Breaking News :

ಖ್ಯಾತ ನ್ಯೂಸ್ ಆಂಕರ್ ಬ್ಲಡ್ ಕ್ಯಾನ್ಸರ್ ಗೆ ಬಲಿ

ಖ್ಯಾತ ತಮಿಳು ನ್ಯೂಸ್ ಆಂಕರ್ ಬ್ಲಡ್ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದಾರೆ. ತಮಿಳಿನ ಖಾಸಗಿ ದೂರದರ್ಶನದಲ್ಲಿ ಸುದ್ದಿ ವಾಚಕಿಯಾಗಿ ಕೆಲಸ ಮಾಡುತ್ತಿದ್ದ ಸೌಂದರ್ಯ ಅಮುದಮೊಳಿ ಮೃತರು. ಅವರು ಬ್ಲಡ್ ಕ್ಯಾನ್ಸರ್ ನಿಂದ ಕಳೆದ ಒಂದು ವರ್ಷದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ‌. ಇವರು ಜನಪ್ರಿಯ ಟಿವಿ ಚಾನೆಲ್‌ಗಳಾದ ಸತ್ಯಂ, ಪಾಲಿಮರ್ ಮತ್ತು ನ್ಯೂಸ್ ತಮಿಳಿನಲ್ಲಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಸೌಂದರ್ಯ ಅವರ ಆರೋಗ್ಯ ಹದಗೆಟ್ಟಿತ್ತು.  ವೈದ್ಯರ ಸಲಹೆಯಂತೆ ಕ್ಯಾನ್ಸರ್ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅವರಿಗೆ […]

ಕೇರಳದಲ್ಲಿ ಭೀಕರ ದುರಂತ; ಕಾರಿನೊಳಗಡೆ ಸುಟ್ಟು ಕರಕಲಾದ ದಂಪತಿ

ಕೇರಳದಲ್ಲಿ ಭೀಕರ ದುರಂತವೊಂದರಲ್ಲಿ ಕಾರಿಗೆ ಬೆಂಕಿ ತಗುಲಿ ಕಾರಿನಲ್ಲಿದ್ದ ವೃದ್ಧ ದಂಪತಿಗಳು ಸುಟ್ಟು ಕರಕಲಾಗಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದ ವೆಂಗಲ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮೃತರನ್ನು ತಿರುವಲ್ಲಾದ ತುಕಲಶ್ಶೇರಿ ನಿವಾಸಿಗಳಾದ ರಾಜು ಥಾಮಸ್ (69) ಮತ್ತು ಅವರ ಪತ್ನಿ ಲೈಜಿ ಥಾಮಸ್ (63) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ದಂಪತಿಯ  ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧ ದಂಪತಿಗಳ ಮೃತದೇಹದ ಅವಶೇಷಗಳು ಸಂಪೂರ್ಣವಾಗಿ ಸುಟ್ಟು ವಿರೂಪಗೊಂಡಿದ್ದರಿಂದ  ಮಹಿಳೆ ಧರಿಸಿದ್ದ ಆಭರಣಗಳ ಮೂಲಕ ಅವರನ್ನು ಗುರುತಿಸಲಾಗಿದೆ. ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ […]

ಕಾಂಗ್ರೆಸ್ ಕಾರ್ಯಕರ್ತನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಹತ್ಯೆ

ಕೋಲ್ಕತ್ತಾ: ಕಾಂಗ್ರೆಸ್ ಕಾರ್ಯಕರ್ತನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪಾಯಿಗುರಿ ಜಿಲ್ಲೆಯಲ್ಲಿ  ನಡೆದಿದೆ. ಮೊಯ್ನಾಗುರಿಯ ಖರ್ಗಬಾರಿ-1 ಗ್ರಾಮ ಪಂಚಾಯತಿ ವ್ಯಾಪ್ತಿಯ ಹಥಾತ್ ಕಾಲನಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಾಣಿಕ್ ರಾಯ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಗುರುವಾರ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪೊಂದು ವೈಮನಸ್ಸಿನ ಕಾರಣಕ್ಕೆ ಮಾಣಿಕ್ ಅವರನ್ನು ಕಟ್ಟಿಹಾಕಿ ಗಂಭೀರವಾಗಿ ಹಲ್ಲೆ ನಡೆಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಮಾಣಿಕ್ ರಾಯ್ ಅನ್ನು ಮೊಯ್ನಾಗುರಿಯಿಂದ […]

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಬಿಜೆಪಿಯ ಮಾಜಿ ಶಾಸಕನಿಗೆ ಕ್ಷಮಾಧಾನ ನೀಡಿದ ರಾಜ್ಯಪಾಲೆ

ಸಮಾಜವಾದಿ ಪಕ್ಷದ ಶಾಸಕ ಜವಾಹರ್‌ ಯಾದವ್‌ ಅವರ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದ ಬಿಜೆಪಿಯ ಮಾಜಿ ಶಾಸಕ ಉದಯಭನ್‌ ಕರ್ವಾರಿಯಾಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಕ್ಷಮಾಧಾನ ನೀಡಿ ಬಿಡುಗಡೆಗೊಳಿಸಿದ್ದಾರೆ. ಸಂವಿಧಾನದ ವಿಧಿ 161 ಅನ್ವಯ ಇರುವ ಅಧಿಕಾರಗಳನ್ನು ಬಳಸಿಕೊಂಡು ರಾಜ್ಯಪಾಲೆ ಆನಂದಿಬೆನ್, ಕರ್ವಾರಿಯಾ ಅವರ ಬಿಡುಗಡೆಗೆ ಆದೇಶಿಸಿದ್ದರು. ಜೈಲಿನಲ್ಲಿರುವಾಗ ಸನ್ನಡತೆಯ ಕಾರಣ ನೀಡಿ ಕರ್ವಾರಿಯಾ ಅವರ ಬಿಡುಗಡೆಗೆ ಈ ಹಿಂದೆ ಪ್ರಯಾಗರಾಜ್‌ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ […]

ರಾಷ್ಟ್ರಪತಿ ಭವನದ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಹೆಸರು ಬದಲಾವಣೆ

ರಾಷ್ಟ್ರಪತಿ ಭವನದ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಅನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ್ ಮಂಟಪ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮರುನಾಮಕರಣ ಮಾಡಿದ್ದಾರೆ. ‘ದರ್ಬಾರ್ ಹಾಲ್’ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನದಂತಹ ಪ್ರಮುಖ ಸಮಾರಂಭಗಳು ಮತ್ತು ಆಚರಣೆಗಳ ಸ್ಥಳವಾಗಿದೆ. ‘ದರ್ಬಾರ್’ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷರ ನ್ಯಾಯಾಲಯಗಳು, ಅಸೆಂಬ್ಲಿಗಳನ್ನು ಸೂಚಿಸುತ್ತದೆ. ಭಾರತವು ಗಣರಾಜ್ಯವಾದ ನಂತರ ಅದು ಪ್ರಸ್ತುತತೆಯನ್ನು ಕಳೆದುಕೊಂಡಿತು, ಅಂದರೆ ‘ಗಣತಂತ್ರ’. ‘ಗಣತಂತ್ರ’ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದೆ, […]

ಅಳುತ್ತಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತ್ರಕರ್ತೆ: ಆಕೆ ಕೊನೆಯ ವಿಡಿಯೋದಲ್ಲಿ ಹೇಳಿದ್ದೇನು?

ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿದ ಪತ್ರಕರ್ತೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಖ್ಯಾತ ವೆಬ್ ಚಾನೆಲ್‌ನಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಧುಮಿತಾ ಪರಿದಾ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾದ ನಾಲ್ಕೇ ತಿಂಗಳಲ್ಲಿ  ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊನೆಯ ವಿಡಿಯೋದಲ್ಲಿ ಪತ್ರಕರ್ತೆ ಹೇಳಿದ್ದೇನು? ಅಮ್ಮಾ ಕ್ಷಮಿಸಿಬಿಡು, ನನ್ನ ನಿರ್ಧಾರದ ಕುರಿತು ತೀವ್ರ ವಿಷಾಧ ವ್ಯಕ್ತಪಡಿಸುತ್ತಿದ್ದೇನೆ. ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಈ ಜಗತ್ತಿನಲ್ಲಿ ಈ ರೀತಿಯ ಕಪಟ ವ್ಯಕ್ತಿಗಳಿದ್ದಾರೆ ಅನ್ನೋದು ಗೊತ್ತಿರಲಿಲ್ಲ. 5 […]

BREAKING ನೀಟ್ ಪರೀಕ್ಷೆ ರದ್ದು, ಒಂದು ದೇಶ, ಒಂದು ಚುನಾವಣೆ ವಿರುದ್ಧ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ನೀಟ್ ಪರೀಕ್ಷೆ ರದ್ದು ಹಾಗೂ ಕೇಂದ್ರ ಸರ್ಕಾರದ ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ವಿಧಾನಸಭೆ ಅದನ್ನು ಅಂಗೀಕರಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜುಲೈ 22ರಂದು ನಡೆದ ನಡೆದ ಸಂಪುಟ ಸಭೆಯಲ್ಲಿ ನೀಟ್‌ ಪರೀಕ್ಷೆ ಮತ್ತು ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ವಿರೋಧಿಸಲು ನಿರ್ಧರಿಸಲಾಗಿತ್ತು. ಈ ಕುರಿತು ನಿರ್ಣಯ ಮಂಡಿಸಿದ ಕಾನೂನು ಸಚಿವ ಹೆಚ್.ಕೆ  ಪಾಟೀಲ್,  ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆ ಮತ್ತು […]

ಒಲಿಂಪಿಕ್ಸ್ ​ ಕ್ರೀಡಾಕೂಟದಲ್ಲಿ ಭಾರತದ ಪರ ಶಾಸಕಿ ಸ್ಪರ್ಧೆ: ಜನಪ್ರತಿನಿಧಿಯಾಗಿದ್ದು, ಪದಕ ಗೆಲ್ಲುವ ನಿರೀಕ್ಷೆಯಲ್ಲಿರುವ ಇವರು ಯಾರು ಗೊತ್ತಾ?

ಪ್ಯಾರಿಸ್​ ಒಲಿಂಪಿಕ್ಸ್ ​ ಕ್ರೀಡಾಕೂಟದಲ್ಲಿ  ಈ ಬಾರಿ ಭಾರತದಿಂದ 117 ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರಲ್ಲಿ ಓರ್ವ  ಶಾಸಕಿ ಕೂಡ ಇರುವುದು ವಿಶೇಷವಾಗಿದೆ. ಶ್ರೇಯಸಿ ಸಿಂಗ್ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿಯಾಗಿದ್ದಾರೆ. 32 ವರ್ಷದ ಶ್ರೇಯಸಿ ಸಿಂಗ್‌, ಮಾಜಿ ಸಚಿವ ದಿವಂಗತ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿಯಾಗಿದ್ದಾರೆ. ಇವರು ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಏಷ್ಯಾಡ್‌ನ‌ಲ್ಲಿ ಪದಕ ಜಯಿಸಿದ್ದರು. ಮೊದಲು ಒಲಿಂಪಿಕ್ಸ್‌ ಆಯ್ಕೆಯ ಪಟ್ಟಿಯಲ್ಲಿ ಶ್ರೇಯಸಿ ಅವರ ಹೆಸರಿರಲಿಲ್ಲ. ಟೋಕಿಯೊ ಒಲಿಂಪಿಯನ್‌ ಮನು ಭಾಕರ್‌ ಮಹಿಳೆಯರ […]

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯನ್ನು ನುಂಗಲು ಮುಂದಾದ ಹೆಬ್ಬಾವು; ಶಾಕಿಂಗ್ ಘಟನೆ ವರದಿ

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಹೆಬ್ಬಾವು ದಾಳಿ ಮಾಡಿದ್ದು, ಆತನನ್ನು ನುಂಗಲು ಮುಂದಾಗಿದೆ. ಈ ಘಟನೆ ಮಧ್ಯಪ್ರದೇಶ ರಾಜ್ಯದ ಜಬ್ಬಲಪುರ ಬಳಿಯ ಗ್ರಾಮದಲ್ಲಿ ನಡೆದಿದೆ. ಎಂದಿನಂತೆ ಸೋಮವಾರ ಬೆಳಗ್ಗೆ ಮಲವಿಸರ್ಜನೆಗೆಂದು ಕಾಡಿಗೆ ತೆರಳಿದ್ದ ವೇಳೆ ಹೆಬ್ಬಾವು ದಾಳಿ ಮಾಡಿದೆ. ಬಹಿರ್ದೆಸೆಗೆ ತೆರಳಿ ವ್ಯಕ್ತಿ ಮರದ ಕೆಳಗೆ ಕುಳಿತಿದ್ದು, ಮರದ ಮೇಲಿಂದಲೇ ಆತನ ಮೇಲೆ ಹೆಬ್ಬಾವು ದಾಳಿ ಮಾಡಿದೆ. ಬಹಿರ್ದೆಸೆಗೆ ಕುಳಿತವನು ಮೇಲೇಳಲೂ ಸಾಧ್ಯವಾಗದಂತೆ ಆತನ ಕಾಲುಗಳನ್ನು ಸುತ್ತಿಕೊಂಡಿದೆ. ಕೂಡಲೇ ಆತ […]

ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮೂವರು ಆತ್ಮಹತ್ಯೆ

ಕಾಸರಗೋಡು: ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜೇಶ್ವರ ಹೊಸಬೆಟ್ಟು ಸಸಿಹಿತ್ಲುವಿನ ಗೌತಮ್ ರಾಜ್ (23) , ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಡ್ ನ ಬ್ರಾಯನ್ ಪಿಂಟೊ (20) ಮತ್ತು ಮೊರತ್ತಣೆ ಕಜೆಕೋಡಿಯ ಬಿ.ರಾಜೇಶ್ (40) ಆತ್ಮಹತ್ಯೆ ಮಾಡಿಕೊಂಡವರು. ಮಂಜೇಶ್ವರ ಹೊಸ ಬೆಟ್ಟು ನಲ್ಲಿ ಗೌತಮ್ ರಾಜ್ ಚಿಕ್ಕಮ್ಮನ ಮನೆಯಲ್ಲಿ  ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಇನ್ನು ಮಂಜೇಶ್ವರ ಮೊರತ್ತಣೆಯ ರಾಜೇಶ್ […]