ಅಂತಿಮ ದರ್ಶನಕ್ಕೆ ಬಂದು ಜಗಳ; ಓರ್ವನ ಕೊಲೆಯಲ್ಲಿ ಅಂತ್ಯ

ಬೆಂಗಳೂರು:ಸಾವಿನ ಮನೆಗೆ ಬಂದು ವ್ಯಕ್ತಿಯೋರ್ವ ಸ್ನೇಹಿತನಿಂದಲೇ ಕೊಲೆಯಾದ ಹೃದಯ ವಿದ್ರಾಹಕ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ನಲ್ಲಿ ನಡೆದಿದೆ. ಸ್ನೇಹಿತ ಶರತ್ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಕೊಲೆ ಮಾಡಿದ್ದಾನೆ. ಅಂಜನಪ್ಪ ಗಾರ್ಡನ್ನಲ್ಲಿ ಒಂದು ಸಾವಾಗಿರುತ್ತದೆ. ಹೀಗಾಗಿ ಅವರ ಅಂತಿಮ ದರ್ಶನ ಪಡೆಯಲು ಈ ಇಬ್ಬರು ಆಗಮಿಸಿದ್ದರು. ಅಲ್ಲಿ ಶರತ್ ಓರ್ವ ಮಹಿಳೆಗೆ ಬೈದಿದ್ದನೆನ್ನಲಾಗಿದೆ.ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ವಾಪಸ್ ಮನೆಗೆ ತೆರಳುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, […]
ಅಜ್ಮೀರ್ ಯಾತ್ರೆಗೆಂದು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ

ಅಜ್ಮೀರ್ ಯಾತ್ರೆಗೆ ಹೋಗಿ ಬರುತ್ತೇವೆ ಎಂದು ಹೇಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾದ ಘಟನೆ ಬಳ್ಳಾರಿಯ ಜಯನಗರದಲ್ಲಿ ನಡೆದಿದೆ. ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಶ್ರೀನಿವಾಸ್ ಅಪಾರ್ಟಮೆಂಟ್‍ನಲ್ಲಿದ್ದ ಎಂ.ಎಸ್.ನಜೀರ್ ಅಹಮದ್(50), ಪತ್ನಿ ಮುನಿಯಾರ್ ರೊಖಾಯಾ(47) ಮಕ್ಕಳಾದ ಎಂ.ಎಸ್.ಸಾನಿಯ ಕೌಸರ್(21), ಶಗುಪ್ತ ಅಂಜುಮ್(15)ನಾಪತ್ತೆಯಾಗಿದ್ದಾರೆ. ಈ ಕುಟುಂಬವು ಜುಲೈ 7 ರಂದು ಅಜ್ಮೀರ್‍ಗೆ ಹೋಗುವುದಾಗಿ ಹೇಳಿ, ಈವರೆಗೂ ಹಿಂದಿರುಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯ ಅಪಹರಣ ಪ್ರಕರಣ; ಹೆಚ್ ಡಿ ರೇವಣ್ಣ, ಭವಾನಿ ಸೇರಿ 9 ಆರೋಪಿಗಳಿಗೆ ಸಮನ್ಸ್

ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿ 9 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಆರೋಪಿಗಳಿಗೆ ಆಗಸ್ಟ್ 28ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ಸತೀಶ್ ಬಾಬು,ಮನುಗೌಡ,ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು,ಎಸ್.ಟಿ.ಕೀರ್ತಿ ಮತ್ತು ಅಜಿತ್ ಕುಮಾರ್ಗೆ ಐಪಿಸಿ ಸೆಕ್ಷನ್ 364 A ಕೈಬಿಟ್ಟು ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ. ಆರೋಪಿ ಭವಾನಿ ರೇವಣ್ಣಗೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು […]
ಯಡಿಯೂರಪ್ಪಗೆ ಬಿಗ್ ಶಾಕ್ ; ಪೋಕ್ಸೋ ಕೇಸ್ ನಲ್ಲಿ ಬಂಧನಕ್ಕೆ ತಡೆ ಆದೇಶ ತೆರವು ಕೋರಿ ಕೋರ್ಟ್ ಮೊರೆ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ತಡೆ ನೀಡಿರುವ ಆದೇಶಕ್ಕೆ ತೆರವು ಕೋರಿ ಸಿಐಡಿ ಎಸ್ ಪಿಪಿ ಅಶೋಕ್ ನಾಯ್ಕ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ವಿರುದ್ಧದ ಪೋಕ್ಸೋ ಪ್ರಕರಣ ಸಂಬಂಧ ಯಡಿಯೂರಪ್ಪರನ್ನು ಬಂಧಿಸಿದಂತೆ ನೀಡಿದ್ದ ಆದೇಶವನ್ನು ತೆರವು ಕೋರಿ ಸಿಐಡಿ ಎಸ್ ಪಿಪಿ ಅಶೋಕ್ ನಾಯ್ಕ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪೋಕ್ಸೋ ಪ್ರಕರಣವನ್ನು ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮಧ್ಯಂತರ ರಕ್ಷಣೆಗೆ ನೀಡಿತ್ತು. […]
ಭದ್ರಾವತಿ; ಶಾಸಕ ಸಂಗಮೇಶ್ ಪುತ್ರನ ಹತ್ಯೆಗೆ ಸಂಚು; ಪ್ರಕರಣ ದಾಖಲು

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವಣ್ಣ ಅವರ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿರುವುದು ಬಯಲಾಗಿದೆ. ಬಸವಣ್ಣ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರ ಎಫ್‌ಐಆರ್ ನಲ್ಲಿ ದಾಖಲಾಗಿದೆ. ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಮೇರೆಗೆ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಟ್ ಪಟ್ ನಗರದ ನಿವಾಸಿ ಮುಬಾರಕ್ ಮುಬ್ಬು ಎಂಬಾತ ಕಳೆದ 17ನೇ ತಾರಿಕಿನಂದು ವ್ಯಕ್ತಿಯೋರ್ವನ ಬಳಿ ಬಂದು ಬಸವಣ್ಣ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಬಳಿಕ […]
ಸಿಎಂ ಬದಲಾವಣೆ ವಿಚಾರ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಮೂಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿದೆ.ಈ ಮಧ್ಯೆ ಕಾಂಗ್ರೆಸ್ ಪಕ್ಷವು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ ಪರಮೇಶ್ವರ್, ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ.ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್ ನಿಲ್ಲಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಬೆಂಬಲ ನಿಲ್ಲುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಹೈಕಮಾಂಡ್ ಮಾಹಿತಿ ನೀಡಲಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೆ […]
ಮಂಗಳೂರು; ಐವನ್ ಡಿಸೋಜಾ ಮನೆಗೆ ಕಲ್ಲೆಸೆತ

ಮಂಗಳೂರು: ವಿಧಾನಪರಿಷತ್ ಶಾಸಕ ಐವನ್ ಡಿಸೋಜಾರ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಐವನ್ ಡಿಸೋಜಾ ಅವರ ವೆಲೆನ್ಸಿಯಾದಲ್ಲಿದ್ದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟದಿಂದ ಅವರ ಮನೆಯ ಕಿಟಕಿಯ ಗಾಜಿಗೆ ಹಾನಿಯಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ಕಳ: ಬಸ್ಸಿನಿಂದ ಎಸೆಯಲ್ಪಟ್ಟು ಕಾಲೇಜು ವಿದ್ಯಾರ್ಥಿ ಮೃತ್ಯು

ಕಾರ್ಕಳ: ಬಸ್ಸಿನಿಂದ ಎಸೆಯಲ್ಪಟ್ಟು ಕಾಲೇಜ್ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಬುಧವಾರ ಬೆಳಗ್ಗೆ ಕಾರ್ಕಳದ ನಿಟ್ಟೆಯಲ್ಲಿ ಸಂಭವಿಸಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ ವಿದ್ಯಾರ್ಥಿಯಾಗಿದ್ದಾನೆ. ಜನಿತ್ ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ಕಾರ್ಕಳದಿಂದ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಎಸೆಯಲ್ಪಟ್ಟಿದ್ದು ಈ ಸಂದರ್ಭ ಆತನ ಮೈ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದ. […]
ಸನ್ನಿವೇಶ ಬಂದರೆ ಯಾವುದೇ ಮುಲಾಜಿ ಇಲ್ಲದೆ ಕುಮಾರಸ್ವಾಮಿಯನ್ನು ಬಂಧಿಸುತ್ತೇವೆ; ಸಿಎಂ ಸಿದ್ದರಾಮಯ್ಯ

ಬಂಧಿಸುವ ಸನ್ನಿವೇಶ ಬಂದರೆ ಯಾವುದೇ ಮುಲಾಜಿ ಇಲ್ಲದೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸದ್ಯಕ್ಕೆ ಕುಮಾರಸ್ವಾಮಿಯನ್ನು ಬಂಧಿಸುವ ಸನ್ನಿವೇಶ ಬಂದಿಲ್ಲ. ಕುಮಾರಸ್ವಾಮಿ ಮೇಲೆ ಈಗಾಗಲೇ ಲೋಕಾಯುಕ್ತ ಹಾಗೂ ಎಸಿಬಿ ಸಂಸ್ಥೆಗಳು ತನಿಖೆ ಮಾಡಿವೆ. ಕುಮಾರಸ್ವಾಮಿ ವಿರುದ್ಧ ಸಾಕಷ್ಟು ದಾಖಲೆ ಸಿಕ್ಕಿವೆ. ಈ ಹಿನ್ನೆಲೆ ಲೋಕಾಯುಕ್ತ ಸಂಸ್ಥೆ ಪ್ರಾಸಿಕ್ಯೂಷನ್ ಗೆ ಪರವಾನಗಿ ನೀಡುವಂತೆ ರಾಜ್ಯಪಾಲರನ್ನು ಕೇಳಿದ್ದಾರೆ. ಕುಮಾರಸ್ವಾಮಿಗೆ ಭಯ ಬಂದಿದೆ. […]
ಬೆಟ್ಟದಿಂದ ಉರುಳಿ ಬಂದ ಬೃಹತ್ ಗಾತ್ರದ ಬಂಡೆ; ಕೂದಳೆಲೆ ಅಂತರದಲ್ಲಿ ಪಾರಾದ 20ಕ್ಕೂ ಅಧಿಕ ಜನ

ಮಳೆಯಿಂದಾಗಿ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲುಬಂಡೆ ಉರುಳಿದ್ದು, ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಜನರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಸಂಗಾಪುರದ 2ನೇ ವಾಡರ್ ಗದ್ವಾಲ್ ಏರಿಯಾದ ಸಮೀಪದಲ್ಲಿರುವ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ಉರುಳಿದೆ. ಐದಾರು ಮನೆಗಳಿಗೆ ಹಾನಿಯಾಗುವುದು ಕೂದಲೆಳೆಯ ಅಂತರದಿಂದ ತಪ್ಪಿ ಹೋಗಿದೆ. ಉರುಳಿ ಬಂದ ಬಂಡೆ ಕುಡಿಯುವ ನೀರಿಗಾಗಿ ಹಾಕಲಾಗಿದ್ದ ನಾಲ್ಕು ಇಂಚು ಗಾತ್ರದ ಕಬ್ಬಿಣದ ಪೈಪ್ ನಿಂದಾಗಿ ನಿಂತುಕೊಂಡಿದೆ. ಇದರಿಂದ ನಾಲ್ಕೈದು ಮನೆಯಲ್ಲಿ ವಾಸವಿದ್ದ ಸುಮಾರು 20ಕ್ಕೂ ಹೆಚ್ಚು ಜನರ […]