Breaking News :

ಜು.೧೮ರಂದು ಜಿಲ್ಲಾ ಲಾರಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಪ್ರತಿಭಟನೆ

ಕೊಡಗು : ಸರಕು ಸಾಗಾಣಿ ಮಾಡುವ(೧೮.೫೦೦ ಕೆ.ಜಿ. ಗಿಂತ ಹೆಚ್ಚಿನ ತೂಕ) ವಾಹನಗಳಿಗೆ ಜಿಲ್ಲಾಡಳಿತ ಏರಿರುವ ನಿರ್ಬಂಧವನ್ನು ಸಡಿಲಗೊಳಿಸುವಂತೆ ಒತ್ತಾಯಿಸಿ ಜು.೧೮ರಂದು ಜಿಲ್ಲಾಡಾಳಿತ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಲಾರಿ ಮಾಲೀಕರ ಮತ್ತು ಚಾಲಕರ ಸಂಘ ತಿಳಿಸಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಜಿಲ್ಲಾಧಿಕಾರಿಗಳ ಆದೇಶ ಕೊಡಗು ಜಿಲ್ಲೆಯ ಲಾರಿ ಮಾಲೀಕರು, ಚಾಲಕರು ಮಾತ್ರ ಪಾಲಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಹೊರ ಜಿಲ್ಲೆಯಿಂದ ೧೮.೫೦೦ ಕೆ.ಜಿ. ಗಿಂತ ಹೆಚ್ಚಿನ […]

ಸಚಿನ್ ನಿಂಬಾಳ್ಕರ್ ಹಾಗೂ ಐಶ್ವರ್ಯಗೆ ಮುಖ್ಯಮಂತ್ರಿ ಪದಕ

ಸಚಿನ್ ನಿಂಬಾಳ್ಕರ್ ಹಾಗೂ ಐಶ್ವರ್ಯಗೆ ಮುಖ್ಯಮಂತ್ರಿ ಪದಕ ಕೊಡಗು : ವಲಯ ಅರಣ್ಯ ವ್ಯಾಪ್ತಿಯ ಮೀನುಕೊಲ್ಲಿ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಚಿನ್ ನಿಂಬಾಳ್ಳರ್‌ ಹಾಗೂ ಗಂಧದಕೋಟಿ ಅರಣ್ಯ ತರಬೇತಿ ಕೇಂದ್ರದ ವಲಯ ಉಪ ಅರಣ್ಯಾಧಿಕಾರಿ ಐಶ್ವರ್ಯಾ ಆ‌ರ್. ಗೌಡಗೆ ಮುಖ್ಯಮಂತ್ರಿ ಪದಕ ಗೌರವಕ್ಕೆ ಭಾಜನರಾಗಿದ್ದಾರೆ. ಸಚಿನ್‌ ನಿಂಬಾಳ್ವರ್ 8 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿರಾಜಪೇಟೆ ಉಪ ವಿಭಾಗದಲ್ಲಿ ಕೆಲವು ವರ್ಷ ಕರ್ತವ್ಯ ನಿರ್ವಹಿಸಿದ್ದರು. ಐಶ್ವರ್ಯಾ ಅವರು […]

ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಆರಂಭ : ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ಮನವಿ

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1711 ಮಂದಿ ಹೆಸರು ನೋಂದಣಿ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಆರಂಭ; ಸೌಲಭ್ಯ ಪಡೆಯಲು ಮನವಿ ಮಡಿಕೇರಿ : 2025 ರ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಈ ಸಂಬಂಧ ಭಿತ್ತಿಪತ್ರ ವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಬುಧವಾರ ಬಿಡುಗಡೆ ಮಾಡಿದರು.  ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಭಿತ್ತಿಪತ್ರ ಬಿಡುಗಡೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ 2024 ರ ಜನವರಿ 01 ರಂದು […]

ಸಿದ್ದಾಪುರ : ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ 

ಸಿದ್ದಾಪುರ : ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಮಡಿಕೇರಿ : ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಸಮೀಪದ ಗುಹ್ಯ ಶಾಲೆಯ ಹತ್ತಿರದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಬುಧವಾರ ನಡೆಯಿತು. ಕೆಲದಿನಗಳಿಂದ ಇಲ್ಲಿನ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳಿಂದ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತು. ಈ ಹಿನ್ನೆಲೆ ಕಾಡಾನೆ ಹಿಂಡನ್ನು ಅರಣ್ಯಕ್ಕೆ ಅಟ್ಟಲು ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದರು. ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ […]

ಗಸ್ತು ತಿರುಗುತ್ತಿದ್ದ ಅರಣ್ಯ ವೀಕ್ಷಕನ ಮೇಲೆ ಕರಡಿ ದಾಳಿ : ಸಿಬ್ಬಂದಿ ಗಂಭೀರ 

  ಗಸ್ತು ತಿರುಗುತ್ತಿದ್ದ ಅರಣ್ಯ ವೀಕ್ಷಕನ ಮೇಲೆ ಕರಡಿ ದಾಳಿ : ಸಿಬ್ಬಂದಿ ಗಂಭೀರ  ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕರಡಿಯೊಂದು ದಾಳಿ ನಡೆಸಿ, ಅರಣ್ಯ ಇಲಾಖೆಯ ಪಿಸಿಪಿ ಸಿಬ್ಬಂದಿಯನ್ನು ಗಂಭೀರವಾಗಿ ಗಾಯಗೊಳಿಸಿದೆ. ಅರಣ್ಯ ವೀಕ್ಷಕ ಮಾದ (35) ಎಂಬುವರು ಕರಡಿ ದಾಳಿಗೆ ತುತ್ತಾಗಿದ್ದು, ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಸೋಗಹಳ್ಳಿ ಸಮೀಪದ ಎಂ.ಜಿ.ಹಳ್ಳಿ ಹಾಡಿಯ ನಿವಾಸಿ ಮಾದ ಅವರು ಎಂದಿನಂತೆ ಕರ್ತವ್ಯಕ್ಕೆ […]

ತುಳುರಂಗಭೂಮಿ‌ ಕಲಾವಿದ ಮೌನೇಶ ಆಚಾರ್ಯ ಹೃದಯಾಘಾತದಿಂದ ಸಾವು

ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ‌ ಕಲಾವಿದ, ಕಾಪಿಕಾಡು‌ ನಿವಾಸಿ ಮೌನೇಶ ಆಚಾರ್ಯ ಮಾಣಿ(44) ಇವರು ಮಂಗಳವಾರ ಮುಂಜಾನೆ ತಮ್ಮ‌ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಚಿನ್ನದ ಕೆಲಸ‌ಮಾಡುತ್ತಿದ್ದ ಇವರು ಜೊತೆಗೆ ಮನೆಸಮೀಪವೇ ಚಿಕ್ಕ‌ ದಿನಸಿ‌ಅಂಗಡಿ ನಡೆಸುತ್ತಿದ್ದರು. ಹಾಸ್ಯಪ್ರಜ್ಞೆ ಉಳ್ಳವರಾಗಿದ್ದ ಇವರು ಜಯಂ ಕಲಾನಿಕೇತನ ಮಾಣಿ ನೃತ್ಯತಂಡದಲ್ಲಿ ಕಲಾವಿದರಾಗಿದ್ದ ಇವರು ಕಲಾಮಾತೆ ನಾಗನವಳಚ್ಚಿಲ್ ತಂಡದ ಕಲಾವಿದರಾಗಿದ್ದು, ಶಾಂತರಾಮ್ ಕಲ್ಲಡ್ಕ ನಿರ್ದೇಶನದ ತುಳು ಅಪ್ಪೆಜೋಕ್ಲು ಕಲಾ ಬಳಗದ ನಾಟಕಗಳಲ್ಲಿಯೂ ಅಭಿನಯಿಸಿದ್ದರು.‌ಪ್ರಸ್ತುತ ನಮ್ಮ‌ಕಲಾವಿದರು ನೆಲ್ಯಾಡಿ ತುಳುನಾಟಕ ತಂಡದ ಕಲಾವಿದರಾಗಿದ್ದ ಇವರು, ಯುವ ಕಲಾವಿದ […]

ಸಿದ್ದಾಪುರ : ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ

ಸಿದ್ದಾಪುರ : ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ  ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿಗಳ ಜತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಾಥ್  ಮಡಿಕೇರಿ : ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್‌ ಸಿಬ್ಬಂದಿಯೇ ಮನೆಬಾಗಿಲಿಗೆ ಬರುವಂತಹ ವಿನೂತನ ಪರಿಕಲ್ಪನೆಯಾದ ‘ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮಕ್ಕೆ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿಯಲ್ಲಿ ಚಾಲನೆ ನೀಡಲಾಯಿತು. ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿಗಳು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತಿ ಸದಸ್ಯರು ತೆರಳಿ ಪೊಲೀಸರ ಜನಸ್ನೇಹಿ […]

ಪತ್ರಕರ್ತರ ಸಂಘದಿಂದ ಕಥೆ ಹೇಳುವ ಸ್ಪರ್ಧೆ

ಮಡಿಕೇರಿ : ಕೊಡಗು ಜಿಲ್ಲಾ ಪತ್ರಕರ್ತರ ಸಂಘ ( ರಿ) ಸಹಯೋಗದಲ್ಲಿ ವಿರಾಜಪೇಟೆ ತಾಲೂಕು ಪತ್ರ ಕರ್ತರ ಸಂಘ ದಿಂದ *ಕಥೆ ಹೇಳುವ ಸ್ಪರ್ಧೆ* ಆಯೋಜಿಸಲಾಗಿದೆ. ಆಗಸ್ಟ್ 3 ರಂದು ಭಾನುವಾರ ‘ಕಥಾ ಸಮಯ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸ್ವರಚಿತ ಕಥೆ ವಾಚಿಸಲು ಮೂರರಿಂದ ಐದು ನಿಮಿಷ ಸಮಯದ ಅವಕಾಶವಿರುತ್ತದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ಕಾಮಧೇನು ಗೋ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತರು […]

ಮಡಿಕೇರಿ : ರಾಜಾಸೀಟಿನಲ್ಲಿ ‘ಪುಟಾಣಿ ರೈಲು’ ಆರಂಭಕ್ಕೆ ಕ್ರಮ : ವೆಂಕಟ್ ರಾಜಾ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ರಾಜಾಸೀಟಿನಲ್ಲಿ ‘ಪುಟಾಣಿ ರೈಲು’ ಆರಂಭಕ್ಕೆ ಕ್ರಮ: ವೆಂಕಟ್ ರಾಜಾ ಮಡಿಕೇರಿ : ರಾಜಾಸೀಟಿನಲ್ಲಿ ‘ಮಕ್ಕಳ ಪುಟಾಣಿ ರೈಲು’ ಆರಂಭ ಸಂಬಂಧ ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‍ಗಳು ಪರಿಶೀಲಿಸಿದ್ದು, ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.  ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು […]

ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲು ಸಿಎಂ ಸಿದ್ದರಾಮಯ್ಯಗೆ ಮನವಿ

ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲು ಸಿಎಂ ಸಿದ್ದರಾಮಯ್ಯಗೆ ನಿಯೋಗ ಮನವಿ ಕೊಡಗು : ನೂತನ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಭಾಗಮಂಡಲ ನಾಡಗೌಡ ಸಮಾಜದ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ, ಭಾಗಮಂಡಲ ನಾಡಗೌಡ ಸಮಾಜದ ಅಧ್ಯಕ್ಷರಾದ ಕುದ್ಪಾಜೆ ಪಿ ಪಳಂಗಪ್ಪರವರ ನಿಯೋಗ ಮಾನ್ಯ ಮುಖ್ಯಮಂತ್ರಿಗಳದ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಹಲವು ಪ್ರಮುಖ […]