ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ

ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ಏಕಾಏಕಿ ರಕ್ತ ಸುರಿದಿದೆ. ಮೊದಲು ತಮ್ಮ ಬಳಿ ಇರುವ ಟವೆಲ್‌ನಿಂದ ಹೆಚ್‌ಡಿಕೆ ರಕ್ತ ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಜಾಸ್ತಿ ರಕ್ತ ಬಂದು ಅವರ ಬಿಳಿ ಶರ್ಟ್‌ಗೂ ತಗುಲಿದೆ. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿ ಕೊಂಚ ಗಾಬರಿಗೊಂಡಿದ್ದಾರೆ. ಈ ವೇಳೆ ಅವರ ಬಳಿಯೇ ಇದ್ದ ಮಾಜಿ ಸಿಎಂ […]
ಮಾಂಸ ವಿವಾದ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರು ನಾಯಿ ಮಾಂಸ ಪ್ರಕರಣ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, 15 ದಿವಸಕ್ಕೊಮ್ಮೆ ಮಾಂಸ […]
ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಢಿಕ್ಕಿ: ಇಬ್ಬರು ಯುವಕರು ಮೃತ್ಯು

ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಯಚೂರಿನ ಲಿಂಗಸಗರೂ ತಾಲೂಕಿನ ಅಡವಿಬಾವಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ. ಲಿಂಗಸಗೂರು ಹೊರವಲಯದ ಕರಡಕಲ್ ಗ್ರಾಮದ ನಿವಾಸಿಗಳಾದ ವಿರೇಶ್ (25), ಚನ್ನಬಸವ (24) ಮೃತ ದುರ್ದೈವಿಗಳು. ಇವರು ನಾರಾಯಣಪುರ ಜಲಾಶಯದತ್ತ ಹೊರಟ್ಟಿದ್ದು, ಇದೇ ವೇಳೆ ಮುದ್ದೇಬಿಹಾಳ ಕಡೆಯಿಂದ ಲಿಂಗಸಗೂರಿನತ್ತ ಬಸ್ ಬರುತ್ತಿತ್ತು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ವಿರೇಶ್ ಹಾಗೂ ಚನ್ನಬಸವ ಗಂಭೀರ ಗಾಯಗೊಂಡು […]
ನನ್ನ ತಂದೆಯ ಮೂಳೆಯನ್ನಾದರೂ ಹುಡುಕಿ ಕೊಡಿ: ಅಂಕೋಲಾ ಗುಡ್ಡೆ ಕುಸಿತದ ವೇಳೆ ನಾಪತ್ತೆಯಾದ ಜಗನ್ನಾಥ್ ಪುತ್ರಿಯ ಅಳಲು

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ ಕೇರಳದ ಅರ್ಜುನ್ ಗೆ ಮಾತ್ರವಲ್ಲದೆ ಜಗನ್ನಾಥ್ ಹಾಗೂ ಲೋಕೇಶ್ ಎಂಬುವವರಿಗೆ ಕೂಡ ಹುಡುಕಾಟ ನಡೆಯುತ್ತಿದೆ. ಜುಲೈ 16ರಂದು ನಡೆದ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಎಂಬುವವರು ಕಾಣೆಯಾಗಿದ್ದು, ಇಲ್ಲಿಯವರೆಗೂ ಅವರ ಸುಳಿವು ಕೂಡ ಸಿಕ್ಕಿಲ್ಲ. ಇದೀಗ ಅವರ ಮಗಳು ಪಲ್ಲವಿ ತಂದೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ತಂದೆ ಸಿಗದ ಹಿನ್ನೆಲೆ ಕಣ್ಣೀರಾಕಿರುವ ಪಲ್ಲವಿ, ನಮ್ಮ ತಂದೆ ಕಾಣೆಯಾಗಿ 12 ದಿನ ಆಯ್ತು. ಏನು ಸುದ್ದಿ ಇಲ್ಲ. ಅವರನ್ನು ಹುಡುಕಿಕೊಡಿ. ಅವರನ್ನು ನಾವೂ ನೋಡಬೇಕು. […]
ಕುರಿ ಮಾಂಸವನ್ನು ನಾಯಿ ಮಾಂಸ ಎಂದು ರಾದ್ದಾಂತ: ಪುನೀತ್ ಕೆರೆಹಳ್ಳಿ ವಿರುದ್ಧ ಮೂರು ಎಫ್ಐಆರ್

ಕುರಿ ಮಾಂಸದ ಸಾಗಾಟದ ವೇಳೆ ನಾಯಿ ಮಾಂಸ ಸಾಗಾಟ ಎಂದು ಆರೋಪಿಸಿ ರಾದ್ದಾಂತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ, ಇದೀಗ ಪ್ರಕರಣಕ್ಕೆ ಸಂಬಂದಿಸಿ ಮೂರನೇ ಎಫ್ ಐ ಆರ್ ದಾಖಲಾಗಿದೆ. ಅಕ್ರಮವಾಗಿ ಮಾಂಸ ಮಾರಾಟದ ಬಗ್ಗೆ ಮೆಜೆಸ್ಟಿಕ್ ರೈಲು ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಸಹಚರರನ್ನು ಬಂಧಿಸಲಾಗಿತ್ತು. ಗುಂಪುಗೂಡಿ ಗಲಾಟೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಸೇರಿ ಪುನೀತ್ […]
ಅಂಕೋಲಾ ಭೂಕುಸಿತಕ್ಕೆ ಕಾರಣಗಳೇನು? ಸಮೀಕ್ಷೆ ಏನು ಹೇಳುತ್ತಿದೆ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಭೂ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ ಐ) ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಕಾಮಗಾರಿಗಳ ವಿಧಾನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದಲ್ಲದೆ ಹೆಚ್ಚಿನ ಹಾನಿ ತಡೆಗಟ್ಟಲು ತಕ್ಷಣದ ಹಾಗೂ ದೀರ್ಘಕಾಲೀನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕಾಮಗಾರಿಯಿಂದಾಗಿ ನೈಸರ್ಗಿಕ ಒಳಚರಂಡಿ ಹರಿವಿಗೆ ತೊಂದರೆಯಾಗಿದೆ […]
ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಿಯತಮೆಯನ್ನು ಆಸ್ಪತ್ರೆಗೆ ಸೇರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ

ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರಿಯಕರ ಕೂಡಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಮಂಡಕಳ್ಳಿ ಗ್ರಾಮದ ಮೋನಿಕಾ(20) ಮೈಸೂರಿನ ಜ್ಯೋತಿನಗರದ ಮನು(22) ಆತ್ಮಹತ್ಯೆ ಮಾಡಿಕೊಂಡವರು. ಸಂಬಂಧಿಗಳಾದ್ದ ಇವರಿಬ್ಬರೂ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರು ಇಬ್ಬರಿಗೂ ಮದುವೆ ಮಾಡಲು ತೀರ್ಮಾನಿಸಿದ್ದರು. ಆದರೆ ಇತ್ತೀಚೆಗೆ ಇವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆದಿದೆ. ಇದರಿಂದ ಮೋನಿಕಾ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯತಮೆ ಆತ್ಮಹತ್ಯೆ ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನು […]
ಯುವಕನೋರ್ವನ ಮೃತದೇಹ ಸಂಶಯಾಸ್ಪದವಾಗಿ ಪತ್ತೆ

-ನಿಝಾಮುದ್ದೀನ್ ಶರೀಫ್ ಮೃತ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಚಿತ್ತಾಪುರ ಪಟ್ಟಣದ ಹೊರ ವಲಯದ ದಿಗ್ಗಾಂವ ಸಂಪರ್ಕಿಸುವ ರಸ್ತೆ ಬಳಿ ನಡೆದಿದೆ. ಪಟ್ಟಣದ ನಾಸರಜಂಗ್ ಬಡಾವಣೆಯ ನಿಝಾಮುದ್ದಿನ್ ಶರೀಫ್ (22) ಕೊಲೆಯಾದ ಯುವಕ. ಶರೀಫ್ ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಜು. 25ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋದವನು ರಾತ್ರಿ 9 ಗಂಟೆಯಾದರೂ ಮರಳಿ ಬಾರದಿದ್ದಾಗ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ರಾತ್ರಿ 11 ಗಂಟೆಗೆ ಕೆಸಿಎಲ್ ಕಂಪನಿ ಬಳಿಯ ಕಾಲೊನಿಯೊಂದರ […]
ಕುರಿ ಮಾಂಸ ಸಾಗಾಟದ ವೇಳೆ ತಡೆದು ನಾಯಿ ಮಾಂಸ ಎಂದ ಪುನೀತ್ ಕೆರೆಹಳ್ಳಿ; ರೈಲ್ವೇ ನಿಲ್ದಾಣದಲ್ಲಿ ರಾದ್ದಾಂತ ಸೃಷ್ಟಿ, ಬಂಧನ

ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಇದ್ರೀಶ್ ಪಾಷಾ ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ತನ್ನ ಗ್ಯಾಂಗ್ ಜೊತೆ ಬಂದು ರಾದ್ದಾಂತ ಸೃಷ್ಟಿಸಿರುವ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅಬ್ದುಲ್ ರಜಾಕ್ ಎಂಬುವರು ಕಳೆದ 12 ವರ್ಷಗಳಿಂದ ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸ ತರಿಸಿ ವ್ಯಾಪಾರ ಮಾಡುತ್ತಿದ್ದರು. ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ನಿನ್ನೆ ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಪುನೀತ್ ಕೆರೆಹಳ್ಳಿ ಟೀಂ ಆರೋಪದ […]
ವೈದ್ಯರ ನಿರ್ಲಕ್ಷ್ಯಕ್ಷೆ ಯುವಕ ಬಲಿ; ಕುಟುಂಬಸ್ಥರ ಆರೋಪ

ವೈದ್ಯರ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಯುವಕನ ಸಾವಿನ ಬೆನ್ನಲ್ಲಿ ಗುಲಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ 24 ವರ್ಷದ ಶರಣಬಸಪ್ಪ ಮೃತ ಯುವಕ. ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಶರಣಬಸಪ್ಪ, ಹೊಟ್ಟೆ ನೋವು, ವಾಂತಿ ಹಿನ್ನೆಲೆಯಲ್ಲಿ ಜುಲೈ 22ರಂದು ಹಾರ್ಟ್ ಫೌಂಡೇಷನ್ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಎರಡು ದಿನಗಳಿಂದ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಯುವಕ ಚಿಕಿತ್ಸೆ ಫಲಕಾರಿಯಾಗದೆ […]