ಮಂಗಳೂರು; ನಕಲಿ ಉತ್ಪನ್ನ ಮಾರಾಟ; ಎಫ್ ಐಆರ್ ದಾಖಲು

ಮಂಗಳೂರು ನಗರದ ಬೀಬಿ ಅಲಾಬಿ ರಸ್ತೆಯಲ್ಲಿರುವ ಲಕ್ಷ್ಮಣ್ ಹರಿ ಕಟ್ಟಡದಲ್ಲಿರುವ ಅಂಗಡಿಯೊಂದರಲ್ಲಿ ಗೋದ್ರೆಜ್ ಕಂಪೆನಿ ಹೆಸರಿನ ನಕಲಿ ಹಾಗೂ ದೋಷಪೂರಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕೇಸ್ ದಾಖಲಾಗಿದೆ. ಕಂಪೆನಿಯ ಅಧಿಕೃತ ಪ್ರತಿನಿಧಿಗಳು ಆ.1ರಂದು ಮಂಗಳೂರಿಗೆ ಬಂದು ಮಾಹಿತಿ ಸಂಗ್ರಹಿಸುವಾಗ ಗೋದ್ರೆಜ್ ಕಂಪೆನಿಯ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಅಂಗಡಿಯ ಮಾಲಕರ ವಿರುದ್ಧ ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಇದೀಗ ಪ್ರಕರಣ ದಾಖಲಾಗಿದೆ.
ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿದ ದುಷ್ಕರ್ಮಿ; ಮಹಿಳೆಯ ಸ್ಥಿತಿ ಗಂಭೀರ, ಆರೋಪಿಗೆ ಧರ್ಮದೇಟು

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿರುವ ಆಘಾತಕಾರಿ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಹಕಾರ ನಗರದಲ್ಲಿ ನಡೆದಿದೆ. ಸಹಕಾರ ನಗರದಲ್ಲಿ ಸುನಿತಾ (38) ಎಂಬ ಮಹಿಳೆ ಗುರುವಾರ ಸಂಜೆ ನಡೆದುಕೊಂಡು ಹೋಗುವಾಗ ದುಷ್ಕರ್ಮಿಯೋರ್ವ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಬಳಿಕ ಕಲ್ಲಿನಿಂದ ಅವರ ತಲೆಯನ್ನು ಜಜ್ಜಿದ್ದಾನೆ. ಇದರಿಂದಾಗಿ ಮಹಿಳೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ದುಷ್ಕರ್ಮಿಗೆ ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಡಿಗೇಹಳ್ಳಿ […]
ಕರ್ನಾಟಕಕ್ಕೆ ಬಂದ ಆಂಧ್ರ ಡಿಸಿಎಂ ಕಾರಿನಲ್ಲಿದ್ದ ಬೃಹತ್ ಹೆಬ್ಬಾವು!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬೆಂಗಳೂರಿಗೆ ಬಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಸಭೆ ನಡೆಸಿದ್ದ ಪವನ್ ಕಲ್ಯಾಣ ಆನೆಗಳ ಸೆರೆ ಕಾರ್ಯಾಚರಣೆ, ಮತ್ತು ಪಳಗಿಸುವ ಕ್ರಮ, ಮಾವುತರಿಗೆ ತರಬೇತಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ತೆರಳಲು ಮುಂದಾದಾಗ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕಾರಿನ ಬಳಿ ಧಾವಿಸಿದ ಅರಣ್ಯ ಸಿಬ್ಬಂದಿಗಳು […]
ಹಾಜಿ ಅಲಿ ದರ್ಗಾಕ್ಕೆ 1.25ಕೋಟಿ ದೇಣಿಗೆ ನೀಡಿದ ನಟ ಅಕ್ಷಯ್ ಕುಮಾರ್

ಮುಂಬೈ: ಹಾಜಿ ಅಲಿ ದರ್ಗಾಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದು, ದರ್ಗಾದ ನವೀಕರಣಕ್ಕೆ 1.25 ಕೋಟಿ ರೂ.ದೇಣಿಗೆ ನೀಡಿದ್ದಾರೆ. ದರ್ಗಾಕ್ಕೆ ಭೇಟಿಯ ವೀಡಿಯೋವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದು, ದರ್ಗಾ ಟ್ರಸ್ಟ್ ನಟನಿಗೆ ಧನ್ಯವಾದ ಸಲ್ಲಿಸಿದೆ. ಹಾಜಿ ಅಲಿ ಟ್ರಸ್ಟ್‌ನ ಅಧಿಕಾರಿ ಮೊಹಮ್ಮದ್ ಅಹ್ಮದ್ ತಾಹಿರ್ ಈ ಕುರಿತು ಮಾಹಿತಿ ನೀಡಿದ್ದು, ಅಕ್ಷಯ್ ಕುಮಾರ್ ಅವರು ದರ್ಗಾದ ಒಂದು ಭಾಗವನ್ನು ನವೀಕರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ದೇಣಿಗೆ ನೀಡುವುದು ಇದು ಮೊದಲಲ್ಲ, […]
ಜಪಾನ್ ನಲ್ಲಿ ಪ್ರಬಲ ಭೂಕಂಪನ; ಸುನಾಮಿ ಎಚ್ಚರಿಕೆ, ಆತಂಕದಲ್ಲಿ ಜನ

ಜಪಾನ್ ನ ಕ್ಯೂಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನವು ಸಂಭವಿಸಿದೆ. ಭೂಕಂಪನದ ಜೊತೆ ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಜಪಾನಿನ ಕ್ಯೂಶು ದ್ವೀಪದಾದ್ಯಂತ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭೂಕಂಪ ಸಂಭವಿಸಿದ ಸ್ಥಳದಲ್ಲಿನ ಸಾವು- ನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.
ದಟ್ಟ ಕಾಡಿನೊಳಗೆ ಆಧುನಿಕ ಟೆಕ್ನಾಲಜಿ ಬಳಸಿ ನಿಧಿಗಾಗಿ ಶೋಧ ನಡೆಸುತ್ತಿದ್ದ ನಿಧಿಗಳ್ಳರ ಬಂಧನ

ಆಧುನಿಕ ಟೆಕ್ನಾಲಜಿ ಬಳಸಿ ನಿಧಿ ಶೋಧನೆ ನಡೆಸುತ್ತಿದ್ದ ಆಂಧ್ರದ ನಿಧಿಗಳ್ಳರನ್ನು ಬಳ್ಳಾರಿಯ ಸಂಡೂರು ಅರಣ್ಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ಶ್ರೀನಿವಾಸ್(45), ಆಕಾಶ್( 20) , ಶ್ರೀನಿವಾಸ್, ವೆಂಕಟ್ ರಾವ್ ಹಾಗೂ ಗದಗ ಮೂಲದ ಭಗತ್ ಸಿಂಗ್ ದೊಡ್ಡಮನಿ(50) ಬಂಧಿತ ಆರೋಪಿಗಳು. ಇವರು ದಟ್ಟ ಕಾಡಿನ ಮಧ್ಯದಲ್ಲಿರುವ ಗುಹೆಗಳಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಇವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿ ಮಲೈ ಅರಣ್ಯ ವ್ಯಾಪ್ತಿಯಲ್ಲಿ ಚಿನ್ನ, ವಜ್ರಕ್ಕಾಗಿ ಹುಡುಕಾಡಿದ್ದಾರೆ. ಗುಹೆಯೊಳಗಡೆ ಸುರಂಗವನ್ನು ಕೂಡ ಕೊರೆಯಲು […]
ಬಂಟ್ವಾಳ; ಎಸೆಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಂಟ್ವಾಳ: ಎಸ್ಸೆಸೆಲ್ಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಜನಪದವು ಬಳಿ ನಡೆದಿದೆ. ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಡಕಬೈಲಿನ ಖಾಸಗಿ ಶಾಲೆಯಲ್ಲಿ ಈತ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ನಿನ್ನೆ ರಾತ್ರಿ ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ […]
ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ: ಪ್ರಾಸ್ತವಿತ ಬಿಲ್ ನಲ್ಲಿ ಏನೇನಿದೆ?

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ ನಲ್ಲಿ ಇಂದು ಮಂಡಿಸಿದ್ದಾರೆ. ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹಾಗೂ ವಕ್ಫ್ ಕಾಯಿದೆ, 1995 ಅನ್ನು ʼಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ-1995ʼ ಎಂದು ಮರುನಾಮಕರಣ ಮಾಡುವ ಗುರಿಯೊಂದಿಗೆ ಇಂದು ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿದೆ. ಪ್ರಾಸ್ತಾವಿತ ತಿದ್ದುಪಡಿ ಮಸೂದೆಯಲ್ಲೇನಿದೆ? ಮಸೂದೆಯಲ್ಲಿ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ರಚನೆ ಸೇರಿವೆ. […]
ವಯನಾಡು; ದುರಂತ ಸ್ಥಳದಲ್ಲಿನ ನಿರಾಶ್ರಿತ ಯುವತಿಯರಿಗೆ ಜೀವನ ನೀಡಲು ಮುಂದಾದ ಯುವಕರು

ವಯನಾಡು ಭೂಕುಸಿತ ದುರಂತ ಪೀಡಿತ ಕುಟುಂಬದ ಹೆಣ್ಣುಮಕ್ಕಳಿಗೆ ಬದುಕು ನೀಡಲು ಇದೀಗ ಇಬ್ಬರು ಯುವಕರು ಮುಂದೆ ಬಂದಿದ್ದಾರೆ. ಬೂದನೂರು ತಯ್ಯೂರು ಮೂಲದ ವಿಷ್ಣುಕುಮಾರ್ (30) ಮತ್ತು ಮಾವೇಲಿಕ್ಕರ ಮೂಲದ ದೀಪುರಾಜ್ (31) ಅನಾಥರಾದ ಯುವತಿಯರಿಬ್ಬರಿಗೆ ಜೀವನ ನೀಡಲು ಮುಂದಾಗಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ಮನನೊಂದ ತಾಯಿಯ ಕೋರಿಕೆಯಂತೆ ವಿಷ್ಣು ಈ ನಿರ್ಧಾರಕ್ಕೆ ಬಂದಿದ್ದಾರೆ. ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ವಿಷ್ಣು, ವಯನಾಡಿನ ಯುವತಿಯೋರ್ವಳಿಗೆ ಜೀವನ ನೀಡುವುದಾಗಿ ಹೇಳಿದ್ದಾರೆ. ಇನ್ನು ದೀಪುರಾಜ್ ಎಂಬಾತ ಖಾಸಗಿ ಬಸ್ನಲ್ಲಿ […]
ವಕ್ಫ್ ಬೋರ್ಡ್ ಗೆ ಸಂಬಂಧಿಸಿದ ಒಟ್ಟು 62,830 ಸ್ಥಿರಾಸ್ತಿಗಳನ್ನು ದಾಖಲಿಸಲಾಗಿದೆ: ಬ್ರಿಜೇಶ್ ಚೌಟ ಪ್ರಶ್ನೆಗೆ ಸಚಿವರ ಉತ್ತರ

ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಗೆ ಸಂಬಂಧಿಸಿದ ಒಟ್ಟು 62,830 ಸ್ಥಿರಾಸ್ತಿಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ದೇಶದಲ್ಲಿ ವಕ್ಫ್ ಮಂಡಳಿ ಹೊಂದಿರುವ ಒಟ್ಟು ಆಸ್ತಿಗಳ ವಿವರಗಳಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ( WAMASI) 2010ರಲ್ಲಿ ಪ್ರಾರಂಭವಾಗಿದೆ. ಪ್ರತಿ ತಿಂಗಳು ಈ ಪೋರ್ಟಲ್ ನಲ್ಲಿ ದೇಶದೆಲ್ಲೆಡೆಯಿರುವ ವಕ್ಫ್ ಆಸ್ತಿಗಳ ದಾಖಲೀಕರಣ ಮಾಡಲಾಗುತ್ತಿದೆ. […]