ಸಾನಿಯಾ ಮಿರ್ಜಾ ಅವರನ್ನು ಕ್ರಿಕೆಟರ್ ಶಮಿ ನಿಜಕ್ಕೂ ವಿವಾಹವಾಗಿದ್ದಾರಾ? ಶಮಿ ಕೊಟ್ಟ ಸ್ಪಷ್ಟನೆ ಏನು?

ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ ಟೀಮ್ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಈ ಬಗ್ಗೆ ಕುದ್ದು ಶಮಿ ಸ್ಪಷ್ಟನೆಯನ್ನು ನೀಡಿದ್ದಾರೆ. ಯೂಟ್ಯೂಬ್ ಸಂವಾದವೊಂದರಲ್ಲಿ ಮಾತನಾಡಿದ ಶಮಿ, ಸಾನಿಯಾ ಜತೆಗಿನ ಮದುವೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ್ತು ಸಾನಿಯಾ ಮದುವೆಯ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಗಾಸಿಪ್ ಗಳಿಂದ ಕೆಲವರಿಗೆ ಮನರಂಜನೆ […]
ಹೈದರಾಬಾದ್ ಮಕ್ಕಾ ಮಸೀದಿ ಧ್ವನಿವರ್ಧಕ ವಿವಾದ: ಪೊಲೀಸರಿಂದ ಸ್ಪಷ್ಟನೆ

ಹೈದರಾಬಾದ್: ಮಕ್ಕಾ ಮಸೀದಿಯ ಧ್ವನಿವರ್ಧಕಗಳ ಬಗ್ಗೆ ಗಲಾಟೆ ನಡೆದ ನಂತರ ಹೈದರಾಬಾದ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ಗಮನಿಸಿ, ಒಂದು ಗಂಟೆಯೊಳಗೆ ಅದನ್ನು ಪರಿಹರಿಸಲಾಯಿತು ಎಂದು ದಕ್ಷಿಣ ವಲಯ ಡಿಸಿಪಿ ಸ್ನೇಹಾ ಮೆಹ್ರಾ ಹೇಳಿದ್ದಾರೆ. ಪೊಲೀಸರು ಮಕ್ಕಾ ಮಸೀದಿ ಸೂಪರಿಂಟೆಂಡೆಂಟ್‌ಗೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದರು. ಮಕ್ಕಾ ಮಸೀದಿ ಅಧೀಕ್ಷಕರ ಸೂಚನೆ ಮೇರೆಗೆ ಧ್ವನಿವರ್ಧಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ನಿನ್ನೆ, ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಅಧಿಕಾರಿಗಳು ಧ್ವನಿವರ್ಧಕಗಳ […]
ಪ್ರಾದೇಶಿಕ ಪಕ್ಷಗಳಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಅತ್ಯಧಿಕ ಆದಾಯ ಹರಿದು ಬಂದಿದೆ ಗೊತ್ತಾ?

ಹೊಸದಿಲ್ಲಿ: ಭಾರತ್ ರಾಷ್ಟ್ರ ಸಮಿತಿಯು 2022-23ರ ಆರ್ಥಿಕ ವರ್ಷಕ್ಕೆ ಪ್ರಾದೇಶಿಕ ಪಕ್ಷಗಳ ಆದಾಯ ಪಟ್ಟಿಯಲ್ಲಿ 737.67 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಂದರೆ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ಶೇಕಡಾ ಆದಾಯದಲ್ಲಿ ಈ ಪಕ್ಷದ ಆದಾಯ 42.38 ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ತಿಳಿಸಿದೆ. ಅತ್ಯಧಿಕ ವೆಚ್ಚ ಮಾಡಿದ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಅಗ್ರಸ್ಥಾನಿಯಾಗಿದೆ. ಈ ಪಕ್ಷ 181.1 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇದು ಎಲ್ಲ ಪ್ರಾದೇಶಿಕ ಪಕ್ಷಗಳ ಒಟ್ಟು ಖರ್ಚಿನ ಶೇಕಡ 36.7ರಷ್ಟಾಗಿದೆ ನಂತರದ […]
ಚಾಂದಿಪುರ ವೈರಸ್ ಸೋಂಕಿಗೆ 20 ಮಂದಿ ಬಲಿ: ಏನಿದು ಭಯಾನಕ ವೈರಸ್?

ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಸೋಂಕಿಗೆ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಶಂಕಿತ ಪ್ರಕರಣದಲ್ಲಿ ಈವರೆಗೆ ಮೃತರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ನ ಅಹ್ಮದಾಬಾದ್‌ನಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಚಾಂದಿಪುರ ವೈರಸ್ ಸೋಂಕಿನ ಲಕ್ಷಣವುಳ್ಳ ಕನಿಷ್ಠ 35 ಮಂದಿ ರಾಜ್ಯಾದ್ಯಂತದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗುಜರಾತ್ ಸರಕಾರ ಪರೀಕ್ಷೆಗೆ ಕಳುಹಿಸಿದ್ದ 18 ಮಾದರಿಗಳ ಪೈಕಿ 2ರಲ್ಲಿ ಮಾತ್ರ ಚಾಂದಿಪುರ ವೈರಸ್ ಇರುವುದು ದೃಢಪಟ್ಟಿದೆ ಎಂದು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ […]
ವಿವಾದಿತ ಐಎಎಸ್ ಅಧಿಕಾರಿ ಪೂಜಾ ವಿರುದ್ಧ ಎಫ್ ಐಆರ್

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳಲು ಅಂಗವಿಕಲತೆ ಪ್ರಮಾಣಪತ್ರಗಳನ್ನು ಫೋರ್ಜರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿರುವ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಯುಪಿಎಸ್‌ಸಿ ಇಂದು ಪ್ರಕರಣ ದಾಖಲಿಸಿದೆ. ಆಕೆಯು ವಂಚನೆಗೈದಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆಕೆಯ ಆಯ್ಕೆಯನ್ನು ರದ್ದುಗೊಳಿಸಲು ಮತ್ತು ಭವಿಷ್ಯದಲ್ಲಿ ಆಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡದಂತೆ ಆಯೋಗ ಆಕೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಅಸ್ಸಾಂನಲ್ಲಿ 1935ರ ಮುಸ್ಲಿಂ ವಿವಾಹ ಕಾಯ್ದೆ ರದ್ದು ಪಡಿಸಲು ಮುಂದಾದ ಸರಕಾರ!

ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಅಪ್ರಾಪ್ತ ವಯಸ್ಸಿನವರಿಗೆ ವಿವಾಹ ಅವಕಾಶ ನೀಡುವ 1935ರ ಕಾಯ್ದೆಯನ್ನು ರದ್ದುಪಡಿಸಲು ಸರಕಾರ ನಿರ್ಧರಿಸಿದೆ. ಷರತ್ತು ಪೂರೈಸುವುದರೊಂದಿಗೆ, ಈ ವಿವಾಹಕ್ಕೆ ಅವಕಾಶ ನೀಡುವ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಗುರುವಾರ ಸಂಪುಟ ಸಭೆ ಅಂಗೀಕರಿಸಿದೆ. ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದ್ದು, ಇದು ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ಹಾಗೂ ನಿಯಮಾವಳಿಗಳನ್ನು ರದ್ದುಪಡಿಸುತ್ತದೆ. ವಿಧಾನಸಭೆಯ ಮುಂದಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಹೇಳಲಾಗಿದೆ. ಬಾಲ್ಯವಿವಾಹವನ್ನು ಕೊನೆಗೊಳಿಸುವ ಉದ್ದೇಶದಿಂದ […]
ಡಾಲರ್ ಎದುರು ಪಾತಾಳಕ್ಕೆ ಕುಸಿದ ರುಪಾಯಿ ಮೌಲ್ಯ

ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಗುರುವಾರ ವ್ಯವಹಾರದ ಕೊನೆಯಲ್ಲಿ ಡಾಲರ್ ವಿರುದ್ಧದ ರೂಪಾಯಿ ಮೌಲ್ಯ 83.6500 ಆಗಿತ್ತು. ನಿನ್ನೆ ಬುಧವಾರ ವ್ಯವಹಾರದಲ್ಲಿ ಅದು 83.5825ರಲ್ಲಿ ನೆಲೆಗೊಂಡಿತ್ತು. ಜೂನ್ 20ರಂದು ಅದು ಸಾರ್ವಕಾಲಿಕ ಕನಿಷ್ಠ ಮಟ್ಟ 83.6650 ಇಳಿದಿತ್ತು. ಡಾಲರ್ ಮತ್ತು ಅಮೆರಿಕ ಬಾಂಡ್ ಉತ್ಪತ್ತಿಯಲ್ಲಿ ವ್ಯಾಪಕ ಕುಸಿತ ಕಂಡು ಬಂದ ಹೊರತಾಗಿಯೂ ಭಾರತದ ಕರೆನ್ಸಿಯು ಅವುಗಳ ವಿರುದ್ಧ ಕುಸಿತ ಕಂಡಿದೆ. ಹಿಂದಿನ ಅವಧಿಯ ವ್ಯವಹಾರದಲ್ಲಿ ನಾಲ್ಕು ತಿಂಗಳ ಕನಿಷ್ಠ […]
ಕಾಫಿ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

ಕಾಫಿ ಉತ್ತಮ ಪರಿಮಳ ಮತ್ತು ರುಚಿಯೊಂದಿಗೆ ಕಾಫಿ ಜನರನ್ನು ಸೆಳೆಯುತ್ತದೆ. ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು. ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಕಾಫಿ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚು ಕಾಫಿ ಕುಡಿಯುವುದರಿಂದ ಆತಂಕ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ. ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು. ಮೆದುಳಿನ […]
ರಾಜ್ಯಸಭೆಯಲ್ಲಿ ಬಿಜೆಪಿಗೆ ಏಕಪಕ್ಷೀಯವಾಗಿ ಇನ್ನು ಬಿಲ್ ಪಾಸ್ ಮಾಡುವುದು ಕಷ್ಟ!

ನವದೆಹಲಿ; ನಾಲ್ವರು ನಾಮನಿರ್ದೇಶಿತ ಬಿಜೆಪಿ ಸಂಸದರು ಇತ್ತೀಚೆಗೆ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಮೇಲ್ಮನೆಯಲ್ಲಿ ಪ್ರಸ್ತುತ ಒಟ್ಟು ಬಲವು 225 ಆಗಿದ್ದು, ಬಹುಮತ ಹೊಂದಲು 113 ಸದಸ್ಯರ ಅಗತ್ಯವಿದೆ. ಆದರೆ ಬಿಜೆಪಿಯ 86 ಸದಸ್ಯರನ್ನು ಸೇರಿ ಎನ್‌ಡಿಎ 101 ಸಂಖ್ಯಾಬಲ ಹೊಂದಿದೆ. ಬಹುಮತಕ್ಕೆ 12 ಸದಸ್ಯರ ಕೊರತೆ ಉಂಟಾಗಿದೆ. ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಾಲ್ ಮಾನ್ಸಿಂಗ್ ಮತ್ತು ಮಹೇಶ್ ಜೇಠ್ಮಲಾನಿ ಅವರು ಸದನದಿಂದ ನಿರ್ಗಮಿಸಿದ್ದಾರೆ.
ಮುಂಬೈ; ಹೋರ್ಡಿಂಗ್ ಕುಸಿತ ಪ್ರಕರಣ; ಮಹತ್ವದ ಮಾಹಿತಿ ಬಯಲು

ಮುಂಬೈನ ಘಾಟ್‌ಕೋಪರ್‌ನಲ್ಲಿ 120×120 ಅಡಿ ಹೋರ್ಡಿಂಗ್ ಅಳವಡಿಸಿದ್ದ ಸ್ಥಳದಲ್ಲಿ ಹುಸಿ ಮಣ್ಣು (ಮೃದುವಾದ ಮಣ್ಣು) ಇದೆ ಎಂದು ಅಲ್ಲಿ ಕಾಮಗಾರಿ ಡನೆಸುವಾಗಲೇ ಕೆಲಸಗಾರರು ಎಚ್ಚರಿಸಿದ್ದರು. ಆದರೆ, ಇದನ್ನು ನಿರ್ಲಕ್ಷಿಸಲಾಗಿದೆ ಎನ್ನುವುದು ಇದೀಗ ಬಯಲಾಗಿದೆ. ಹದಿನಾರು ತಿಂಗಳ ನಂತರ, ಬೃಹತ್ ಜಾಹೀರಾತು ಫಲಕವು ಚಂಡಮಾರುತದ ಸಮಯದಲ್ಲಿ ಕುಸಿದುಬಿದ್ದು, 17 ಜನರು ಸಾವನ್ನಪ್ಪಿ, 74 ಮಂದಿ ಗಾಯಗೊಂಡಿದ್ದರು. ಮುಂಬೈ ನ್ಯಾಯಾಲಯಕ್ಕೆ ಸಲ್ಲಿಸಲಾದ 3,299 ಪುಟಗಳ ಆರೋಪಪಟ್ಟಿಯಲ್ಲಿ, ಮುಂಬೈ ಅಪರಾಧ ವಿಭಾಗದ ವಿಶೇಷ ತನಿಖಾ ತಂಡವು ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ), […]