Breaking News :

ಆರೆಸ್ಸೆಸ್ ಸಭೆಗಳಲ್ಲಿ ಸರಕಾರಿ ನೌಕರರು ಭಾಗವಹಿಸುವುದಕ್ಕಿದ್ದ ನಿರ್ಬಂಧ ತೆಗೆದು ಹಾಕಿದ ಸರಕಾರ?

ಸರ್ಕಾರಿ ನೌಕರರು, ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ, ಸಭೆಗಳಲ್ಲಿ ಭಾಗವಹಿಸುವುದಕ್ಕಿದ್ದ ನಿಷೇಧವನ್ನು ಕೇಂದ್ರ ಸರಕಾರ ತೆಗೆದು ಹಾಕಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕಾಂಗ್ರೆಸ್ ನಾಯಕರು ಈ ಕುರಿತ ಆದೇಶದ ಪ್ರತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ಕುರಿತು ಪೋಸ್ಟ್ ಮಾಡಿದ್ದಾರೆ. 58 ವರ್ಷಗಳ ಹಿಂದೆ ಅಂದರೆ 1966 ರಲ್ಲಿ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ವಿಧಿಸಿದ್ದ ಅಸಂವಿಧಾನಿಕ ನಿಷೇಧವನ್ನು […]

ಬಸ್ ನಿಲ್ಲಿಸಿಲ್ಲ ಎಂದು ಸರಕಾರಿ ಬಸ್ ಗೆ ಕಲ್ಲು ಹೊಡೆದ ಯುವಕ

ಬೆಂಗಳೂರು; ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಯುವಕನೊಬ್ಬ ಕಲ್ಲು ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ತಿರುವಣ್ಣಮಲೈಗೆ ಬಸ್‌ ಹೋಗುತ್ತಿತ್ತು. ಟೌನ್‌ಹಾಲ್‌ ಬಳಿ ಚಲಿಸುತ್ತಿದ್ದ ಬಸ್‌ಗೆ ಯುವಕ ಕಲ್ಲೇಟು ಹೊಡೆದಿದ್ದಾನೆ. ಸೆಟ್‌ಲೈಟ್‌ನಲ್ಲೇ ಬಸ್ ಫುಲ್ ರಶ್ ಅಗಿತ್ತು. ಹಾಗಾಗಿ ಬಸ್ ನ್ನು ನಿಲ್ಲಿಸಿರಲಿಲ್ಲ. ಬಸ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡ ಯುವಕ ಕಲ್ಲು ಹೊಡೆದಿದ್ದಾನೆ. ತಕ್ಷಣ ತಮಿಳುನಾಡು ಮೂಲದ ಮಹಾರಾಜ ಎಂಬ ಯುವಕನನ್ನು ಎಸ್‌ಜೆ ಪಾರ್ಕ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರ ಸಮೇತ ಬಸ್ಸನ್ನು ಎಸ್‌ಜೆ ಪಾರ್ಕ್‌ […]

ಪಿಯುಸಿಯಲ್ಲಿ ಫೈಲ್ ವಿದ್ಯಾರ್ಥಿನಿಗೆ ನೀಟ್ ನಲ್ಲಿ ಟಾಪ್ ಮಾರ್ಕ್: ಅಕ್ರಮದ ಆರೋಪದ ಬೆನ್ನಲ್ಲಿ ಚರ್ಚೆಗೆ ಗ್ರಾಸವಾದ ಅಂಕ

ನವದೆಹಲಿ: ನೀಟ್ ಪರೀಕ್ಷೆಯಲ್ಲಿ ಅವ್ಯವಹಾರದ ಬಗ್ಗೆ ದೇಶದಾದ್ಯಂತಆರೋಪ ಕೇಳಿ ಬಂದಿತ್ತು. ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಗುಜರಾತಿನ ವಿದ್ಯಾರ್ಥಿನಿಯೋರ್ವಳು ನೀಟ್ ಯುಜಿ ಪರೀಕ್ಷೆಯಲ್ಲಿ 705 ಅಂಕ ಗಳಿಸುವ ಮೂಲಕ ಸುದ್ದಿಯಲ್ಲಿದ್ದಾಳೆ. ವಿದ್ಯಾರ್ಥಿನಿಗೆ ಪಿಯುಸಿ ಪರೀಕ್ಷೆಯಲ್ಲಿ ಹಾಗೂ ನೀಟ್ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳಲ್ಲಿನ ವ್ಯತ್ಯಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನೆಯೆತ್ತಿದ್ದಾರೆ. ವರದಿ ಪ್ರಕಾರ, ಅಹಮದಾಬಾದ್‌ನ ವಿದ್ಯಾರ್ಥಿನಿಯೊಬ್ಬಳ 12ನೇ ತರಗತಿಯ ಅಂಕಪಟ್ಟಿಯು, ಆಕೆಯ ಕಳಪೆ ಪ್ರದರ್ಶನವನ್ನು ಹೇಳುತ್ತಿದ್ದು , ಭೌತಶಾಸ್ತ್ರದಲ್ಲಿ 21, ರಸಾಯನ ಶಾಸ್ತ್ರದಲ್ಲಿ 31, ಜೀವಶಾಸ್ತ್ರದಲ್ಲಿ […]

ಉತ್ತರಪ್ರದೇಶದ ಗೊಂಡಾದಲ್ಲಿ ರೈಲು ಅವಘಡಕ್ಕೆ ಕಾರಣವೇನು? ತನಿಖಾ ತಂಡ ಹೇಳಿದ್ದೇನು?

ಉತ್ತರಪ್ರದೇಶದ ಗೊಂಡಾದಲ್ಲಿ ಗುರುವಾರ ಚಂಡೀಗಢ-ದಿಬ್ರೂಗಢ ಎಕ್ಸಪ್ರೆಸ್‌ ರೈಲು ಹಳಿತಪ್ಪಿ  ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ರೈಲ್ವೆ ಅಧಿಕಾರಿಗಳ ತಂಡವು ದುರಂತಕ್ಕೆ ಕಾರಣವನ್ನು ಪತ್ತೆ ಹಚ್ಚಿದೆ. ಅಧಿಕಾರಿಗಳು ತನಿಖೆಯ ವೇಳೆ ರೈಲು ಹಳಿಯನ್ನು ಸರಿಯಾಗಿ ಜೋಡಿಸದಿರುವುದೇ ಅಪಘಾತಕ್ಕೆ ಕಾರಣ ಎಂದು ಪತ್ತೆ ಹಚ್ಚಿದ್ದಾರೆ. ಐವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆದರೆ ತನಿಖಾ ಸಮಿತಿಯ ವರದಿಯ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು ಈಶಾನ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ […]

ಕೇರಳಕ್ಕೆ ಪ್ರತ್ಯೇಕ ವಿದೇಶಾಂಗ ಕಾರ್ಯದರ್ಶಿಯ ನೇಮಕ; ಭುಗಿಲೆದ್ದ ವಿವಾದ

ಕೇರಳದಲ್ಲಿ‌ನ ಪಿಣರಾಯಿ ವಿಜಯನ್‌ ನೇತೃತ್ವದ ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ಕೇರಳದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಬಿಜೆಪಿ ಈ ಬಗ್ಗೆ ವಿವಾದವನ್ನೇ ಸೃಷ್ಟಿಸಿದೆ. ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಕಾರ್ಯದರ್ಶಿ ಕೆ.ವಾಸುಕಿ, ವಿದೇಶ ಸಹಕಾರ ಸಂಬಂಧಿಸಿದ ವಿಷಯಗಳ ಹೆಚ್ಚುವರಿ ಉಸ್ತುವಾರಿ ವಹಿಸುತ್ತಾರೆ. ಅಸ್ತಿತ್ವದಲ್ಲಿರುವ ಅಧಿಕಾರಿಗಳೊಂದಿಗೆ ಹೆಚ್ಚುವರಿಯಾಗಿ ಅಧಿಕಾರಿಯು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಮನ್ವಯಗೊಳಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಕೇರಳ ಸರಕಾರ ಆದೇಶದಲ್ಲಿ ಹೇಳಿದೆ. ಈ ವಿಚಾರವಾಗಿ ಬಿಜೆಪಿ ಕಿಡಿಕಾರಿದ್ದು, […]

ಐಐಟಿ ಘಟಿಕೋತ್ಸವದಲ್ಲಿ ಗಾಝಾ ಹತ್ಯಾಕಾಂಡದ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿ

ಚೆನ್ನೈ: ಐಐಟಿ-ಮದ್ರಾಸ್‌ನ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರ ಪ್ರಶಸ್ತಿಗೆ ಭಾಜನರಾದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಧನಂಜಯ ಬಾಲಕೃಷ್ಣನ್ ಗಾಝಾದಲ್ಲಿ ನ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. ಧನಂಜಯ ಬಾಲಕೃಷ್ಣನ್ ಮಾತನಾಡುತ್ತಾ, ವಿಜ್ಞಾನ,ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತವನ್ನು ಐತಿಹಾಸಿಕವಾಗಿ ಇಸ್ರೇಲ್‌ನಂತಹ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ನೆರವಾಗಲು ಬಳಸಲಾಗಿದೆ ಎಂದು ಹೇಳಿದ್ದಾರೆ. ಅತ್ಯಂತ ಮಹತ್ವದ ವಿಷಯವನ್ನು ಹೇಳಲು ನಾನು ಈ ವೇದಿಕೆಯನ್ನು ಬಳಸದಿದ್ದರೆ ಅದು ಅನ್ಯಾಯವಾಗುತ್ತದೆ. ಫೆಲೆಸ್ತೀನ್‌ನಲ್ಲಿ ಹತ್ಯಾಕಾಂಡ ನಡೆಯುತ್ತಿದೆ. ಜನರು ಸಾಯುತ್ತಿದ್ದಾರೆ. ಇದು ಕೊನೆಯಾಗುತ್ತಿಲ್ಲ. ಈ ವೇದಿಕೆಯ ಮೂಲಕ ಗಾಝಾ ನರಮೇಧದ ವಿರುದ್ಧ ಕ್ರಮಕ್ಕೆ […]

ಮಾಂಸದ ಅಂಗಡಿಗಳಲ್ಲಿ ಹಲಾಲ್, ಝಟಕಾ ಬೋರ್ಡ್ ಕಡ್ಡಾಯ? ಏನಿದು ಮೇಯರ್ ಆದೇಶ?

ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ  ಹಲಾಲ್ ಅಥವಾ ಝಟಕಾ ಮಾಂಸ ಎಂದು ಅಂಗಡಿಯ ಮೇಲೆ ಬರೆಯುವುದು ಕಡ್ಡಾಯಗೊಳಿಸುವುದಾಗಿ ಜೈಪುರ ಮೇಯರ್ ಡಾ.ಸೌಮ್ಯ ಗುರ್ಜರ ಹೇಳಿದ್ದಾರೆ. ಜೈಪುರ ಮಹಾನಗರಪಾಲಿಕೆಯು ಮಾಂಸ ಮಾರಾಟ ಮಾಡುವ ಎಲ್ಲಾ ಅಂಗಡಿಳಿಗೆ ಈ ಬಗ್ಗೆ ಆದೇಶ ನೀಡಿದೆ ಎನ್ನಲಾಗಿದೆ. ಜೈಪುರದ ಜನರು ಅನೇಕ ಬಾರಿ ನನ್ನ ಬಳಿ ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಮಾಂಸದ ಅಂಗಡಿಯ ಬಳಿ ಕಸವನ್ನು ಎಸೆಯುತ್ತಿರುವುದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆಯೆಂದೂ ದೂರುಗಳು ಬಂದಿವೆ.  ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ  ಮಾಂಸ […]

ಗುಜರಾತ್: ಸಾಂಪ್ರದಾಯಿಕ ಪೇಟ ಧರಿಸಿದ್ದಕ್ಕೆ ದಲಿತ ಯುವಕನ‌ ಮೇಲೆ ಹಲ್ಲೆ

ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಗ್ರಾಮವೊಂದರಲ್ಲಿ ಸಾಂಪ್ರದಾಯಿಕ ಪೇಟ ತೊಟ್ಟು ತೆಗೆಸಿಕೊಂಡಿದ್ದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ 24 ವರ್ಷ ವಯಸ್ಸಿನ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಜು.17ರಂದು ಘಟನೆ ನಡೆದಿದ್ದು, ಥಳಿತಕ್ಕೊಳಗಾದ ವ್ಯಕ್ತಿಯನ್ನು ಆಟೋರಿಕ್ಷಾ ಚಾಲಕ ಅಜಯ್‌ ಪಾರ್ಮಾರ್‌ ಎಂದು ಗುರುತಿಸಲಾಗಿದೆ. ಮನೆಗೆ ತೆರಳುವಾಗ ಸವರ್ಣೀಯ ಜಾತಿಯ ಜನರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದರ್ಬಾರ್‌ ಸಮುದಾಯದ ಮಂದಿ ಮಾತ್ರ ಸಫಾ ಮತ್ತು ತಂಪು ಕನ್ನಡಕ ಧರಿಸಲು ಯೋಗ್ಯರು. ಹೀಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ […]

ಕುವೈಟ್ ನಲ್ಲಿ ಭೀಕರ ಅಗ್ನಿ ಅವಘಡ; ಕೇರಳದ ದಂಪತಿ & ಇಬ್ಬರು ಮಕ್ಕಳು ಮೃತ್ಯು

ಕುವೈಟ್ ನ ಮನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ಮ್ಯಾಥ್ಯೂ ಮುಲಕಲ್, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್ ಮತ್ತು ಐರಿನ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಮ್ಯಾಥ್ಯೂ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದು, ಅಬ್ಬಾಸಿಯಾದಲ್ಲಿ ಕಳೆದ 15 ವರ್ಷದಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಶುಕ್ರವಾರ ರಾತ್ರಿ  ಮನೆಯಲ್ಲಿ ಎ.ಸಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಕೊಚ್ಚಿ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಲಕಲ್ ಅವರು ತಾಯಿ ಹಾಗೂ […]

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿ ಬಂಧಿಯಾಗಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್

ಖ್ಯಾತ ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್, ಕಾರ್ಮಿಕ ಕಾನೂನು ಉಲ್ಲಂಘನೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಪ್ರಸ್ತುತ ತನ್ನ ತಾಯ್ನಾಡಿನಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಕಿರುಬಂಡವಾಳ ಆಂದೋಲನದ ಪ್ರವರ್ತಕರಾಗಿರುವ ಯೂನಸ್, 1983ರಲ್ಲಿ ಗ್ರಾಮೀಣ ಬ್ಯಾಂಕ್ ಪರಿಕಲ್ಪನೆಯನ್ನು ರೂಪಿಸಿದರು, ಇದು ಬಡ ಜನರಿಗೆ ಸಣ್ಣ ಸಾಲಗಳನ್ನು ನೀಡುವ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಈ ಕಲ್ಪನೆಯು ಜಾಗತಿಕವಾಗಿ ಗಮನವನ್ನು ಸೆಳೆದಿದೆ. ಇದು ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ. […]