Breaking News :

ಸಂವಿಧಾನ ತತ್ವಗಳೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ: ಎ.ಎಸ್ ಪೊನ್ನಣ್ಣ

    ಜನವಾಹಿನಿ News ಬೆಂಗಳೂರು : ಸಮಾಜ, ಧರ್ಮ ನಿರಪೇಕ್ಷತೆ, ಜಾತ್ಯತೀತತೆ…ಇವೇ ನಮ್ಮ ಸಂವಿಧಾನದ ತತ್ವಗಳು. ಇವೇ ಸಂವಿಧಾನದ ಸಿದ್ಧಾಂತಗಳು. ಇದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಕೂಡ ಎಂದು ಮಾನ್ಯ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಶ್ರೀ ಅಜ್ಜಿಕುಟ್ಟಿರ ಎಸ್.‌ ಪೊನ್ನಣ್ಣ ಅವರು ತಿಳಿಸಿದರು. ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ, ಕಾನೂನು-ಮಾನವ ಹಕ್ಕು-ಆರ್‌ಟಿಐ ವಿಭಾಗವು, ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ” ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ಪ್ರಪಂಚದಲ್ಲಿರುವ […]

ವಿರಾಜಪೇಟೆ : ರಸ್ತೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

  ಜನವಾಹಿನಿ News ವಿರಾಜಪೇಟೆ : ಮಳೆ ನಿಂತ ಮೇಲೆ ಮುಖ್ಯ ರಸ್ತೆಯ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದ್ದ ಶಾಸಕರು ಮಳೆಗಾಲ ಮುಗಿದು ಬಿಸಿಲು ಆರಂಭಿಸಿದೆ ಆದರೂ ಕೂಡ ರಸ್ತೆಯ ಕಾಮಗಾರಿ ಮಾಡಲು ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು. ವಿರಾಜಪೇಟೆ ಮಂಡಳ ಬಿ ಜೆ.ಪಿ ವತಿಯಿಂದ ನಡೆದ ಪ್ರತಿಭಟನೆ ನಲ್ಲಿ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಮಾಡಿದ್ದ ತಿತಿಮತಿ ಗೋಣಿಕೊಪ್ಪ […]

ಬೇಂಗೂರು ಕೊಡವ ಸಮಾಜದಿಂದ ಶಾಸಕ ಪೊನ್ನಣ್ಣ ನವರಿಗೆ ಮನವಿ

  ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಬೇಂಗ್ ನಾಡ್( ಚೇರಂಬಾಣೆ) ಕೊಡವ ಸಮಾಜದ ಪದಾಧಿಕಾರಿಗಳು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರನ್ನು ಭೇಟಿ ಮಾಡಿ ಸಮಾಜದ ಕಟ್ಟಡದ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರು. ಸುಮಾರು 4 ಕೋಟಿ ವೆಚ್ಚದಲ್ಲಿ ಬೇಂಗ್ ನಾಡ್ ಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಸುಸಜ್ಜಿತ ಭವನ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದು ಸರ್ಕಾರದಿಂದ ಅನದಾನ ಒದಗಿಸುವಂತೆ ಶಾಸಕರಲ್ಲಿ ಕೋರಲಾಯಿತು. ಶಾಸಕ […]

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಆರ್.ಪುಷ್ಪಲತಾ ನೇಮಕ

  ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಜಿ.ಆರ್.ಪುಷ್ಪಲತಾ ನೇಮಕಗೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಲಂಬಾ ರವರ ನಿರ್ದೇಶನದ ಮೇರೆಗೆ ಕರ್ನಾಟಕ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೌಮ್ಯ ರೆಡ್ಡಿಯವರು ನೇಮಕಾತಿ ಆದೇಶ ಜಾರಿಗೊಳಿಸಿದ್ದಾರೆ. ಪುಷ್ಪಲತಾ ರವರು ಈ ಹಿಂದೆ 2017-18 ರಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಈಗ ಎರಡನೇ ಬಾರಿಗೆ ಕೊಡಗು ಮಹಿಳಾ […]

ಎ.ಕೆ.ಸುಬ್ಬಯ್ಯನವರ ಪುಣ್ಯಸ್ಮರಣೆ : ಶಾಸಕ ಪೊನ್ನಣ್ಣರವರಿಂದ ತಂದೆಗೆ ಗೌರವ ನಮನ

    ಜನವಾಹಿನಿ NEWS ಪೊನ್ನಂಪೇಟೆ : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ತಮ್ಮ ತಂದೆಯವರಾದ ದಿವಂಗತ ಎ.ಕೆ ಸುಬ್ಬಯ್ಯರವರ 6ನೇ ಪುಣ್ಯ ಸ್ಮರಣೆ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಪೊನ್ನಂಪೇಟೆ ತಾಲೂಕು ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಂದೆಯವರ ಸಮಾಧಿ ಬಳಿಗೆ ತೆರಳಿದ ಮಾನ್ಯ ಶಾಸಕರು, ಪುಷ್ಪ ನಮನ ಸಲ್ಲಿಸಿ ಪ್ರಾರ್ಥಿಸುವ ಮೂಲಕ ಪುಣ್ಯ ಸ್ಮರಣೆ ದಿನದಂದು ಗೌರವಾರ್ಪಣೆ ಸಲ್ಲಿಸಿದರು. ಈ […]

ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿ : ತೆನ್ನಿರ ಮೈನಾ ಬಣ್ಣನೆ 

    ಜನವಾಹಿನಿ NEWS ಮಡಿಕೇರಿ : ಮಾಜಿ ಪ್ರಧಾನಿ ಭಾರತ ರತ್ನ ರಾಜೀವ್ ಗಾಂಧಿಯವರು ಆಧುನಿಕ ಭವ್ಯ ಭಾರತದ ಶಿಲ್ಪಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಬಣ್ಣಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕಗಳ ಆಶ್ರಯದಲ್ಲಿ ನಡೆದ ದಿವಗಂತ ರಾಜೀವ್ ಗಾಂಧಿಯವರ 81 ನೇ ಹಾಗೂ ದಿವಂಗತ ದೇವರಾಜ್ ಅರಸು ರವರ 110 ನೇ ಜನ್ಮ ದಿನಾಚರಣೆ […]

ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು : ಸಿಎಂ ಸಿದ್ದರಾಮಯ್ಯ

    ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು : ಸಿಎಂ ಸಿದ್ದರಾಮಯ್ಯ ಬೆಂಗಳೂರು : ಬ್ರಿಟಿಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ದೇಶವು ಒಗ್ಗೂಡಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ೭೯ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಚಳವಳಿಯು ನಮ್ಮನ್ನು ಹೇಗೆ […]

ಧರ್ಮಸ್ಥಳದಲ್ಲಿ ಎಸ್.ಐ.ಟಿ ಕಾರ್ಯಾಚರಣೆ ಕಾನೂನು ಪ್ರಕೃಯೆ ಸಚಿವ ಬೋಸ್ ರಾಜ್ ಸ್ಪಷ್ಟನೆ

  ಧರ್ಮಸ್ಥಳದಲ್ಲಿ ಎಸ್.ಐ.ಟಿ ಕಾರ್ಯಾಚರಣೆ ಕಾನೂನು ಪ್ರಕೃಯೆ ಸಚಿವ ಬೋಸ್ ರಾಜ್ ಸ್ಪಷ್ಟನೆ ಮಡಿಕೇರಿ : ಧರ್ಮಸ್ಥಳ ಗ್ರಾಮದಲ್ಲಿ ಎಸ್.ಐ.ಟಿ. ತಂಡ ಅಸ್ಥಿಪಂಜರ ಪತ್ತೆ ಕಾರ್ಯನಡೆಸುತ್ತಿರುವುದು ಸಂಪೂರ್ಣವಾಗಿ ಕಾನೂನಿನ ಪ್ರಕೃಯೆ ಆಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಬೋಸ್ ರಾಜುರವರು ಸ್ಪಷ್ಟಪಡಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ 79 ನೇ ಸ್ವಾತಂತ್ರ್ಯ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ರಾಜಕಾರಣವನ್ನು ಖಂಡಿಸಿದ್ದಾರೆ. ವ್ಯಕ್ತಿಯೊಬ್ಬ ಧರ್ಮಸ್ಥಳದ ಹಲವು ಬಾಗಗಳಲ್ಲಿ ಅಪರಿಚಿತ ಶವಗಳನ್ನು ಹೂತುಹಾಕಿದ್ದು […]

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಂಸು ಕೊಡಿ ಆಯ್ಕೆ

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಂಸು ಕೊಡಿ ಆಯ್ಕೆ ಮಡಿಕೇರಿ : ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಹಂಸು ಕೊಡಿ ರವರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು . ಈ ಸಂದರ್ಭ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ವಿರಾಜಪೇಟೆ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ಚೆಂ ಗಪ್ಪ, ಮುತ್ತಣ್ಣ ಕೋಣಿಯಂಡ ಮತ್ತು ರಶೀದ್ಚೆ ಟ್ಟಿಮಾನಿ ಉಪಸ್ಥಿತರಿದ್ದರು.

ಸಮಾಜದ ಅಭಿವೃದ್ಧಿಗೆ ಬಿಲ್ಲವ ಸಮಾಜದವರ ಕೊಡುಗೆ ವಿಶಿಷ್ಟ : ಎ. ಎಸ್.ಪೊನ್ನಣ್ಣ

ಸಮಾಜದ ಅಭಿವೃದ್ಧಿಗೆ ಬಿಲ್ಲವ ಸಮಾಜದವರ ಕೊಡುಗೆ ವಿಶಿಷ್ಟ : ಎ. ಎಸ್.ಪೊನ್ನಣ್ಣ ನಾಪೋಕ್ಲು : ಬಿಲ್ಲವ ಸಮಾಜದವರು ಅವರದೇ ಆದ ವಿಶಿಷ್ಟ ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ತಿಳಿಸಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಅಂಗವಾಗಿ ಆಯೋಜನೆಗೊಂಡಿದ್ದ ಬೃಹತ್ ರಕ್ತದಾನ ಶಿಬಿರ, ಸಮಾಜದ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಆಟಿಡೊಂಜಿ […]