತಿಗೊಂಡು […]
ಮುಸ್ಲಿಂ ಶಾಸಕರಿಗಿದ್ದ ನಮಾಝ್ ವಿರಾಮವನ್ನು ರದ್ದುಗೊಳಿಸಿದ ಅಸ್ಸಾಂ ವಿಧಾನಸಭೆ

ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಶಾಸಕರಿಗೆ ಇದ್ದ 2 ಗಂಟೆಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದು ಮಾಡಿದೆ. ಹೊಸ ನಿರ್ಧಾರದಿಂದಾಗಿ ಸದನದ ಉತ್ಪಾದಕತೆ ಹೆಚ್ಚಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ. 2 ಗಂಟೆ ನಮಝ್ ವಿರಾಮವನ್ನು ರದ್ದು ಮಾಡುವ ಮೂಲಕ, ಅಸ್ಸಾಂ ವಿಧಾನಸಭೆಯು ಉತ್ಪಾದಕತೆಗೆ ಪ್ರಾತಿನಿಧ್ಯ ನೀಡಿದೆ. ಅಲ್ಲದೆ ವಸಾಹತು ಕಾಲದ ಆಚರಣೆಯನ್ನು ತಳ್ಳಿ ಹಾಕಿದೆ. ಈ ಪದ್ಧತಿಯನ್ನು 1937ರಲ್ಲಿ ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ ಅವರು ಪ್ರಾರಂಭಿಸಿದ್ದರು. ಈ ನಿರ್ಧಾರ […]
ಷೇರುಪೇಟೆ ಸಂವೇದಿ ಸೂಚ್ಯಂಕ ಜಿಗಿತ; ನಿಫ್ಟಿ ಸಾರ್ವಕಾಲಿಕ ದಾಖಲೆ ಏರಿಕೆ

ಬಾಂಬೆ ಷೇರುಪೇಟೆ ವಹಿವಾಟು ಸತತ ಐದು ದಿನಗಳಿಂದ ಏರುಗತಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ಷೇರುಪೇಟೆ ಸಂವೇದಿ ಸೂಚ್ಯಂಕ 300.87 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಾಹ್ನ 326.23 ಅಂಕಗಳಷ್ಟು ಏರಿಕೆಯೊಂದಿಗೆ 82,470.82 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆದಿದೆ. ಅದೇ ರೀತಿ ನಿಫ್ಟಿ 85.80 ಅಂಕ ಜಿಗಿತದೊಂದಿಗೆ 25.237.80 ಅಂಕಗಳ ಗಡಿಯಲ್ಲಿದೆ. ಬಿಎಸ್ ಇ, ನಿಫ್ಟಿ ಏರಿಕೆಯಿಂದ ಪವರ್ ಗ್ರಿಡ್ ಕಾರ್ಪ್, ಭಾರ್ತಿ ಏರ್ ಟೆಲ್, ಮಹೀಂದ್ರ & ಮಹೀಂದ್ರ, ಬಜಾಜ್ ಫೈನಾನ್ಸ್, ಸನ್ ಫಾರ್ಮಾ […]
ಸೌಜನ್ಯ ಪ್ರಕರಣ: ಎಲ್ಲಾ ಮೂರು ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಕೋರಿಕೆ ಸೇರಿದಂತೆ ಸಲ್ಲಿಸಿದ್ದ ಎಲ್ಲಾ ಮೂರು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾ ಗೊಳಿಸಿದೆ. ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡ ವಜಾ ಮಾಡಲಾಗಿದೆ. ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರವಿಲ್ಲ ಎಂದು ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈಗ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮರು ತನಿಖೆ ಕೋರಿ ಸೌಜನ್ಯ ಪೋಷಕರು ತಾಯಿ ಕುಸುಮಾವತಿ, […]