Breaking News :

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್, ಕೋರ್ಟ್ ನಲ್ಲಿ ಮಹತ್ವದ ವಿಚಾರ ಉಲ್ಲೇಖಿಸಿ ವಾದಿಸಿದ ಅಭಿಷೇಕ್‌ ಮನು ಸಿಂಘ್ವಿ

ಬೆಂಗಳೂರು:ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಆದೇಶದ ಕುರಿತ ವಿಚಾರಣೆಯನ್ನು ಮತ್ತೆ ಕರ್ನಾಟಕ ಹೈಕೋರ್ಟ್ ಮುಂದೂಡಿದೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಪೀಠ ವಿಚಾರಣೆ ನಡೆಸಿತು. ವಾದ ಆಲಿಸಿದ ಪೀಠವು ವಿಚಾರಣೆನ್ನು ಆಗಸ್ಟ್ 31ಕ್ಕೆ ಮುಂದೂಡಿದೆ. ಸಿಎಂ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಆರೋಪಗಳಿಗೆ ಯಾವುದೇ ಶೋಕಾಸ್‌ ನೋಟಿಸ್‌ […]

ವಿದ್ಯುತ್ ಕಂಬದ ಮೇಲೆ ಧಾರ್ಮಿಕ ಚಿಹ್ನೆ: ವಿವಾದ

ಗಂಗಾವತಿ ನಗರದಲ್ಲಿ ವಿದ್ಯುತ್ ಮೇಲಿರುವ ಧಾರ್ಮಿಕ‌ ಚಿಹ್ನೆ ಅಳವಡಿಕೆ ವಿಷಯ ವಿವಾದಕ್ಕೆ ತಿರುಗಿದೆ. ಈ ಬಗ್ಗೆ ಎಸ್ಡಿಪಿಐ ದೂರು ಆಧರಿಸಿ ತೆರವಿಗೆ ಸೂಚಿಸಿದ್ದ ತಾಲೂಕು ಆಡಳಿತ, ಸದ್ಯ ತೆರವು ಮಾಡದಂತೆ ಸೂಚಿಸಿದೆ ಎಂದು ವರದಿಯಾಗಿದೆ. ಗಂಗಾವತಿ ನಗರದ ಇಂದಿರಾಗಾಂಧಿ ವೃತ್ತದಿಂದ ಮಹಾರಾಣ ಪ್ರತಾಪ ಸಿಂಗ್ ವೃತ್ತವರೆಗೆ ನಗರಸಭೆ ವಿದ್ಯುತ್ ದೀಪ ಕಂಬ ಅಳವಡಿಸಿದೆ.ಕಂಬದ ಮೇಲೆ ಹಿಂದು ಧಾರ್ಮಿಕ ಚಿಹ್ನೆಗಳಾದ ಗಧೆ, ಬಿಲ್ಲು, ಬಾಣ ಹಾಗೂ ವೆಂಕಟೇಶ್ವರ ಸ್ವಾಮಿ ಚಿಹ್ನೆಗಳನ್ನು ಹಾಕಲಾಗಿದೆ. ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಚಿಹ್ನೆ […]

ಪ್ರೀತಿ ನಿರಾಕರಿಸಿದ ಮಂಗಳಮುಖಿ ಹನೀಷಾಗೆ ಚೂರಿಯಿಂದ ಇರಿದ ಆದಿಲ್

ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಯುವಕನೊರ್ವ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಆತನಿಗೆ ಪೊಲೀಸರಿಗೆ ಒಪ್ಪಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ. ಹನೀಷಾ(21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿಯಾಗಿದ್ದಾರೆ. ಮಂಡ್ಯದ ಆದಿಲ್‌ (23) ಚಾಕುವಿನಿಂದ ಇರಿದ ಆರೋಪಿಯಾಗಿದ್ದಾನೆ. ಇವರಿಬ್ಬರು ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಬೇರೆ- ಬೇರೆ ಊರುಗಳಿಗೆ ಆಗಾಗ ಹೋಗುತ್ತಿದ್ದರು. ಇದನ್ನು ಸಹಿಸದ ಆದಿಲ್‌ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ […]

ಉತ್ತರಕನ್ನಡದಲ್ಲಿ ಎನ್ ಐಎ ದಾಳಿ; ಮೂವರು ವಶಕ್ಕೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಕಾರವಾರ ತಾಲೂಕಿನ ಮುದಗಾ, ತೋಡುರು, ಕುಮಟಾ ಹನೇಹಳ್ಳಿ ಗ್ರಾಮದಲ್ಲಿ ಎನ್‌ಐಎ ದಾಳಿ ನಡೆದಿದೆ. ನೌಕಾನೆಲೆಯ ಫೋಟೋ ರವಾನೆಯಾಗಿ ಗುಪ್ತ ಮಾಹಿತಿ ಸೋರಿಕೆಯಾಗಿರುವ ಹಿನ್ನೆಲೆ ಎನ್‌ಐಎ ಅಧಿಕಾರಿಗಳು ನೌಕಾನೆಲೆಯಲ್ಲಿರುವ ಮೂವರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. 2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್‌ ಎಂಬಾತನನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿತ್ತು. ದೀಪಕ್‌ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ದೀಪಕ್‌ ವಿಚಾರಣೆ ವೇಳೆ ಮೂವರ ಹೆಸರು ಬೆಳಕಿಗೆ […]

ವಿವಿ ಸಿಂಡಿಕೇಟ್ ಗೆ ಯುಟಿ ಫರ್ಝಾ‌ನ ನಾಮ ನಿರ್ದೇಶನ: ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ

ಯು.ಟಿ.ಫರ್ಝಾನಾ ಅಶ್ರಫ್‌ ಅವರನ್ನು ಬೆಂಗಳೂರು ಸೆಂಟ್ರಲ್‌ ಯೂನಿವರ್ಸಿಟಿ ಸಿಂಡಿಕೇಟ್‌ ಸದಸ್ಯೆಯಾಗಿ ನಾಮ ನಿರ್ದೇಶನ ಮಾಡಿರುವುದು ಹಲವು ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕಾಂಗ್ರೆಸ್‌ ಮುಖಂಡೆಯರಾದ ಕವಿತಾ ರೆಡ್ಡಿ ಹಾಗೂ ರೇಖಾ ಶ್ರೀನಿವಾಸ್‌ ಬಹಿರಂಗವಾಗಿಯೇ ಅಸಮಧಾನ ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕವಿತಾ ರೆಡ್ಡಿ, ಪ್ರತಿದಿನ ಬಿಜೆಪಿಯ ದಾಳಿಯನ್ನು ಸಹಿಸಿಕೊಳ್ಳುತ್ತಾ ಪಕ್ಷಕ್ಕಾಗಿ ದುಡಿಯುತ್ತಿರುವ ಮಹಿಳೆ ರೇಖಾ ಶ್ರೀನಿವಾಸ್‌ ಅವರಿಗೆ ಇದರಿಂದ ಭಾರೀ ಅನ್ಯಾಯವಾಗಿದೆ ಎಂದಿದ್ದರೆ, ರೇಖಾ ಶ್ರೀನಿವಾಸ್‌ ಅವರು ಪ್ರತಿಕ್ರಿಯಿಸಿ, ಪಕ್ಷ ಕಟ್ಟಿದ ಸಾವಿರಾರು ಹೆಣ್ಣು […]

BIG News ಬೆಂಗಳೂರು ಏರ್ ಪೋರ್ಟ್ ನಲ್ಲೇ ವ್ಯಕ್ತಿಯೋರ್ವನ ಬರ್ಬರ ಕೊಲೆ

ಬೆಂಗಳೂರಿನ ಏರ್ ಪೋರ್ಟ್ ನಲ್ಲಿಯೇ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1ರಲ್ಲೇ ಟ್ರಾಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಂತ ಟ್ರಾಲಿ ಆಪರೇಟರ್ ಒಬ್ಬನನ್ನು ಆಕೆಯ ಪತಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಸ್ಥಳಕ್ಕೆ ಏರ್ ಪೋರ್ಟ್ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ […]

ಕಾಂಗ್ರೆಸ್ ಸಚಿವನ ಪುತ್ರ & ಬಿಜೆಪಿ ಶಾಸಕನ ಪುತ್ರಿ ನಿಶ್ಚಿತಾರ್ಥ

ಸಚಿವ ಬೈರತಿ ಸುರೇಶ್ ಪುತ್ರ ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್ ವಿಶ್ವನಾಥ್ ಪುತ್ರಿಯ ವಿವಾಹ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ ನೆರವೇರಿದೆ. ರಾಜ್ಯದ ನಗರಾಭಿವೃದ್ಧಿ ಸಚಿವರಾಗಿರುವ ಬೈರತಿ ಸುರೇಶ್​ ಮಗ ಹಾಗೂ ಬಿಜೆಪಿ ಯಲಹಂಕ ಶಾಸಕ ಎಸ್​ ಆರ್ ವಿಶ್ವನಾಥ್​ ಮಗಳು ಮುಂದಿನ ವರ್ಷ ವಿವಾಹವಾಗಲಿದ್ದಾರೆ. ಇಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಇದು ಲವ್​ ಕಮ್​ ಆರೆಂಜ್​ ಮ್ಯಾರೇಜ್​ ಎಂದು ತಿಳಿದುಬಂದಿದೆ. ಬುಧವಾರ ಖಾಸಗಿ ಹೋಟೆಲ್​ನಲ್ಲಿ ವಿಶ್ವನಾಥ್ ಪುತ್ರಿ ಅಪೂರ್ವ ಹಾಗೂ ಬೈರತಿ ಸುರೇಶ್​ ಪುತ್ರ ಸಂಜಯ್​ […]

ಪತ್ನಿಯನ್ನು ಕೊಲೆಗೈದು ಪೊಲೀಸರ ಮುಂದೆ ಅಮಾಯಕನಂತೆ ನಾಟಕವಾಡಿದ್ದ ಪತಿ ಅರೆಸ್ಟ್‌

ಪತ್ನಿಯನ್ನು ತಾನೇ ಕೊಲೆಗೈದು ಪೊಲೀಸರ ಮುಂದೆ ಅಮಾಯಕನಂತೆ ನಾಟಕವಾಡಿದ್ದ ಪತಿಯನ್ನು ಅರೆಸ್ಟ್‌ ಮಾಡುವಲ್ಲಿ ಬೆಂಗಳೂರಿನ ಬಾಗಲೂಟು ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೆಹಬೂಬ್‌ ಪಾಷಾ(50) ಬಂಧಿತ ಆರೋಪಿ. ಆ.25 ರಂದು ಈತ ತನ್ನ ಪತ್ನಿ ಮಮ್ತಾಜ್‌ಳನ್ನು ಯಾರೋ ಕೊಲೆ ಮಾಡಿರುವುದಾಗಿ ದೂರು ದಾಖಲಿಸಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಮಹಬೂಬ್‌ ಪಾಷಾ ತನ್ನ ಪತ್ನಿ ಮಮ್ತಾಜ್‌ ಜೊತೆಗೆ ಬಾಗಲೂರಿನಲ್ಲಿ ವಾಸವಾಗಿದ್ದ. ಕೌಟುಂಬಿಕ ಕಾರಣಗಳಿಂದ ಪತ್ನಿಯೊಡನೆ ಆಗಾಗೆ ಜಗಳ ನಡೆಯುತ್ತಿದ್ದು, ಭಾನುವಾರ ಜಗಳ ವಿಕೋಪಕ್ಕೆ ತಿರುಗಿತ್ತು. ಕುಪಿತಗೊಂಡ ಪಾಷಾ ತನ್ನ ಪತ್ನಿಯನ್ನು […]

ಕಾಪು ಪುರಸಭೆ ಚುನಾವಣೆ; ಎಸ್ ಡಿಪಿಐ ಸದಸ್ಯೆ ಬಿಜೆಪಿ ಸೇರ್ಪಡೆ, ಉಪಾಧ್ಯಕ್ಷೆಯಾಗಿ ಆಯ್ಕೆ

ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಆಪರೇಷನ್ ಕಮಲ ಸದ್ದು ಮಾಡಿದ್ದು, ಎಸ್‌ಡಿಪಿಐಗೆ ಭಾರತೀಯ ಜನತಾ ಪಕ್ಷ ಆಪರೇಷನ್ ಮಾಡಿದೆ. ಎಸ್‌ಡಿಪಿಐನಿಂದ ಗೆದ್ದಿರುವ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿ ಉಪಾಧ್ಯಕ್ಷೆಯಾಗಿದ್ದಾರೆ. ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸರಿತಾ ಶಿವಾನಂದ್ ಬಿಜೆಪಿ ಸೇರ್ಪಡೆಯಾಗಿ ಮಧ್ಯಾಹ್ನ ಪುರಸಭೆ ಉಪಾಧ್ಯಕ್ಷೆಯಾಗಿದ್ದಾರೆ. ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮ್ಮುಖದಲ್ಲಿ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಧ್ಯಕ್ಷ /ಉಪಾಧ್ಯಕ್ಷ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಸ್ಥಾನ […]

ಉಪ್ಪಿನಂಗಡಿ: ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯ ಅರೆಸ್ಟ್

ಉಪ್ಪಿನಂಗಡಿ: ರಸ್ತೆ ಕನ್ ಸ್ಟ್ರಕ್ಷನ್ ಕಂಪೆನಿಗೆ ಸೇರಿದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತರ್ ಜಿಲ್ಲಾ ಕಳ್ಳ ಹಾಗೂ ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಡಬ ತಾಲೂಕು ಐತ್ತೂರು ಗ್ರಾಮದ ಕಾರ್ಯತಡ್ಕ ನಿವಾಸಿ ಅಬ್ದುಲ್ ಹಮೀದ್ ಅಲಿಯಾಸ್ ಹಮೀದ್(27) ಎಂದು ಗುರುತಿಸಲಾಗಿದೆ. ಈತ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಯ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಆರೋಪಿಯು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪರಿಯಶಾಂತಿ, […]