ವಯನಾಡು; ನಾಪತ್ತೆಯಾಗಿರುವವರು ಬದುಕುಳಿದಿರುವ ಸಾಧ್ಯತೆ ತೀವ್ರ ಕಡಿಮೆ; ಸಿಎಂ ಪಿಣರಾಯ್ ವಿಜಯನ್

ವಯನಾಡಿನ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ 330ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 300 ಜನ ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮಾತನಾಡಿದ ಕೇರಳ ಸಿಎಂ ಪಿಣರಾಯ್ ವಿಜಯನ್ ಭೂಮಿ ಕುಸಿದು ಮೂರು ದಿನಗಳು ಕಳೆಯುತ್ತಿದ್ದು ಈಗಾಗಲೇ ಸಾವಿನಸಂಖ್ಯೆ 300ರ ಗಡಿ ದಾಟಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರು ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಮುಂಡಕ್ಕೈ, ಚೂರಲ್ ಮಾಲಾ ಮತ್ತು ಅಟ್ಟಮಾಲ ಪ್ರದೇಶಗಳಲ್ಲಿ ಕಾಪಾಡಬೇಕು ಎಂದರೆ ಬದುಕಿದವರು ಯಾರು ಇಲ್ಲ. ಮುಂಡಕ್ಕೈನ ಸರ್ಕಾರಿ […]
ವಯನಾಡಿನಲ್ಲಿ ಕಾಂಗ್ರೆಸ್ ವತಿಯಿಂದ 100 ಮನೆಗಳ ನಿರ್ಮಾಣ; ರಾಹುಲ್ ಗಾಂಧಿ ಘೋಷಣೆ

ಭೀಕರ ದುರಂತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಈ ವರ್ಷ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ವಯನಾಡ್ ನ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿದ್ದಾರೆ. ಆ ಬಳಿಕ ಪರಿಹಾರ ಶಿಬಿರಗಳಿಗೆ ಕೂಡ ಭೇಟಿ ನೀಡಿದ್ದು, ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ವಯನಾಡಲ್ಲಿ ಭೂಕುಸಿತದಿಂದ 320ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ. […]
ಮಳೆ ಹವಾಂತರದಿಂದ ಕಂಗೆಟ್ಟ ಜನರಿಗೆ ಮತ್ತೊಂದು ಶಾಕ್; ಲಾ ಲಿನಾ ಮಾರುತ, ಹವಮಾನ ಇಲಾಖೆಯಿಂದ ಎಚ್ಚರಿಕೆ

ಭಾರೀ ಮಳೆಗೆ ಕರಾವಳಿ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ. ಈ ಬಾರಿ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಲಾ ಲಿನಾ ಮಾರುತ ರೂಪುಗೊಳ್ಳಲಿದೆ. ಇದು ಭಾರಿ ಮಳೆಯನ್ನೇ ತರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಗಸ್ಟ್ ಮೊದಲ ವಾರಾಂತ್ಯಕ್ಕೆ ಮಳೆ ಕಡಿಮೆಯಾಗಲಿದೆ. ಆದರೆ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್ ನಲ್ಲಿ ಲಾ ನಿನಾ ಮಾರುತ ರೂಪುಗೊಂಡು ಅವಾಂತರ ಸೃಷ್ಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. […]
ವಯನಾಡು ಭೂಕುಸಿತದ ಸ್ಥಳದಲ್ಲಿ 16 ಗಂಟೆಯಲ್ಲಿ ಸೇತುವೆ ನಿರ್ಮಿಸಿದ ಸೇನೆ!

ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದ ಚೂರಲ್ಮಲ ಮತ್ತು ಮುಂಡಕ್ಕೈಗೆ ಸಂರ್ಪಕ್ಕೆ ಕಲ್ಪಿಸುವ ಚಾರಲ್‌ಮಲೈ ನದಿಗೆ ಅಡ್ಡಲಾಗಿ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ದಾಖಲೆಯ ಕೇವಲ 16 ಗಂಟೆಯಲ್ಲಿ ನಿರ್ಮಿಸಿದೆ. ಸೇನೆಯು ಜುಲೈ 31ರ ರಾತ್ರಿ 9 ಗಂಟೆಗೆ ಸೇತುವೆ ನಿರ್ಮಾಣ ಪ್ರಾರಂಭಿಸಿದ್ದು, ಸೇನೆಯ ಎಂಜಿನಿಯರ್‌ಗಳು ಆಗಸ್ಟ್ 01 ರ ಸಂಜೆ 5:30ಕ್ಕೆ ಕೆಲಸ ಪೂರ್ಣಗೊಳಿಸಿದ್ದಾರೆ. ಈ ಸೇತುವೆ 24 ಟನ್ ತೂಕದ ಸಾಮರ್ಥ್ಯವನ್ನು ಹೊಂದಿದೆ. ಮದ್ರಾಸ್ ಎಂಜಿನಿಯರ್ಸ್ ಗ್ರೂಪ್‌ನ ಮೇಜ್ ಸೀತಾ ಶೆಲ್ಕೆ ಮತ್ತು ಅವರ […]
ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ಬಾಲಕಿಯೋರ್ವಳು ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ನಡೆದಿದೆ. ಕೀಮಕುರ್ತಿ ಮಂಡಲದ ನಿವಾಸಿಯಾಗಿರುವ 16 ವರ್ಷದ ಬಾಲಕಿ ಕೋತಪಟ್ಟಣಂನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಬಾಲಕಿ ಶಾಲೆಯ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ. ಗರ್ಭಿಣಿಯಾಗಿದ್ದ ಬಾಲಕಿ ಈ ಬಗ್ಗೆ ಶಾಲೆಯ ಸಹಪಾಠಿಗಳಿಗೆ, ಶಿಕ್ಷಕರಿಗೆ ವಿಷಯ ತಿಳಿಸಿರಲಿಲ್ಲ. ಹೊಟ್ಟೆ ನೋವಿನ ಹಿನ್ನೆಲೆ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಳೆ. ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹೆರಿಗೆ ನೋವು […]
ವಯನಾಡಿನಲ್ಲಿ ಭೂಕುಸಿತಕ್ಕೆ ಕಾರಣವಾದ ಅಂಶಗಳೇನು? ತಜ್ಞರು ಏನು ಹೇಳುತ್ತಾರೆ ಗೊತ್ತಾ?

ಕೇರಳದ ವಯನಾಡಿನ ಮೇಪ್ಪಾಡಿಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 300ಕ್ಕೆ ತಲುಪಿದೆ, ಸ್ಥಳದಲ್ಲಿ 240 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಭೂಕುಸಿತಗಳು ಜೀವ ಮತ್ತು ಜೀವನೋಪಾಯಕ್ಕೆ ಅಪಾರ ನಷ್ಟವನ್ನುಂಟು ಮಾಡುತ್ತದೆ. ಭೂಕುಸಿತದ ಬಗ್ಗೆ ಮಾತನಾಡಿದ ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರೇಡಾರ್ ರಿಸರ್ಚ್ (ACARR) ನಿರ್ದೇಶಕ ಎಸ್ ಅಭಿಲಾಷ್, ತೋಟಗಳನ್ನು ಮಾಡಲು ಮರಗಳನ್ನು ಕಡಿಯುವುದು ಕೇರಳದಲ್ಲಿ ಭೂಕುಸಿತಕ್ಕೆ ಕೊಡುಗೆ ನೀಡುತ್ತಿದೆ. ಕೇರಳದಲ್ಲಿ ನಡೆಯುತ್ತಿರುವ ಹೆಚ್ಚಿನ ಭೂಕುಸಿತಗಳು ತೋಟದ ಪ್ರದೇಶಗಳಲ್ಲಿ ನಡೆಯುತ್ತವೆ. […]
ವಯನಾಡು ದುರಂತ ಸ್ಥಳಕ್ಕೆ ರಾಹುಲ್, ಪ್ರಿಯಾಂಕ ಭೇಟಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಕೇರಳದ ವಯನಾಡು ಭೂಕುಸಿತದ ದುರಂತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಗಾಂಧಿ ಮತ್ತು ವಾದ್ರಾ ನಂತರ ರಸ್ತೆ ಮೂಲಕ ವಯನಾಡಿಗೆ ತೆರಳಿದ್ದಾರೆ. ಈ ಕುರಿತು ಕಾಂಗ್ರೆಸ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ದುರಂತ ಸಂಭವಿಸಿದ ವಯನಾಡಿನ ಮೇಪ್ಪಾಡಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಲುಪಿದ್ದು, ಅಲ್ಲಿ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ […]
ವಯನಾಡು ದುರಂತ; ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ಖ್ಯಾತ ನಟಿ

ಕೇರಳದ ವಯನಾಡು ಹಿಂದೆಯೆಂದೂ ಕಂಡರಿಯದ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಹಲವು ಸ್ಟಾರ್ ನಟರು ಪರಿಹಾರ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿ ಸಹಾಯ ಮಾಡಿದ್ದಾರೆ. ಆದರೆ ಮಲಯಾಳಂ ಸಿನಿಮಾದಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ನಟಿ ನಿಖಿಲಾ ವಿಮಲ್ ಪರಿಹಾರ ಕಾರ್ಯದಲ್ಲಿ ಕಾರ್ಯಕರ್ತರೊಂದಿಗೆ ಸ್ಚಯಂ ತೊಡಗಿಸಿಕೊಂಡಿದ್ದಾರೆ. ನಿಖಿಲಾ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಯನಾಡಿನಲ್ಲಿ ದುರಂತಕ್ಕೀಡಾದವರಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವುದು, ಅದನ್ನು ಪ್ಯಾಕ್ ಮಾಡುವುದು, ಇತ್ಯಾದಿ ನೆರವು ಕಾರ್ಯ ಮಾಡುವಲ್ಲಿ ನಿಖಿಲಾ […]
ವಯನಾಡು ಭೂಕುಸಿತ: ಮನೆಯೊಳಗಡೆ ಕುರ್ಚಿಗಳ ಮೇಲೆ ಕುಳಿತುಕೊಂಡ, ಮಂಚಗಳ ಮೇಲೆ ಮಲಗಿರುವ ಸ್ಥಿತಿಯಲ್ಲಿ ಕಂಡು ಬಂದ ಮೃತದೇಹಗಳು

ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಕುಗ್ರಾಮದಲ್ಲಿ ಭೂಕುಸಿತದಿಂದ ಮೃತರ ಸಂಖ್ಯೆ 276ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ವೇಳೆ ಹಲವು ಹೃದಯ ವಿದ್ರಾಹಕ ದೃಶ್ಯಗಳು ಕಂಡು ಬಂದಿದೆ. ಭೂಕುಸಿತಕ್ಕೆ ನಾಶವಾದ ಮನೆಗಳ ಒಳಗೆ ಕುಳಿತಿರುವ ಮತ್ತು ಮಲಗಿರುವ ಸ್ಥಿತಿಯಲ್ಲಿ ಮೃತದೇಹಗಳ ಭಯಾನಕ ದೃಶ್ಯಗಳು ಕಂಡುಬಂದಿದೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸೇನೆಯ ಸಿಬ್ಬಂದಿ ಸಂಪೂರ್ಣವಾಗಿ ಮಣ್ಣಿನಲ್ಲಿ ಮುಳುಗಿದ್ದ ಮನೆಯ ಮೇಲ್ಛಾವಣಿಯನ್ನು ಮುರಿದು ಒಳಗೆ ಪ್ರವೇಶಿಸಲು ಹಗ್ಗಗಳನ್ನು ಬಳಸಿ ಅಲ್ಲಿ ಸಿಕ್ಕಿಬಿದ್ದವರ ಶವಗಳನ್ನು […]
ವಯನಾಡು ದುರಂತ; ಪ್ರವಾಹದ ನೀರಿನಲ್ಲಿ ಸಿಲುಕಿದ ಮಗುವನ್ನು ರಕ್ಷಿಸುವಾಗ ಸ್ವಂತ ಮಗುವನ್ನು ಕಳೆದುಕೊಂಡ ಮಹಿಳೆ

ಮೆಪ್ಪಾಡಿ: ಕೇರಳದ ವಯನಾಡು ಮೆಪ್ಪಾಡು ಭೂಕುಸಿತ ಪ್ರದೇಶದಲ್ಲಿ 276ಕ್ಕೂ ಅಧಿಕ ಮಂದಿಯ ಮೃತದೇಹ ಪತ್ತೆಯಾಗಿದೆ. ನೂರಾರು ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ. ಈ ವೇಳೆ ಹಲವು ಘಟನೆಗಳು ನಡೆದಿದೆ. ಧಾರಾಕಾರ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯಾರದ್ದೋ ಮಗುವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಜಿತಾ ಎಂಬ ಮಹಿಳೆ ತನ್ನ ಸ್ವಂತ ಮಗಳನ್ನು ಕಳೆದುಕೊಂಡಿದ್ದಾರೆ. ಪ್ರವಾಹದ ನೀರಿನಲ್ಲಿ ಸಿಲುಕಿದ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಪ್ರಜಿತಾ ಅವರ 10 ವರ್ಷದ ಮಗಳು ಅಹನ್ಯಾಗೆ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ. ಅಹನ್ಯಾಳನ್ನು ಎಳೆಯಲು ಹೋದ […]