156 ಔಷಧಗಳನ್ನು ನಿಷೇಧಿಸಿದ ಕೇಂದ್ರ ಸರಕಾರ; ಜ್ವರ, ಶೀತ ಎಂದು ಮನೆಯಲ್ಲೇ ಈ ಮಾತ್ರೆ ತೆಗೆದುಕೊಳ್ಳುವವರಿಗೆ ಈ ಮಾಹಿತಿ ತಿಳಿದಿರಲಿ

156 ಬಗೆಯ ಔಷಧಗಳನ್ನು ಕೇಂದ್ರ ಸರಕಾರ ಗುರುವಾರ ನಿಷೇಧಿಸಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಔಷಧ ರಾಸಾಯನಿಕಗಳ ಸಂಯೋಜನೆಯ ಫಿಕ್ಸೆಡ್ ಡೋಸ್ ಡ್ರಗ್ಸ್‌ಗಳನ್ನು (ಎಫ್‌ಡಿಸಿ) ಕಾಕ್‌ಟೈಲ್ ಡ್ರಗ್ಸ್ ಎಂದೂ ಕರೆಯಲಾಗುತ್ತದೆ. ಹೀಗಾಗಿ ಈ ಮಾತ್ರೆಗಳು ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ. ಮಾನವ ಜೀವ ಕಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಗುಣಗಳುಳ್ಳ ಔಷಧಗಳನ್ನು 1940ರ ಡ್ರಗ್ ಮತ್ತು ಕಾಸ್ಮೆಟಿಕ್ ಕಾಯಿದೆ ಸೆ.26ಎ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆ […]
ಮಂತ್ರಿ ಸುರೇಶ್ ಗೋಪಿ ಕೊಟ್ಟ ಪತ್ರ ಬಿಸಾಕಿದ ಅಮಿತ್ ಶಾ!: ಸಿನಿಮಕ್ಕಾಗಿ ಮಂತ್ರಿಗಿರಿ ಬಿಡಲು ಸಿದ್ಧ ಎಂದ ಸುರೇಶ್ ಗೋಪಿ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ನಟನೆ ನನ್ನ ಜೀವ ಮತ್ತು ಸಿನಿಮಾ ಮಾಡುವುದನ್ನು ನಿಲ್ಲಿಸಿದರೆ ಬದುಕಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. ನಟ-ರಾಜಕಾರಣಿಯಾಗಿರುವ ಇವರು ಕೇರಳದ ಮೊದಲ ಬಿಜೆಪಿ ಸಂಸದರಾಗಿದ್ದಾರೆ. ಅವರು ತ್ರಿಶೂರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಗೋಪಿ ಪ್ರವಾಸೋದ್ಯಮ ರಾಜ್ಯ ಸಚಿವರೂ ಆಗಿದ್ದಾರೆ. ತಿರುವನಂತಪುರಂನಲ್ಲಿರುವ ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಪಿ, “ಚಲನಚಿತ್ರ ನನ್ನ ಪ್ಯಾಶನ್. ಚಿತ್ರವಿಲ್ಲದಿದ್ದರೆ ನಾನು ಸಾಯುತ್ತೇನೆ. […]
ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದ ಯುವಕ; ವಿಡಿಯೋ ವೈರಲ್

ಯುವಕನೋರ್ವ ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದಿದೆ. ವಾಹನ ದಟ್ಟನೆಯಿರುವ ನಡು ರಸ್ತೆಯಲ್ಲೇ ನಿಂತು ಈ ಯುವಕ ನೋಟುಗಳನ್ನು ರಸ್ತೆಗೆ ಎಸೆದಿದ್ದು, ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಅಲ್ಲಿದ್ದ ಜನ ಬಂದು ನೋಡನ್ನು ಹೆಕ್ಕಿಕೊಂಡು ಹೋಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ.ಆಗಸ್ಟ್ 21ರಂದು ಹಂಚಿಕೊಂಡಿರುವ ವೀಡಿಯೋ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಎರಡೂ ಕೈಗಳಲ್ಲಿ ಕಂತೆ ಕಂತೆ ನೋಟುಗಳನ್ನು ಇಟ್ಟುಕೊಂಡು […]
ಟೀ ಅಂಗಡಿ ಮೇಲೆ ಟ್ಯಾಂಕರ್ ಪಲ್ಟಿ; ಚಾ ಸವಿಯುತ್ತಿದ್ದ ನಾಲ್ವರು ದುರ್ಮರಣ

ಬಸ್ ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಳಿಕ ಟೀ ಅಂಗಡಿ ಮೇಲೆ ಟ್ಯಾಂಕರ್ ಪಲ್ಟಿಯಾದ ಪರಿಣಾಮ ನಾಲ್ವರು ಮತಪಟ್ಟು 13 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಗಂಜಾಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 59ರಲ್ಲಿ ಹಿಂಜಿಲಿ ಬಳಿಯ ಸಮರಜೋಳದಲ್ಲಿ ಅಪಘಾತ ಸಂಭವಿಸಿದೆ. ಭವಾನಿಪಟ್ಟಣದಿಂದ ಬರ್ಹಾಂಪುರಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ಯಾಂಕರ್ ನಡುವೆ ಮೊದಲು ಅಪಘಾತವಾಗಿದೆ. ಬಳಿಕ ಟ್ಯಾಂಕರ್ ಟೀ ಅಂಗಡಿ ಮೇಲೆ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೃತರಲ್ಲಿ ಉಳಿದ ಮೂವರು […]
ಗೌರಿ ಲಂಕೇಶ್ ಹತ್ಯೆ ಆರೋಪಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂದಿಸಿ ಕೊಲೆ ಆರೋಪಿ ಮೋಹನ್ ನಾಯಕ್‌ಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಬೇಲಾಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದಿದ್ದು, ಕವಿತಾ ಲಂಕೇಶ್ ಅವರು ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. 2017ರಲ್ಲಿ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಮೋಹನ್ […]
ಮುಸ್ಲಿಂ ವಿವಾಹ, ವಿಚ್ಛೇದನದ ನೋಂದಣಿ ಕಡ್ಡಾಯ!; ಮಸೂದೆಗೆ ಸಂಪುಟ ಒಪ್ಪಿಗೆ

ಮುಸ್ಲಿಂ ವಿವಾಹ ಹಾಗೂ ವಿಚ್ಛೇದನದ ಕಡ್ಡಾಯ ನೋಂದಾವಣಿ ಮಸೂದೆಗೆ ಅಸ್ಸಾಂ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಕಾಯ್ದೆ ಜಾರಿಯಾದ ಬಳಿಕ ಮುಸ್ಲಿಂ ವಿವಾಹ ಮತ್ತು ವಿಚ್ಛೇದವನ್ನು ನೋಂದಾಯಿಸಿಕೊಳ್ಳುವ ಖಾಝಿಗಳ ಅಧಿಕಾರ ರದ್ದಾಗಲಿದೆ. ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ಮಸೂದೆ-2024ನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ಇನ್ನು ಮುಸ್ಲಿಂ ವಿವಾಹಗಳನ್ನು ಸರ್ಕಾರ ನೋಂದಣಿ ಮಾಡಿಕೊಳ್ಳಲಿದೆ ಹಾಗೂ ಈ ಹಿಂದಿನಂತೆ ಖಾಝಿಗಳು ಮಾಡುವುದಿಲ್ಲ ಮತ್ತು ಈ ನೋಂದಣಿ ಬಾಲ್ಯವಿವಾಹವನ್ನು ಕಾನೂನುಬಾಹಿರ ಎಂದು ಪರಿಗಣಿಸಲಿದೆ ಎಂದು […]
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಜೈ ಶಾ: ಅಮಿತ್ ಶಾ ಪುತ್ರನಿಗೆ ನೀಡುತ್ತಾ 16 ರಾಷ್ಟ್ರಗಳು ಬೆಂಬಲ?

ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದಕ್ಕೆ 16 ರಾಷ್ಟ್ರಗಳ ಒಪ್ಪಿಗೆ ಬೇಕಾಗಿದೆ. ಜೈಶಾಗೆ ಭಾರತ, ಆಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ , ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ದೇಶಗಳು ಬೆಂಬಲ ನೀಡಬೇಕಾಗಿದೆ. ಈ 16 ರಾಷ್ಟ್ರಗಳು ಕೂಡ ಮತದಾನದ ಅಧಿಕಾರ ಹೊಂದಿವೆ. ಮುಂದಿನ ನವೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ.ಅವರ ಜಾಗಕ್ಕೆ ಅಮಿತ್ ಶಾ […]
ಮದರಸಾಗಳ ಅನುದಾನ ಸ್ಥಗಿತಕ್ಕೆ ಮುಂದಾದ ಸರಕಾರ!

ಮುಸ್ಲಿಮೇತರರಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವ ಮದರಸಗಳಿಗೆ ಸರಕಾರ ಅನುದಾನಗಳನ್ನು ನಿಲ್ಲಿಸಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಧಾರ್ಮಿಕ ಸಮುದಾಯಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ಇತರ ಧರ್ಮಗಳ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವುದನ್ನು ಆ.16ರಂದು ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ನಿಷೇಧಿಸಿತ್ತು. ನಿಷೇಧ ಕ್ರಮವು ಸಂವಿಧಾನದ ವಿಧಿ 28(3)ಕ್ಕೆ ಅನುಗುಣವಾಗಿದೆ. ಸರಕಾರದಿಂದ ಮಾನ್ಯತೆಯನ್ನು ಹೊಂದಿರುವ ಅಥವಾ ಸರಕಾರಿ ಅನುದಾನವನ್ನು ಪಡೆಯುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವ್ಯಕ್ತಿಯು ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುವ ಯಾವುದೇ […]
ಪತಿಯಿಂದ ವೀರ್ಯ ಸಂಗ್ರಹಿಸಲು ಅನುಮತಿಸಿದ ಕೇರಳ ಹೈಕೋರ್ಟ್; ಏನಿದು ಅಪರೂಪದ ಪ್ರಕರಣ ಗೊತ್ತಾ?

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಪತಿಯಿಂದ ವೀರ್ಯವನ್ನು ಸಂಗ್ರಹಿಸಲು ಕೇರಳ ಹೈಕೋರ್ಟ್ ಅನುಮತಿಸಿದೆ. ಮಕ್ಕಳಿಲ್ಲದ ಕೇರಳದ ಮಹಿಳೆಯೊಬ್ಬರು ತನ್ನ ಪತಿಯ ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದರು. ತಮ್ಮ ಪತಿ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇದುವರೆಗೂ ಮಕ್ಕಳಾಗಿಲ್ಲ . ಆದ್ದರಿಂದ ಭವಿಷ್ಯದಲ್ಲಿ ತನಗೆ ಮಗುವಾಗಲು ಗಂಡನ ವೀರ್ಯವನ್ನು ಸಂರಕ್ಷಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಗಂಡನ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಲಿಖಿತ ಒಪ್ಪಿಗೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ವಿಳಂಬವಾದರೆ ಪರಿಸ್ಥಿತಿ ಬಿಗಡಾಯಿಸಿ ಪ್ರಾಣಾಪಾಯ […]
ವಿಟ್ಲ; ಅಪಘಾತದ ಗಾಯಾಳು ಯುವಕ ಮೃತ್ಯು

ವಿಟ್ಲ; ಅಪಘಾತದ ಗಾಯಾಳು ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮುಝಂಬಿಲ್ ಮೃತ ಯುವಕ. ಆ.12ರಂದು ವಿಟ್ಲ- ಸಾಲೆತ್ತೂರು ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ಮುಝಂಬಿಲ್ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ ಹೊಡೆದಿತ್ತು. ಅವರನ್ನು ಬಳಿಕ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ವಿಟ್ಲದಿಂದ ಮುಡಿಪು ಕಡೆ ತೆರಳುತ್ತಿದ್ದ ಬಸ್ ಮುಝಂಬಿಲ್ ತೆರಳುತ್ತಿದ್ದ ಆಕ್ಟಿವಾಗೆ ಢಿಕ್ಕಿ ಹೊಡೆದಿತ್ತು.