Breaking News :

ವಿವಾದಿತ ಈದ್ಗಾ ಮೈದಾನದಲ್ಲಿ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶವಿಲ್ಲ; ಜಿಲ್ಲಾಡಳಿತ ಸ್ಪಷ್ಟನೆ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ದ್ವಜಾರೋಹಣಕ್ಕೆ ಸಿದ್ದತೆ ನಡೆಯುತ್ತಿದೆ, ಆದರೆ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶ ಇಲ್ಲ  ಎಂದು ಜಿಲ್ಲಾಡಳಿತ ತಿಳಿಸಿದೆ. ನಾಳೆ ಬೆಳಗ್ಗೆ 8 ಘಂಟೆಗೆ ನಡೆಯುವ ಧ್ವಜಾರೋಹಣಕ್ಕೆ ಜಿಲ್ಲಾಡಳಿತ ವತಿಯಿಂದ ಬೆಂ.ಉತ್ತರ ವಲಯ ಉಪವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಧ್ವಜಾರೋಹಣ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ.ಎ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶವಿಲ್ಲ. ಕೇವಲ ಸರ್ಕಾರ ನಿಗಧಿ ಪಡಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಧ್ವಜಾರೋಹಣಕ್ಕೆ ಸಂಘಟನೆಯವರು […]

ಮಂಗಳೂರು; ಆಟೋ ಚಲಾಯಿಸುತ್ತಿದ್ದಾಗ ಹೃದಯಾಘಾತವಾಗಿ ರಿಕ್ಷದಿಂದ ಬಿದ್ದು ಮೃತಪಟ್ಟ ಚಾಲಕ

ಮಂಗಳೂರು; ರಿಕ್ಷಾ ಚಲಾಯಿಸುತ್ತಿದ್ದಾಗ ಚಾಲಕ  ಹೃದಯಾಘಾತದಿಂದ ರಸ್ತೆಗೆ ಬಿದ್ದಿದ್ದು, ಚಾಲಕ ಮೃತಪಟ್ಟು ಮಹಿಳೆಯೋರ್ವರು ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ಕೋಟೆಕಾರಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44)ಹೃದಯಾಘಾತದಿಂದ ಮೃತಪಟ್ಟ ರಿಕ್ಷಾ ಚಾಲಕ. ಮಜೀದ್ ಮಂಗಳವಾರ ಮಧ್ಯಾಹ್ನ 12 ಗಂಟೆಯ ವೇಳೆ ಧರ್ಮನಗರದಿಂದ ಸಂಬಂಧಿಕರಾದ ಮಹಿಳೆಯರಿಬ್ಬರನ್ನು ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಸೋಮೇಶ್ವರ ಮಾರ್ಗವಾಗಿ ಕೋಟೆಕಾರು ಬೀರಿಗೆ ತೆರಳುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿ ಹೃದಯಾಘಾತವಾಗಿ ರಸ್ತೆಗೆ ಬಿದ್ದಿದ್ದಾರೆ. ಚಾಲಕನಿಲ್ಲದೆ ಮುಂದೆ ಚಲಿಸಿದ […]

ದೇವಸ್ಥಾನಕ್ಕೆಂದು ಕರೆದೊಯ್ದು ಪತ್ನಿಯನ್ನು ಕೊಲೆಗೈದ ಪತಿ

ಡಿವೋರ್ಸ್ ಕೇಳಿದ ಹೆಂಡತಿಯನ್ನು ದೇವಸ್ಥಾನಕ್ಕೆಂದು ಕರೆದೊಯ್ದು ಹತ್ಯೆ ಮಾಡಿರುವ ದುರಂತ ಘಟನೆ ರಾಮನಗರದ ಹೂಜಗಲ್ಲು ಬೆಟ್ಟದಲ್ಲಿ ನಿನ್ನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ದಿವ್ಯಾ (32) ಎಂದು ಗುರುತಿಸಲಾಗಿದೆ. ಕೊಲೆಯನ್ನು ಆಕೆಯ ಪತಿ ಉಮೇಶ್ ಮಾಡಿದ್ದಾನೆ. ಮದುವೆಯಾಗಿ ಕೆಲವು ವರ್ಷಗಳು ಜೀವನ ನಡೆಸಿದ ಇಬ್ಬರ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿದೆ. ಇದರಿಂದ ನನಗೆ ಡಿವೋರ್ಸ್ ಕೊಟ್ಟುಬಿಡಿ ನಾನು ಬೇರೆ ಜೀವನ ಕಟ್ಟಿಕೊಳ್ಳುತ್ತೇನೆ ಎಂದು ದಿವ್ಯಾ ಕೇಳಿದ್ದಾಳೆ. ಆಗ ಉಮೇಶ್ ತನ್ನ ಹೆಂಡತಿಯನ್ನು ಸಮಾಧಾನಪಡಿಸಿ  ಬುದ್ಧಿಯನ್ನೂ ಹೇಳಿದ್ದಾನೆ. ಆದರೆ ಇದ್ಯಾವುದನ್ನೂ […]

ಕಲ್ಲಾಪು: ಸಮೀರ್ ಕೊಲೆ ಪ್ರಕರಣ; ನಾಲ್ವರು ಆರೋಪಿಗಳು ವಶಕ್ಕೆ

ಉಳ್ಳಾಲದಲ್ಲಿ ಕಡಪ್ಪರ ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಮೊಹಮ್ಮದ್‌ ನೌಷದ್‌ ಈ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಆತನ ತಂಡ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಈ ಕೊಲೆಯಲ್ಲಿ ನೌಷದ್‌ನೊಂದಿಗೆ ನಾಟೇಕಲ್‌ನ ನಿಯಾಝ್, ಬಜಾಲ್‌ನ ತನ್ವೀರ್‌, ಪಡುಬಿದ್ರೆಯ ಇಕ್ಬಾಲ್‌ ಸಹಕರಿಸಿರುವ ಬಗ್ಗೆ ಮಾಹಿತಿಯಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕವಾಗಿ ಇಲ್ಯಾಸ್‌ ಕೊಲೆಗೆ ಪ್ರತಿಕಾರವಾಗಿ ಕೊಲೆ ನಡೆದಿರುವುದು ದೃಡಪಟ್ಟಿದೆ. ಈ ಕುರಿತು ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. […]

ಚಿಕ್ಕಮಗಳೂರು; ಬುರ್ಖಾ ಧರಿಸಿ ತಿರುಗಾಡುತ್ತಿದ್ದ ಯುವಕನ ಬಂಧನ

ಚಿಕ್ಕಮಗಳೂರು;  ಬುರ್ಖಾ ಧರಿಸಿ ಬಿಕ್ಷೆ ಬೇಡಲು ನಗರಕ್ಕೆ ಬಂದ ಯುವಕನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡು ತೆರಳುತ್ತಿದ್ದ ಹರೀಶ್ ಎಂಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ತೊಟ್ಟು ನಗರದ ಮಲ್ಲಂದೂರು ರಸ್ತೆಯಲ್ಲಿ ಹರೀಶ್ ಓಡಾಟ ನಡೆಸುವಾಗ ಅನುಮಾನಗೊಂಡು ಜನರು ಹಿಡಿದಿದ್ದಾರೆ. ಬಾಳೆಹೊನ್ನೂರು ಮೂಲದ ಹರೀಶ್ ಎಂಬಾತನನ್ನು ಸ್ಥಳೀಯರು ಥಳಿಸಿದ್ದಾರೆ. ಭಿಕ್ಷೆ ಬೇಡಲು ಬುರ್ಖಾ ಧರಿಸಿ ಬಂದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಆದರೆ […]

ಮೂಡಬಿದ್ರೆ; ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಲ್ಲಿ ಇರಿತ ಪ್ರಕರಣ; ಆರೋಪಿ ಅರೆಸ್ಟ್, ತನಿಖೆಯ ವೇಳೆ ಮಹತ್ವದ ಅಂಶಗಳು ಬಯಲು

ಪ್ರೇಮ ಪೈಫಲ್ಯದಿಂದ ವಿದ್ಯಾರ್ಥಿನಿಗೆ ಕತ್ತರಿಯಿಂದ ಯುವಕ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ನಡೆದಿದೆ. ನಿನ್ನೆ  ಮುಂಜಾನೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ತುಮಕೂರು ಮೂಲದ ಮಂಜುನಾಥ್‌ನನ್ನು ಮೂಡಬಿದಿರೆ ಪೋಲೀಸರು ಬಂಧಿಸಿದ್ದಾರೆ. ಆಳ್ವಾಸ್‌ನಲ್ಲಿ ಪಿಯುಸಿ ಓದುತ್ತಿರುವ ತುಮಕೂರು ಮೂಲದ ವಿದ್ಯಾರ್ಥಿನಿಗೆ ಕತ್ತರಿಯಿಂದ ಮಂಜುನಾಥ್ ಇರಿದಿದ್ದಾನೆ. ಮಂಜುನಾಥ್ ಹಾಗು ಯುವತಿ ಪಿಯುಸಿ ತನಕ ಜೊತೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದರು. ವಿದ್ಯಾರ್ಥಿನಿ ಮೆಸೇಜ್‌ಗೆ ಉತ್ತರಿಸುತ್ತಿಲ್ಲ ಎಂದು ಕುಪಿತಗೊಂಡಿದ್ದ ಯುವಕ ಮಂಜುನಾಥ್, ತುಮಕೂರಿನಿಂದ ಮೂಡಬಿದರೆಗೆ ಬಂದಿದ್ದ. ಜೊತೆಗೆ ಯುವತಿಯ ಭೇಟಿಗೆ […]

ಬೈಕ್ ಗೆ ಪಿಕಪ್ ಢಿಕ್ಕಿ; ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

ಬೈಕ್ ಗೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಅಗಸರಕೋಣೆ ಬಳಿ ನಡೆದಿದೆ. ಅಗಸರಕೋಣೆಯ ಶರತ್ ಹಾಗೂ ಕೇರಳದ ಮೂಲದ ಸಂತೋಷ್ ಮೃತಪಟ್ಟವರು ಎಂದು ತಿಳಿದು ಬಂದಿದೆ. ಆಗುಂಬೆ ವ್ಯಾಪ್ತಿಯ ಬಿದರಗೋಡು ಸಮೀಪದ ಅಗಸರ ಕೋಣೆಯ ಬಳಿ ಮಧ್ಯಾಹ್ನ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬರುತ್ತಿದ್ದ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಅತೀ ವೇಗದ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಅಪಘಾತದ […]

ಶಿವಮೊಗ್ಗ; ಒಂದೇ ಮನೆಯ‌ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

ಶಿವಮೊಗ್ಗ ಕ್ಲಾರ್ಕ್‌ ಪೇಟೆಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಭುವನೇಶ್ವರಿ, ಮಾರುತಿ ಹಾಗೂ ದರ್ಶನ್‌ ಮೃತರು ತಿಳಿದು ಬಂದಿದೆ. ಇವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಭುವನೇಶ್ವರಿ ಹಾಗೂ ಅವರ ತಮ್ಮ ಹಾಗೂ ಮಗ ಸಾವನ್ನಪ್ಪಿದವರು. ಇವರು ವಿಷ ಸೇವಿಸಿ ಕಳೆದ ಭಾನುವಾರವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯ್‌ ಗ್ಯಾರೇಜ್‌ ಬಳಿಇವರ ಮನೆಯಿದ್ದು, ಇವರಿಗೆ ಪೋನ್ ಸಂಪರ್ಕ ಸಿಗದ ಹಿನ್ನೆಲೆ ಸಂಬಂಧಿಕರೊಬ್ಬರು ಮನೆಯ ಬಳಿಗೆ ಬಂದು ವಿಚಾರಿಸಿದ್ದಾರೆ. ಈ […]

ಚನ್ನಪಟ್ಟಣ ಉಪಚುನಾವಣೆ; ಎನ್ ಡಿಎ ಮೈತ್ರಿಕೂಟಕ್ಕೆ ತಲೆ ನೋವಾದ ಸಿಪಿ ಯೋಗೇಶ್ವರ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಬಿಜೆಪಿ ವತಿಯಿಂದ ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷವು ಟಿಕೆಟ್‌ ನೀಡದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆಯನ್ನು ಅವರು ಕೊಟ್ಟಿದ್ದು, ಅವರ ನಡೆ ಎನ್ ಡಿಎ ಮೈತ್ರಿ ಕೂಟಕ್ಕೆ ದೊಡ್ಡ ತಲೆನೋವಾಗುವ ಸಂಭವವಿದೆ. ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿನ್ಹೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ […]

ಹುಟ್ಟು ಹಬ್ಬದ ದಿನವೇ ಇಬ್ಬರು ಯುವಕರು ಅಪಘಾತದಲ್ಲಿ ಮೃತ್ಯು

ಭೀಕರ ಅಪಘಾತದಲ್ಲಿ ಬರ್ತ್ ಡೆ ಪಾರ್ಟಿ ಮುಗಿಸಿ ವಾಪಾಸ್ಸಾಗುತ್ತಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ಬೀದರ್ ಜಿಲ್ಲೆ ಔರಾದ್‌ ತಾಲೂಕಿನ ಸೋರಳ್ಳಿ ಗ್ರಾಮದ ಸಮೀಪ ನಡೆದಿದೆ. ಔರಾದ್‌ ತಾಲೂಕಿನ ಬೇಲೂರ್‌ (ಎನ್)‌ ಗ್ರಾಮದ ಹಣಮಂತ ಚನ್ನಪ್ಪ (20), ಗಣೇಶ ಧನರಾಜ್ (19) ಮೃತರು. ಹಣಮಂತನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜಂಬಗಿ ಗ್ರಾಮದಲ್ಲಿ ಬರ್ತಡೇ ಪಾರ್ಟಿ ಮುಗಿಸಿ ಇಬ್ಬರೂ ಬೈಕ್‌ನಲ್ಲಿ ವಾಪಸ್ಸಾಗುವಾಗ ಬೈಕ್‌ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ‌. ಈ ವೇಳೆ ಇಬ್ಬರೂ ರಸ್ತೆ ಪಕ್ಕದ ಕಂದಕದಲ್ಲಿ […]