Breaking News :

ಮಹಿಳೆಯ ಮೇಲೆ ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ ಬಿಜೆಪಿ ನಾಯಕ; ವಿಡಿಯೋ ವೈರಲ್

ಪೊಲೀಸ್ ಠಾಣೆಯಲ್ಲಿ ಬೆಂಚ್ ಮೇಲೆ ಕುಳಿತಿದ್ದ ಮಹಿಳೆ ಮೇಲೆ ಬಿಜೆಪಿ ನಾಯಕನೋರ್ವ ಹಲ್ಲೆ ನಡೆಸುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರದ ಬುಲ್ದಾನದ ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ, ಉತ್ತರ ಪ್ರದೇಶ ಮೂಲದ ಮಹಿಳೆ ಮೇಲೆ ಬಿಜೆಪಿ ನಾಯಕ ಶಿವ ತಾಯ್ಡೆ ಹಲ್ಲೆ ನಡೆಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲ್ಕಪುರ ಕೃಷಿ ಸಮಿತಿಯ ಚೇರ್‌ಮ್ಯಾನ್ ಆಗಿರುವ ಶಿವ ತಾಯ್ಡೆ ವಿರುದ್ಧ ಕಾನೂನು […]

ಅನರ್ಹತೆ ಬೆನ್ನಲ್ಲೆ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಪೋಗಟ್: ಭಾವನಾತ್ಮಕ ಟ್ವೀಟ್..

ಒಲಿಂಪಿಕ್ಸ್ ನಲ್ಲಿ  ಫೈನಲ್ ಪ್ರವೇಶಿಸಿದರೂ ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಫೋಗಾಟ್‌  ಕುಸ್ತಿಗೆ ವಿದಾಯ ಹೇಳಿದ್ದಾರೆ. ತಾನು ಕುಸ್ತಿಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ಫೋಗಾಟ್‌ ಭಾವನಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ. ಈ ಮೊದಲು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್‌ ಈ ಬಾರಿ ಅವಕಾಶ ಸಿಗದ ಕಾರಣ 50 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಹೀಗಾಗಿ ಸ್ಪರ್ಧೆ ಆರಂಭವಾಗುವ ದಿನ ಬೆಳಿಗ್ಗೆ ನಡೆಸುವ ತೂಕ ಪರಿಶೀಲನೆಯಲ್ಲಿ ಸ್ಪರ್ಧಿ 50 ಅಥವಾ […]

ಶಾಲೆಗೆ ಜಮೀನು ಕೊಟ್ಟರೂ, ಎಸ್ ಡಿಎಂಸಿ ಅಧ್ಯಕ್ಷನನ್ನಾಗಿ ಮಾಡಿಲ್ಲ ಎಂದು ಶಾಲೆಗೆ ಬೀಗ ಜಡಿದ ಆಸಾಮಿ; ಮಕ್ಕಳು ಕಂಗಾಲು

ನಾನು ಶಾಲೆಗೆ ಜಮೀನು ಕೊಟ್ಟಿದ್ದೇನೆ, ಆದ್ದರಿಂದ ಸರ್ಕಾರಿ ಶಾಲೆಗೆ ತನ್ನನ್ನು ಶಾಶ್ವತವಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷನಾಗಿ ಮಾಡುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬ ಶಾಲೆಗೆ ಬೀಗ ಜಡಿದಿದ್ದು, ಮಕ್ಕಳು ಶಾಲೆಯ ಹೊರಗೆ ಕುಳಿತ ವಿಚಿತ್ರ ಘಟನೆ ವಿಜಯಪುರದಲ್ಲಿ ನಡೆದಿದೆ‌. ರಾಮನಗೌಡ ದೋರನಹಳ್ಳಿ ಎಂಬಾತ ತಾಳಿಕೋಟೆ ತಾಲೂಕಿನ ಬಳಗಾನೂರ ಕ್ರಾಸ್ ಬಳಿ ಇರುವ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗೆ  ಬೀಗ ಜಡಿದಿದ್ದಾನೆ. ಸರ್ಕಾರಿ ಶಾಲೆಗೆ ನಮ್ಮ ಕುಟುಂಬದಿಂದ 3 ಗುಂಟೆ ಭೂಮಿ ದಾನ ನೀಡಿದ್ದೇವೆ. ಹೀಗಾಗಿ ಈ ಶಾಲೆಗೆ ನಾನೇ ಶಾಶ್ವತವಾಗಿ ಎಸ್.ಡಿ.ಎಂ.ಸಿ. […]

2025ರ ಸಾಲಿಗೆ ಹೊಸ ಹಜ್ ನೀತಿ ಬಿಡುಗಡೆ ಮಾಡಿದ ಕೇಂದ್ರ; ಕೋಟಾದಲ್ಲೂ ಇಳಿಕೆ

ಕೇಂದ್ರ ಸರ್ಕಾರವು 2025ರ ಸಾಲಿಗೆ ಹೊಸ ಹಜ್‌ ನೀತಿ ಬಿಡುಗಡೆ ಮಾಡಿದೆ. ಹೊಸ ನೀತಿಯ ಪ್ರಕಾರ ಭಾರತೀಯ ಹಜ್‌ ಸಮಿತಿಯ ಕೋಟಾವನ್ನು ಶೇಕಡಾ 70ಕ್ಕೆ ಇಳಿಸಲಾಗಿದೆ. ಹೊಸ ನೀತಿಯ ಪ್ರಕಾರ, ಭಾರತಕ್ಕೆ ನಿಗದಿಪಡಿಸಲಾದ ಹಜ್‌ ಯಾತ್ರಿಕರ ಒಟ್ಟು ಕೋಟಾದ 70 ಪ್ರತಿಶತವನ್ನು ಭಾರತದ ಹಜ್‌ ಸಮಿತಿ ನಿರ್ವಹಿಸುತ್ತದೆ. ಅದೇ ಸಮಯದಲ್ಲಿ, ಉಳಿದ 30 ಪ್ರತಿಶತ ಕೋಟಾವನ್ನು ಖಾಸಗಿ ಹಜ್‌ ಗುಂಪು ಸಂಘಟಕರಿಗೆ ನೀಡಲಾಗುತ್ತದೆ. ಕಳೆದ ವರ್ಷದ ಹಜ್‌ ನೀತಿಯಲ್ಲಿ ಈ ಕೋಟಾ 80-20 ಆಗಿತ್ತು. ಹಜ್‌ ಯಾತ್ರೆಯನ್ನು […]

BIG NEWS ಒಲಿಂಪಿಕ್ಸ್ ಪೈನಲ್ ನಿಂದ ಅನರ್ಹಗೊಂಡ ವಿನೇಶ್ ಪೋಗಟ್

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ  50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿರುವ ಬಗ್ಗೆ ವರದಿಯಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ  ನಿಗದಿತ ತೂಕಕ್ಕಿಂತ ಅವರು 100 ಗ್ರಾಂ ತೂಕ ಹೆಚ್ಚಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಒಲಿಂಪಿಕ್ಸ್‌ ನಿಯಮದ ಪ್ರಕಾರ ಫೋಗಟ್‌ ಬೆಳ್ಳಿ ಪದಕಕ್ಕೂ ಅರ್ಹರಾಗುವುದಿಲ್ಲ […]

ಬಾಂಗ್ಲಾ ಬಿಕ್ಕಟ್ಟು; ಮೋದಿ ವಿರುದ್ಧ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ವಾಗ್ಧಾಳಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಿಡಿಕಾರಿದ್ದಾರೆ. ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಎಕ್ಸ್‌ನಲ್ಲಿ  ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ಲಡಾಖ್‌ನಲ್ಲಿ ಭಾರತದ 4067 ಚದರ KM ಭೂಮಿ ಚೀನಾ ಆಕ್ರಮಿಸಿದಾಗ ಮೋದಿ ಹೇಡಿಯಂತೆ ಇದ್ದರು. ಮಾಲ್ಡೀವ್ಸ್‌ ನಾಯಕರು ಭಾರತೀಯರು ತಮ್ಮ ದೇಶವನ್ನು ತೊರೆಯುವಂತೆ ಕರೆ ನೀಡಿದಾಗ ಮೋದಿ ಸುಮ್ಮನಿದ್ದರು. ಈಗ ಬಾಂಗ್ಲಾ ಪ್ರಧಾನಿಯನ್ನು ಮುಸ್ಲಿಮರು ಬೆನ್ನಟ್ಟುತ್ತಿರುವಾಗ ನಡುಗುತ್ತಿದ್ದಾರೆ. ನೇಪಾಳದ ಬಗ್ಗೆ ಕೇಳಬೇಡಿ.. ಮೋದಿಯವರಿಗೆ ರಾಜೀನಾಮೆ ಕೊಡಿ ಎಂದು ಕೇಳಿ […]

ನರ್ಸಿಂಗ್ ಕೋರ್ಸ್ ಪ್ರವೇಶ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ; ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಬಂದು ಸಿಕ್ಕಿ ಬಿದ್ದ ಅಭ್ಯರ್ಥಿಗಳು

ಪರೀಕ್ಷೆ ಕೊಠಡಿಯೊಳಗೆ ಅಭ್ಯರ್ಥಿಗಳು ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಬಂದು ಸಿಕ್ಕಿ ಬಿದ್ದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬೀರ್ಭುಮ್‌ನ ಸೂರಿಯ ಬೆನಿಮಾಧಬ್ ಇನ್ಸ್ಟಿಟ್ಯೂಷನ್‌ನಲ್ಲಿ ಎಎನ್‌ಎಂ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಮಾಲ್ಡಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಿದ್ದರು. ಪರೀಕ್ಷೆಗಳು ಪ್ರಾರಂಭವಾದ ತಕ್ಷಣ, ಕೊಠಡಿಯೊಳಗೆ ಕಭದ್ರತಾ ಸಿಬ್ಬಂದಿಗಳಿಗೆ ಮೊಬೈಲ್‌ ಬಳಕೆ ಅನುಮಾನ ಬಂದಿತು. ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ […]

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ 21ರ ಯುವತಿ; ಅಪರೂಪದ ಘಟನೆ

21 ವರ್ಷದ ಯುವತಿಯೋರ್ವಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ರಾಜಸ್ಥಾನದ ಜೈಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ರಾಜಸ್ಥಾನದ ದೌಸಾ ಜಿಲ್ಲೆಯ ನಿವಾಸಿ ಸಂತೋಷ ದೇವಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ. ನಾಲ್ಕು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿವೆ. ಸಧ್ಯ ನಾಲ್ಕು ಮಕ್ಕಳನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆಯ ವೈದ್ಯೆ ಡಾ.ಆಶಾ ವರ್ಮಾ, ನಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ […]

ಮುಖ್ಯಮಂತ್ರಿಗಳ ನಿವಾಸದ ಬಳಿ ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ; ಸ್ಥಿತಿ ಗಂಭೀರ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಹೊರಗಡೆ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯೋಗಿ ಆದಿತ್ಯನಾಥ್ ಅವರ ಜನತಾ ದರ್ಬಾರ್​ನಿಂದ ಹೊರಬಂದ ಕೂಡಲೇ ಮಹಿಳೆ ಗೌತಮಪಲ್ಲಿ ಪೊಲೀಸ್ ಠಾಣೆ ಪ್ರದೇಶದ ವಿಕ್ರಮಾದಿತ್ಯ ಮಾರ್ಗದ 19 ಬಿಡಿ ಜಂಕ್ಷನ್ ಬಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಅಂಜಲಿ ಜಾತವ್​ ಎಂದು ಹೇಳಲಾಗಿದೆ. ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ಕಂಬಳಿ ಬಳಸಿ  ನಂದಿಸಿದ್ದಾರೆ. ಮಹಿಳೆಯನ್ನು ತ್ವರಿತವಾಗಿ […]

ಮಂಗಳೂರಿನಿಂದ ವಯನಾಡಿಗೆ ಟ್ರಕ್ ಗಳಲ್ಲಿ ಪರಿಹಾರ ಸಾಮಾಗ್ರಿಗಳ ರವಾನೆ

ಕೇರಳದ ವಯನಾಡಿನಲ್ಲಿನ ಭೂಕುಸಿತದ ಸಂತ್ರಸ್ತರಿಗೆ ಮಂಗಳೂರಿನ ಬಿ ಹ್ಯೂಮನ್ ಮತ್ತು ಹೋಪ್ ಫೌಂಡೇಶನ್ ಸಂಸ್ಥೆಗಳು ಸಂಗ್ರಹಿಸಿದ ನೆರವು ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಆಹಾರ, ಔಷಧಿ, ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಎರಡು ಟ್ರಕ್‌ಗಳಲ್ಲಿ ಮಂಗಳೂರಿನಿಂದ ಸೋಮವಾರ ಕಳುಹಿಸಿಕೊಡಲಾಗಿದೆ. ಟ್ರಕ್‌ಗಳಿಗೆ ತೆರಳಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಹಸಿರು ನಿಶಾನೆ ತೋರಿದ್ದಾರೆ. ಈ ವೇಳೆ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಸಂಕಷ್ಟದಲ್ಲಿರುವ ವಯನಾಡ್ ಜನತೆಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ತಲುಪಿಸುವ ಕಾರ್ಯ ಕೈಗೊಂಡಿರುವ ಬಿ ಹ್ಯೂಮನ್ ಮತ್ತು ಹೋಪ್ ಸಂಸ್ಥೆಯ […]