Breaking News :

ಉಡುಪಿ: ಮಹಿಳೆಯ ಬರ್ಬರ ಕೊಲೆ, ಪತಿಯೇ ಕೃತ್ಯ ನಡೆಸಿರುವ ಶಂಕೆ

ಉಡುಪಿ;8 ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೋರ್ವರು ದಾರುಣವಾಗಿ ಕೊಲೆಗೀಡಾದ ಘಟನೆ ಸಾಲಿಗ್ರಾಮದಲ್ಲಿ ಸಂಭವಿಸಿದೆ. ಮೂಲತಃ ಕೊಪ್ಪಳದ ನಿವಾಸಿ ಜಯಶ್ರೀ ಹತ್ಯೆಗೀಡಾದವರು. ಜಯಶ್ರೀಗೆ ಗುಂಡ್ಮಿ ಗ್ರಾಮದ ಕಿರಣ್ ಉಪಾಧ್ಯ ಅವರೊಂದಿಗೆ 8 ತಿಂಗಳ ಹಿಂದೆ ವಿವಾಹವಾಗಿತ್ತು. ವಿವಾಹದ ನಂತರ ಇವರಿಬ್ಬರು ಕಾರ್ಕಡದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜಯಶ್ರಿಗೆ ಕೌಟುಂಬಿಕ ಕಲಹದಿಂದ ಪತಿ ಕಿರಣ್ ಹತ್ಯೆ ನಡೆಸಿದ್ದಾನೆ ಎನ್ನಲಾಗಿದ್ದು, ಕೋಟ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ರಾಜ್ಯಪಾಲರನ್ನು ವಾಪಾಸ್ಸು ಕರೆಸಿಕೊಳ್ಳುವಂತೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಷ್ಟ್ರಪತಿಗಳಿಗೆ ಒಮ್ಮತದ ಒತ್ತಾಯ

ರಾಜ್ಯ ಸರ್ಕಾರದ ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸುತ್ತಿರುವ ರಾಜ್ಯಪಾಲ ಗೆಹ್ಲೂಟ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರಪತಿ ಬಳಿಗೆ ನಿಯೋಗ ಕೊಂಡೊಯ್ಯಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಗ್ರಹಿಸಿದೆ.  ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿ ಬಳಿಗೆ ನಿಯೋಗ ಒಯ್ಯಬೇಕು ಎಂಬ ಬಗ್ಗೆ ಹೈಕಮಾಂಡ್ ಜತೆ ಶುಕ್ರವಾರ ಚರ್ಚಿಸುವೆ. ಹೈಕಮಾಂಡ್ ಸಲಹೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಪ್ರಾಸಿಕ್ಯೂಷನ್ ವಿಚಾರದಲ್ಲಿ ವಿವೇಚನಾರಹಿತ ನಿರ್ಧಾರ ಹಾಗೂ ತಾರತಮ್ಯ ಧೋರಣೆ ಅನುಸರಿಸಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳ ಬಳಿಗೆ ನಿಯೋಗ […]

ವಾಲ್ಮಿಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ; ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಅಂಶಗಳು ಉಲ್ಲೇಖ

ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಶಿವಮೊಗ್ಗ ಕೋರ್ಟ್ ಗೆ 300ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ವರದಿಯಲ್ಲಿ ಮಹತ್ವದ ಅಂಶಗಳು ಉಲ್ಲೇಖಿಸಲಾಗಿದೆ. ಚಂದ್ರಶೇಖರ್ ಅವರು ಒತ್ತಡದಿಂದ ಮತ್ತು ಭಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆಗೆ ನಿಗಮದ ಎಂ.ಡಿ. ಪದ್ಮನಾಭನ್ ಮತ್ತು ಪರಶುರಾಮ್ ಕಾರಣ ಎಂದು ಚಾರ್ಜ್ ಶೀಟ್ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಚಂದ್ರಶೇಖರ್ ಅವರು ಕೂಡ ನಿಗಮದ ಹಗರಣದಲ್ಲಿ ಹಣವನ್ನು ಪಡೆದಿದ್ದರು […]

ಸರಕಾರ ಕಳುಹಿಸಿದ 6 ಮಸೂದೆಗಳನ್ನು ರಿಜೆಕ್ಟ್ ಮಾಡಿದ ರಾಜ್ಯಪಾಲರು!

ಮಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ ಆರು ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವ ಕ್ರಮಗಳು) ವಿಧೇ ಯಕ, ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ (ತಿದ್ದುಪಡಿ) ವಿಧೇಯಕಗಳನ್ನು ಎರಡನೇ ಬಾರಿಗೆ ಹಿಂದಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ […]

ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟು ರೇಣುಕಾಸ್ವಾಮಿ ಕೊಲೆ; FSL ವರದಿಯಲ್ಲಿ ಸ್ಪೋಟಕ ಮಾಹಿತಿ ಬಯಲು

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ & ಗ್ಯಾಂಗ್ ಈಗಾಗಲೇ ಜೈಲಿನಲ್ಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಪೋಟಕ‌ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು‌ ಬಂದಿದೆ. ಈ ಕುರಿತು FSL ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ರೇಣುಕಾಸ್ವಾಮಿಗೆ ಮೆಗ್ಗಾರ್ ಯಂತ್ರದ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ನಂತರ ಮೆಗ್ಗಾರ್ ಯಂತ್ರದ ಶಾಕ್ ಕೊಟ್ಟು […]

ಮಂತ್ರಿ ಸುರೇಶ್ ಗೋಪಿ ಕೊಟ್ಟ ಪತ್ರ ಬಿಸಾಕಿದ ಅಮಿತ್ ಶಾ!: ಸಿನಿಮಕ್ಕಾಗಿ ಮಂತ್ರಿಗಿರಿ ಬಿಡಲು ಸಿದ್ಧ ಎಂದ ಸುರೇಶ್ ಗೋಪಿ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ನಟನೆ ನನ್ನ ಜೀವ ಮತ್ತು ಸಿನಿಮಾ ಮಾಡುವುದನ್ನು ನಿಲ್ಲಿಸಿದರೆ ಬದುಕಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. ನಟ-ರಾಜಕಾರಣಿಯಾಗಿರುವ ಇವರು ಕೇರಳದ ಮೊದಲ ಬಿಜೆಪಿ ಸಂಸದರಾಗಿದ್ದಾರೆ. ಅವರು ತ್ರಿಶೂರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಗೋಪಿ ಪ್ರವಾಸೋದ್ಯಮ ರಾಜ್ಯ ಸಚಿವರೂ ಆಗಿದ್ದಾರೆ. ತಿರುವನಂತಪುರಂನಲ್ಲಿರುವ ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಪಿ, “ಚಲನಚಿತ್ರ ನನ್ನ ಪ್ಯಾಶನ್. ಚಿತ್ರವಿಲ್ಲದಿದ್ದರೆ ನಾನು ಸಾಯುತ್ತೇನೆ. […]

ಸರಕಾರಿ ಬಸ್ ಹರಿದು ಬಾಲಕ ಮೃತ್ಯು

ಸರ್ಕಾರಿ ಬಸ್ ಹರಿದು ಬಾಲಕ ಮೃತಪಟ್ಟಿರುವ ದಾರುಣ ಘಟನೆ ಬೀದರ್‌ ಜಿಲ್ಲೆಯ ಹುಲಸೂರು ತಾಲೂಕಿನ ಮಿರಖಲ್ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ಗ್ರಾಮದ ನಿವಾಸಿ ಗಣೇಶ್ ಪೇಟಕಾರ್ (6) ಸಾವನಪ್ಪಿದ ದುರ್ದೈವಿ ಅಜ್ಜಿಯ ಮನೆಗೆಂದು ಮಿರಖಲ್ ಗ್ರಾಮಕ್ಕೆ ಬಂದಿದ್ದ ಬಾಲಕ ಬಸವಕಲ್ಯಾಣದಿಂದ ಮಿರಖಲ್ ಮಾರ್ಗವಾಗಿ ನಿಲಂಗಾಕ್ಕೆ ತೆರಳುವಾಗ ಸಾರಿಗೆ ಬಸ್ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ. ಬಾಲಕನನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ […]

ಕಾಸರಗೋಡು; ಅಪಘಾತದಲ್ಲಿ ಯುವಕ ಮೃತ್ಯು

ಅಹಮ್ಮದ್ ಕಬೀರ್ ಮೃತ ಯುವಕ ಕಾಸರಗೋಡು;ಬೈಕ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಚೆರ್ಕಳ ಕೆ.ಕೆ ಪುರದಲ್ಲಿ ನಡೆದಿದೆ. ಕುಂಬಳೆ ಮೊಗ್ರಾಲ್ ಖುತುಬಿ ನಗರದ ಅಹಮ್ಮದ್ ಕಬೀರ್ (30)ಮೃತಪಟ್ಟವರು. ಸಂಬಂಧಿಕರೊಬ್ಬರ ವಿವಾಹ ಆಮಂತ್ರಣಕ್ಕೆ ತೆರಳಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ ಗಂಭೀರ ಗಾಯಗೊಂಡ ಕಬೀರ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿತ್ತು. ಮಂಗಳೂರಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಈ ಕುರಿತು ವಿದ್ಯಾನಗರ ಠಾಣಾ ಪೊಲೀಸರು […]

ಮಂಗಳೂರು; ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ನಡುವೆ ಜಗಳ; ದೂರು, ಪ್ರತಿದೂರು

ಮಂಗಳೂರು:ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಮಧ್ಯೆ ಗುರುವಾರ ಹೊಡೆದಾಟ ನಡೆದಿದ್ದು, ಈ ಕುರಿತುಬಂದರು ಠಾಣೆಗೆ ದೂರು ನೀಡಲಾಗಿದೆ. ದ.ಕ.ಜಿಲ್ಲಾ ಬೀದಿ ವ್ಯಾಪಾರಿಗಳ ಶ್ರೇಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತಿತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ ಮತ್ತು ಉಪಾಧ್ಯಕ್ಷ ರಹ್ಮಾನ್ ಅಡ್ಯಾರ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ನವಾಝ್ ಕಣ್ಣೂರು, ಆನಂದ ಮತ್ತಿತರರ ವಿರುದ್ಧ […]

ಬೆಳ್ತಂಗಡಿ; ಪೊಲೀಸರಿಗೆ ಸವಾಲಾದ ಬೆಳಾಲು ಗ್ರಾಮದಲ್ಲಿ ನಡೆದ ನಿವೃತ್ತ ಶಿಕ್ಷಕನ ಕೊಲೆ ಕೇಸ್

ಬೆಳ್ತಂಗಡಿಯ ಬೆಳಾಲು ಗ್ರಾಮದ ಎಸ್‌.ಪಿ.ಬಿ. ಕೌಂಪೌಂಡ್‌ ನಿವಾಸಿ ನಿವೃತ್ತ ಶಾಲಾ ಮುಖ್ಯೋ ಪಾಧ್ಯಾಯ ಎಸ್‌.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ ಕೊಲೆ ಪ್ರಕರಣ ಪೊಲೀಸರಿಗೆ ತಲೆನೋವಾಗಿದ್ದು, ಈವರೆಗೆ ಆರೋಪಿಗಳ ಬಂಧನ ನಡೆದಿಲ್ಲ. ಬಾಲಕೃಷ್ಣ ಅವರು ಮನೆಯಲ್ಲಿ ಒಬ್ಬರೇ ಇದ್ದು, ಕೃತ್ಯ ನಡೆಸಿದ ಬಳಿಕ ಮನೆಯಿಂದ ಯಾವುದೇ ಸೊತ್ತುಗಳು ಕಳ್ಳತನ ನಡೆದಿಲ್ಲ. ಮೃತರ ಕೈಯಲ್ಲಿದ್ದ ಚಿನ್ನದ ಉಂಗುರ ಹಾಗೆಯೇ ಇದೆ ಎಂಬುದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ. ಇದರಿಂದ ದರೋಡೆ ಉದ್ದೇಶದಿಂದ ಕೊಲೆ ನಡೆದಿಲ್ಲ ಎಂದು ಅಂದಾಜಿಸಲಾಗಿದೆ. ಯಾವುದೋ ಮಾರಾಕಾಸ್ತ್ರದಿಂದ ಕೊಲೆ […]