Breaking News :

ಅಪಘಾತ, ದುರಂತದ ಬಗ್ಗೆ ವಿಡಿಯೋ ಪ್ರಸಾರ: ಖಾಸಗಿ ವಾಹಿನಿಗಳಿಗೆ ಹೊಸ ನಿಯಮ ಸೂಚಿಸಿದ ಕೇಂದ್ರ

ದುರಂತಗಳು ಮತ್ತು ಗಂಭೀರ ಅಪಘಾತಗಳ ವಿಡಿಯೋಗಳನ್ನು ಪ್ರಸಾರ ಮಾಡುವಾಗ ದೃಶ್ಯಗಳ ಮೇಲೆ ಅಪಘಾತ ಅಥವಾ ದುರಂತ ಸಂಭವಿಸಿದ ಸಮಯ, ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕೆಂದು  ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ  ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಮುಖ ದುರಂತಗಳು ಮತ್ತು ಗಂಭೀರ ಅಪಘಾತಗಳ ವಿಡಿಯೋ ಪ್ರಸಾರ ಮಾಡುವಾಗ ದೃಶ್ಯಗಳ ಮೇಲೆ ಅವು ಸಂಭವಿಸಿದ ದಿನಾಂಕ ಮತ್ತು ಸಮಯ ನಮೂದಿಸಬೇಕೆಂದು ಎಲ್ಲಾ ಸುದ್ದಿ ವಾಹಿನಿಗಳಿಗೆ ಹೇಳಿದೆ. ನೈಸರ್ಗಿಕ ವಿಕೋಪಗಳು, ಪ್ರಮುಖ ಅಪಘಾತಗಳ ಪ್ರಸಾರವನ್ನು […]

ಚನ್ನಪಟ್ಟಣ ಉಪಚುನಾವಣೆ; ಎನ್ ಡಿಎ ಮೈತ್ರಿಕೂಟಕ್ಕೆ ತಲೆ ನೋವಾದ ಸಿಪಿ ಯೋಗೇಶ್ವರ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಬಿಜೆಪಿ ವತಿಯಿಂದ ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷವು ಟಿಕೆಟ್‌ ನೀಡದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆಯನ್ನು ಅವರು ಕೊಟ್ಟಿದ್ದು, ಅವರ ನಡೆ ಎನ್ ಡಿಎ ಮೈತ್ರಿ ಕೂಟಕ್ಕೆ ದೊಡ್ಡ ತಲೆನೋವಾಗುವ ಸಂಭವವಿದೆ. ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿನ್ಹೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ […]

ಅತ್ಯಾಚಾರ ಸಂತ್ರಸ್ತೆ ವೈದ್ಯೆಯ ಕಣ್ಣಿನಿಂದ ರಕ್ತ ಬಂದಿದ್ದೇಗೆ? ಮರಣೋತ್ತರ ಪರೀಕ್ಷಾ ವರದಿಯಲ್ಲೇನಿದೆ ಗೊತ್ತಾ?

ಪ.ಬಂಗಾಳದ ಸರಕಾರಿ ಆರ್.ಜಿ.ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಮಹತ್ವದ ಮಾಹಿತಿಗಳು ಬಹಿರಂಗವಾಗಿದೆ. ಪಿಜಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್ ಎಂಬ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ವೈದ್ಯೆಯ ಎರಡೂ ಕಣ್ಣುಗಳು, ಬಾಯಿಯಿಂದ ರಕ್ತಸ್ರಾವ ಉಂಟಾಗಿತ್ತು, ಮುಖದ ಮೇಲೆ ಗಾಯದ ಗುರುತುಗಳಿದ್ದವು. ವೈದ್ಯೆಯ ಮರ್ಮಾಂಗದಿಂದ ಕೂಡಾ ರಕ್ತಸ್ರಾವ ಆಗುತ್ತಿತ್ತು. ತೊಡೆ, ಎಡಕಾಲು, ಕುತ್ತಿಗೆ, ಬಲಗೈ, ಬೆರಳು, ತುಟಿಗಳ ಮೇಲೆ […]

ಕಡಪ್ಪರ ಸಮೀರ್ ಕೊಲೆ ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ, ಸಮೀರ್ ಪತ್ನಿ ನೀಡಿದ ದೂರಿನಲ್ಲಿ ಏನೇನಿದೆ ಗೊತ್ತಾ?

ಮಂಗಳೂರು: ರೌಡಿ ಶೀಟರ್ ಕಡಪ್ಪರ ಸಮೀರ್ (33)ನನ್ನು ದುಷ್ಕರ್ಮಿಗಳ ತಂಡವೊಂದು ಕಲ್ಲಾಪು ಬಳಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದಿತ್ತು. ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಮೀರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಇದೀಗ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ರೌಡಿ ಶೀಟರ್ ಆಗಿರುವ ಸಮೀರ್ ವಿರುದ್ಧ ಉಳ್ಳಾಲ ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ದರೋಡೆ ಪ್ರಕರಣವೊಂದರಲ್ಲಿ ಸಮೀರ್ ಇತ್ತೀಚೆಗೆ ಜೈಲು ಪಾಲಾಗಿದ್ದ. ಜು.1ರಂದು ಮಂಗಳೂರಿನ ಜೈಲಿನಲ್ಲಿ ನಡೆದ […]

ಮದ್ರಸಾಗಳಿಗೆ ಮಾನ್ಯತೆ ನೀಡಲು ವಿವಿಗಳ ಸ್ಥಾಪನೆಗೆ ಮುಂದಾದ ಸರಕಾರ

ಮದ್ರಸಾಗಳಿಗೆ ಮಾನ್ಯತೆ ನೀಡಲು ಎರಡು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಉತ್ತರಪ್ರದೇಶ ಸರಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಮಾನ್ಯತೆ ಪಡೆಯದ ಮದ್ರಸಾಗಳಲ್ಲಿನ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸುವ ವಿವಾದದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಕುರಿತು ಮಾಹಿತಿ ನೀಡಿದ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌, ‘ಹೊಸದಾಗಿ ಸ್ಥಾಪಿಸುವ ಎರಡು ವಿಶ್ವವಿದ್ಯಾಲಯಗಳೊಂದಿಗೆ ಉತ್ತರ ಪ್ರದೇಶದ ಮದ್ರಸಾ ಶಿಕ್ಷಣ ಮಂಡಳಿಯನ್ನು ಜೋಡಿಸಲಾಗುವುದು. ಈ ವಿವಿಗಳಿಂದ ಎಲ್ಲ ಮದ್ರಸಾಗಳು ಮಾನ್ಯತೆ ಪಡೆಯಬೇಕು ಎಂಬ ಕಾನೂನು ತರಲಾಗುವುದು. […]

ಏರ್ ಪೋರ್ಟ್ ನಲ್ಲಿ ತಮಾಷೆಗೆ ಬಾಂಬ್ ಇದೆ ಎಂದ ಪ್ರಯಾಣಿಕ; ಮುಂದೇನಾಯ್ತು ಗೊತ್ತಾ?

ಏರ್ಪೋರ್ಟ್ ನಲ್ಲಿ ಬ್ಯಾಗ್ ಚೆಕಿಂಗ್ ವೇಳೆ ಬಾಂಬ್ ಇದೆ ಎಂದು ತಮಾಷೆ ಮಾಡಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಕೇರಳದ ಕೊಚ್ಚಿನ್​ ಏರ್​ಪೋರ್ಟ್​​ನಲ್ಲಿ ನಡೆದಿದೆ. ಸೆಕ್ಯುರಿಟಿ ಚೆಕ್​ಇನ್ ಅಧಿಕಾರಿಗಳು ತಮ್ಮ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ, ತನ್ನ ಬ್ಯಾಗ್​ನಲ್ಲಿ ಏನೂ ಬಾಂಬ್ ಇಲ್ವಲ್ಲಾ ಎಂದು 42 ವರ್ಷದ ಮನೋಜ್ ಕುಮಾರ್ ಹೇಳಿದ್ದಾನೆ. ಈತ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅವರ ಹೇಳಿಕೆ ಕಳವಳಕ್ಕೆ ಕಾರಣವಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) […]

ವಯನಾಡು ಭೂಕುಸಿತಕ್ಕೆ ಪ್ರಚೋದಕ ಅಂಶವೇನು? ಭೂವೈಜ್ಞಾನಿಕ ಸಮೀಕ್ಷೆ ಹೇಳುತ್ತಿರುವುದೇನು ಗೊತ್ತಾ?

ದೇಶವನ್ನೇ ಬೆಚ್ಚಿಬೀಳಿಸಿದ್ದ ವಯನಾಡು ಭೂಕುಸಿತ ದುರಂತದ ಬಗ್ಗೆ  ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಮಹತ್ವದ ಮಾಹಿತಿಯನ್ನು ನೀಡಿದ್ದು,  ಅತಿಯಾದ ಮಳೆ ದುರಂತಕ್ಕೆ ಪ್ರಚೋದಕ ಅಂಶವೆಂದು ಉಲ್ಲೇಖಿಸಿದೆ. ನಿರಂತರ ಮಳೆಯಿಂದಾಗಿ ಒಳಗೆ ಹೆಚ್ಚುವರಿ ರಂಧ್ರ ಒತ್ತಡ ಹೆಚ್ಚಾಗಲು ಕಾರಣವಾಗುವ ಅತಿಯಾದ ಹೊರೆಯ ವಸ್ತುಗಳ ಸಡಿಲ ಮತ್ತು ಅಸಂಘಟಿತ ಸ್ವಭಾವವು ಈ ಎಲ್ಲಾ ಘಟನೆಗಳಿಗೆ ಪ್ರಚೋದಕ ಅಂಶವಾಗಿದೆ ಎಂದು ಜುಲೈ 30ರ ಭೂಕುಸಿತದ ಬಗ್ಗೆ ಜಿಎಸ್‌ಐನ ಪ್ರಥಮ ಮಾಹಿತಿ ವರದಿ ತಿಳಿಸಿದೆ. 2015-16ರಲ್ಲಿ ನಡೆಸಿದ ರಾಷ್ಟ್ರೀಯ ಭೂಕುಸಿತ ಸಸೆಪ್ಟೆಬಿಲಿಟಿ ಮ್ಯಾಪಿಂಗ್ ಪ್ರಕಾರ, […]

ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ತನಿಖೆಯ ವೇಳೆ ಮಹತ್ವದ ಅಂಶಗಳು ಬಯಲು

ಕೋಲ್ಕತಾ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ  ಪಿಜಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ತನಿಖೆಯ ವೇಳೆ ಹಲವು ಮಹತ್ವದ ಅಂಶಗಳು ಬಯಲಾಗಿದೆ. ಅಪರಾಧ ಮಾಡಿದ ನಂತರ, ಆರೋಪಿ ತಾನು ಉಳಿದುಕೊಂಡಿದ್ದ ಸ್ಥಳಕ್ಕೆ ಹಿಂತಿರುಗಿ ಶುಕ್ರವಾರ ತಡರಾತ್ರಿಯವರೆಗೆ ಮಲಗಿದ್ದನು. ಎಚ್ಚರವಾದ ನಂತರ, ಅವನು ಮತ್ತೆ  ಬಟ್ಟೆ ತೊಳೆದಿದ್ದಾನೆ ಎಂದು ಪೋಲಿಸರು ತನಿಖೆಯ ವೇಳೆ ಕಂಡು ಕೊಂಡಿದ್ದಾರೆ. ಘಟನೆ ನಡೆದ ಬಳಿಕ ಭಾರೀ […]

ಶಾಲಾ ತರಗತಿಯಲ್ಲಿ ವಿದ್ಯಾರ್ಥಿಗಳಿಂದ ಅಸಭ್ಯವಾಗಿ ವರ್ತನೆ; ವಿಡಿಯೋ ವೈರಲ್ ಬೆನ್ನಲ್ಲಿ ವ್ಯಕ್ತವಾದ ಆಕ್ರೋಶ

ಖಾಸಗಿ ಶಾಲೆಯೊಂದರ ತರಗತಿಯಲ್ಲಿ ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ. ನೋಯ್ಡಾದ ಶಾಲೆಯೊಂದರ ವಿಡಿಯೋ ಇದು ಎಂದು ಹೇಳಲಾಗುತ್ತದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರತಿಯ ಕೊನೆಯ ಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡುತ್ತಿದ್ದರು, ಅವರ ಪಕ್ಕದಲ್ಲೇ ಇತರ ಮಕ್ಕಳು ಕೂಡ ಕಿಸ್ಸಿಂಗ್ ರೊಮ್ಯಾನ್ಸ್ ನಲ್ಲಿ ತೊಡಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ […]

ಪುನೀತ್ ಕೆರೆಹಳ್ಳಿ ಗ್ಯಾಂಗ್ ಸೃಷ್ಟಿಸಿದ್ದ ನಾಯಿ ಮಾಂಸ ವಿವಾದಕ್ಕೆ ಪುಲ್ ಸ್ಟಾಪ್; ಹೈದ್ರಾಬಾದ್ ಲ್ಯಾಬ್ ಅಂತಿಮ ವರದಿ ಬಹಿರಂಗ

ಇದ್ರೀಶ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಗ್ಯಾಂಗ್ ಸೃಷ್ಟಿಸಿದ್ದ  ನಾಯಿ ಮಾಂಸ ವಿವಾದಕ್ಕೆ ಕೊನೆಗೆ ಪುಲ್ ಸ್ಟಾಪ್ ಬಿದ್ದಿದೆ. ಮಾಂಸದ ಮಾದರಿಯನ್ನು ಪರಿಶೀಲಿಸಿ ಹೈದರಾಬಾದ್‌ ಲ್ಯಾಬ್‌ ಅಂತಿಮ ವರದಿಯನ್ನು ನೀಡಿದ್ದು, ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸವಲ್ಲ ಎಂದು ಹೇಳಿದೆ. ಕೆಲ ದಿನಗಳ ಹಿಂದೆ ರಾಜಸ್ಥಾನದಿಂದ ಉದ್ಯಮಿ ಅಬ್ದುಲ್‌ ರಜಾಕ್‌ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್‌ ಕೆರೆಹಳ್ಳಿ ಗ್ಯಾಂಗ್ ರಾದ್ದಾಂತ ಮಾಡಿ ಪೊಲೀಸರ […]