ಕಾಟಿಪಳ್ಳ ಮಸೀದಿಗೆ ಕಲ್ಲೆಸೆತ ಪ್ರಕರಣ; ಐವರು ಆರೋಪಿಗಳ ಬಂಧನ

ಸುರತ್ಕಲ್: ಕಾಟಿಪಳ್ಳ 3ನೇ ಬ್ಲಾಕ್ ನ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರ ನಿವಾಸಿ ಮನು ಮತ್ತು ಮುಂಚೂರು ನಿವಾಸಿ ಸುಜಿತ್ ಎಂಬವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಬೈಕಿನಲ್ಲಿ ಬಂದ ಆರೋಪಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದರು.
ಬರೊಬ್ಬರಿ 50ಕ್ಕೂ ಅಧಿಕ ಪ್ರಕರಣಗಳ ಆರೋಪಿ ಕುಖ್ಯಾತ ರೌಡಿ ಶೀಟರ್ ಅರೆಸ್ಟ್

ಬೆಂಗಳೂರು: ಕುಖ್ಯಾತ ರೌಡಿಶೀಟರ್ ಬ್ಯಾಟರಿ ಜಯಂತ್ ನನ್ನು ಪೊಲೀಸರು ಬಂಧಿಸಿದ್ದು, 3 ಬೈಕ್ ಗಳು, ಸೇರಿ ಮೊಬೈಲ್ ಜಪ್ತಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸರು ಕುಖ್ಯಾತ ರೌಡಿಶೀಟರ್ ಬ್ಯಾಟರಿ ಜಯಂತ್ ನನ್ನು ಬಂಧಿಸಿದ್ದಾರೆ ಬ್ಯಾಟರಿ ಜಯಂತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸೇರಿ ಬರೋಬ್ಬರಿ 56 ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಯಂತ್ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಜಾಮೀನಿನ […]
ಬಿಜೆಪಿ ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ!

ಕೋಲಾರ: ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋಲಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಎರಡು FIR ದಾಖಲು ಮಾಡಲಾಗಿದೆ. ಒಂದು ಗುತ್ತಿಗೆದಾರ ಚೆಲುವರಾಜ್‌ಗೆ ಜೀವ ಬೆದರಿಕೆ ಹಾಕಿರುವುದು ಮತ್ತು ಇನ್ನೊಂದು ಜಾತಿ ನಿಂದನೆ ಅಡಿಯಲ್ಲಿ ದೂರನ್ನು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿರುವ ಚೆಲುವರಾಜು, ಶಾಸಕ ಮುನಿರತ್ನ ವಿರುದ್ಧ […]
ಉಳ್ಳಾಲ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಳ್ಳಾಲ:ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಎಂಬಲ್ಲಿ ಈ ಘಟನೆ ನಡೆದಿದೆ ತಾರಿಪಡ್ಪು ವೈದ್ಯನಾಥ ದೇವಸ್ಥಾನದ ಬಳಿಯ ನಿವಾಸಿ ಶ್ರವಣ್ ಆಳ್ವ (25) ಆತ್ಮಹತ್ಯೆಗೈದ ಯುವಕನಾಗಿದ್ದಾನೆ. ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದ ಶ್ರವಣ್ ಗುರುವಾರ ರಾತ್ರಿ ಸ್ನೇಹಿತನನ್ನು ಭೇಟಿಯಾಗಿ ಮನೆಗೆ ಬಂದು ಊಟ ಮಾಡಿ ಟಿವಿ ವೀಕ್ಷಿಸಿ ಬಳಿಕ ಮಲಗಲು ತನ್ನ ಕೋಣೆಗೆ ಹೋಗಿದ್ದಾನೆ. ಮಧ್ಯರಾತ್ರಿ ಶ್ರವಣ್ ಅಣ್ಣ ಕೆಲಸ ಮುಗಿಸಿ ಮನೆಗೆ ಬಂದಾಗ ಶ್ರವಣ್ ಬೆಡ್ […]
ಬೈಕ್ ಗೆ ಲಾರಿ ಢಿಕ್ಕಿ: ಮೂವರು ವಿದ್ಯಾರ್ಥಿಗಳು ದುರ್ಮರಣ

ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಯಲಹಂಕ ಸಮೀಪ ನಡೆದಿದೆ. ಜಿಕೆವಿಕೆ ಆವರಣದಲ್ಲಿ ಇರುವ ಬಾಗಲಕೋಟೆಯ ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳಾದ ರೋಹಿತ್ (21), ಹರ್ಷವರ್ಧನ್ (22) ಹಾಗೂ ಸುಚಿತ್ (22) ಮೃತರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಂಗಳವಾರ ರಾತ್ರಿ 1 ಗಂಟೆಗೆ ಒಂದೇ ಬೈಕ್‌ನಲ್ಲಿ ಮೂವರು ವಿದ್ಯಾರ್ಥಿಗಳು ಜಾಲಿ ರೈಡ್‌ಗೆ ಹೋಗಿ ಹಾಸ್ಟೆಲ್‌ಗೆ ಮರಳುವಾಗ ಚಿಕ್ಕಜಾಲ ಸಮೀಪದ ಡ್ಯಾಶ್ ಸ್ಯ್ಕಾವರ್ ಮುಂದೆ ಅವಘಡ ಸಂಭವಿಸಿದೆ. ಅಪಘಾತದ ಬಳಿಕ […]
ಪುತ್ತೂರು: ಅಪಘಾತದ ಗಾಯಾಳು ಉಪನ್ಯಾಸಕಿ ಮೃತ್ಯು; ಜೀವಕ್ಕೆ ಕುತ್ತು ತಂದಿದ್ದ ಕೊಡೆ

ಪುತ್ತೂರು; ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿಯೋರ್ವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮಾಡಾವು ಜ್ಯೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಬುಧವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ನಿಕಟ ಸಂಬಂಧಿಕರೊಬ್ಬರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸಿದ ಸಂದರ್ಭದಲ್ಲಿ, ಗಾಳಿಗೆ ಕೊಡೆ ಎಳೆಯಲ್ಪಟ್ಟು ಇವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ […]
ಮಂಗಳೂರು: ಹಸುವೊಂದಕ್ಕೆ ದಯಾಮರಣ; ಏನಿದು ಅಪರೂಪದ ಸುದ್ದಿ?

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆಯ ವ್ಯಾಪ್ತಿಗೆ ಸೇರಿರುವ ಕೊಲ್ಯ ಎನ್ನುವ ಪ್ರದೇಶದಲ್ಲಿ ಹಸುವೊಂದಕ್ಕೆ ಬುಧವಾರ ದಯಾಮರಣ ನೀಡಿರುವ ಬಗ್ಗೆ ವರದಿಯಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹಸು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿತ್ತು. ಅನವಶ್ಯಕವಾಗಿ ಜರನ್ನು ತಿವಿಯಲು ಹೋಗುತ್ತಿತ್ತು. ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ ಹಸುವಿನ ಬಗ್ಗೆ ದೂರುಗಳು ಕೇಳಿಬಂದಿದ್ದವು. ಕಳೆದ ಎರಡು ದಿನಗಳಿಂದಲೂ ಇದೇ ವರ್ತನೆ ತೋರಿಸಿದ್ದ ಹಸುವನ್ನು ಸ್ಥಳೀಯರೇ ಸೇರಿ ಕಟ್ಟಿ ಹಾಕಿದ್ದರು. ಇತ್ತೀಚೆಗೆ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಿತ್ತು. ಇನ್ನು ಹಸು […]
ನೇಜಾರು ತಾಯಿ- ಮಕ್ಕಳ ಕೊಲೆ ಪ್ರಕರಣ; ಜೈಲಿನಲ್ಲಿ ಉಪವಾಸ ಕುಳಿತ ಆರೋಪಿ ಪ್ರವೀಣ್ ಚೌಗಲೆ

ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅನ್ನ, ನೀರು ಸ್ವೀಕರಿಸದೆ ಉಪವಾಸ ಮುಷ್ಕರ ಹೂಡಿದ್ದಾನೆ ಎಂದು ವರದಿಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪ್ರವೀಣ್, ಆಹಾರ ಸೇವಿಸದೆ ಉಪವಾಸ ಮುಷ್ಕರ ಮಾಡುತ್ತಿದ್ದು, ಪ್ರತ್ಯೇಕ ಸೆಲ್‌ನಿಂದ ಪ್ರಧಾನ ಸೆಲ್‌ಗೆ ಶಿಫ್ಟ್ ಮಾಡಲು ಬೇಡಿಕೆ ಇಟ್ಟಿದ್ದಾನೆ. 2023ರ ನವೆಂಬರ್ 12ರಂದು ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ಏರ್ ಇಂಡಿಯಾ […]
ಬಂಟ್ವಾಳ: ಭೀಕರ ಕಾರು ಅಪಘಾತ; ನವವಿವಾಹಿತೆ ಸಾವು

ಬಂಟ್ವಾಳ: ಭೀಕರ ಕಾರು ಅಪಘಾತದಲ್ಲಿ ನವ ವಿವಾಹಿತೆ ಸಾವನ್ನಪ್ಪಿದ್ದು, ಪತಿಗೆ ಗಂಭೀರ ಗಾಯವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಮೃತರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರಿಗೆ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಆಲ್ಟೋ ಕಾರಿನಲ್ಲಿ ನವದಂಪತಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಗುದ್ದಿ ಹಾರಿ […]
ನಾನು ಬಿಜೆಪಿಗೆ ಸೇರ್ಪಡೆಯಾಗಿಲ್ಲ; ಸ್ಪಷ್ಟನೆ ನೀಡಿದ ದೇವದಾಸ್ ಕಾಪಿಕಾಡ್

ಮಂಗಳೂರು: ಬಿಜೆಪಿ ಸದಸ್ಯತ್ವ ಬಗ್ಗೆ ತುಳುನಾಡ ಕಲಾವಿದ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಸ್ಪಷ್ಟನೆ ನೀಡಿದ್ದು ಈ ಬಗ್ಗೆ ಮಾತನಾಡಿದ ಆಡಿಯೋ ಒಂದು ವೈರಲ್ ಆಗಿದೆ. ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ, ಯಾವುದೇ ಪಕ್ಷಕ್ಕೆ ನಾನು ಸೇರ್ಪಡೆಯಾಗಿಲ್ಲ, ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆ, ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ’ ಎಂಬ ಸ್ಪಷ್ಟನೆ ಆಡಿಯೋದಲ್ಲಿ ಇದೆ. ಬಿಜೆಪಿ ನಾಯಕರು ಕರೆಮಾಡಿ ನಿಮ್ಮ ಮನೆಗೆ ಬರುತ್ತೇವೆ ಎಂದಾಗ ಬನ್ನಿ ಎಂದು […]