Breaking News :

ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಕಾಲೇಜು ಕ್ಯಾಂಪಸ್‌ನಲ್ಲಿ ಹಿಜಾಬ್, ಬುರ್ಖಾ, ಟೋಪಿ ಮತ್ತು ನಖಾಬ್ ನಿಷೇಧಿಸಿ ಹೊರಡಿಸಿದ್ದ ಮುಂಬೈ ಕಾಲೇಜೊಂದರ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿ ನಡೆಸುತ್ತಿರುವ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿಗೆ ನೋಟಿಸ್ ಜಾರಿ ಮಾಡಿ, ನವೆಂಬರ್ 18 ರೊಳಗೆ ಅದರ ಪ್ರತಿಕ್ರಿಯೆಯನ್ನು ಕೇಳಿದೆ. ದೇಶದಲ್ಲಿ ಅನೇಕ ಧರ್ಮಗಳಿವೆ ಎಂದು ನಿಮಗೆ ಈಗ ಗೊತ್ತಾಗಿರುವುದು ದುರದೃಷ್ಟಕರ. ವಿದ್ಯಾರ್ಥಿಗಳ ಧಾರ್ಮಿಕ […]

ವಕ್ಫ್‌ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡ ಕೇಂದ್ರ; ಜಂಟಿ ಸಂಸದೀಯ ಸಮಿತಿ ರಚನೆ

ವಕ್ಫ್‌ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಗುರುವಾರ ಮಂಡಿಸಿದ್ದು, ಪ್ರತಿಪಕ್ಷಗಳು ಮಸೂದೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಮಸೂದೆಯು ಮಸೀದಿಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಮಸೂದೆಯು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ, ಇದು ಸಂವಿಧಾನದ ಮೇಲಿನ ದಾಳಿ ಎಂದು ವಿರೋಧ ಪಕ್ಷಗಳು ಕಟುವಾಗಿ ಆರೋಪಿಸಿವೆ. ಮಸೂದೆಯನ್ನು ಈಗ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಪರಿಶೀಲನೆಗೆ ಒಪ್ಪಿಸಲಾಗಿದೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯ ಮಂಡನೆಗೆ ಅವಕಾಶ […]

ವಯನಾಡಿನಲ್ಲಿ ಮತ್ತೆ ಕೇಳಿಸಿದ ಭಾರೀ ಶಬ್ಧ; ಶಾಲೆಗಳಿಗೆ ರಜೆ ಘೋಷಣೆ, ಆತಂಕದಲ್ಲಿ ಜನ

ವಯನಾಡ್‌ನ ಎಡಕ್ಕಲ್‌ನಲ್ಲಿ ಭಾರೀ ಶಬ್ಧ ಕೇಳಿ ಬಂದಿದ್ದು, ಭೂಕಂಪದ ಸಾಧ್ಯತೆಯಿರುವುದರಿಂದ ಜನರನ್ನು ಸ್ಥಳಾಂತರ ಮಾಡಿರುವ ಬಗ್ಗೆ ವರದಿಯಾಗಿದೆ. ವಯನಾಡಿನ ಕುರಿಚಿಯರ್ಮಲ, ಪಿನಂಗೋಡ್, ಮೋರಿಕಪ್ಪ್, ಅಂಪುಕುತಿಮ್ಮಲ, ಎಡಕ್ಕಲ್ ಗುಹೆ ಪ್ರದೇಶಗಳಲ್ಲಿ ವಾಸಿಸುತ್ತಿರುವರನ್ನು ಸ್ಥಳಾಂತರ ಮಾಡಬೇಕೆಂದು ಸೂಚಿಸಲಾಗಿದೆ. ಎಡಕ್ಕಲ್ ಮತ್ತು ನೆನ್ಮೇನಿಯಲ್ಲಿ ಭಾರಿ ಶಬ್ದ ಕೇಳಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಭಾರಿ ಶಬ್ದ  ಕೇಳಿ ಬಂದ ಹಿನ್ನೆಲೆ ಈ ಪ್ರದೇಶದಲ್ಲಿ ಶಾಲೆಗಳನ್ನು ಈ ಮುಚ್ಚಲಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ […]

ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಮಕ್ಕಳು; ಬಾಂಬ್ ಸ್ಪೋಟಗೊಂಡು ಐವರಿಗೆ ಗಾಯ

ಯೂಟ್ಯೂಬ್​ ನೋಡಿ ಬಾಂಬ್​​ ತಯಾರಿಸಲು ಪ್ರಯತ್ನಿಸುತ್ತಿದ್ದಾಗ ಸ್ಫೋಟಗೊಂಡು ಐವರು ಮಕ್ಕಳು ಗಾಯಗೊಂಡಿರುವ ಘಟನೆ ಮುಜಾಫರ್​​ಪುರದಲ್ಲಿ ನಡೆದಿದೆ. ಲವ್ ಕುಮಾರ್ (8), ಕುಶ್ ಕುಮಾರ್(5), ಜೈದೀಪ್ ಕುಮಾರ್, ಅಭಿಯಾಂಶು ಕುಮಾರ್ ಮತ್ತು ಗುಡ್ಡು ಕುಮಾರ್ ಗಾಯಾಳುಗಳು ಎಂದು ಗುರುತಿಸಲಾಗಿದೆ. ಗೈಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬೋರಿಡಿಹ್ ಪಂಚಾಯತ್‌ನ ಮುನ್ನಿ ಕಲ್ಯಾಣ ಗ್ರಾಮದಲ್ಲಿ ಕೆಲವು ಮಕ್ಕಳು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡಿ ಬಾಂಬ್ ತಯಾರಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಐವರು ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ […]

ವಯನಾಡು ದುರಂತ ಸಂತ್ರಸ್ತರಿಗೆ ಜೈಲಿನಿಂದಲೇ 15 ಕೋಟಿ ದೇಣಿಗೆ ನೀಡಲು ಮುಂದಾದ ವಂಚನೆ ಪ್ರಕರಣದ ಆರೋಪಿ

ವಯನಾಡು ಭೂ ಕುಸಿತ ಸಂತ್ರಸ್ತರಿಗೆ ನೀಡಲು  ಮುಖ್ಯಮಂತ್ರಿಗಳ ಪರಿಹಾರ ನಿಧಿ‌ಗೆ ವಂಚನೆ ಪ್ರಕರಣದ ಆರೋಪಿಯೋರ್ವ 15 ಕೋಟಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್‌ ಚಂದ್ರಶೇಖರ್‌ ಈಗ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ವಯನಾಡು ದುರಂತದಿಂದ ದುಃಖಿತನಾಗಿದ್ದು,  ಅಗತ್ಯವಿದ್ದಲ್ಲಿ ಸೂಕ್ತ ನೆರವು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರ ಬರೆದಿರುವುದನ್ನು  ವಕೀಲ ಅನಂತ್‌ ಮಲಿಕ್‌ ಕೂಡ ಖಚಿತಪಡಿಸಿದ್ದಾರೆ. ನನ್ನ ಫೌಂಡೇಶನ್‌ನಿಂದ 15 ಕೋಟಿ ದೇಣಿಗೆಯನ್ನು […]

ಕರ್ನಾಟಕಕ್ಕೆ ಬಂದ ಆಂಧ್ರ ಡಿಸಿಎಂ ಕಾರಿನಲ್ಲಿದ್ದ ಬೃಹತ್ ಹೆಬ್ಬಾವು!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ  ಪವನ್ ಕಲ್ಯಾಣ್ ಬೆಂಗಳೂರಿಗೆ ಬಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ  ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ  ಹೆಬ್ಬಾವು ಕಾಣಿಸಿಕೊಂಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಸಭೆ ನಡೆಸಿದ್ದ ಪವನ್ ಕಲ್ಯಾಣ ಆನೆಗಳ ಸೆರೆ ಕಾರ್ಯಾಚರಣೆ, ಮತ್ತು ಪಳಗಿಸುವ ಕ್ರಮ, ಮಾವುತರಿಗೆ ತರಬೇತಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ತೆರಳಲು ಮುಂದಾದಾಗ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ  ಹೆಬ್ಬಾವು ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕಾರಿನ ಬಳಿ ಧಾವಿಸಿದ ಅರಣ್ಯ ಸಿಬ್ಬಂದಿಗಳು […]

ಹಾಜಿ ಅಲಿ ದರ್ಗಾಕ್ಕೆ 1.25ಕೋಟಿ ದೇಣಿಗೆ ನೀಡಿದ ನಟ ಅಕ್ಷಯ್ ಕುಮಾರ್

ಮುಂಬೈ:  ಹಾಜಿ ಅಲಿ ದರ್ಗಾಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದು, ದರ್ಗಾದ ನವೀಕರಣಕ್ಕೆ 1.25 ಕೋಟಿ ರೂ.ದೇಣಿಗೆ ನೀಡಿದ್ದಾರೆ. ದರ್ಗಾಕ್ಕೆ ಭೇಟಿಯ ವೀಡಿಯೋವನ್ನು ಅಕ್ಷಯ್‌ ಕುಮಾರ್ ಹಂಚಿಕೊಂಡಿದ್ದು, ದರ್ಗಾ ಟ್ರಸ್ಟ್ ನಟನಿಗೆ ಧನ್ಯವಾದ ಸಲ್ಲಿಸಿದೆ. ಹಾಜಿ ಅಲಿ ಟ್ರಸ್ಟ್‌ನ ಅಧಿಕಾರಿ ಮೊಹಮ್ಮದ್ ಅಹ್ಮದ್ ತಾಹಿರ್ ಈ ಕುರಿತು ಮಾಹಿತಿ ನೀಡಿದ್ದು, ಅಕ್ಷಯ್ ಕುಮಾರ್‌ ಅವರು ದರ್ಗಾದ ಒಂದು ಭಾಗವನ್ನು ನವೀಕರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ದೇಣಿಗೆ ನೀಡುವುದು ಇದು ಮೊದಲಲ್ಲ, […]

ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ: ಪ್ರಾಸ್ತವಿತ ಬಿಲ್ ನಲ್ಲಿ ಏನೇನಿದೆ?

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಸಂಸತ್‌ ನಲ್ಲಿ ಇಂದು ಮಂಡಿಸಿದ್ದಾರೆ. ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹಾಗೂ ವಕ್ಫ್ ಕಾಯಿದೆ, 1995 ಅನ್ನು ʼಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ-1995ʼ ಎಂದು ಮರುನಾಮಕರಣ ಮಾಡುವ ಗುರಿಯೊಂದಿಗೆ ಇಂದು ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿದೆ. ಪ್ರಾಸ್ತಾವಿತ ತಿದ್ದುಪಡಿ ಮಸೂದೆಯಲ್ಲೇನಿದೆ? ಮಸೂದೆಯಲ್ಲಿ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ರಚನೆ ಸೇರಿವೆ. […]

ವಯನಾಡು; ದುರಂತ ಸ್ಥಳದಲ್ಲಿನ ನಿರಾಶ್ರಿತ ಯುವತಿಯರಿಗೆ ಜೀವನ ನೀಡಲು ಮುಂದಾದ ಯುವಕರು

ವಯನಾಡು ಭೂಕುಸಿತ ದುರಂತ ಪೀಡಿತ ಕುಟುಂಬದ ಹೆಣ್ಣುಮಕ್ಕಳಿಗೆ ಬದುಕು ನೀಡಲು ಇದೀಗ ಇಬ್ಬರು ಯುವಕರು ಮುಂದೆ ಬಂದಿದ್ದಾರೆ‌. ಬೂದನೂರು ತಯ್ಯೂರು ಮೂಲದ ವಿಷ್ಣುಕುಮಾರ್ (30) ಮತ್ತು ಮಾವೇಲಿಕ್ಕರ ಮೂಲದ ದೀಪುರಾಜ್ (31) ಅನಾಥರಾದ ಯುವತಿಯರಿಬ್ಬರಿಗೆ ಜೀವನ ನೀಡಲು ಮುಂದಾಗಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ಮನನೊಂದ ತಾಯಿಯ ಕೋರಿಕೆಯಂತೆ ವಿಷ್ಣು ಈ ನಿರ್ಧಾರಕ್ಕೆ ಬಂದಿದ್ದಾರೆ.  ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ವಿಷ್ಣು, ವಯನಾಡಿನ ಯುವತಿಯೋರ್ವಳಿಗೆ ಜೀವನ ನೀಡುವುದಾಗಿ ಹೇಳಿದ್ದಾರೆ. ಇನ್ನು ದೀಪುರಾಜ್ ಎಂಬಾತ ಖಾಸಗಿ ಬಸ್​ನಲ್ಲಿ […]

ವಕ್ಫ್ ಬೋರ್ಡ್ ಗೆ ಸಂಬಂಧಿಸಿದ ಒಟ್ಟು 62,830 ಸ್ಥಿರಾಸ್ತಿಗಳನ್ನು ದಾಖಲಿಸಲಾಗಿದೆ: ಬ್ರಿಜೇಶ್ ಚೌಟ ಪ್ರಶ್ನೆಗೆ ಸಚಿವರ ಉತ್ತರ

ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಗೆ ಸಂಬಂಧಿಸಿದ ಒಟ್ಟು 62,830 ಸ್ಥಿರಾಸ್ತಿಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ದೇಶದಲ್ಲಿ ವಕ್ಫ್ ಮಂಡಳಿ ಹೊಂದಿರುವ ಒಟ್ಟು ಆಸ್ತಿಗಳ ವಿವರಗಳಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ( WAMASI) 2010ರಲ್ಲಿ ಪ್ರಾರಂಭವಾಗಿದೆ. ಪ್ರತಿ ತಿಂಗಳು ಈ ಪೋರ್ಟಲ್ ನಲ್ಲಿ ದೇಶದೆಲ್ಲೆಡೆಯಿರುವ ವಕ್ಫ್ ಆಸ್ತಿಗಳ ದಾಖಲೀಕರಣ ಮಾಡಲಾಗುತ್ತಿದೆ. […]