Breaking News :

ನನ್ನ ಬಗ್ಗೆ ಬೀದಿ ಬೀದಿಯಲ್ಲಿ ಸುಳ್ಳು ಹಬ್ಬಿಸುತ್ತಿದ್ದಾರೆ, ಇನ್ಮುಂದೆ ಪ್ರತಿಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ; ಸಿಎಂ ಸಿದ್ದರಾಮಯ್ಯ

ನಾನು ಈಗ ಮೊದಲಿನ ಸಿದ್ದರಾಮಯ್ಯ ಅಲ್ಲ, ನಾನು ಬದಲಾಗುತ್ತೇನೆ. ಇನ್ಮುಂದೆ ಪ್ರತಿ ಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ‌. ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಬಗ್ಗೆ ಹೋಗ್ಲಿ ಬಿಡು, ಹೋಗ್ಲಿ ಬಿಡು ಅಂತ ನಾನು ಹೇಳುತ್ತಿದ್ದೆ. ಅದೇ ನನಗೆ ಈಗ ಮುಳ್ಳಾಗುತ್ತಿದೆ. ಪ್ರತಿ ಪಕ್ಷಗಳ ಎಲ್ಲಾ ನಾಯಕರ ಹಳೇ ಪ್ರಕರಣ ತೆರೆಯುತ್ತೇನೆ. ದ್ವೇಷದ ರಾಜಕಾರಣ ಅಂದರೂ ಪರವಾಗಿಲ್ಲ. ನಾನು ಇನ್ಮುಂದೆ ತಲೆಕೆಡಿಸಿಕೊಳ್ಳುವುದಿಲ್ಲ  ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಪ್ಪೇ ಮಾಡದ […]

ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಗೆ ನಿವೇಶನ ಮಂಜೂರು ಮಾಡಿದ ತೆಲಂಗಾಣ ಸರಕಾರ

ಹೈದರಾಬಾದ್ : ಬೌಲರ್ ಮುಹಮ್ಮದ್ ಸಿರಾಜ್‌ಗೆ ತೆಲಂಗಾಣ ಸರಕಾರವು ನಿವೇಶನ ಮಂಜೂರು ಮಾಡಿದೆ. ಜುಬಿಲಿ ಹಿಲ್ಸ್‌ನ ರಸ್ತೆ  ಸಂಖ್ಯೆ 78 ರಲ್ಲಿ 600 ಚದರ ಭೂಮಿಯನ್ನು ಮಂಜೂರು ಮಾಡುವ ಆದೇಶವನ್ನು ತೆಲಂಗಾಣ ಸರ್ಕಾರ ನೀಡಿದೆ. ಜುಲೈ 31 ರಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಸಿರಾಜ್ ಅವರಿಗೆ ನಗರದಲ್ಲಿ ಮನೆ ನಿವೇಶನ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಸಿರಾಜ್ ಅವರೊಂದಿಗೆ, ಶೂಟರ್ ಇಶಾ ಸಿಂಗ್ ಮತ್ತು  ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಝರೀನ್‌ ಅವರಿಗೂ […]

ಪೊಲೀಸರ ಮೇಲೆ ಹಲ್ಲೆಗೆ ಯತ್ನ; ರೌಡಿ ಶೀಟರ್ ಕಾಲಿಗೆ ಗುಂಡೇಟು

ಬೆಳ್ಳಂಬೆಳಿಗ್ಗೆ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಳವಳ್ಳಿ ತಾಲೂಕಿನ ಚಿಕ್ಕಮಲಗೂಡು ಗ್ರಾಮದ ಬಳಿ ನಡೆದಿದೆ. ಮುತ್ತುರಾಜು ಎಂಬಾತನ ಮೇಲೆ ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಫೈರಿಂಗ್ ಮಾಡಿದ್ದಾರೆ.  ಕೊಲೆ ಪ್ರಕರಣಕ್ಕೆ  ಸಂಬಂಧಿಸಿ ಆರೋಪಿಯನ್ನು ಹಿಡಿಯಲು ಪೊಲೀಸರು ಹೋಗಿದ್ದರು. ಈ ವೇಳೆ ಪೊಲೀಸ್ ಪೇದೆ ಸಿದ್ದರಾಜು ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಆರೋಪಿಯ ಬಲಗಾಲಿಗೆ ಇನ್ಸ್ ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ರೌಡಿಶೀಟರ್​ ಅನ್ನು ಮಂಡ್ಯದ ಮಿಮ್ಸ್ […]

ಒಣ ಮೀನು ಎಂದು ದೂರ ಮಾಡಬೇಡಿ..ಒಣ ಮೀನು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ಒಣ ಮೀನುಗಳು ಹೆಚ್ಚಿನ ವಾಸನೆ ಬರುವ ಕಾರಣ ಹೆಚ್ಚಿನ ಜನರು ಅದನ್ನು  ತಿನ್ನದೆ ದೂರ ಮಾಡುತ್ತಾರೆ.  ಒಣ ಮೀನುಗಳಲ್ಲಿ  ಸಾಕಷ್ಟು ಪೋಷಕಾಂಶಗಳಿದ್ದು, ಅದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಒಣ ಮೀನುಗಳಲ್ಲಿ ಪ್ರೋಟೀನ್ಗಳು, ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ರಂಜಕ, ಸೆಲೆನಿಯಂ, ವಿಟಮಿನ್ ಬಿ 12, ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಸೋಡಿಯಂ ಹೆಚ್ಚಿದೆ‌ ಒಣ ಮೀನುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಒಣ ಮೀನುಗಳಲ್ಲಿರುವ ಪೋಷಕಾಂಶಗಳಿಂದಾಗಿ, ದೇಹವು ಒಣಗುವುದಿಲ್ಲ. ನರಗಳ ಸಮಸ್ಯೆಗಳನ್ನು ತಡೆಗಟ್ಟಲು ಒಣ […]

ಎಸ್‌ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ಸಾವಿಗೆ ಕಾರಣ ಯಾರು? ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ

ಮಾಜಿ ಸಿಎಂ ಎಸ್‌ಎಂ. ಕೃಷ್ಣ ನಿಮಗೆ ರಾಜಕೀಯ ಜನ್ಮ ಕೊಟ್ಟಿದ್ದರು. ಆದರೆ, ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದಿಡಿ ಎಂದು ಡಿಕೆ ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದು, ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಜಟಾಪಟಿ ಮತ್ತೆ ಮುಂದುವರಿದಿದೆ. ಮೈಸೂರು ಚಲೋ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಹಾಗೂ ಡಿಸಿಎಂ ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಶ್ರಮಪಟ್ಟು 105 ಸ್ಥಾನವನ್ನು ಪಡೆದಿದ್ದಾಗ ಅಧಿಕಾರ […]

5 ಕೆಜಿ ‘ಆಲೂಗಡ್ಡೆ’ ಲಂಚವಾಗಿ ಬೇಡಿಕೆ ಇಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು

5 ಕೆಜಿ ‘ಆಲೂಗಡ್ಡೆ’ಗೆ ಲಂಚವಾಗಿ ಬೇಡಿಕೆಯಿಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಿಯೋಜನೆಗೊಂಡಿದ್ದ ಸಬ್‌ ಇನ್‌ಸ್ಪೆಕ್ಟರ್‌ ನ್ನು ಅಮಾನತುಗೊಳಿಸಲಾಗಿದೆ. ಕೇಸ್ ವೊಂದರ ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಸೌರಿಖ್‌ ಪೊಲೀಸ್‌ ಠಾಣೆಯಡಿಯಲ್ಲಿ ಬರುವ ಬಹವಲ್ಪುರ್ ಚಾಪುನ್ನ ಚೌಕಿಯ ಇನ್ಸ್‌ ಪೆಕ್ಟರ್‌ ರಾಮ್‌ ಕೃಪಾಲ್‌ ಸಿಂಗ್‌ ಅವರನ್ನು ಅಮಾನತು ಮಾಡಿ ಕನೌಜ್‌ ಎಸ್‌ ಪಿ ಅಮಿತ್‌ ಕುಮಾರ್‌ ಅದೇಶಿಸಿದ್ದಾರೆ. ಅಲ್ಲದೆ […]

ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆ; ಅತ್ಯಾಚಾರ, ಕೊಲೆ ಆರೋಪಿಸಿದ ಕುಟುಂಬ

-ದೇಶದಾದ್ಯಂತ ಭಾರೀ ಸದ್ದು ಮಾಡಿದ ಪ್ರಕರಣ ಪ.ಬಂಗಾಳದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆ ಮೇಲಿನ ಲೈಂಗಿನ ಕಿರುಕುಳ, ಹತ್ಯೆ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ)  24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದೆ. ಶುಕ್ರವಾರ ಕೋಲ್ಕತ್ತದ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ವೈದ್ಯ […]

ವಯನಾಡು ದುರಂತ; ಸಿಎಂ ಪರಿಹಾರ ನಿಧಿಗೆ ಈವರೆಗೆ ಎಷ್ಟು ಹಣ ಜಮೆಯಾಗಿದೆ ಗೊತ್ತಾ?

ಕೇರಳದ ವಯನಾಡಿನ 4 ಗ್ರಾಮಗಳ ವ್ಯಾಪ್ತಿಯಲ್ಲಿ ಜುಲೈ 30ರಂದು ಸಂಭವಿಸಿದ ಭಯಾನಕ ಭೂಕುಸಿತ ದುರ್ಘಟನೆಯಲ್ಲಿ  ಈವರೆಗೆ 413ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 152ಕ್ಕೂ ಅಧಿಕ ಜನರು ಇನ್ನೂ  ಪತ್ತೆಯಾಗಿಲ್ಲ. ದುರಂತದ ಬೆನ್ನಲ್ಲೆ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಭಾರೀ ಧನಸಹಾಯ ಹರಿದು ಬಂದಿದ್ದವು, ರಾಹುಲ್ ಗಾಂಧಿ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸೇರಿ ವಿವಿಧ ಸಂಘ ಸಂಸ್ಥೆಗಳು ಮನೆ ನಿರ್ಮಾಣದ ಭರವಸೆಯನ್ನು ನೀಡಿದ್ದಾರೆ.  ಸಿನಿಮಾ ನಟ, ನಟಿಯರು, ಉದ್ಯಮಿಗಳು ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಈ ಮಧ್ಯೆ ಸಿಎಂ […]

ನನಗೆ ಸ್ವಂತ ಮನೆಯಿಲ್ಲ, ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು; ಮೂಡ ಹಗರಣದ ಆರೋಪದ ಬಗ್ಗೆ ಸಿದ್ದರಾಮಯ್ಯ ಭಾವುಕ ಟ್ವೀಟ್

ಮೂಡ ಹಗರಣದ ಆರೋಪದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಭಾವುಕ ಟ್ವೀಟ್ ಮಾಡಿದ್ದಾರೆ. ನಾನು 15 ಬಜೆಟ್ ಮಂಡಿಸಿದ್ದೇನೆ. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ, ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ ಎಂದು ಹೇಳಿದ್ದಾರೆ. ಈಗ ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ […]

ಮಹಿಳೆಯರನ್ನು ಕೊಲೆ ಮಾಡಿ ಲಿಪ್ ಸ್ಟಿಕ್, ರವಿಕೆ ಕೊಂಡೊಯ್ಯುತ್ತಿದ್ದ ಸೀರಿಯಲ್ ಕಿಲ್ಲರ್ ಅರೆಸ್ಟ್; ಈತ ಎಷ್ಟು ಮಂದಿಯನ್ನು ಕೊಲೆ ಮಾಡಿದ್ದಾನೆ ಗೊತ್ತಾ?

14 ತಿಂಗಳೊಳಗೆ 9 ಮಂದಿ ಮಹಿಳೆಯರನ್ನು ಸೀರೆಯಿಂದಲೇ ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರಪ್ರದೇಶದ ಬರೇಲಿ ಪೊಲೀಸರು ಬಂಧಿಸಿದ್ದಾರೆ. ಬರೇಲಿಯ ಬಕರ್‌ಗಂಜ್ ನಿವಾಸಿ, ಸೀರಿಯಲ್ ಕಿಲ್ಲರ್ ಆರೋಪಿಯನ್ನು ಕುಲದೀಪ್‌ ಎಂದು ಗುರುತಿಸಲಾಗಿದೆ. ಈತ ಗ್ರಾಮದಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಈತ ಎಲ್ಲಿಯಾದರೂ ಒಂಟಿ ಮಹಿಳೆ ಕಂಡರೆ ಮೊದಲು ಆಕೆಯನ್ನು ಹಿಂಬಾಲಿಸುತ್ತಿದ್ದ. ನಂತರ ತನ್ನ ಮಾತಿನಲ್ಲಿಯೇ ಆಕೆಯನ್ನು ತನ್ನ ಬಲೆಗೆ ಬೀಳಿಸುತ್ತಿದ್ದ. ಇದಾದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಅಲ್ಲದೇ ಸೀರೆ ಅಥವಾ ದುಪ್ಪಟ್ಟಾದಿಂದ ಕತ್ತಿಗೆ ಬಿಗಿದು ಸಾಯಿಸುತ್ತಿದ್ದ ಎನ್ನುವುದು […]