Breaking News :

ಸಿಎಂ ಕೈ ಸೇರಿದ ಬಿಜೆಪಿ ಅವಧಿಯ ಕೋವಿಡ್ ಹಗರಣದ ವರದಿ; ಮುಡಾ ಹಗರಣದ ಆರೋಪದ ಮಧ್ಯೆ ಮಹತ್ವ ಪಡೆದುಕೊಂಡ ಬೆಳವಣಿಗೆ

ಬಿಜೆಪಿ ಸರ್ಕಾರದ ಸವಧಿಯಲ್ಲಿ ನಡೆದ ಕೋವಿಡ್‌ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಜಸ್ಟಿನ್‌ ಜಾನ್‌ ಮೈಕಲ್‌ ಡಿ.ಕುನ್ಹಾ ನೇತೃತ್ವದ ಆಯೋಗ ವರದಿಯನ್ನು ಸಲ್ಲಿಕೆ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ಭಾರೀ ಸದ್ದು ಮಾಡಿತ್ತು. ವೆಂಟಿಲೇಟರ್‌, ಆಕ್ಸಿಜನ್‌ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್‌-19 ನಿರ್ವಹಣಾ ಉಪಕರಣಗಳು, ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್‌ […]

ಪ್ರವಾದಿಯ ನಿಂದನೆ: ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರವಾದಿ ಮಹಮ್ಮದ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಹಾರಾಷ್ಟ್ರದ ರಾಮಗಿರಿ ಮಹಾರಾಜ ವಿರುದ್ಧ ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯದಿಂದ ಜಿಲ್ಲಾಡಳಿತಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಸ್ವಾಮೀಜಿಯನ್ನು ಬಂಧಿಸುವಂತೆ ಒತ್ತಾಯ ಮಾಡಲಾಗಿದ್ದು, ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಯನ್ನು ಬಂಧಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಈ ಬಗ್ಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ. ಸ್ವಾಮೀಜಿ ಆಗಸ್ಟ್ 15.ರಂದು ಮಹಾರಾಷ್ಟ್ರದ ನಾಸಿಕ […]

ಸಭೆಯಲ್ಲಿ ಕೈಕೊಟ್ಟ ಕರೆಂಟ್, ಇಂಧನ ಸಚಿವರು ಗರಂ, ಕಣ್ಣೀರಿಟ್ಟ ಅಧಿಕಾರಿ

ವಿದ್ಯುತ್ ಸಮಸ್ಯೆ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸುವಾಗಲೇ ಪದೇಪದೇ ವಿದ್ಯುತ್‌ ಕೈಕೊಟ್ಟು ಮುಜುಗರ ಅನುಭವಿಸಿದ ಬಗ್ಗೆ ವರದಿಯಾಗಿದೆ. ಪದೇ ಪದೇ ವಿದ್ಯುತ್ ಸ್ಥಗಿತಗೊಂಡಾಗ ‘ಏಕೆ ಪವರ್ ಕಟ್ ಮಾಡುತ್ತೀರಿ’ ಎಂದು ಸಿಬ್ಬಂದಿಯನ್ನು ಸಿಟ್ಟಿನಿಂದ ಅವರು ಪ್ರಶ್ನಿಸಿದ್ದಾರೆ. ಬೆಂಗಳೂರಿಗೆ ತೆರಳುವ ಮುನ್ನ ಸಚಿವರು ವಿದ್ಯುತ್‌ ಅಡಚಣೆಗಾಗಿ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಶುಭಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಂದಾಗ ಈ ರೀತಿ ಆಗಬಾರದು ಎಂದು ಎಚ್ಚರಿಕೆಯನ್ನು […]

ಮುಡಾ ಹಗರಣ: ರಾಜ್ಯಪಾಲರಿಂದ ಅಚ್ಚರಿಯ ಹೇಳಿಕೆ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಆಗ್ರಹಿಸಿ ರಾಜಭವನದ ಚಲೋ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯಪಲರು ಅಚ್ಚರಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜಭವನ ಚಲೋ ಪ್ರತಿಭಟನೆ ಬಳಿಕ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ದಾಖಲಾಗಿರುವ […]

ಜೈಲು ಶಿಕ್ಷೆ ಭಯದಿಂದ ನ್ಯಾಯಾಲಯದಲ್ಲೇ ವಿಷ ಸೇವನೆ; ಆರೋಪಿ ಆಸ್ಪತ್ರೆಗೆ ದಾಖಲು

ದಾವಣಗೆರೆ: ಜೈಲು ಶಿಕ್ಷೆಯ ಭಯದಿಂದ ನ್ಯಾಯಾಲಯ ದಲ್ಲಿಯೇ ವಿಷ ಸೇವಿಸಿ ಆರೋಪಿಯೊಬ್ಬ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿನ ಆರೋಪಿ ಫಜಲ್ ಅಲಿ (38) ಶನಿವಾರ) ದಾವಣಗೆರೆ ಜಿಲ್ಲೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್​ಸಿ ಕೋರ್ಟ್​ಗೆ ಹಾಜರಾಗಿದ್ದ. ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆರೋಪಿಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಫಜಲ್ ಅಲಿ ಹಾಗೂ ಆತನ ಪತ್ನಿ ವಿಚ್ಚೇಧನ ಪಡೆದಿದ್ದರು. ಬಳಿಕ ಕೋರ್ಟ್​ ಆದೇಶದಂತೆ ಪತ್ನಿಗೆ […]

ಭಾರೀ ಸದ್ದು ಮಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಎಷ್ಟು ವೆಚ್ಚವಾಗಿದೆ ಗೊತ್ತಾ?

ದರ್ಶನ್ ಗ್ಯಾಂಗ್ ನ್ನು ಜೈಲಿಗಟ್ಟಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಎಷ್ಟು ವೆಚ್ಚವಾಗಿದೆ ಎಂಬುವುದು ಎಲ್ಲರ ಕುತೂಹಲವಾಗಿದೆ. ಎಸಿಪಿ ಚಂದನ್ ನೇತೃತ್ವದ ತಂಡ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಬಂಧಿಸಿತ್ತು. ಆ ಬಳಿಕ ಕೊಲೆಗೆ ಸಂಬಂಧಿಸಿ ಮಹತ್ವದ ಸಾಕ್ಷಿಯನ್ನು ಸಂಗ್ರಹಿಸಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ವೆಚ್ಚ ಈವರೆಗೆ 5 ಲಕ್ಷ ಎನ್ನಲಾಗಿದೆ. ಪ್ರಕರಣದ ತನಿಖೆಗೆ ಈವರೆಗೆ ಖಾಕಿ ಪಡೆ 5 ಲಕ್ಷ ವೆಚ್ಚ ಮಾಡಿದೆ ಎನ್ನಲಾಗಿದೆ. ಅದರಲ್ಲಿಯೂ ಎಲೆಕ್ಟ್ರಾನಿಕ್ ಡಿವೈಸ್ ಗಳ ಖರೀದಿಗೆ ಹೆಚ್ಚು ವೆಚ್ಚವಾಗಿರುವುದಾಗಿ […]

ಸುಳ್ಯ: ಪಾರಿನ್ ನಲ್ಲಿ ಕೆಲಸ ಸಿಕ್ಕಿದೆ ಎಂದ ಮಗಳನ್ನು ಏರ್ ಪೋರ್ಟ್ ತನಕ ಬಿಟ್ಟು ಬಂದ ಮನೆ ಮಂದಿ, ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆ ಪರಾರಿಯಾದ ಯುವತಿ!

ಅಪ್ಪ-ಅಮ್ಮನಿಗೆ ಮಗಳು ಪಾರಿನ್ ಗೆ ಹೋಗುವುದಾಗಿ ಹೇಳಿ ಏರ್ ಪೋರ್ಟ್ ತನಕ‌ ಕರೆದುಕೊಂಡು ಬಂದು ಬಳಿಕ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ಪಿಯುಸು ಪಾಸ್‌ ಆಗಿದ್ದಳು. ವಿದೇಶದಲ್ಲಿ ನನಗೆ ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ಪಾಸ್‌ಪೋರ್ಟ್‌ ಕೂಡ ರೆಡಿ ಮಾಡಿಕೊಂಡಿದ್ದೇನೆ. ವಿಮಾನದ ಟಿಕೆಟ್‌ ಕೂಡ ಬುಕ್‌ ಆಗಿದೆ ಎಂದು ಪೋಷಕರಿಗೆ ನಂಬಿಸಿದ್ದಳು. ಅದರಂತೆ ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ಬೆಂಗಳೂರು […]

ವಿವಿಧ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ; ಸರಕಾರದಿಂದ ಜನಸಾಮಾನ್ಯರಿಗೆ ಗುಡ್ ನ್ಯೂಸ್

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ನಿಗಮಗಳಾದ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಸವಿತಾ-ಸಮಾಜ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಅಲೆಮಾರಿ-ಅರೆಮಾರಿ ಅಭಿವೃದ್ಧಿ […]

BIG News ವಕೀಲ ಕೆ.ಎನ್ ಜಗದೀಶ್ ಅರೆಸ್ಟ್..

ಬೆಂಗಳೂರು: ವಾರೆಂಟ್ ಜಾರಿಯಾದ್ರೂ ಕೋರ್ಟ್ ಗೆ ಹಾಜರಾಗದ ಹಿನ್ನೆಲೆ ವಕೀಲ ಕೆ.ಎನ್. ಜಗದೀಶ್ ಕುಮಾರ್ ರನ್ನು ಅರೆಸ್ಟ್ ಮಾಡಲಾಗಿದೆ. ಕೊಡಿಗೇಹಳ್ಳಿ ಪೊಲೀಸರಿಂದ ಗೋವಾದಲ್ಲಿ ಜಗದೀಶ್ ಅವರನ್ನು ಬಂಧಿಸಿದ್ದಾರೆ. ಜಗದೀಶ್ ಅವರನ್ನು ಗೋವಾದಲ್ಲಿ ಬಂಧಿಸಿ ಬೆಂಗಳೂರಿಗೆ ಪೊಲೀಸರು ಕರೆ ತಂದಿದ್ದಾರೆ. 2022ರಲ್ಲಿ ಇವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಆದರೆ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರು ವಕೀಲ ಜಗದೀಶ್ ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು […]

ಪಾರ್ಕಿಂಗ್ ವಿಚಾರದಲ್ಲಿ ಮಾತನಾಡಿದ್ದಕ್ಕೆ ಅಪ್ರಾಪ್ತ ಬಾಲಕನನ್ನು ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು

ರೆಹಮಾನ್ ಕೊಲೆಯಾದ ಯುವಕ ಬೆಂಗಳೂರು; ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ಸೊಂಡೆಕುಪ್ಪ ಗ್ರಾಮ ಪಂಚಾಯಿತಿ ಬಳಿ ನಡೆದಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೆಹಮಾನ್ (17) ಕೊಲೆಯಾದ ಯುವಕ. ಅದೇ ಗ್ರಾಮದ ರೇಣುಕಾ ಹಾಗೂ ಪರ್ಮಿ ಎಂಬವರು ರೆಹಮಾನ್ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ರೆಹಮಾನ್ ಹುಟ್ಟು ಹಬ್ಬಕ್ಕೆಂದು ಮಂಗಳವಾರ ಕೇಕ್ ತರಲು ಬೇಕರಿ ಬಳಿ ಹೋಗಿದ್ದ. ಈ ವೇಳೆ ಆರೋಪಿಗಳು ಅಂಗಡಿ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದು, ಇದನ್ನು ರೆಹಮಾನ್ […]