ಪ್ರೀತಿಗೆ ಪೋಷಕರು ವಿರೋಧ; ಪ್ರೇಮಿಗಳಿಬ್ಬರು ನೇಣಿಗೆ ಶರಣು

ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಡೆಂಕಣಿಕೋಟೆಯ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ನಡೆದಿದೆ. ಗೌತಾಲಂ ಗ್ರಾಮದ ನರಸಿಂಹಮೂರ್ತಿ(22), ಬಾಚನಪ್ಪಟ್ಟಿ ಗ್ರಾಮದ ಯುವಶ್ರೀ(17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ನರಸಿಂಹಮೂರ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಯುವಶ್ರೀ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನರಸಿಂಹ ಮೂರ್ತಿ ಹಾಗೂ ಯುವಶ್ರೀ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವಶ್ರೀ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನರಸಿಂಹಮೂರ್ತಿ […]
ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ: ನಾಲ್ವರು ನಟರ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯ ಆರೋಪ

ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಾಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆದಿದ್ದ ಒಂದೊಂದೇ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಈ ಹಿಂದೆ ತಮ್ಮ ಮೇಲಾದ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ನಟಿಯರು ಬಹಿರಂಗವಾಗಿ ಹೇಳಿಕೆಯನ್ನು ನೀಡಿ, ಆರೋಪವನ್ನು ಮಾಡುತ್ತಿದ್ದಾರೆ. ಮಲಯಾಳಂ ನಿರ್ದೇಶಕ ರಂಜಿತ್, ಹಿರಿಯ ನಟ ಸಿದ್ದೀಕ್, ನಟ ರಿಯಾಜ್ ಖಾನ್ ವಿರುದ್ಧ ಅಸಭ್ಯ ವರ್ತನೆ ಹಾಗೂ ಕಿರುಕುಳದ ಆರೋಪ ಮಾಡಲಾಗಿದೆ. ಮಲಯಾಳಂ ನಟಿ ಮಿನು ಮುನೀರ್ ತನ್ನ ಸಹ ನಟರು ಮತ್ತು ತಂತ್ರಜ್ಞರ ವಿರುದ್ಧ ಆರೋಪಗಳನ್ನು […]
ಗೃಹ ಲಕ್ಷ್ಮಿ ಹಣವನ್ನು ಕೂಡಿಟ್ಟು ಊರಿಗೆ ಊಟ ಹಾಕಿಸಿದ ವೃದ್ಧೆ

ಹತ್ತು ಕಂತಿನ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಊರಿಗೆ ಹೋಳಿಗೆ ಊಟ ಹಾಕಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆಯಾದ ಅಕ್ಕಾತಾಯಿ ಲಂಗೋಟಿ ಅವರು ಪ್ರಶಂಸೆಗೆ ಕಾರಣರಾಗಿದ್ದು, ಅವರಿಗೆ ಕುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಕ್ಕಾತಾಯಿ ಲಂಗೋಟಿ ಅವರು ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಗ್ರಾಮದೇವತೆ ಲಕ್ಷ್ಮಿ ದೇವಿಗೆ ಹರಕೆ ಕಟ್ಟಿಕೊಂಡು ಹೋಳಿಗೆ ಮಾಡೋಣ ಬಾ ಎಂದು ಪಕ್ಕದ ಮನೆಯವರ ಜೊತೆಗೆ ಅಜ್ಜಿ […]
ಏಲಿಯನ್ಸ್ ಮಾನವರನ್ನು ಎರೆಹುಳಗಳಂತೆ ಪರಿಗಣಿಸುತ್ತಿವೆ, ಇದು ಅಪಾಯಕಾರಿ; ಇಸ್ರೋ ಅಧ್ಯಕ್ಷ ಸೋಮನಾಥನ್ ಸ್ಪೋಟಕ ಹೇಳಿಕೆ

ಇಸ್ರೋ ಅಧ್ಯಕ್ಷ ಸೋಮನಾಥನ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದು, ಏಲಿಯನ್ಸ್ ನಮ್ಮ ಸುತ್ತಮುತ್ತಲಿದ್ದು, ಬಹುಶಃ ಅವು ಮಾನವ ನಾಗರಿಕತೆ ಮತ್ತು ಮಾನವರನ್ನು ಎರೆಹುಳಗಳಂತೆ ಪರಿಗಣಿಸುತ್ತಿವೆ ಎಂದು ಹೇಳಿದ್ದಾರೆ. ನಾವು ಮನುಷ್ಯರು ಇತ್ತೀಚೆಗೆ ಭೂಮಿಯಲ್ಲಿ ಹುಟ್ಟಿಕೊಂಡ ಜೀವರಾಶಿ, ಈ ಜೀವ ಜಗತ್ತಿನ ಎಲ್ಲೆಡೆ ಮಾನವನಿಗಿಂತಲೂ ಹೆಚ್ಚು ವಿಕಾಸಗೊಂಡಿರುವ ಜೀವರಾಶಿಗಳಿವೆ ಎಂದು ಅವರು ಹೇಳಿದ್ದಾರೆ. ರಣ್ವೀರ್ ಅಲಹಾಬಾದ್ ಪಾಡ್‌ಕಾಸ್ಟ್ ನಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷರು, ಮಾನವ ಮತ್ತು ಏಲಿಯನ್ಸ್ ಮುಖಾಮುಖಿಯಾಗುವ ಸನ್ನಿವೇಶ ಅಪಾಯಕಾರಿ. ಅಂತಹ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಹಾಗಾದಾಗ ನಮ್ಮ […]
ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಸಿಲುಕಿ ಅನ್ನ, ನೀರಿಲ್ಲದೆ ಭಾರತೀಯ ಸೇರಿ ಇಬ್ಬರು ಮೃತ್ಯು: ಆಘಾತಕಾರಿ ಘಟನೆ ವರದಿ

ಸೌದಿ ಅರೇಬಿಯಾದ ರುಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣ ಮೂಲದ 27 ವರ್ಷದ ಯುವಕ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಸಾವನ್ನಪ್ಪಿದ್ದಾನೆ. ಸೌದಿ ಅರೇಬಿಯಾದಲ್ಲಿ ದೂರಸಂಪರ್ಕ ಕಂಪನಿಯೊಂದರಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕರೀಂನಗರ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್ ಮರುಭೂಮಿಯ ನಿರ್ಜನ ಮತ್ತು ಅಪಾಯಕಾರಿ ಖಾಲಿ ಕ್ವಾರ್ಟರ್ ಭಾಗದಲ್ಲಿ ಸಿಲುಕಿಕೊಂಡಿದ್ದರು. 650 ಕಿಲೋಮೀಟರ್ ಗಿಂತಲೂ ಹೆಚ್ಚು ವ್ಯಾಪಿಸಿರುವ ರುಬ್ ಅಲ್ ಖಲಿ ತನ್ನ ಕಠಿಣ ಪರಿಸ್ಥಿತಿಗಳಿಗೆ ಕುಖ್ಯಾತವಾಗಿದೆ ಮತ್ತು ಸೌದಿ ಅರೇಬಿಯಾದ ದಕ್ಷಿಣ ಪ್ರದೇಶಗಳು ಮತ್ತು ನೆರೆಯ […]
ಅನಾಥ ಯುವತಿಗೆ ಮುಂದೆ ನಿಂತು ವಿವಾಹ ಮಾಡಿಸಿಕೊಟ್ಟ ಉಡುಪಿ ಡಿಸಿ

ಅನಾಥೆಯಾಗಿದ್ದ ವಧುವನ್ನು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿದ್ದಾರೆ. 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಸುಮೇರಾ (21) ಅವರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ.ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ.(29) ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಉಡುಪಿ ಸಮೀಪದ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ […]
ಸಾಮೂಹಿಕ ಅತ್ಯಾಚಾರ ಆರೋಪಿಯ ಮೃತದೇಹದ ಧಪನಕ್ಕೆ ವಿರೋಧಿಸಿದ ಗ್ರಾಮಸ್ಥರು

ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯ ಶವಸಂಸ್ಕಾರಕ್ಕೆ, ಆತನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಮುಖ ಆರೋಪಿ ಅಸ್ಲಂ ನಗೋನ್ ಜಿಲ್ಲೆಯ ಧಿಂಗ್ ಎಂಬಲ್ಲಿ ಇಂದು ನಸುಕಿನಲ್ಲಿ ಕೆರೆಗೆ ಹಾರಿದ್ದ. ಈಜಲು ಬರದ ಕಾರಣ ಮೃತಪಟ್ಟಿದ್ದ. ಆರೋಪಿಯ ಕುಟುಂಬವಿರುವ ‘ಬೊರ್ಭೆಟಿ’ ಗ್ರಾಮಸ್ಥರು, ಆರೋಪಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಮೃತಪಟ್ಟ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಸಭೆ ನಡೆಸಿರುವ ಗ್ರಾಮಸ್ಥರು, ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಗ್ರಾಮದ […]
ಕಾಂಗ್ರೆಸ್ ನಾಯಕ ಶಹಜಾದ್ ಅಲಿಯ ಐಶಾರಾಮಿ ಬಂಗಲೆ ನೆಲಸಮಗೊಳಿಸಿದ ಬಿಜೆಪಿ ಸರಕಾರ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಅನೇಕ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಾಯಕ ಶಹಜಾದ್ ಅಲಿ ಅವರ ಬಂಗಲೆಯನ್ನು ಕೆಡವಿದ್ದಾರೆ. ಆಗಸ್ಟ್ 21ರಂದು ಮಧ್ಯಾಹ್ನ 2.45ರ ಸುಮಾರಿಗೆ, ಸ್ಥಳೀಯ ಮುಖಂಡರಾದ ಜಾವೇದ್ ಅಲಿ ಮತ್ತು ಶಹಜಾದ್ ಅಲಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ 100-150 ಸದಸ್ಯರ ಗುಂಪು ಛತ್ತರ್‌ಪುರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರವಾದಿ ಬಗ್ಗೆ ನಿಂದಿಸಿದ ಮಹಾರಾಷ್ಟ್ರದ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ […]
ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ

ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶನಿವಾರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ ಎಂದು ಅಸ್ಸಾಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ತಫಾಜುಲ್ ಇಸ್ಲಾಂನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಬಳಿಕ ಶನಿವಾರ ಜಾವ 4 ಗಂಟೆಗೆ ಅಪರಾಧ ಎಸಗಿದ ಸ್ಥಳಕ್ಕೆ ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಅಲ್ಲೇ ಇದ್ದ ಕೆರೆಗೆ […]
ಪುಲ್ ಟೈಟ್ ಆಗಿ ತರಗತಿಯಲ್ಲಿ ನಿದ್ರೆ ಮಾಡಿದ ಶಿಕ್ಷಕ; ಮಕ್ಕಳು ಕಂಗಾಲು, ವಿಡಿಯೋ ವೀಕ್ಷಿಸಿ.

ಶಿಕ್ಷಕರೊಬ್ಬರು ಫುಲ್ ಟೈಟಾಗಿ ತರಗತಿಗೆ ಬಂದು ನಿದ್ದೆಗೆ ಜಾರಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸ್ಸಾಂನ ಕಾಮಾಖ್ಯ ನಗರದ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಗೆ ಕುಡಿದು ಬಂದಿದ್ದ ಶಿಕ್ಷಕ ಕುರ್ಚಿಯ ಮೇಲೆ ಆರಾಮವಾಗಿ ನಿದ್ರಿಸಿದ್ದಾನೆ. ಆತನನ್ನು ಎಬ್ಬಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚೆತ್ತುಕೊಳ್ಳಲಿಲ್ಲ. ವಿದ್ಯಾರ್ಥಿಗಳು ಅವನ ಸುತ್ತಲೂ ನೆರೆದು ಕೂಗಿ, ತಳ್ಳಾಡಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಸಾಮಾಜಿಕ […]