ಪಾರ್ಕಿಂಗ್ ವಿಚಾರದಲ್ಲಿ ಮಾತನಾಡಿದ್ದಕ್ಕೆ ಅಪ್ರಾಪ್ತ ಬಾಲಕನನ್ನು ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು

ರೆಹಮಾನ್ ಕೊಲೆಯಾದ ಯುವಕ ಬೆಂಗಳೂರು; ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ಸೊಂಡೆಕುಪ್ಪ ಗ್ರಾಮ ಪಂಚಾಯಿತಿ ಬಳಿ ನಡೆದಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೆಹಮಾನ್ (17) ಕೊಲೆಯಾದ ಯುವಕ. ಅದೇ ಗ್ರಾಮದ ರೇಣುಕಾ ಹಾಗೂ ಪರ್ಮಿ ಎಂಬವರು ರೆಹಮಾನ್ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ರೆಹಮಾನ್ ಹುಟ್ಟು ಹಬ್ಬಕ್ಕೆಂದು ಮಂಗಳವಾರ ಕೇಕ್ ತರಲು ಬೇಕರಿ ಬಳಿ ಹೋಗಿದ್ದ. ಈ ವೇಳೆ ಆರೋಪಿಗಳು ಅಂಗಡಿ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದು, ಇದನ್ನು ರೆಹಮಾನ್ […]
ರಾಹುಲ್ ಗಾಂಧಿಯ ರಾಜಕೀಯ ಶೈಲಿಯಲ್ಲಿ ಬದಲಾವಣೆಯಾಗಿದೆ; ರಾಹುಲ್ ಗಾಂಧಿಯನ್ನು ಹೊಗಳಿ ಸ್ಮೃತಿ ಇರಾನಿ ಏನೆಲ್ಲಾ ಹೇಳಿದ್ರು? ಡಿಟೇಲ್ಸ್…

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಯಶಸ್ಸಿನ ಹೊಸ ಹೊಸ ರಾಜಕೀಯ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದು, ಈ ಕುರಿತ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ‘ಟಾಪ್ ಆಯಂಗಲ್’ ಪಾಡ್‌ಕಾಸ್ಟ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ‘ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದು, ಪ್ರಚೋದಕಾರಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಅವರ ಹೊಸ ತಂತ್ರಗಾರಿಕೆಯ ಭಾಗವಾಗಿದೆ. ಅವರು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ನಿರ್ದಿಷ್ಟ ಸಮುದಾಯಗಳನ್ನು ಸೆಳೆಯುವಲ್ಲಿ ಯಶಸ್ಸಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಕೆಲಸಗಳನ್ನು […]
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್, ಕೋರ್ಟ್ ನಲ್ಲಿ ಮಹತ್ವದ ವಿಚಾರ ಉಲ್ಲೇಖಿಸಿ ವಾದಿಸಿದ ಅಭಿಷೇಕ್ ಮನು ಸಿಂಘ್ವಿ

ಬೆಂಗಳೂರು:ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಆದೇಶದ ಕುರಿತ ವಿಚಾರಣೆಯನ್ನು ಮತ್ತೆ ಕರ್ನಾಟಕ ಹೈಕೋರ್ಟ್ ಮುಂದೂಡಿದೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಪೀಠ ವಿಚಾರಣೆ ನಡೆಸಿತು. ವಾದ ಆಲಿಸಿದ ಪೀಠವು ವಿಚಾರಣೆನ್ನು ಆಗಸ್ಟ್ 31ಕ್ಕೆ ಮುಂದೂಡಿದೆ. ಸಿಎಂ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಆರೋಪಗಳಿಗೆ ಯಾವುದೇ ಶೋಕಾಸ್ ನೋಟಿಸ್ […]
ಮಲಯಾಳಂ ಚಿತ್ರರಂಗದಲ್ಲಿ ತನಗಾದ ಅನುಭವ ತೆರೆದಿಟ್ಟ ನಟಿ ಶಕೀಲಾ

ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ ನಟಿ ಶಕೀಲಾ ಸದ್ಯ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ತನಗಾದ ಕಷ್ಟಗಳನ್ನು ಆಗಾಗ ಸಂದರ್ಶನಗಳಲ್ಲಿ ಶಕೀಲಾ ಹಂಚಿಕೊಳ್ಳುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ಆರೋಪ ಮತ್ತು ಹೇಮಾ ಮಹಿಳಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ಶಕೀಲಾ ಪ್ರತಿಕ್ರಿಯೆ ನೀಡಿದ್ದಾರೆ. ರೂಪಾಶ್ರೀ ಎಂದ ನಟಿ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೆ, ಆ ಸಮಯದಲ್ಲಿ ನಾಲ್ಕು ಜನರು ಮಧ್ಯಪಾನ ಸೇವಿಸಿ ರೂಪಾಶ್ರೀ ಕೋಣೆಗೆ ಬಲವಂತವಾಗಿ ಹೋಗಲು ಪ್ರಯತ್ನ ಪಟ್ಟಿದ್ದಾರೆ ಆ ವಿಚಾರ ನನ್ನ ಕಿವಿಗೆ […]
ವಿದ್ಯುತ್ ಕಂಬದ ಮೇಲೆ ಧಾರ್ಮಿಕ ಚಿಹ್ನೆ: ವಿವಾದ

ಗಂಗಾವತಿ ನಗರದಲ್ಲಿ ವಿದ್ಯುತ್ ಮೇಲಿರುವ ಧಾರ್ಮಿಕ ಚಿಹ್ನೆ ಅಳವಡಿಕೆ ವಿಷಯ ವಿವಾದಕ್ಕೆ ತಿರುಗಿದೆ. ಈ ಬಗ್ಗೆ ಎಸ್ಡಿಪಿಐ ದೂರು ಆಧರಿಸಿ ತೆರವಿಗೆ ಸೂಚಿಸಿದ್ದ ತಾಲೂಕು ಆಡಳಿತ, ಸದ್ಯ ತೆರವು ಮಾಡದಂತೆ ಸೂಚಿಸಿದೆ ಎಂದು ವರದಿಯಾಗಿದೆ. ಗಂಗಾವತಿ ನಗರದ ಇಂದಿರಾಗಾಂಧಿ ವೃತ್ತದಿಂದ ಮಹಾರಾಣ ಪ್ರತಾಪ ಸಿಂಗ್ ವೃತ್ತವರೆಗೆ ನಗರಸಭೆ ವಿದ್ಯುತ್ ದೀಪ ಕಂಬ ಅಳವಡಿಸಿದೆ.ಕಂಬದ ಮೇಲೆ ಹಿಂದು ಧಾರ್ಮಿಕ ಚಿಹ್ನೆಗಳಾದ ಗಧೆ, ಬಿಲ್ಲು, ಬಾಣ ಹಾಗೂ ವೆಂಕಟೇಶ್ವರ ಸ್ವಾಮಿ ಚಿಹ್ನೆಗಳನ್ನು ಹಾಕಲಾಗಿದೆ. ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಚಿಹ್ನೆ […]
ಉಪ್ಪಿನಂಗಡಿ: ವಾಹನ ತಡೆದು ಹಲ್ಲೆ, ಪ್ರಕರಣ ದಾಖಲು

ವಾಹನವನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ವ್ಹಕ್ತಿಯೋರ್ವರು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಣಿಯೂರು ನಿವಾಸಿ ಸಿದ್ದಿಕ್(43) ಎಂಬವರು ನೀಡಿದ ದೂರಿನ ಮೇರೆಗೆ ಶರತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್ ಎಂಬವರು ಅಲ್ಲಿ ಪೋನ್ ನಲ್ಲಿ ಮಾತನಾಡುತ್ತಿದ್ದರು. ಅದೇ ವೇಳೆ […]
ಪ್ರೀತಿ ನಿರಾಕರಿಸಿದ ಮಂಗಳಮುಖಿ ಹನೀಷಾಗೆ ಚೂರಿಯಿಂದ ಇರಿದ ಆದಿಲ್

ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಯುವಕನೊರ್ವ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಆತನಿಗೆ ಪೊಲೀಸರಿಗೆ ಒಪ್ಪಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ. ಹನೀಷಾ(21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿಯಾಗಿದ್ದಾರೆ. ಮಂಡ್ಯದ ಆದಿಲ್ (23) ಚಾಕುವಿನಿಂದ ಇರಿದ ಆರೋಪಿಯಾಗಿದ್ದಾನೆ. ಇವರಿಬ್ಬರು ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಬೇರೆ- ಬೇರೆ ಊರುಗಳಿಗೆ ಆಗಾಗ ಹೋಗುತ್ತಿದ್ದರು. ಇದನ್ನು ಸಹಿಸದ ಆದಿಲ್ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ […]
ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ತೇಲಿ ಹೋದ ಮೃತದೇಹ

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹವೊಂದು ತೇಲಿ ಹೋಗಿದೆ. ಪ್ರವಾಹ ರಕ್ಷಣಾ ತಂಡದವರು ಮೃತದೇಹವನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನೀಲಿ ಬಣ್ಣದ ಒಳ ಉಡುಪನ್ನು ಧರಿಸಿದ್ದ ವ್ಯಕ್ತಿಯ ಮೃತದೇಹವೊಂದು ನದಿಯಲ್ಲಿ ತೇಲಿ ಹೋಗುತ್ತಿರುವುದನ್ನು ಸಾರ್ವಜನಿಕರು ಮಠ ಪ್ರದೇಶದಲ್ಲಿ ನೋಡಿದ್ದರು. ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ನೇತ್ರಾವತಿ ಸೇತುವೆಯ ಮೇಲೆ ನಿಂತಿದ್ದ ಸಾರ್ವಜನಿಕರಿಗೂ ಅದು ಕಾಣಸಿಕ್ಕಿತ್ತು. ಅವರು ಗೃಹರಕ್ಷಕ ದಳ ಹಾಗೂ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದರು. ರಕ್ಷಣಾ ತಂಡವು ಸ್ಥಳಕ್ಕೆ ಬರುವಷ್ಟರಲ್ಲಿ ದೇಹವು ನದಿಯಲ್ಲಿ ಮುಂದಕ್ಕೆ […]
ಸ್ವಯಂ ಉದ್ಯೋಗಕ್ಕೆ 5 ಲಕ್ಷ ಬಡ್ಡಿರಹಿತ ಸಾಲ: ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ?

ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ‘ಲಖ್‌ಪತಿ ದೀದಿ ಯೋಜನೆ’ ಜಾರಿಗೆ ತಂದಿದೆ. ಸ್ವಯಂ ಉದ್ಯೋಗ ಕಲ್ಪಿಸಿ ಬಡತನ ನಿರ್ಮೂಲನೆ ಮೂಲಕ ಮಹಿಳೆಯರು ಆರ್ಥಿಕ ಸಬಲರಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿ ತಮ್ಮದೇ ಕಾಲುಗಳ ಮೇಲೆ ನಿಂತು ಬದುಕು ಕಟ್ಟಿಕೊಳ್ಳಲು ಈ ಸಾಲ ಸೌಲಭ್ಯ ನೆರವಾಗುತ್ತದೆ. ಈ ಯೋಜನೆಯ ಭಾಗವಾಗಿ, […]
ಉತ್ತರಕನ್ನಡದಲ್ಲಿ ಎನ್ ಐಎ ದಾಳಿ; ಮೂವರು ವಶಕ್ಕೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಕಾರವಾರ ತಾಲೂಕಿನ ಮುದಗಾ, ತೋಡುರು, ಕುಮಟಾ ಹನೇಹಳ್ಳಿ ಗ್ರಾಮದಲ್ಲಿ ಎನ್‌ಐಎ ದಾಳಿ ನಡೆದಿದೆ. ನೌಕಾನೆಲೆಯ ಫೋಟೋ ರವಾನೆಯಾಗಿ ಗುಪ್ತ ಮಾಹಿತಿ ಸೋರಿಕೆಯಾಗಿರುವ ಹಿನ್ನೆಲೆ ಎನ್‌ಐಎ ಅಧಿಕಾರಿಗಳು ನೌಕಾನೆಲೆಯಲ್ಲಿರುವ ಮೂವರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. 2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಎಂಬಾತನನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿತ್ತು. ದೀಪಕ್ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ದೀಪಕ್ ವಿಚಾರಣೆ ವೇಳೆ ಮೂವರ ಹೆಸರು ಬೆಳಕಿಗೆ […]