Breaking News :

20ರ ಯುವತಿಯೊಂದಿಗೆ 70ರ ವೃದ್ಧನಿಗೆ ಮದುವೆ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಶೇಷ ವಿವಾಹ

70 ವರ್ಷದ ವೃದ್ಧನೋರ್ವ ತನ್ನ ಪತ್ನಿಯ ಸಾವಿನ ಬಳಿಕ 25 ವರ್ಷದ ಯುವತಿಯೊಂದಿಗೆ ಮರುಮದುವೆ ಮಾಡಿಕೊಂಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಎಂಬವರು  ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ಮದುವೆಯಾಗಿದ್ದಾರೆ. ವೃದ್ಧ ನೂರಾನಿ ರೈತನಾಗಿದ್ದು, ಅವರ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ನೂರಾನಿ ಅವರು ತನ್ನ ಮಕ್ಕಳಿಗೆ ಮದುವೆ ಮಾಡಿದ ನಂತರ ತಾನು ಒಂಟಿ ಜೀವನ ನಡೆಸುತ್ತಿದ್ದೇನೆ. ನನಗೆ ಆಸರೆಯಾಗಲು ಯಾರೂ ಇರಲಿಲ್ಲ ಎಂದು ಸ್ಥಳೀಯರೆದುರು […]

ಶಾಕಿಂಗ್ ಸುದ್ದಿ: ಕೋಚಿಂಗ್ ಸೆಂಟರ್ ಗೆ ನುಗ್ಗಿದ ಮಳೆ ನೀರು: ಮೂವರು ವಿದ್ಯಾರ್ಥಿಗಳು ಸಾವು

ಮಳೆನೀರು ನೆಲಮಾಳಿಗೆಯಲ್ಲಿರುವ ಗ್ರಂಥಾಲಯಕ್ಕೆ ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯ ದೆಹಲಿಯ ಹಳೆಯ ರಾಜೇಂದರ್ ನಗರದಲ್ಲಿರುವ ರಾವ್ ಅವರ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ನಡೆದಿದೆ. ಕೋಚಿಂಗ್ ಸೆಂಟರ್ ನಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದರು. ಇಪ್ಪತ್ತೇಳು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಾತ್ರಿ 10.30 ರ ವೇಳೆಗೆ, ಎನ್ಡಿಆರ್‌ಎಫ್ ವಿದ್ಯಾರ್ಥಿನಿಯೋರ್ವಳ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರಿಂದ ಅಧಿಕಾರಿಗಳು ಮೊದಲ ಸಾವನ್ನು ದೃಢಪಡಿಸಿದ್ದರು. ರಾತ್ರಿ 11.15 ರ ಸುಮಾರಿಗೆ ಎರಡನೇ ಶವವನ್ನು ಹೊರತೆಗೆಯಲಾಯಿತು. ಮುಳುಗುತಜ್ಞರು ಮಧ್ಯರಾತ್ರಿಯ ನಂತರ […]

ಮೈಸೂರಿನ ವಿಜಯಶಂಕರ್ ಸೇರಿ 6 ಮಂದಿಯನ್ನು ನೂತನ ರಾಜ್ಯಪಾಲರಾಗಿ ನೇಮಿಸಿದ ರಾಷ್ಟ್ರಪತಿ: ರಾಜ್ಯಪಾಲ ಹುದ್ದೆಗೇರಿದ ವಿಜಯಶಂಕರ್ ಹಿನ್ನೆಲೆ ಏನು?

ರಾಷ್ಟ್ರಪತಿ ದ್ರೌಪದಿ ಮುರ್ಮು 6 ಮಂದಿ ನೂತ‌ನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ. 6 ಮಂದಿ ನೂತನ ರಾಜ್ಯಪಾಲರಲ್ಲಿ ಕರ್ನಾಟಕದ ಮಾಜಿ ಸಂಸದ, ಮಾಜಿ ಸಚಿವ, ಸಿ.ಎಚ್‌.ವಿಜಯ್‌ ಶಂಕರ್ ಅವರನ್ನು ಮೇಘಾಲಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ತೆಲಂಗಾಣ ಹಾಗೂ ಜಾರ್ಖಂಡ್‌ನ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ನೇಮಿಸಲಾಗಿದೆ. ಹರಿಬಾವ್ ಕಿಶನ್ ಬಾವ್ ಬಾಗಡೆ ಅವರನ್ನು ರಾಜಸ್ಥಾನಕ್ಕೆ, ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್‌ಗೆ ನೇಮಿಸಲಾಗಿದೆ. ರಾಮನ್ ಡೇಕಾ ಅವರನ್ನು ಛತ್ತೀಸ್‌ಗಢ ರಾಜ್ಯಪಾಲರಾಗಿ, ಜಿಷ್ಣು ದೇವ್ […]

ತೆರಿಗೆ ವಿಚಾರದಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಾಕಾರಿ ಪೋಸ್ಟ್: ಇಬ್ಬರ ಬಂಧನ

ಕೋಲಾರ: ತೆರಿಗೆ ಕಟ್ಟುವ ವಿಚಾರದಲ್ಲಿ  ಮುಸ್ಲಿಮರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ಜಿಲ್ಲೆಯ ಕೆಜಿಎಫ್​​ನ ರಾಬರ್ಟ್​​ಸನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ನವೀನ್ ಜೈನ್, ಚೇತನ್​ ಬಂಧಿತರು. ಇವರು ತೆರಿಗೆ ಕಟ್ಟುವ ವಿಚಾರದಲ್ಲಿ ಮುಸ್ಲಿಂ ಸಮಾಜವನ್ನು ಟೀಕಿಸಿ ಕಾರ್ಟೂನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಮುಸ್ಲಿಂ ಸಮುದಾಯದ ಜನರು ರಾತ್ರಿ ರಾಬರ್ಟಸನ್‌ಪೇಟೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಆರೋಪಿಗಳನ್ನು ಬಂಧಿಸಿ, ಅವರಿಂದ ಕ್ಷಮೆ ಕೇಳಿಸಬೇಕೆಂದು ಒತ್ತಾಯಿಸಿದ್ದರು. ಸ್ಥಳಕ್ಕೆ […]

ಮಮತಾ ಮಾತನಾಡುವಾಗ ಮೈಕ್ ಆಫ್; ನೀತಿ ಆಯೋಗದ ಸಭೆಯಿಂದ ಅರ್ಧದಿಂದ ಹೊರನಡೆದ ಬಂಗಾಳ ಸಿಎಂ

ನವದೆಹಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  ಆಯೋಜನೆಗೊಂಡಿದ್ದ ನೀತಿ ಆಯೋಗದ 9ನೇ ಆಡಳಿತಾತ್ಮಕ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರ್ಧದಿಂದ ವಾಪಾಸ್ಸಾಗಿದ್ದಾರೆ. ನನಗೂ ಮೊದಲು ಮಾತನಾಡಿದ ಸಿಎಂಗಳಿಗೆ 20 ನಿಮಿಷಕ್ಕೆ ಸಮಯ ನೀಡಲಾಗಿತ್ತು. ನನಗೆ ಕೇವಲ ಐದು ನಿಮಿಷ ನೀಡಲಾಯಿತು. ನೆರವು ನಿರಾಕರಿಸಿದ ವಿಷಯ ಪ್ರಸ್ತಾಪಿಸಿದ್ದಂತೆ ಮೈಕ್ ಮ್ಯೂಟ್ ಮಾಡಲಾಗಿತ್ತು ಎಂದು ಮಮತಾ ಆರೋಪಿಸಿದ್ದಾರೆ. ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು ಸಭೆಯಲ್ಲಿ […]

ಕುರಿ ಮಾಂಸವನ್ನು ನಾಯಿ ಮಾಂಸ ಎಂದು ರಾದ್ದಾಂತ: ಪುನೀತ್ ಕೆರೆಹಳ್ಳಿ ವಿರುದ್ಧ ಮೂರು ಎಫ್ಐಆರ್

ಕುರಿ ಮಾಂಸದ ಸಾಗಾಟದ ವೇಳೆ ನಾಯಿ ಮಾಂಸ ಸಾಗಾಟ ಎಂದು ಆರೋಪಿಸಿ ರಾದ್ದಾಂತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಪುನೀತ್ ಕೆರೆಹಳ್ಳಿ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ, ಇದೀಗ ಪ್ರಕರಣಕ್ಕೆ ಸಂಬಂದಿಸಿ ಮೂರನೇ ಎಫ್ ಐ ಆರ್ ದಾಖಲಾಗಿದೆ. ಅಕ್ರಮವಾಗಿ ಮಾಂಸ ಮಾರಾಟದ ಬಗ್ಗೆ ಮೆಜೆಸ್ಟಿಕ್ ರೈಲು ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಸಹಚರರನ್ನು ಬಂಧಿಸಲಾಗಿತ್ತು. ಗುಂಪುಗೂಡಿ ಗಲಾಟೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಸೇರಿ ಪುನೀತ್ […]

ಅಂಕೋಲಾ ಭೂಕುಸಿತಕ್ಕೆ ಕಾರಣಗಳೇನು? ಸಮೀಕ್ಷೆ ಏನು ಹೇಳುತ್ತಿದೆ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಭೂ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ ಐ) ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಕಾಮಗಾರಿಗಳ ವಿಧಾನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದಲ್ಲದೆ ಹೆಚ್ಚಿನ ಹಾನಿ ತಡೆಗಟ್ಟಲು ತಕ್ಷಣದ ಹಾಗೂ ದೀರ್ಘಕಾಲೀನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕಾಮಗಾರಿಯಿಂದಾಗಿ ನೈಸರ್ಗಿಕ ಒಳಚರಂಡಿ ಹರಿವಿಗೆ ತೊಂದರೆಯಾಗಿದೆ […]

ಮೊಬೈಲ್ ಜಾರ್ಜ್ ಇಡುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕಿ ಮೃತ್ಯು

ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ 4ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ನಡೆದಿದೆ. ಖಮ್ಮಂ ಜಿಲ್ಲೆಯ ಚಿಂತಕಣಿ ಮಂಡಲದ ಮಟ್ಕೆಪಲ್ಲಿ ನಾಮವರಂ ಗ್ರಾಮದ ಕಟಿಕಳ ರಾಮಕೃಷ್ಣ ದಂಪತಿಯ ಮಗಳು ಅಂಜಲಿ ಕಾರ್ತಿಕಾ (9) ಮೃತ ಬಾಲಕಿ. ಅಂಜಲಿ ತನ್ನ ತಂದೆಯ ಮೊಬೈಲ್ ಚಾರ್ಜ್ ಮಾಡುವಾಗ  ವಿದ್ಯುತ್ ಸ್ಪರ್ಶದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಆಕೆಯ ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃತಪಟ್ಟಿರುವುದಾಗಿ […]

ಕನ್ವರ್‌ ಯಾತ್ರಿಗಳು ಸಾಗುವ ದಾರಿಯಲ್ಲಿದ್ದ ಮಸೀದಿಗಳನ್ನು ಬಿಳಿ ಪರದೆ ಮೂಲಕ ಮುಚ್ಚಿದ ಅಧಿಕಾರಿಗಳು: ಹಿಂದೆ ಎಂದೂ ಈ ರೀತಿ ನಡೆದಿರಲಿಲ್ಲ ಎಂದ ಮಸೀದಿ ಆಡಳಿತ

ಕನ್ವರ್‌ ಯಾತ್ರಿಗಳು ಸಾಗುವ ದಾರಿಯಲ್ಲಿರುವ ಮಸೀದಿಗಳು, ದರ್ಗಾಗಳು ಕಾಣದಂತೆ ಬಿಳಿ ಪರದೆ ಮುಚ್ಚಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹರಿದ್ವಾರದಲ್ಲಿ ಎರಡು ಮಸೀದಿಗಳು ಮತ್ತು ಮಜಾರ್ ಗೆ ಶುಕ್ರವಾರ ಬೆಳಿಗ್ಗೆ ದೊಡ್ಡ ಬಿಳಿ ಪರದೆಗಳನ್ನು ಬಳಸಿ ಮರೆಮಾಡಲಾಗಿದೆ. ಸಂಜೆಯ ವೇಳೆಗೆ ಜಿಲ್ಲಾಡಳಿತ ಪರದೆಗಳನ್ನು ತೆಗೆದಿದ್ದಾರೆ. ಪರದೆ ಹಾಕಲು ನಾವು ಯಾವುದೇ ಆದೇಶವನ್ನು ನೀಡಿಲ್ಲ ಎಂದು ಜಿಲ್ಲಾ ಆಡಳಿತವು ಹೇಳಿಕೊಂಡರೆ, ಹರಿದ್ವಾರ ಜಿಲ್ಲಾ ಉಸ್ತುವಾರಿ ಸಚಿವ ಸತ್ಪಾಲ್ ಮಹಾರಾಜ್ ಯಾವುದೇ ಗಲಾಟೆ ಅಥವಾ ಅಶಾಂತಿಯನ್ನು […]

ರೈಲಿನಲ್ಲಿ ರೀಲ್ಸ್ ಮಾಡುವವನನ್ನು ಹುಡುಕುತ್ತಾ ಹೋದಾಗ ಪೊಲೀಸರಿಗೆ ಕಾದಿತ್ತು ಶಾಕ್; ಎಡ ಕೈ ಕಾಲು ಕಳೆದುಕೊಂಡು ಹಾಸಿಗೆ ಪಾಲಾಗಿದ್ದ ಪರ್ಹಾತ್

ರೀಲ್ಸ್ ವಿಡಿಯೊಗಾಗಿ ಚಲಿಸುವ ರೈಲಿನಲ್ಲಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ತನ್ನ ಎಡಗಾಲು ಹಾಗೂ ಎಡಗೈಯನ್ನು  ಕಳೆದುಕೊಂಡಿದ್ದಾನೆ. ಫರ್ಹಾತ್ ಎನ್ನುವ ಮುಂಬೈನ ಯುವಕ ರೀಲ್ಸ್ ಹುಚ್ಚು ಬೆಳೆಸಿಕೊಂಡಿದ್ದ. ಇದಕ್ಕಾಗಿ ಆತ ಚಲಿಸುವ ರೈಲಿನಲ್ಲಿ  ಸಾಹಸ ಮಾಡುತ್ತಿದ್ದ. ಆ ವಿಡಿಯೊಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಈ ವಿಷಯ ಮುಂಬೈನ ಸೆಂಟ್ರಲ್ ರೈಲ್ವೆ ಆರ್‌ಪಿಎಫ್ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದು ವಿಡಿಯೊದಲ್ಲಿರುವವನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಹೋದಾಗ ಅಚ್ಚರಿ ಕಾದಿತ್ತು. ಫರ್ಹಾತ್ ಚಲಿಸುವ ರೈಲಿನಲ್ಲಿ ರೀಲ್ಸ್ ಮಾಡಲು ಹೋಗಿ […]