ಪತಿಯ ಹಂತಕರ ಬಿಡುಗಡೆ ಬಗ್ಗೆ ಸದನದಲ್ಲಿ ಕಣ್ಣೀರು ಹಾಕಿದ ಶಾಸಕಿ

ಉತ್ತರಪ್ರದೇಶದಲ್ಲಿ ಜವಾಹರ್ ಯಾದವ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಜೆಪಿಯ ಮಾಜಿ ಶಾಸಕ ಉದಯ್ ಭಾನ್ ಕಾರವಾರಿಯಾ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರ ಪತ್ನಿ ಶಾಸಕಿ ವಿಜ್ಮಾ ಯಾದವ್, ಪತಿಯಂತೆ ತಾವೂ ಸಹ ಕೊಲೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಣ್ಣೀರು ಸುರಿಸುತ್ತಾ ಮಾತನಾಡಿದ ಅವರು, ನನ್ನ ಪತಿ ಶಾಸಕರಾಗಿದ್ದರು. ಅವರೊಂದಿಗೆ ಮೂವರನ್ನು ಹತ್ಯೆ ಮಾಡಲಾಗಿತ್ತು. ಹಗಲು ಹೊತ್ತಿನಲ್ಲಿ ಎಕೆ 47 ಬಂದೂಕು ಬಳಸಿ ಗುಂಡಿಕ್ಕಿದವರನ್ನು ಈಗ ಖುಲಾಸೆಗೊಳಿಸಲಾಗಿದೆ. ನಾಳೆ ನಾನು ಕೂಡ […]
ವಯನಾಡು ದುರಂತ; ಮೃತರ ಸಂಖ್ಯೆ 276ಕ್ಕೆ ಏರಿಕೆ, ಅವಶೇಷಗಳಡಿ ಇನ್ನೂ ಸಿಲುಕಿರುವ ನೂರಾರು ಮಂದಿ

ವಯನಾಡಿನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತರ ಮೃತರ ಸಂಖ್ಯೆ 276ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 200 ಮಂದಿ ನಾಪತ್ತೆಯಾಗಿದ್ದು, 1,592 ಜನರನ್ನು ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿ 1,592 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 8 ಸಾವಿರಕ್ಕೂ ಹೆಚ್ಚು ಜನರನ್ನು ಸಾಂತ್ವನ ಕೇಂದ್ರಕ್ಕೆ ಸ್ಥಾಳಂತರಿಸಲಾಗಿದೆ. 3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ನ್ನು ಚೋರ್ ಮಂಡಲಾದಲ್ಲಿ ಓಪನ್ ಮಾಡಲಾಗಿದೆ. ಈವರೆಗೆ 1884 ಮಕ್ಕಳನ್ನು ರಕ್ಷಿಸಲಾಗಿದ್ದು, […]
ದೆಹಲಿಯಲ್ಲಿ ಹವಾಂತರ ಸೃಷ್ಟಿಸಿದ ಮಳೆ; ಜನಜೀವನ ಹಸ್ತವ್ಯಸ್ತ, ಸಾವು ನೋವು ವರದಿ

ರಾಷ್ಟ್ರ ರಾಜಧಾನಿಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಳೆ ಸಂಬಂಧಿತ ಅವಘಡದಲ್ಲಿ ದೆಹಲಿಯಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಆಗಸ್ಟ್ 5ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ದೆಹಲಿಯ ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ದುಬೈನಿಂದ ಆಗಮಿಸಬೇಕಾದ ಎಐ918, ಪುಣೆಯಿಂದ ಆಗಮಿಸುವ ಯುಕೆ 998 ಸೇರಿ ಹಲವು ವಿಮಾನಗಳ ಸಂಚಾರದಲ್ಲಿ ಬದಲಾವಣೆ […]
ವಯನಾಡು ಭೂಕುಸಿತ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿ ರಕ್ಷಣೆಗಾಗಿ ಅಂಗಲಾಚಿದ ವ್ಯಕ್ತಿ; ಹೃದಯವಿದ್ರಾಹಕ ಘಟನೆಯ ವಿಡಿಯೋ ವೈರಲ್

ಕೇರಳದ ವಯನಾಡು ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ, ಭಯಾನಕ ದೃಶ್ಯವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದು, ಬೃಹತ್ ಬಂಡೆ ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಭೂಕುಸಿತದಲ್ಲಿ ಸಿಲುಕಿರುವ ವ್ಯಕ್ತಿ ಸಹಾಯ ಕೋರಿದ್ದಾರೆ. ಈ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಪ್ರವಾಹದ ನೀರಿನಲ್ಲಿ ಬಂಡೆಗಳ ನಡುವೆ ಸಿಲುಕಿಕೊಂಡಿರುವ ವ್ಯಕ್ತಿ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾನೆ. ವಯನಾಡು ಭೂಕುಸಿತದಿಂದ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈವರೆಗೆ ಘಟನಾ ಸ್ಥಳದಲ್ಲಿ 83 ಮೃತದೇಹಗಳು ಪತ್ತೆಯಾಗಿದೆ. […]
ವಯನಾಡು ದುರಂತ: ಸಾವಿನ ಸಂಖ್ಯೆ 83ಕ್ಕೆ ಏರಿಕೆ; ಮಸೀದಿ, ಚರ್ಚ್ ಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತನೆ

ಭೂಕುಸಿತ ಸಂಭವಿಸಿದ ಕೇರಳದ ವಯನಾಡಿನಲ್ಲಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಅಧಿಕೃತ ವರದಿಗಳ ಪ್ರಕಾರ ಸಾವಿನ ಸಂಖ್ಯೆ 83ಕ್ಕೆ ತಲುಪಿದೆ. 100 ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಕಂದಾಯ ಸಚಿವ ಕೆ ರಾಜನ್ ಅವರ ಕಚೇರಿ ತಿಳಿಸಿದೆ. ಸರ್ಕಾರದ ಪ್ರಯತ್ನಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವಾಗ, ಕೇರಳದ ಜನರು ಸಹ ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ಸ್ವಯಂಸೇವಕರಾಗಿ ಕಾರ್ಯ, ಸಹಾಯವಾಣಿಗಳ ಸ್ಥಾಪನೆ, ರಕ್ತದಾನ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಜುಲೈ 30 […]
ವಯನಾಡು ಭೂಕುಸಿತ; ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ; ಸಿಎಂ ಕಚೇರಿಯಿಂದ ಮಹತ್ವದ ಮಾಹಿತಿ

ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಈಗಾಗಲೇ 35ಕ್ಕೂ ಅಧಿಕ ಮೃತದೇಹವನ್ನು ಹೊರತೆಗೆಯಲಾಗಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾತನಾಡಿದ ಸಿಎಂ ಪಿಣರಾಯ್ ವಿಜಯನ್, ಎಲ್ಲಾ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ. ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಸಚಿವರು ವಯನಾಡಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಅವಘಡಗಳಿಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯು ತುರ್ತು ಸಹಾಯವಾಣಿವನ್ನು ಆರಂಭಿಸಿದೆ. […]
ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ; ಸ್ಥಳದಲ್ಲಿ 19 ಮೃತದೇಹಗಳು ಪತ್ತೆ, ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಶಂಕೆ

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ ಸಂಭವಿಸಿದ್ದು, ಸ್ಥಳದಲ್ಲಿ 19 ಮೃತದೇಹಗಳು ಪತ್ತೆಯಾಗಿವೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದ್ದು, ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳು, ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ […]
ಉಕ್ರೇನ್ ವಿರುದ್ಧ ರಷ್ಯಾ ಒತ್ತಾಯವಾಗಿ ಯುದ್ಧಕ್ಕೆ ನೇಮಿಸಿದ್ದ ಭಾರತೀಯ ಮೃತ್ಯು

ಉಕ್ರೇನ್ ಜೊತೆಗಿನ ಯುದ್ಧಕ್ಕೆ ರಷ್ಯಾ ನೇಮಿಸಿದ್ದ ಭಾರತೀಯ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಈ ಯುದ್ಧದಲ್ಲಿ ಭಾಗವಹಿಸಿದ್ದ ಹರಿಯಾಣದ ಕೈತಾಲ್ ಜಿಲ್ಲೆ ಮಾತೋರ್ ಗ್ರಾಮದ ರವಿ ಮೌನ್ ಮೃತಪಟ್ಟಿದ್ದಾರೆ. ರವಿ ಸಾವಿನ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕಳೆದ ಐದು ತಿಂಗಳಿನಿಂದ ರಶ್ಯದಲ್ಲಿರುವ ರವಿ ಬಗ್ಗೆ ಮಾಹಿತಿ ಇಲ್ಲದ ಕಾರಣ ರವಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ, ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸಲು ರವಿಯನ್ನು ರಷ್ಯಾ […]
ಯುವಕನ ಹೊಟ್ಟೆಯಲ್ಲಿ ಕಾಣಿಸಿಕೊಂಡ ಹಾವಿನ ರೀತಿಯ ಹುಳ; ವೈದ್ಯರು ಶಾಕ್

ಯುವಕನೋರ್ವನ ಹೊಟ್ಟೆಯಿಂದ ಹಾವಿನ ರೀತಿಯ ಅಪಾಯಕಾರಿ ಹುಳವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ರಾಜಸ್ಥಾನದ ಕುಚ್ಮಾನ ನಗರದ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಹೊಟ್ಟೆಯಿಂದ 30 ಸೆಂಟಿಮೀಟರ್ ಉದ್ದದ ಅಪಾಯಕಾರಿ ಹುಳು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 30 ವರ್ಷದ ಯುವಕ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಈ ಸಮಸ್ಯೆ ನಿವಾರಣೆಗಾಗಿ ಹಲವು ಔಷಧಿಯನ್ನು ಮಾಡಿದ್ದನು. ಆದರೆ ಗುಣವಾಗಿರಲಿಲ್ಲ. ಇದರಿಂದ ಸ್ಥಳೀಯ ವೈದ್ಯರು ಸೋನೋಗ್ರಾಫಿ […]
20ರ ಯುವತಿಯೊಂದಿಗೆ 70ರ ವೃದ್ಧನಿಗೆ ಮದುವೆ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಶೇಷ ವಿವಾಹ

70 ವರ್ಷದ ವೃದ್ಧನೋರ್ವ ತನ್ನ ಪತ್ನಿಯ ಸಾವಿನ ಬಳಿಕ 25 ವರ್ಷದ ಯುವತಿಯೊಂದಿಗೆ ಮರುಮದುವೆ ಮಾಡಿಕೊಂಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಎಂಬವರು ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ಮದುವೆಯಾಗಿದ್ದಾರೆ. ವೃದ್ಧ ನೂರಾನಿ ರೈತನಾಗಿದ್ದು, ಅವರ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ನೂರಾನಿ ಅವರು ತನ್ನ ಮಕ್ಕಳಿಗೆ ಮದುವೆ ಮಾಡಿದ ನಂತರ ತಾನು ಒಂಟಿ ಜೀವನ ನಡೆಸುತ್ತಿದ್ದೇನೆ. ನನಗೆ ಆಸರೆಯಾಗಲು ಯಾರೂ ಇರಲಿಲ್ಲ ಎಂದು ಸ್ಥಳೀಯರೆದುರು […]