Breaking News :

ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ದುರ್ಮರಣ

ಜಾಫರ್,ಮುಸ್ತಫಾ, ಶೊಹೇಬ್ ಮೃತರು. ಓಮ್ನಿ ಕಾರಿನ ಟಯರ್ ಸ್ಫೋಟಗೊಂಡು ಮುಂದೆ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ನಡೆದಿದೆ. ಮೃತರೆಲ್ಲರೂ ಒಂದೇ ಕುಟುಂಬದರಾಗಿದ್ದು, ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ ಮೃತರನ್ನು ಜಾಫರ್ ಸಾಬ್(60), ಮುಸ್ತಫಾ ಸಾಹೇಬ್ (36) ಶೊಹೇಬ್(06) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಎಸ್‌ಡಿಎಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ […]

ಮನೆಯ ಮೇಲೆ ಕಲ್ಲು ಎಸೆತ; ಐವನ್ ಡಿಸೋಜಾ ಹೇಳಿದ್ದೇನು ಗೊತ್ತಾ?

ತನ್ನ ಮನೆಯ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ. ಕೆಲವರು ನನ್ನ ಮನೆಗೆ ದಾಳಿಯಾಗಿದ್ದು ತಡವಾಯ್ತು ಅಂತಾ ಹೇಳಿದ್ದಾರೆ. ಅಂಥವರಿಗೆ ನಾನು ಶುಭ ಕೋರುತ್ತೇನೆ.ನನ್ನ ಮನೆಗೆ ಕಲ್ಲು ತೂರಬಹುದು ಆದರೆ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂತದ್ದಕ್ಕೆಲ್ಲ ಜಗ್ಗಲ್ಲ ಎಂದು ಹೇಳಿದ್ದಾರೆ. ಭರತ್ ಶೆಟ್ಟಿ ಹಿಂದೆ ರಾಹುಲ್ ಗಾಂಧಿಯವರ ಕಪಾಳಕ್ಕೆ ಬಾರಿಸಬೇಕು ಎಂದಿದ್ದರು. ವೇದವ್ಯಾಸ ಕಾಮತ್ ಜೆರೋಸಾ ಶಾಲೆಯಲ್ಲಿ ಗಲಾಟೆ ಮಾಡಿದ್ರು. ಇದೆಲ್ಲ ಈ ಅವರಿಗೆ ಆ […]

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ

ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶನಿವಾರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ ಎಂದು ಅಸ್ಸಾಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ತಫಾಜುಲ್ ಇಸ್ಲಾಂನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಬಳಿಕ ಶನಿವಾರ ಜಾವ 4 ಗಂಟೆಗೆ ಅಪರಾಧ ಎಸಗಿದ ಸ್ಥಳಕ್ಕೆ ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಅಲ್ಲೇ ಇದ್ದ ಕೆರೆಗೆ […]

ಕಾರ್ಕಳ: ಯುವತಿಯನ್ನು ಅಪಹರಿಸಿ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಕಾರ್ಕಳದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಆರೋಪಿಗಳ‌ ಬಂಧನದ ಕುರಿತು ಕುದ್ದು ಉಡುಪಿ ಜಿಲ್ಲಾ ಎಸ್ಪಿ ಕೆ ಅರುಣ್ ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣದ ಆರೋಪಿಗಳಾದ ಅಲ್ತಾಫ್ ಹಾಗೂ ಇನ್ನೋರ್ವನನ್ನು ಬಂಧಿಸಲಾಗಿದ್ದು ಇವರು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಅಲ್ತಾಫ್ ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯವಾಗಿದ್ದರು. ಅಲ್ತಾಫ್ ಶುಕ್ರವಾರ ಸಂತ್ರಸ್ತೆಗೆ ಕರೆ ಮಾಡಿ ಒಂದು ಕಡೆಗೆ […]

ಪುಲ್ ಟೈಟ್ ಆಗಿ ತರಗತಿಯಲ್ಲಿ‌ ನಿದ್ರೆ ಮಾಡಿದ ಶಿಕ್ಷಕ; ಮಕ್ಕಳು ಕಂಗಾಲು, ವಿಡಿಯೋ ವೀಕ್ಷಿಸಿ.

ಶಿಕ್ಷಕರೊಬ್ಬರು ಫುಲ್ ಟೈಟಾಗಿ ತರಗತಿಗೆ ಬಂದು ನಿದ್ದೆಗೆ ಜಾರಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸ್ಸಾಂನ ಕಾಮಾಖ್ಯ ನಗರದ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಗೆ ಕುಡಿದು ಬಂದಿದ್ದ ಶಿಕ್ಷಕ ಕುರ್ಚಿಯ ಮೇಲೆ ಆರಾಮವಾಗಿ ನಿದ್ರಿಸಿದ್ದಾನೆ. ಆತನನ್ನು ಎಬ್ಬಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚೆತ್ತುಕೊಳ್ಳಲಿಲ್ಲ. ವಿದ್ಯಾರ್ಥಿಗಳು ಅವನ ಸುತ್ತಲೂ ನೆರೆದು ಕೂಗಿ, ತಳ್ಳಾಡಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಸಾಮಾಜಿಕ […]

ಸುಳ್ಯ; ಮಸೀದಿ ವಠಾರಕ್ಕೆ ಬಂದು ಕಿಡಿಗೇಡಿಗಳಿಂದ ಬೆದರಿಕೆ: ಪ್ರಕರಣ ದಾಖಲು

ಸುಳ್ಯ; ಎಲಿಮಲೆ ಜುಮ್ಮಾ ಮಸೀದಿ ವಠಾರಕ್ಕೆ ರಾತ್ರಿ ವೇಳೆ ಇಬ್ಬರು ದುಷ್ಕರ್ಮಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿರುವ ಬಗ್ಗೆ ಮಸೀದಿ ಕಮಿಟಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ. ಎಲಿಮಲೆ ಮಸೀದಿಗೆ ಗುರುವಾರ ರಾತ್ರಿ ಸುಮಾರು 11 ಗಂಟೆಗೆ ಸತೀಶ್ ಗುಡ್ಡನಮನೆ ಮತ್ತು ಇತರರು ಬಂದು ಮಸೀದಿಯ ಆವರಣದಲ್ಲಿ ನಿಂತು ಜೋರಾಗಿ ಬೈದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ ಎರಡು ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ […]

ಪ್ರಾಂಶುಪಾಲರು ಬೈದಿದ್ದಕ್ಕೆ ಕಟ್ಟಡದಿಂದ ಜಿಗಿದ ವಿದ್ಯಾರ್ಥಿನಿ; ಸ್ಥಿತಿ ಗಂಭೀರ

ಪ್ರಾಂಶುಪಾಲರು ಬೈದರೆಂದು ಮನನೊಂದು ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವಿಫಲ ಪ್ರಯತ್ನ ಮಾಡಿದ್ದಾಳೆ. ಈ ಘಟನೆ ಬೆಂಗಳೂರಿ‌ ಬಾಪೂಜಿನಗರದ A1 ಫಹಾದ್‌ ಶಾಲೆಯಲ್ಲಿ ನಡೆದಿದೆ. ಕಟ್ಟಡದಿಂದ ಜಿಗಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಂತ್ರಕ್ಕೆ ಸಿಕ್ಕಿ ಸಂಪೂರ್ಣವಾಗಿ ಕಟ್ ಆಗಿದ್ದ ಕೈಯನ್ನು ಜೋಡಿಸಿದ ವೈದ್ಯರು; ಭಾರೀ ಪ್ರಶಂಸೆಗೆ ಕಾರಣವಾದ ಪ್ರಕರಣ

ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಟ್ ಆಗಿರುವ ಮುಂಗೈಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸರಿಪಡಿಸಲಾಗಿದೆ. ಶಿಕಾರಿಪುರ ತಾಲೂಕಿನ ಮಿಲ್ ಒಂದರಲ್ಲಿ ಕೆಲಸ ಮಾಡುವ ವೇಳೆ ಕಾರ್ಮಿಕನ ಮುಂಗೈ ಸಂಪೂರ್ಣವಾಗಿ ಕಟ್ ಆಗಿದೆ. ಕೂಡಲೇ ತುಂಡಗಿದ್ದ ಮುಂಗೈಯನ್ನು ಐಸ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಆಸ್ಪತ್ರೆಗೆ ಬರಲಾಗಿದೆ. ತಕ್ಷಣಕ್ಕೆ ಕಾರ್ಯ ಪ್ರವೃತ್ತರಾಗಿದ್ದ ವ್ಯಾಸ್ಕ್ಯುಲರ್ ಸರ್ಜನ್ ಡಾ.ಚೇತನ್ ಹಾಗೂ ಮೂಳೆ ರೋಗ ತಜ್ಞ ಡಾ. ಮಂಜುನಾಥ್ ನೇತೃತ್ವದ ತಂಡ ಸತತ ಏಳು ಗಂಟೆ ಶಸ್ತ್ರ ಚಿಕಿತ್ಸೆಯಲ್ಲಿ ಮುಂಗೈನ ಮಾಂಸ […]

156 ಔಷಧಗಳನ್ನು ನಿಷೇಧಿಸಿದ ಕೇಂದ್ರ ಸರಕಾರ; ಜ್ವರ, ಶೀತ ಎಂದು ಮನೆಯಲ್ಲೇ ಈ ಮಾತ್ರೆ ತೆಗೆದುಕೊಳ್ಳುವವರಿಗೆ ಈ ಮಾಹಿತಿ ತಿಳಿದಿರಲಿ

156 ಬಗೆಯ ಔಷಧಗಳನ್ನು ಕೇಂದ್ರ ಸರಕಾರ ಗುರುವಾರ ನಿಷೇಧಿಸಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಔಷಧ ರಾಸಾಯನಿಕಗಳ ಸಂಯೋಜನೆಯ ಫಿಕ್ಸೆಡ್ ಡೋಸ್ ಡ್ರಗ್ಸ್‌ಗಳನ್ನು (ಎಫ್‌ಡಿಸಿ) ಕಾಕ್‌ಟೈಲ್ ಡ್ರಗ್ಸ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ಈ ಮಾತ್ರೆಗಳು ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ. ಮಾನವ ಜೀವ ಕಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಗುಣಗಳುಳ್ಳ ಔಷಧಗಳನ್ನು 1940ರ ಡ್ರಗ್‌ ಮತ್ತು ಕಾಸ್ಮೆಟಿಕ್ ಕಾಯಿದೆ ಸೆ.26ಎ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆ […]

ಹಲ್ಲೆಯಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ

ತಂದೆ ಮಾಡಿದ್ದ ಸಾಲಕ್ಕೆ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಮನನೊಂದು ಹಲ್ಲೆಗೊಳಗಾದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಸ್ವೀಪನ್‌ ತಂದೆ ಜೋಸೆಫ್‌ ಅವರು ಪರಶುರಾಮ್ ಎಂಬುವರ ಬಳಿ 2 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದುಕೊಂಡು ತೀರಿಸಲಾಗದೇ ಜೋಸೆಫ್‌ ಮನೆ ಬಿಟ್ಟು ಹೊರ ರಾಜ್ಯಕ್ಕೆ ತೆರಳಿದ್ದರು. ಸಾಲ ವಸೂಲಿಗಾಗಿ ಸ್ಟೀಪನ್ ಗೆ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಮನನೊಂದ ಸ್ಟೀಪನ್ ಮನೆಗೆ […]