ಭದ್ರಾವತಿ; ಶಾಸಕ ಸಂಗಮೇಶ್ ಪುತ್ರನ ಹತ್ಯೆಗೆ ಸಂಚು; ಪ್ರಕರಣ ದಾಖಲು

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವಣ್ಣ ಅವರ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿರುವುದು ಬಯಲಾಗಿದೆ. ಬಸವಣ್ಣ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರ ಎಫ್‌ಐಆರ್ ನಲ್ಲಿ ದಾಖಲಾಗಿದೆ. ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಮೇರೆಗೆ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಟ್ ಪಟ್ ನಗರದ ನಿವಾಸಿ ಮುಬಾರಕ್ ಮುಬ್ಬು ಎಂಬಾತ ಕಳೆದ 17ನೇ ತಾರಿಕಿನಂದು ವ್ಯಕ್ತಿಯೋರ್ವನ ಬಳಿ ಬಂದು ಬಸವಣ್ಣ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಬಳಿಕ […]
ಮುಸ್ಲಿಂ ವಿವಾಹ, ವಿಚ್ಛೇದನದ ನೋಂದಣಿ ಕಡ್ಡಾಯ!; ಮಸೂದೆಗೆ ಸಂಪುಟ ಒಪ್ಪಿಗೆ

ಮುಸ್ಲಿಂ ವಿವಾಹ ಹಾಗೂ ವಿಚ್ಛೇದನದ ಕಡ್ಡಾಯ ನೋಂದಾವಣಿ ಮಸೂದೆಗೆ ಅಸ್ಸಾಂ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಕಾಯ್ದೆ ಜಾರಿಯಾದ ಬಳಿಕ ಮುಸ್ಲಿಂ ವಿವಾಹ ಮತ್ತು ವಿಚ್ಛೇದವನ್ನು ನೋಂದಾಯಿಸಿಕೊಳ್ಳುವ ಖಾಝಿಗಳ ಅಧಿಕಾರ ರದ್ದಾಗಲಿದೆ. ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ಮಸೂದೆ-2024ನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ಇನ್ನು ಮುಸ್ಲಿಂ ವಿವಾಹಗಳನ್ನು ಸರ್ಕಾರ ನೋಂದಣಿ ಮಾಡಿಕೊಳ್ಳಲಿದೆ ಹಾಗೂ ಈ ಹಿಂದಿನಂತೆ ಖಾಝಿಗಳು ಮಾಡುವುದಿಲ್ಲ ಮತ್ತು ಈ ನೋಂದಣಿ ಬಾಲ್ಯವಿವಾಹವನ್ನು ಕಾನೂನುಬಾಹಿರ ಎಂದು ಪರಿಗಣಿಸಲಿದೆ ಎಂದು […]
ಬೆಳ್ತಂಗಡಿ; ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ; ಅವಿವಾಹಿತ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿಟ್ಟಡೆ ಗ್ರಾಮದಲ್ಲಿ ನಡೆದಿದೆ. ದಿ| ಎಲ್ಲಪ್ಪ ಪೂಜಾರಿ ಪುತ್ರ ಸತೀಶ್ ಪೂಜಾರಿ (36) ಅವರು ಆ. 21ರಂದು ಬೆಳಗ್ಗೆ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಜೈ ಶಾ: ಅಮಿತ್ ಶಾ ಪುತ್ರನಿಗೆ ನೀಡುತ್ತಾ 16 ರಾಷ್ಟ್ರಗಳು ಬೆಂಬಲ?

ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದಕ್ಕೆ 16 ರಾಷ್ಟ್ರಗಳ ಒಪ್ಪಿಗೆ ಬೇಕಾಗಿದೆ. ಜೈಶಾಗೆ ಭಾರತ, ಆಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ , ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ದೇಶಗಳು ಬೆಂಬಲ ನೀಡಬೇಕಾಗಿದೆ. ಈ 16 ರಾಷ್ಟ್ರಗಳು ಕೂಡ ಮತದಾನದ ಅಧಿಕಾರ ಹೊಂದಿವೆ. ಮುಂದಿನ ನವೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ.ಅವರ ಜಾಗಕ್ಕೆ ಅಮಿತ್ ಶಾ […]
ಸಿಎಂ ಬದಲಾವಣೆ ವಿಚಾರ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಮೂಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿದೆ.ಈ ಮಧ್ಯೆ ಕಾಂಗ್ರೆಸ್ ಪಕ್ಷವು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ ಪರಮೇಶ್ವರ್, ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ.ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್ ನಿಲ್ಲಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಬೆಂಬಲ ನಿಲ್ಲುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಹೈಕಮಾಂಡ್ ಮಾಹಿತಿ ನೀಡಲಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೆ […]
ಮಂಗಳೂರು; ಐವನ್ ಡಿಸೋಜಾ ಮನೆಗೆ ಕಲ್ಲೆಸೆತ

ಮಂಗಳೂರು: ವಿಧಾನಪರಿಷತ್ ಶಾಸಕ ಐವನ್ ಡಿಸೋಜಾರ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಐವನ್ ಡಿಸೋಜಾ ಅವರ ವೆಲೆನ್ಸಿಯಾದಲ್ಲಿದ್ದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟದಿಂದ ಅವರ ಮನೆಯ ಕಿಟಕಿಯ ಗಾಜಿಗೆ ಹಾನಿಯಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮದರಸಾಗಳ ಅನುದಾನ ಸ್ಥಗಿತಕ್ಕೆ ಮುಂದಾದ ಸರಕಾರ!

ಮುಸ್ಲಿಮೇತರರಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವ ಮದರಸಗಳಿಗೆ ಸರಕಾರ ಅನುದಾನಗಳನ್ನು ನಿಲ್ಲಿಸಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಧಾರ್ಮಿಕ ಸಮುದಾಯಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ಇತರ ಧರ್ಮಗಳ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವುದನ್ನು ಆ.16ರಂದು ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ನಿಷೇಧಿಸಿತ್ತು. ನಿಷೇಧ ಕ್ರಮವು ಸಂವಿಧಾನದ ವಿಧಿ 28(3)ಕ್ಕೆ ಅನುಗುಣವಾಗಿದೆ. ಸರಕಾರದಿಂದ ಮಾನ್ಯತೆಯನ್ನು ಹೊಂದಿರುವ ಅಥವಾ ಸರಕಾರಿ ಅನುದಾನವನ್ನು ಪಡೆಯುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವ್ಯಕ್ತಿಯು ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುವ ಯಾವುದೇ […]
ಪತಿಯಿಂದ ವೀರ್ಯ ಸಂಗ್ರಹಿಸಲು ಅನುಮತಿಸಿದ ಕೇರಳ ಹೈಕೋರ್ಟ್; ಏನಿದು ಅಪರೂಪದ ಪ್ರಕರಣ ಗೊತ್ತಾ?

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಪತಿಯಿಂದ ವೀರ್ಯವನ್ನು ಸಂಗ್ರಹಿಸಲು ಕೇರಳ ಹೈಕೋರ್ಟ್ ಅನುಮತಿಸಿದೆ. ಮಕ್ಕಳಿಲ್ಲದ ಕೇರಳದ ಮಹಿಳೆಯೊಬ್ಬರು ತನ್ನ ಪತಿಯ ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದರು. ತಮ್ಮ ಪತಿ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇದುವರೆಗೂ ಮಕ್ಕಳಾಗಿಲ್ಲ . ಆದ್ದರಿಂದ ಭವಿಷ್ಯದಲ್ಲಿ ತನಗೆ ಮಗುವಾಗಲು ಗಂಡನ ವೀರ್ಯವನ್ನು ಸಂರಕ್ಷಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಗಂಡನ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಲಿಖಿತ ಒಪ್ಪಿಗೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ವಿಳಂಬವಾದರೆ ಪರಿಸ್ಥಿತಿ ಬಿಗಡಾಯಿಸಿ ಪ್ರಾಣಾಪಾಯ […]
ಮಂಗಳೂರು; ನವಜಾತ ಶಿಶುವಿಗೆ ಅನ್ಯಾಯ; ಕುಟುಂಬದ ಆರೋಪ, ಡಿಸಿಗೆ ದೂರು

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಅನ್ಯಾಯವಾಗಿದೆ ಎಂದು ಮಗುವಿನ ಪೋಷಕರು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಪಾಣೆಮಂಗಳೂರಿನ ನಿವಾಸಿ ಹಾಗೂ ಸಂತ್ರಸ್ತೆ ಭವ್ಯ ಎಂಬವರು ತಮಗೆ ಅನ್ಯಾಯ ಆಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದಲ್ಲದೆ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ತನಿಖೆಗೆ ಆಗ್ರಹಿಸಲಾಗಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಭವ್ಯ ಅವರು ತಮ್ಮ ಎರಡನೆ ಹೆರಿಗೆಗಾಗಿ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಆ. 17ರಂದು ತೆರಳಿದ್ದರು. […]
ಪಾಟ್ನಾ; ಪ್ರತಿಭಟನೆಯ ವೇಳೆ ಐಎಎಸ್ ಅಧಿಕಾರಿಗೆ ಲಾಠಿಯಿಂದ ಹಲ್ಲೆ ನಡೆಸಿದ ಪೊಲೀಸರು; ವಿಡಿಯೋ ವೀಕ್ಷಿಸಿ..

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿ ವಿಚಾರದಲ್ಲಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಬಿಹಾರದಲ್ಲಿ ಬೆಳಗ್ಗೆಯಿಂದಲೇ ಭಾರತ್ ಬಂದ್ ನಡೆಯುತ್ತಿದ್ದು, ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಗದ್ದಲ ಸೃಷ್ಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಲಾಠಿ ಚಾರ್ಜ್ ಸಂದರ್ಭದಲ್ಲಿ, ಪಾಟ್ನಾ ಸದರ್ ಎಸ್‌ಡಿಎಂ ಮೇಲೆ ಪೊಲೀಸರು ಆಕಸ್ಮಿಕವಾಗಿ ಲಾಠಿಯಿಂದ ಹೊಡೆದಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. […]