Breaking News :

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ ಪೊಕಲೇನ್ ಯಂತ್ರದ ಮೂಲಕ ಕಾರ್ಯಾಚರಣೆ; ಏನಿದು ಯಂತ್ರ?

ಉತ್ತರ ಕನ್ನಡ,: ಅಂಕೋಲಾ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ನಾಪತ್ತೆಯಾದವರ ಮೃತದೇಹ ಪತ್ತೆಗೆ ಹುಡುಕಾಟ ಮುಂದುವರಿದಿದೆ. ಗಂಗಾವಳಿ ನದಿಯಲ್ಲಿ ಪೊಕಲೇನ್ (poclain) ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ ಈ ಪೊಕಲೇನ್ ವೆಹಿಕಲ್, ನದಿಯ ಆಳದಲ್ಲಿರುವ ಮಣ್ಣನ್ನು ತೆರವು ಮಾಡುವ ಯಾಂತ್ರವಾಗಿದೆ. ನದಿಯಲ್ಲಿ ಇನ್ನುಳಿದ ಮೃತ ದೇಹಗಳು ಇರುವ ಶಂಕೆ ವ್ಯಕ್ತವಾಗಿದ್ದು, ಕರ್ನಾಟಕದ ಇಬ್ಬರು ಮತ್ತು ಕೇರಳದ ಓರ್ವರ‌ ಮೃತದೇಹ ಪತ್ತೆ ಮಾಡಬೇಕಿದೆ. 60 ಅಡಿ ಉದ್ದವಾದ […]

ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಗುದನಾಳದಿಂದ 16 ಇಂಚಿನ ಸೋರೆಕಾಯಿ ತೆಗೆದ ವೈದ್ಯರು!

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವನ ಗುದನಾಳದಿಂದ ಶಸ್ತ್ರಚಿಕಿತ್ಸೆ ನಡೆಸಿ 16 ಇಂಚಿನ ಸೋರೆಕಾಯಿ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಮಧ್ಯಪ್ರದೇಶದ ಛತ್ತರ್ ಪುರದಲ್ಲಿ ನಡೆದಿದೆ.  60 ವರ್ಷದ ವ್ಯಕ್ತಿಯೊಬ್ಬರು ಹೊಟ್ಟೆ ನೋವು ಮತ್ತು ಖಾಸಗಿ ಅಂಗಗಳಲ್ಲಿ ನೋವಿನಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಎಕ್ಸರೇ ತೆಗೆದು ನೋಡಿದಾಗ ವ್ಯಕ್ತಿಯ ಗುದದ್ವಾರದಲ್ಲಿ 16 ಇಂಚಿನ ಸೋರೆಕಾಯಿ ಇರುವುದು ಕಂಡುಬಂದಿದೆ. ಇದನ್ನು ನೋಡಿದ ವೈದ್ಯರು ಬೆಚ್ಚಿಬಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ (TOI) ಪ್ರಕಾರ, 60 ವರ್ಷದ ರೈತ […]

ಬಜೆಟ್ ನಲ್ಲಿ ನಿರ್ಲಕ್ಷ್ಯ; ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕರ್ನಾಟಕ‌ ಸೇರಿ ನಾಲ್ಕು ರಾಜ್ಯಗಳ ಸಿಎಂಗಳು

ಕೇಂದ್ರ ಬಜೆಟ್‌ನಲ್ಲಿ ತಮ್ಮ ರಾಜ್ಯಗಳನ್ನು ಕಡೆಗಣಿಸಿರುವುದನ್ನು ವಿರೋಧಿಸಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ  ನೀತಿ ಆಯೋಗದ ಸಭೆ ನಡೆಯಲಿದೆ. ಸಭೆಯನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ನೀತಿ ಆಯೋಗದ ಸಭೆಗೆ ಹಾಜರಾಗುವುದು ಅರ್ಥಹೀನ, ಕನ್ನಡಿಗರ ಕಾಳಜಿಯನ್ನು ಮರೆಯಲಾಗಿದೆ. ಕರ್ನಾಟಕದ […]

ಕೇಂದ್ರ ಬಜೆಟ್ 2024; ಯಾವುದರ ಬೆಲೆ ಅಗ್ಗ? ಯಾವುದು ದುಬಾರಿ; ಬಜೆಟ್ ಕುರಿತ ಸಂಕ್ಷಿಪ್ತ ಮಾಹಿತಿ…

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಲೋಕಸಭೆಯಲ್ಲಿ 2024-2025ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ಅನುದಾನ ನೀಡಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಏನೇನಿದೆ ಎಂಬುವುದರ ಬಗ್ಗೆ ಯಾವುದು ಅಗ್ಗ: ಕ್ಯಾನ್ಸರ್‌ ಔಷಧ, ಪೆಟ್ರೋಲ್‌ ದರ 2 ರೂ. ಇಳಿಕೆ, ಮೊಬೈಲ್‌ ಫೋನ್‌, ಆಮದು ಚಿನ್ನ, ಆಮದು ಬೆಳ್ಳಿ, ಚರ್ಮದ ವಸ್ತು, ಸೀ ಫುಡ್‌, ವಿದ್ಯುತ್‌ ತಂತಿ, ಎಕ್ಸರೇ ಮೆಷಿನ್‌, ಸೋಲಾರ್‌ ಪ್ಯಾನಲ್ ಯಾವುದು ದುಬಾರಿ: ವಿದ್ಯುತ್‌ ಉಪಕರಣ, ಪ್ಲಾಸ್ಟಿಕ್‌, ಬಟ್ಟೆ, ಮೊಬೈಲ್‌ ಟವರ್ […]

ವರದಕ್ಷಿಣೆಗಾಗಿ ಗರ್ಭಿಣಿ ಮಹಿಳೆಯ ಕೈಕಾಲು ಕತ್ತರಿಸಿ ಭೀಕರವಾಗಿ ಕೊಲೆ

ವರದಕ್ಷಿಣೆಗಾಗಿ 23 ವರ್ಷದ ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಕೈಕಾಲುಗಳನ್ನು ಕತ್ತರಿಸಿ ದೇಹಕ್ಕೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯಲ್ಲಿ ನಡೆದಿದೆ. ಕಾಳಿಪೀಠ ಪೊಲೀಸ್ ಠಾಣೆ ವ್ಯಾಪ್ತಿಯ ತಂಡಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ದುರ್ದೈವಿ ಮಹಿಳೆಯನ್ನು ರೀನಾ ತನ್ವಾರ್ ಎಂದು ಗುರುತಿಸಲಾಗಿದೆ. ರೀನಾಗೆ ಪತಿ ಮಿಥುನ್ ಮತ್ತು ಅತ್ತೆಯಂದಿರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ರೀನಾ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ತಂಡಿ ಖುರ್ದ್ ಗ್ರಾಮಕ್ಕೆ […]

ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಿದ ಗುಂಪು: ಮುಂದೇನಾಯ್ತು?

ಇಬ್ಬರು ಮಹಿಳೆಯರು ತಮ್ಮ ಪ್ರದೇಶದಲ್ಲಿ ರಸ್ತೆ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಟ್ರಕ್‌ನಿಂದ ಮಣ್ಣು ಸುರಿದು ಅವರನ್ನು ಜೀವಂತವಾಗಿ ಭಾಗಶಃ ಸಮಾಧಿ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ಮಂಗವಾ ಪೊಲೀಸ್ ಠಾಣಾ ವ್ಯಾಪ್ತಿಯ ಹಿನೋಟಾ ಜೋರೋಟ್ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾಗ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಮಹಿಳೆಯರನ್ನು ಮಣ್ಣಿನಲ್ಲಿ  ಕುತ್ತಿಗೆಯವರೆಗೂ ಹೂತು ಹಾಕಲಾಗಿದೆ. ಘಟನೆಯ ಬಳಿಕ ಕೆಲ  […]

ಕಾಸರಗೋಡು: ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು

ಕಾಸರಗೋಡು: ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದಾಗ ಶಾಲು ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಪೆರುವಾಡ್ ನಲ್ಲಿ ನಡೆದಿದೆ. ಪೆರುವಾಡ್ ಕೆ .ಕೆ ನಗರದ ಇಸ್ಮಾಯಿಲ್ ರವರ ಪತ್ನಿ ನಫೀಸಾ ( 52) ಮೃತಪಟ್ಟವರು. ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಪತಿ ಇಸ್ಮಾಯಿಲ್ ಕೂಡಲೇ ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ನಫೀಸಾ ಅವರ ಜೀವ ಉಳಿಸಲಾಗಲಿಲ್ಲ . ಈ ಕುರಿತು ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. […]

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲ್ಲ ಎಂದ ಕೇಂದ್ರ ಸರಕಾರ: ಮೋದಿ ಸರಕಾರದ ವಿರುದ್ಧ ಮುನಿಸಿಕೊಳ್ಳುತ್ತಾರಾ ನಿತೀಶ್ ಕುಮಾರ್?

ನವದೆಹಲಿ; ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಇದರಿಂದಾಗಿ ಮೋದಿ ವಿರುದ್ಧ ನಿತೀಶ್ ಮುನಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ‌. ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿ(ಯು), ರಾಜ್ಯಕ್ಕೆ ಹಿಂದುಳಿದ ಸ್ಥಾನಮಾನಕ್ಕೆ ಒತ್ತಾಯಿಸಿದ ಒಂದು ದಿನದ ನಂತರ ಈ ನಿಲುವು ಪ್ರಕಟವಾಗಿದೆ. ಇದರಿಂದ ಈ‌ ಮೊದಲು ಮೋದಿ ಸರಕಾರ ರಚನೆ ವೇಳೆ ಎನ್ ಡಿಎ ಮೈತ್ರಿ ಜೆಡಿಯು ಇಟ್ಟ ಬೇಡಿಕೆಗೆ ಹಿನ್ನೆಡೆಯಾಗಿದೆ. ಮುಂಗಾರು ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಲಿಖಿತ […]

ಅಂಕೋಲಾ ಗುಡ್ಡೆ ಕುಸಿತ ಕಾರ್ಯಾಚರಣೆಯಲ್ಲಿ ವಿಳಂಬ ಆರೋಪ: ಸುಪ್ರೀಂ‌ಕೋರ್ಟ್ ಗೆ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಕೆ

ಉತ್ತರ ಕನ್ನಡದ ಅಂಕೋಲಾದಲ್ಲಿ ನಡೆದ ಗುಡ್ಡೆ ಕುಸಿತದ ಸ್ಥಳದಲ್ಲಿ ರಕ್ಷಣ ಕಾರ್ಯ 6ನೇ ದಿವೂ ಮುಂದುವರೆದಿದೆ. ಈ ಮಧ್ಯೆ ರಕ್ಷಣಾ ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವು ಕೇಳಿ ಬಂದಿದೆ. ಕರ್ನಾಟಕದ ಮಾಧ್ಯಮಗಳು ಈ ಬಗ್ಗೆ ಸರಿಯಾಗಿ ಸುದ್ದಿಯನ್ನು ಬಿತ್ತರಿಸುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಕೇರಳದ ಮಾಧ್ಯಮಗಳು ಘಟನಾ ಸ್ಥಳಕ್ಕೆ ತೆರಳಿ ವರದಿಯನ್ನು ಮಾಡುತ್ತಿದೆ. ಈ ಮಧ್ಯೆ ದುರ್ಘಟನೆಯ ಬಳಿಕ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಹುಡುಕಾಟ ತೀವ್ರಗೊಳಿಸಲು ಕೇಂದ್ರ ತಕ್ಷಣ […]

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಕಮಲಾ ಹ್ಯಾರಿಸ್ ಹಿನ್ನೆಲೆಯೇನು ಗೊತ್ತಾ?

ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕ ದೇಶದ ಅಧ್ಯಕ್ಷೀಯ ಚುನಾವಣೆ ನವೆಂಬರ್ ನಲ್ಲಿ ನಡೆಯಲಿದೆ.  ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌  ಅವರು ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರೆ, ಅಮೆರಿಕಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೆಯಾಗಲಿದ್ದಾರೆ. ಕಪ್ಪುವರ್ಣಿಯ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಏಷ್ಯಾ ಮೂಲದ ಮಹಿಳೆ […]