Breaking News :

ಮಂಗಳೂರು: ಮಾದಕ ವಸ್ತು ಸೇವನೆ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು:ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ನಗರದ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್‌ ಆಸೀರ್‌(27) ಮತ್ತು ಶಾಂತಿನಗರದ ಮೊಹಮ್ಮದ್‌ ನೌಶೀನ್‌(29) ಬಂಧಿತ ಆರೋಪಿಗಳು. ಆ.23ರಂದು ರಾತ್ರಿ ಕಾವೂರು ಶಾಂತಿನಗರದ ಮೈದಾನದ ಬಳಿ ಇದ್ದ ಕೂಳೂರಿನ ಮೊಹಮ್ಮದ್‌ ಆಸೀರ್‌(27) ಮತ್ತು ಶಾಂತಿನಗರದ ಮೊಹಮ್ಮದ್‌ ನೌಶೀನ್‌(29)ನನ್ನು ಅನುಮಾನದಿಂದ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

ಪುತ್ತೂರು: ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳ ಬಂಧನ, ಜಾಮೀನಿನಲ್ಲಿ ಬಿಡುಗಡೆ

ಪುತ್ತೂರು: ಕೋರ್ಟ್‌ ರಸ್ತೆಯಲ್ಲಿನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಕೋಡಿಂಬಾಡಿಯ ಧನ್‌ರಾಜ್‌, ರಾಮಕುಂಜದ ಬಾರಿಂಜ ನಿವಾಸಿ ಕಿರಣ್‌ ಕುಮಾರ್‌ ಮತ್ತು ಬೆಳ್ತಂಗಡಿ ಊರಮಾಲ್‌ ನಿವಾಸಿ ಸಂಜಯ್‌ ಗೌಡ ಅಲಿಯಾಸ್‌ ಸಂಜೀವ ಗೌಡ ಬಂಧಿತ ಆರೋಪಿಗಳು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ನದಿಯಲ್ಲಿ ಈಜಲು ತೆರಳಿದ ಯುವಕ ನೀರುಪಾಲು

ನದಿಗೆ ಈಜಲು ಹೋಗಿದ್ದ ಯುವಕನೋರ್ವ ನೀರು ಪಾಲಾಗಿರುವ ಘಟನೆ ವಿಜಯಪುರದ ಶ್ರೀ ಛಾಯಾ ಭಗವತಿಯ ತೀರದಲ್ಲಿ ನಡೆದಿದೆ. ಮಹ್ಮದ್ ಆದಿಲ್(27)ನೀರು ಪಾಲಾದ ಯುವಕನಾಗಿದ್ದು, ವಿಜಯಪುರ ಜಿಲ್ಲೆಯ ತಾಳಿಕೋಟಿಯಿಂದ ಸ್ನೇಹಿತರೊಂದಿಗೆ ಶುಕ್ರವಾರ ಛಾಯಾ ಭಗವತಿ ವೀಕ್ಷಣೆಗೆ ತೆರೀದ್ದ. ಈಜಲು ನದಿಗೆ ಇಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದಿಲ್ ದೆಹಲಿ ಮೂಲದವರಾಗಿದ್ದು, ತಾಳಿಕೋಟಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಟಿಂಗ್ […]

ಅಡ್ಡೂರು ಗ್ರಾಮದಲ್ಲಿ ಭರತ್ ಶೆಟ್ಟಿಗೆ 826 ಮತ ಹಾಕಿದ್ದು ಪಾಕಿಸ್ತಾನಿಯರೇ? ಇನಾಯತ್ ಅಲಿ ಪ್ರಶ್ನೆ

ಅಡ್ಡೂರು ಗ್ರಾಮವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಶಾಸಕ ಭರತ್ ಶೆಟ್ಟಿ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ. ಅಡ್ಡೂರು ಗ್ರಾಮದಲ್ಲಿ 826 ಮತಗಳು ಭರತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಹಾಗಾದ್ರೆ ಮಿಸ್ಟರ್ ಭರತ್ ಶೆಟ್ರೇ ನಿಮಗೆ ಮತ ಹಾಕಿ ಗೆಲ್ಲಿಸಿದವರು ಪಾಕಿಸ್ತಾನಿಯರೇ? ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪ್ರಶ್ನಿಸಿದ್ದಾರೆ. ಶಾಸಕ ಭರತ್ ಶೆಟ್ಟಿ ಪಾಕಿಸ್ತಾನ ಹೇಳಿಕೆ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಇನಾಯತ್ ಆಲಿ ಕರಡಿಗೆ ಗೊತ್ತಿರೋದು ನಾಲ್ಕೇ ಹಾಡು ಎಲ್ಲ ಜೇನುತುಪ್ಪದ ಬಗ್ಗೆ ಅ‌ನ್ನುವಂತೆ […]

ಬೆಳಾಲು ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ; ಅಳಿಯ, ಮೊಮ್ಮಗನ ಬಂಧನ; ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಬೆಳ್ತಂಗಡಿಯ ಬೆಳಾಲು ಗ್ರಾಮಾದಲ್ಲಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಜ್ಯೋತಿಷಿಯಾಗಿರುವ, ಮೃತರ ಅಳಿಯ ರಾಘವೇಂದ್ರ ಕೆದಿಲಾಯ (53) ಹಾಗೂ ಮೊಮ್ಮಗ ಮುರಳೀಕೃಷ್ಣ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಧರ್ಮಸ್ಥಳ ಪೊಲೀಸರು ಸಿ.ಸಿ ಕ್ಯಾಮೆರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. […]

ಮಾಜಿ ಸಿಎಂ ಓರ್ವರ ಸಿಡಿ ರಿಲೀಸ್ ಮಾಡುವುದಾಗಿ ಹೇಳಿದ ಮಾಜಿ ಶಾಸಕ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ‌ ಮೂಡಿಸಿದ ಹೇಳಿಕೆ

ರಾಜ್ಯದ ಮಾಜಿ ಸಿಎಂ ಓರ್ವರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಕಾಂಗ್ರೆಸ್​​​ನ ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿಕೆಯನ್ನು ನೀಡಿದ್ದು, ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದ ಅದರಲ್ಲೂ ಬಿಜೆಪಿಯ ಮಾಜಿ ಸಿಎಂ ಓರ್ವರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಆ CDಯು ಭಾರತೀಯ ಜನತಾ ಪಕ್ಷದ ನಾಯಕನದ್ದೇ ಎಂದು ಅವರು ಒತ್ತಿ-ಒತ್ತಿ ಹೇಳಿದ್ದಾರೆ. ಅದು ಯಾರಿಗೆ ಸಂಬಂಧಿಸಿದ […]

ಅನಾಥ ಯುವತಿಗೆ ಮುಂದೆ ನಿಂತು ವಿವಾಹ ಮಾಡಿಸಿಕೊಟ್ಟ ಉಡುಪಿ ಡಿಸಿ

ಅನಾಥೆಯಾಗಿದ್ದ ವಧುವನ್ನು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿದ್ದಾರೆ. 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಸುಮೇರಾ (21) ಅವರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ.ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ.(29) ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಉಡುಪಿ ಸಮೀಪದ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ […]

ಸಾಮೂಹಿಕ ಅತ್ಯಾಚಾರ ಆರೋಪಿಯ ಮೃತದೇಹದ ಧಪನಕ್ಕೆ ವಿರೋಧಿಸಿದ ಗ್ರಾಮಸ್ಥರು

ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯ ಶವಸಂಸ್ಕಾರಕ್ಕೆ, ಆತನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಮುಖ ಆರೋಪಿ ಅಸ್ಲಂ ನಗೋನ್ ಜಿಲ್ಲೆಯ ಧಿಂಗ್‌ ಎಂಬಲ್ಲಿ ಇಂದು ನಸುಕಿನಲ್ಲಿ ಕೆರೆಗೆ ಹಾರಿದ್ದ. ಈಜಲು ಬರದ ಕಾರಣ ಮೃತಪಟ್ಟಿದ್ದ. ಆರೋಪಿಯ ಕುಟುಂಬವಿರುವ ‘ಬೊರ್ಭೆಟಿ’ ಗ್ರಾಮಸ್ಥರು, ಆರೋಪಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಮೃತಪಟ್ಟ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಸಭೆ ನಡೆಸಿರುವ ಗ್ರಾಮಸ್ಥರು, ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಗ್ರಾಮದ […]

ಕಾರ್ಕಳ ಯುವತಿ ಮೇಲಿನ ಅತ್ಯಾಚಾರ ಪ್ರಕರಣ; ಐಜಿಪಿ ಅಮಿತ್ ಸಿಂಗ್ ಪ್ರತಿಕ್ರಿಯೆ, ಪ್ರಕರಣದಲ್ಲಿ‌ನ ಗೊಂದಲದ ಬಗ್ಗೆ ಸ್ಪಷ್ಟೀಕರಣ

ಉಡುಪಿ ಜಿಲ್ಲೆಯ ಕಾರ್ಕಳದ ಹಿಂದೂ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿನ ಕೆಲವು ಗೊಂದಲದ ಬಗ್ಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಕಾರ್ಕಳದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಯುವತಿಯನ್ನು ಕೇವಲ 3 ತಿಂಗಳಲ್ಲಿ ಪುಸಲಾಯಿಸಿದ ಯುವಕರಿಬ್ಬರು, ಕಾರಿನಲ್ಲಿ ಪಾರ್ಟಿ ಮಾಡುವುದಾಗಿ ಕರೆದೊಯ್ದು ಬಿಯರ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಟ್ಟು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ. ಇದರಲ್ಲಿ ಯುವಕ ಅಲ್ತಾಫ್ ಅತ್ಯಾಚಾರ ಮಾಡಿದ್ದು, ಇದು ಗ್ಯಾಂಗ್ ರೇಪ್ ಅಲ್ಲವೆಂದು ಉಡುಪಿ ಪಶ್ಚಿಮ […]

ಕಾಂಗ್ರೆಸ್ ನಾಯಕ ಶಹಜಾದ್ ಅಲಿಯ ಐಶಾರಾಮಿ ಬಂಗಲೆ ನೆಲಸಮಗೊಳಿಸಿದ ಬಿಜೆಪಿ ಸರಕಾರ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಅನೇಕ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಾಯಕ ಶಹಜಾದ್ ಅಲಿ ಅವರ ಬಂಗಲೆಯನ್ನು ಕೆಡವಿದ್ದಾರೆ. ಆಗಸ್ಟ್ 21ರಂದು ಮಧ್ಯಾಹ್ನ 2.45ರ ಸುಮಾರಿಗೆ, ಸ್ಥಳೀಯ ಮುಖಂಡರಾದ ಜಾವೇದ್ ಅಲಿ ಮತ್ತು ಶಹಜಾದ್ ಅಲಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ 100-150 ಸದಸ್ಯರ ಗುಂಪು ಛತ್ತರ್‌ಪುರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರವಾದಿ ಬಗ್ಗೆ ನಿಂದಿಸಿದ ಮಹಾರಾಷ್ಟ್ರದ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ […]