Breaking News :

ಶರದ್ ಬಣಕ್ಕೆ ವಾಪಾಸ್ಸಾದ ಎನ್ ಸಿಪಿ ನಾಯಕರು

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತೊರೆದಿರುವ ಹಲವು ನಾಯಕರು ಹಾಗೂ ಕಾರ್ಪೊರೇಟರ್‌ಗಳು, ಶರದ್ ಪವಾರ್ ನೇತೃತ್ವದ ಎನ್‌ಸಿ‌ಪಿಗೆ ಮತ್ತೆ ವಾಪಾಸ್ಸಾಗಿದ್ದಾರೆ. ಪುಣೆಯಲ್ಲಿನ ಶರದ್ ಪವಾರ್ ನಿವಾಸದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಯಾದ ನಾಯಕರ ಪೈಕಿ ಪಿಂಪ್ರಿ-ಚಿಂಚ್ವಾಡ್ ಎನ್‌ಸಿಪಿ (ಅಜಿತ್ ಪವಾರ್ ಬಣ) ಘಟಕದ ಮುಖ್ಯಸ್ಥರಾದ ಅಜಿತ್ ಗವ್ಹಾನೆ ಕೂಡಾ ಸೇರಿದ್ದಾರೆ. ಇವರೊಂದಿಗೆ, ಪಿಂಪ್ರಿ-ಚಿಂಚ್ವಾಡ್ ಘಟಕದ ಹಿರಿಯ ನಾಯಕರು ಮಂಗಳವಾರ ಅಜಿತ್ ಪವಾರ್ ನೇತೃತ್ವದ ಎನ್‌ಸಿ‌ಪಿಗೆ ರಾಜೀನಾಮೆ ಸಲ್ಲಿಸಿದ್ದರು.

ಕೂರತ್ ತಂಙಳ್ ನಿಧನ

ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವ ನಿಧನಕ್ಕೆ ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ. ಎಕ್ಸ್’ ನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಸಚಿವರು, ‘ಕೂರತ್ ತಂಙಳ್’ ಎಂದೇ ಪ್ರಸಿದ್ಧಿ ಪಡೆದಿದ್ದ ಉಳ್ಳಾಲ ಖಾಝಿ, ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರು ನಿಧನರಾಗಿರುವಸುದ್ದಿ ತಿಳಿದು ಅತೀವ ದುಃಖವಾಯಿತು. ಸರ್ವಧರ್ಮಗಳ ಪ್ರತಿಪಾದಕರಾಗಿದ್ದ ತಂಙಳ್ ಅವರ ನಿಧನವು ಇಡೀ ಕರಾವಳಿ ಭಾಗದ ಜನತೆಗೆ ಅಪಾರ […]