ಹಾವು ಕಡಿದು ಬಾಣಂತಿ ಮೃತ್ಯು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮೇವು ತರಲು ಹೋಗಿದ್ದ ವೇಳೆ ಹಾವು ಕಡಿದು ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಸಾಗರ ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಂಜಿತಾ (22) ಎಂದು ಗುರುತಿಸಲಾಗಿದೆ. ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವೊಂದು ಮಹಿಳೆಗೆ ಕಡಿದಿದೆ ಎನ್ನಲಾಗಿದೆ. ಹಾವು ಕಡಿದ ಕೆಲಹೊತ್ತಿನ ಬಳಿಕ ಹಾವು ಕಚ್ಚಿರುವುದು ಅವರ ಅರಿವಿಗೆ ಬಂದಿದೆ. ಕುಟುಂಬಸ್ಥರು ನೋಡಿದಾಗ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿ ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ […]
ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಕಾಲೇಜು ಕ್ಯಾಂಪಸ್‌ನಲ್ಲಿ ಹಿಜಾಬ್, ಬುರ್ಖಾ, ಟೋಪಿ ಮತ್ತು ನಖಾಬ್ ನಿಷೇಧಿಸಿ ಹೊರಡಿಸಿದ್ದ ಮುಂಬೈ ಕಾಲೇಜೊಂದರ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿ ನಡೆಸುತ್ತಿರುವ ಎನ್.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿಗೆ ನೋಟಿಸ್ ಜಾರಿ ಮಾಡಿ, ನವೆಂಬರ್ 18 ರೊಳಗೆ ಅದರ ಪ್ರತಿಕ್ರಿಯೆಯನ್ನು ಕೇಳಿದೆ. ದೇಶದಲ್ಲಿ ಅನೇಕ ಧರ್ಮಗಳಿವೆ ಎಂದು ನಿಮಗೆ ಈಗ ಗೊತ್ತಾಗಿರುವುದು ದುರದೃಷ್ಟಕರ. ವಿದ್ಯಾರ್ಥಿಗಳ ಧಾರ್ಮಿಕ […]
ವಕ್ಫ್ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡ ಕೇಂದ್ರ; ಜಂಟಿ ಸಂಸದೀಯ ಸಮಿತಿ ರಚನೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಗುರುವಾರ ಮಂಡಿಸಿದ್ದು, ಪ್ರತಿಪಕ್ಷಗಳು ಮಸೂದೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಮಸೂದೆಯು ಮಸೀದಿಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಮಸೂದೆಯು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ, ಇದು ಸಂವಿಧಾನದ ಮೇಲಿನ ದಾಳಿ ಎಂದು ವಿರೋಧ ಪಕ್ಷಗಳು ಕಟುವಾಗಿ ಆರೋಪಿಸಿವೆ. ಮಸೂದೆಯನ್ನು ಈಗ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಪರಿಶೀಲನೆಗೆ ಒಪ್ಪಿಸಲಾಗಿದೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯ ಮಂಡನೆಗೆ ಅವಕಾಶ […]
ಉಳ್ಳಾಲ ಮೂಲದ ಮದ್ರಸಾ ಶಿಕ್ಷಕ ಹಠಾತ್ ನಿಧನ

ಬಳ್ಳಾರಿ; ಉಳ್ಳಾಲ ಮೂಲದ ಮದ್ರಸಾ ಶಿಕ್ಷಕರೋರ್ವರು ಬಳ್ಳಾರಿಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ ಮೃತಪಟ್ಟ ಮದ್ರಸಾ ಶಿಕ್ಷಕರನ್ನು ಝೈನುದ್ದೀನ್ ಸಹದಿ ಎಂದು ಗುರುತಿಸಲಾಗಿದೆ. ಶುಕ್ರವಾರದ ನಮಾಝ್ ಗೆ ಸಿದ್ಧತೆ ನಡೆಸುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಮಂಗಳೂರಿನಿಂದ ಬಳ್ಳಾರಿಗೆ ಹೋಗಿ ಮದ್ರಸಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವಯನಾಡಿನಲ್ಲಿ ಮತ್ತೆ ಕೇಳಿಸಿದ ಭಾರೀ ಶಬ್ಧ; ಶಾಲೆಗಳಿಗೆ ರಜೆ ಘೋಷಣೆ, ಆತಂಕದಲ್ಲಿ ಜನ

ವಯನಾಡ್‌ನ ಎಡಕ್ಕಲ್‌ನಲ್ಲಿ ಭಾರೀ ಶಬ್ಧ ಕೇಳಿ ಬಂದಿದ್ದು, ಭೂಕಂಪದ ಸಾಧ್ಯತೆಯಿರುವುದರಿಂದ ಜನರನ್ನು ಸ್ಥಳಾಂತರ ಮಾಡಿರುವ ಬಗ್ಗೆ ವರದಿಯಾಗಿದೆ. ವಯನಾಡಿನ ಕುರಿಚಿಯರ್ಮಲ, ಪಿನಂಗೋಡ್, ಮೋರಿಕಪ್ಪ್, ಅಂಪುಕುತಿಮ್ಮಲ, ಎಡಕ್ಕಲ್ ಗುಹೆ ಪ್ರದೇಶಗಳಲ್ಲಿ ವಾಸಿಸುತ್ತಿರುವರನ್ನು ಸ್ಥಳಾಂತರ ಮಾಡಬೇಕೆಂದು ಸೂಚಿಸಲಾಗಿದೆ. ಎಡಕ್ಕಲ್ ಮತ್ತು ನೆನ್ಮೇನಿಯಲ್ಲಿ ಭಾರಿ ಶಬ್ದ ಕೇಳಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆ ಈ ಪ್ರದೇಶದಲ್ಲಿ ಶಾಲೆಗಳನ್ನು ಈ ಮುಚ್ಚಲಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ […]
BREAKING ಎರಡು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ; ಹೃದಯವಿದ್ರಾಹಕ ಘಟನೆ ವರದಿ

ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಹಕ ಘಟನೆ ಹೊಸನಗರದಲ್ಲಿ ನಡೆದಿದೆ. ಚಂಪಕಾಪುರ ನಿವಾಸಿ ರಾಜೇಶ್ ಎಂಬವರ ಪತ್ನಿ ವಾಣಿ(32) ಇಬ್ಬರು ಮಕ್ಕಳಾದ ಸಮರ್ಥ(12), ಸಂಪದ (6) ಅವರನ್ನು ಬಾವಿಗೆ ಎಸೆದು ತಾನು ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಠಾಣೆ ಪಿಎಸ್‌ಐ ರಮೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಾವಿಯಿಂದ ತೆಗೆದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಮಕ್ಕಳು; ಬಾಂಬ್ ಸ್ಪೋಟಗೊಂಡು ಐವರಿಗೆ ಗಾಯ

ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಲು ಪ್ರಯತ್ನಿಸುತ್ತಿದ್ದಾಗ ಸ್ಫೋಟಗೊಂಡು ಐವರು ಮಕ್ಕಳು ಗಾಯಗೊಂಡಿರುವ ಘಟನೆ ಮುಜಾಫರ್ಪುರದಲ್ಲಿ ನಡೆದಿದೆ. ಲವ್ ಕುಮಾರ್ (8), ಕುಶ್ ಕುಮಾರ್(5), ಜೈದೀಪ್ ಕುಮಾರ್, ಅಭಿಯಾಂಶು ಕುಮಾರ್ ಮತ್ತು ಗುಡ್ಡು ಕುಮಾರ್ ಗಾಯಾಳುಗಳು ಎಂದು ಗುರುತಿಸಲಾಗಿದೆ. ಗೈಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬೋರಿಡಿಹ್ ಪಂಚಾಯತ್‌ನ ಮುನ್ನಿ ಕಲ್ಯಾಣ ಗ್ರಾಮದಲ್ಲಿ ಕೆಲವು ಮಕ್ಕಳು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡಿ ಬಾಂಬ್ ತಯಾರಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಐವರು ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ […]
ಮದುವೆ ದಿನ ಹೊಡೆದಾಡಿಕೊಂಡು ವಧು-ವರ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆ ವರದಿ ಬಯಲು, ಸಾವಿನ ಬಗ್ಗೆ ದಟ್ಟವಾದ ಸಂಶಯ

ವಧು- ವರ ಮದುವೆ ದಿನ ಹೊಡೆದಾಡಿಕೊಂಡು ಮೃತಪಟ್ಟ ಆತಂಕಕಾರಿ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿತ್ತು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯ ನವೀನ್ (29) ಹಾಗೂ ಲಿಖಿತಶ್ರೀ (20) ದುರಂತ ಅಂತ್ಯ ಕಂಡ ಜೋಡಿಯಾಗಿದ್ದಾರೆ. ಜೋಡಿ ಮದುವೆಯಾದ ದಿನವೇ ರೂಮ್‌ಗೆ ಹೋಗುತ್ತಿದ್ದಂತೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆ ಕೂಡ ಶಂಕೆ ಮೂಡಿತ್ತು. ಈಗ ನವೀನ್ (29) ಹಾಗೂ ಲಿಖಿತಶ್ರೀ (20) ಮರಣೋತ್ತರ ಪರೀಕ್ಷೆ ವರದಿ ಕುಟುಂಬಸ್ಥರ ಹಾಗೂ ಪೊಲೀಸರ […]
ವಯನಾಡು ದುರಂತ ಸಂತ್ರಸ್ತರಿಗೆ ಜೈಲಿನಿಂದಲೇ 15 ಕೋಟಿ ದೇಣಿಗೆ ನೀಡಲು ಮುಂದಾದ ವಂಚನೆ ಪ್ರಕರಣದ ಆರೋಪಿ

ವಯನಾಡು ಭೂ ಕುಸಿತ ಸಂತ್ರಸ್ತರಿಗೆ ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಂಚನೆ ಪ್ರಕರಣದ ಆರೋಪಿಯೋರ್ವ 15 ಕೋಟಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಈಗ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ವಯನಾಡು ದುರಂತದಿಂದ ದುಃಖಿತನಾಗಿದ್ದು, ಅಗತ್ಯವಿದ್ದಲ್ಲಿ ಸೂಕ್ತ ನೆರವು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರ ಬರೆದಿರುವುದನ್ನು ವಕೀಲ ಅನಂತ್ ಮಲಿಕ್ ಕೂಡ ಖಚಿತಪಡಿಸಿದ್ದಾರೆ. ನನ್ನ ಫೌಂಡೇಶನ್‌ನಿಂದ 15 ಕೋಟಿ ದೇಣಿಗೆಯನ್ನು […]
ಕುಮಾರಸ್ವಾಮಿ ವಿರುದ್ಧ ದೂರು ನೀಡಿ 10 ತಿಂಗಳಾದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದ ರಾಜ್ಯಪಾಲರು; ವರದಿ

ಗಣಿ ಅಕ್ರಮ ಪ್ರಕರಣದಲ್ಲಿ 2014ರಿಂದ ವಿಚಾರಣೆ ನಡೆಸಿದ ಲೋಕಾಯುಕ್ತದ ಎಸ್‌ಐಟಿಯು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಾಜ್ಯಪಾಲರಿಗೆ 10 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದೆ, ಆದರೆ ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ವರದಿಯಾಗಿದೆ. ದಿನಾಂಕ 10/9/2014ರ ಕ್ರೈಮ್ ನಂ. 16/14 ಈ ಕೇಸಿನಲ್ಲಿ ಲೋಕಾಯುಕ್ತದ ಅಡಿಯಲ್ಲಿ ಗಣಿ ಅಕ್ರಮಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಕಳುಹಿಸಲಾಗಿದೆ. 21/11/2023ರಂದು ಲೋಕಾಯುಕ್ತದ ಎಡಿಜಿಪಿ ಚಂದ್ರಶೇಖರ್ ಅವರೇ ಖುದ್ದಾಗಿ ಪತ್ರವನ್ನು ಕಳುಹಿಸಿದ್ದಾರೆ. ಸಾಯಿ ವೆಂಕಟೇಶ್ವರ […]